ಅಬ್ಬಬ್ಬಾ.. ರಾಹುಲ್-ಆಥಿಯಾಗೆ ಎಂತೆಂಥಾ ಉಡುಗೊರೆಗಳು? – ಮದುವೆಗಿಂಥ ಸದ್ದು ಮಾಡ್ತಿವೆ ದುಬಾರಿ ಗಿಫ್ಟ್..!

ಅಬ್ಬಬ್ಬಾ.. ರಾಹುಲ್-ಆಥಿಯಾಗೆ ಎಂತೆಂಥಾ ಉಡುಗೊರೆಗಳು? – ಮದುವೆಗಿಂಥ ಸದ್ದು ಮಾಡ್ತಿವೆ ದುಬಾರಿ ಗಿಫ್ಟ್..!

ಭಾರತೀಯ ಸ್ಟಾರ್ ಕ್ರಿಕೆಟರ್ ಕೆ.ಎಲ್ ರಾಹುಲ್ ಮತ್ತು ಬಾಲಿವುಡ್ ನಟಿ ಆಥಿಯಾ ಶೆಟ್ಟಿ ಮದುವೆ ಇತ್ತೀಚೆಗಷ್ಟೇ ನೆರವೇರಿದೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟಿರೋ ಈ ಜೋಡಿ ಹೊಸಬದುಕಿನ ಸಂಭ್ರಮದ ಕ್ಷಣಗಳನ್ನ ಅನುಭವಿಸುತ್ತಿದ್ದಾರೆ. ಆದರೆ ಈಗ ಈ ಜೋಡಿಯ ಮದುವೆಯಂತೆಯೇ ಅವರಿಗೆ ಬಂದಿರೋ ಗಿಫ್ಟ್​ಗಳು ಈಗ ಸಖತ್ ಸದ್ದು ಮಾಡ್ತಿವೆ.

ಇದನ್ನೂ ಓದಿ : ಸೂರ್ಯ ಇನ್ ರಿಲ್ಯಾಕ್ಸ್ ಮೂಡ್ – ‘ಎಮು’ವಿನಂತೆಯೇ ಹೆಜ್ಜೆ ಹಾಕಿದ ಕ್ರಿಕೆಟರ್!

ಜನವರಿ 23ರಂದು ಮದುವೆಯಾಗಿರೋ ಈ ಜೋಡಿಗೆ ಐಷಾರಾಮಿ ವಸ್ತುಗಳನ್ನ ಉಡುಗೊರೆಯಾಗಿ ನೀಡಲಾಗಿದೆ. ವಧು ಆಥಿಯಾ ಶೆಟ್ಟಿ ತಂದೆ ಸುನಿಲ್ ಶೆಟ್ಟಿ ತಮ್ಮ ಮಗಳು-ಅಳಿಯನಿಗೆ ದುಬಾರಿ ಗಿಫ್ಟ್​ನೇ ಕೊಟ್ಟಿದ್ದಾರೆ. ಮುಂಬೈನಲ್ಲಿ ಬರೋಬ್ಬರಿ 50 ಕೋಟಿ ಮೌಲ್ಯದ ಅಪಾರ್ಟ್​ಮೆಂಟ್ ಕಾಣಿಕೆಯಾಗಿ ನೀಡಿದ್ದಾರೆ. ಜೊತೆಗೆ ಮದುವೆಯಲ್ಲಿ ಭಾಗಿಯಾಗಿದ್ದ ಸ್ನೇಹಿತರು, ಸಂಬಂಧಿಗಳು ಮತ್ತು ಕುಟುಂಬಸ್ಥರು ಕೂಡ ಹುಬ್ಬೇರಿಸುವಂಥ ಗಿಫ್ಟ್​ಗಳನ್ನೇ ಪ್ರಸೆಂಟ್ ಮಾಡಿದ್ದಾರೆ.

ಬಾಲಿವುಡ್ ನಟ ಸಲ್ಮಾನ್ ಖಾನ್ ಅಂತೂ 1 ಕೋಟಿ 64 ಲಕ್ಷ ಮೌಲ್ಯದ ಐಷಾರಾಮಿ ಆಡಿ ಕಾರ್ ಗಿಫ್ಟ್ ಮಾಡಿದ್ದಾರೆ. ಹಾಗೇ ನಟ ಜಾಕಿ ಶ್ರಾಫ್ 30 ಲಕ್ಷ ಮೌಲ್ಯದ ಚೋಪರ್ಡ್ ವಾಚ್ ಉಡುಗೊಡೆಯಾಗಿ ನೀಡಿದ್ದಾರೆ. ನಟ ಅರ್ಜುನ್ ಕಪೂರ್ ಒಂದೂವರೆ ಕೋಟಿ ಮೌಲ್ಯದ ವಜ್ರದ ಬ್ರೇಸ್ ಲೆಟ್ ಕೊಟ್ಟಿದ್ದಾರೆ.

ಬಾಲಿವುಡ್ ನಟ, ನಟಿಯರು ಮಾತ್ರವಲ್ಲದೆ ಕ್ರಿಕೆಟರ್ಸ್ ಕೂಡ ನವಜೋಡಿಗೆ ದುಬಾರಿ ಬೆಲೆಯ ಉಡುಗೊರೆಗಳನ್ನ ನೀಡಿದ್ದಾರೆ. ವಿರಾಟ್ ಕೊಹ್ಲಿ 2 ಕೋಟಿ 17 ಲಕ್ಷ ಮೌಲ್ಯದ ಬಿಎಂಡಬ್ಲ್ಯು ಕಾರ್ ಗಿಫ್ಟ್ ಮಾಡಿದ್ದಾರೆ. ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ 80 ಲಕ್ಷ ಮೌಲ್ಯದ ಕವಾಸಕಿ ನಿಂಜಾ ಬೈಕ್ ಕಾಣಿಕೆಯಾಗಿ ನೀಡಿದ್ದಾರೆ.

ಬಾಲಿವುಡ್ ನಟಿ ಆಥಿಯಾ ಶೆಟ್ಟಿ ಹಾಗೂ ಕ್ರಿಕೆಟರ್ ಕೆ.ಎಲ್ ರಾಹುಲ್ ಜನವರಿ 23ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಲ್ಲಿ ಅಥಿಯಾಶೆಟ್ಟಿ ಗುಲಾಬಿ ಬಣ್ಣದ ಲೆಹಂಗಾ ಧರಿಸಿದ್ದು, ಕ್ರಿಕೆಟಿಗ ಕೆ.ಎಲ್ ರಾಹುಲ್ ಬೀಜ್ ಶೇರ್ವಾನಿ ಧರಿಸಿದ್ದರು.

suddiyaana