ಭೂಕಂಪ ಸಂತ್ರಸ್ತರಿಗೆ ಕ್ರಿಸ್ಟಿಯಾನೊ ರೊನಾಲ್ಡೊ ಸಹಾಯ ಹಸ್ತ – ಅಭಿಮಾನಿಗಳ ಮನಗೆದ್ದ ಫುಟ್ಬಾಲ್ ತಾರೆಯ ಹೃದಯವಂತಿಕೆ

ಭೂಕಂಪ ಸಂತ್ರಸ್ತರಿಗೆ ಕ್ರಿಸ್ಟಿಯಾನೊ ರೊನಾಲ್ಡೊ ಸಹಾಯ ಹಸ್ತ – ಅಭಿಮಾನಿಗಳ ಮನಗೆದ್ದ ಫುಟ್ಬಾಲ್ ತಾರೆಯ ಹೃದಯವಂತಿಕೆ

ಸಿರಿಯಾ ಮತ್ತು ಟರ್ಕಿಯಲ್ಲಿ ಭೂಕಂಪ ಸಂತ್ರಸ್ತರಿಗೆ ಪೋರ್ಚುಗಲ್ ಸ್ಟಾರ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಸಹಾಯ ಹಸ್ತ ಚಾಚುವ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. ರೊನಾಲ್ಡೊ ಸಿರಿಯಾ ಮತ್ತು ಟರ್ಕಿಯಲ್ಲಿ ಭೂಕಂಪ ಸಂತ್ರಸ್ತರಿಗೆ ಸಹಾಯ ಮಾಡಲು ವಿಮಾನದ ತುಂಬಾ ಅಗತ್ಯ ವಸ್ತುಗಳನ್ನು ಕಳುಹಿಸಿಕೊಟ್ಟಿದ್ದಾರೆ. ವಿಮಾನದ ತುಂಬಾ ನಿರಾಶ್ರಿತರಿಗೆ ನೆರವಾಗುವ ಅಗತ್ಯ ವಸ್ತುಗಳೇ ತುಂಬಿವೆ. ಈ ಅಗತ್ಯ ವಸ್ತುಗಳಲ್ಲಿ ಸಂತ್ರಸ್ತರಿಗೆ ಟೆಂಟ್‌ಗಳು, ಆಹಾರ ಪ್ಯಾಕೆಟ್‌ಗಳು, ದಿಂಬುಗಳು, ಹೊದಿಕೆಗಳು, ಹಾಸಿಗೆಗಳು, ಮಗುವಿನ ಆಹಾರ, ಹಾಲು ಸೇರಿದಂತೆ ವಿವಿಧ ವೈದ್ಯಕೀಯ ಸಾಮಗ್ರಿಗಳಿವೆ. ಇವೆಲ್ಲವುಗಳ ಒಟ್ಟು ವೆಚ್ಚ ಸುಮಾರು ಮೂರು ಕೋಟಿ ರೂಪಾಯಿಗಳು ಎನ್ನಲಾಗಿದೆ.

ಇದನ್ನೂ ಓದಿ:  ಸ್ಥೂಲಕಾಯದ ಬಗ್ಗೆ ಎಚ್ಚೆತ್ತುಕೊಳ್ಳದಿದ್ರೆ ಆಪತ್ತು – 2035ರ ವೇಳೆಗೆ ವಿಶ್ವದ ಅರ್ಧದಷ್ಟು ಜನರಿಗೆ ಅಧಿಕ ತೂಕ!

ಸ್ಟಾರ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರಿಗೆ ಕೋಟಿ ಕೋಟಿ ಅಭಿಮಾನಿಗಳಿದ್ದಾರೆ. ಫುಟ್ಬಾಲ್ ಲೋಕದಲ್ಲಿ ರೊನಾಲ್ಡೋ ಎಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದರೋ ಅಷ್ಟೇಯೇ ಕಷ್ಟಕ್ಕೆ ನೆರವಾಗುವ ವಿಚಾರದಲ್ಲೂ ಹೃದಯ ಶ್ರೀಮಂತಿಕೆ ಹೊಂದಿದ್ದು, ಅಪಾರ ಅಭಿಮಾನಿಗಳ ಮನಗೆದ್ದಿದ್ದಾರೆ. ಯಾವುದೇ ದೇಶದ ಜನ ಸಂಕಷ್ಟಕ್ಕೆ ಸಿಲುಕಿದಾಗ ರೊನಾಲ್ಡೊ ಸಹಾಯ ಮಾಡಲು ಮುಂದೆ ಬರುತ್ತಾರೆ. ಈಗ ಸಿರಿಯಾ ಮತ್ತು ಟರ್ಕಿಯಲ್ಲಿ ಭೂಕಂಪ ಸಂತ್ರಸ್ತರಿಗೆ ಸಹಾಯಹಸ್ತ ಚಾಚಿದ್ದಾರೆ. ಫೆಬ್ರವರಿ 6 ರಂದು, ಸಿರಿಯಾ ಮತ್ತು ಟರ್ಕಿಯಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿತು. ಇದರಿಂದ ಸಾವಿರಾರು ಜನರು ಸಾವನ್ನಪ್ಪಿದರು ಮತ್ತು ಲಕ್ಷಾಂತರ ಜನರು ನಿರಾಶ್ರಿತರಾಗಿದ್ದರು. ಟರ್ಕಿಯ ಫುಟ್ಬಾಲ್ ಆಟಗಾರ ಮಾರಿಸ್ ಡೆಮಿರಾಲ್ ಅವರು ಕೆಲವು ದಿನಗಳ ಹಿಂದೆ ಟ್ವೀಟ್ ಮಾಡುವ ಮೂಲಕ ಕ್ರಿಸ್ಟಿಯಾನೋ ರೊನಾಲ್ಡೊ ತಮ್ಮ ಸಹಿ ಮಾಡಿದ ಜೆರ್ಸಿಯನ್ನು ಹರಾಜು ಮಾಡಲು ಅನುಮತಿ ನೀಡಿದ್ದಾರೆ ಎಂದು ತಿಳಿಸಿದ್ದರು. ಈ ಹರಾಜಿನಿಂದ ಬಂದ ಹಣವನ್ನು ಭೂಕಂಪ ಸಂತ್ರಸ್ತರಿಗೆ ಸಹಾಯ ಮಾಡಲು ಸಹ ಬಳಸಲಾಗುತ್ತದೆ ಎಂಬ ಮಾಹಿತಿ ನೀಡಿದ್ದರು.

suddiyaana