‘ಧೋನಿ’ಯಂಥಾ ನಾಯಕನನ್ನು ಕ್ರಿಕೆಟ್ ಜಗತ್ತು ಈ ಹಿಂದೆಂದೂ ಕಂಡಿಲ್ಲ – ಗವಾಸ್ಕರ್ ಮನಗೆದ್ದ ಕೂಲ್ ಕ್ಯಾಪ್ಟನ್

‘ಧೋನಿ’ಯಂಥಾ ನಾಯಕನನ್ನು ಕ್ರಿಕೆಟ್ ಜಗತ್ತು ಈ ಹಿಂದೆಂದೂ ಕಂಡಿಲ್ಲ – ಗವಾಸ್ಕರ್ ಮನಗೆದ್ದ ಕೂಲ್ ಕ್ಯಾಪ್ಟನ್

ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ರೋಚಕ ಗೆಲುವು ದಾಖಲಿಸುತ್ತಲೇ ಎಂ.ಎಸ್​.ಧೋನಿ ಕ್ಯಾಪ್ಟನ್ಸಿ ಬಗ್ಗೆ ಮೆಚ್ಚುಗೆಯ ಮಾತು ಕೇಳಿಬರುತ್ತಿದೆ. ಅದ್ರಲ್ಲೂ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಅಂತೂ ಧೋನಿ ಬಗ್ಗೆ ಆಡಿರೋ ಮಾತು ಈಗ ಎಲ್ಲೆಡೆ ಸುದ್ದಿಯಾಗ್ತಿದೆ. ಅಷ್ಟಕ್ಕೂ ಗವಾಸ್ಕರ್ ಹೇಳಿರುವ ಮಾತು ಏನು?.

ಇದನ್ನೂ ಓದಿ:  ವಾಂಖೆಡೆ ಸ್ಟೇಡಿಯಂನಲ್ಲಿ ‘ಧೋನಿ’ ಆಸನ – ವಿಜಯ ಸ್ಮಾರಕ ಉದ್ಘಾಟಿಸಿದ ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್

ಧೋನಿಯಂಥಾ ಮತ್ತೊಬ್ಬ ನಾಯಕನನ್ನು ಕ್ರಿಕೆಟ್ ಜಗತ್ತು ಈ ಹಿಂದೆಂದೂ ಕಂಡಿಲ್ಲ. ಭವಿಷ್ಯದಲ್ಲೂ ಧೋನಿಯಂತಾ ನಾಯಕ ಮತ್ತೆ ಬರಲ್ಲ ಅಂತಾ ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಫಾಫ್ ಡುಪ್ಲೆಸಿಸ್ ಮತ್ತು ಗ್ಲೆನ್​ ಮ್ಯಾಕ್ಸ್​ವೆಲ್​ ಯರ್ರಾಬಿರ್ರಿ ಬ್ಯಾಟಿಂಗ್ ಮಾಡ್ತಿದ್ರೂ, ಮೇಲಿಂದ ಮೇಲೆ ಸಿಕ್ಸರ್ ಹೊಡೀತಿದ್ರೂ ಧೋನಿ ಮಾತ್ರ ಕೂಲ್ ಆಗಿಯೇ ಎಲ್ಲವನ್ನೂ ಮೇಂಟೇನ್ ಮಾಡಿದ್ರು. ಅಂಥಾ ಸವಾಲಿನ ಸಂದರ್ಭವನ್ನ ಹೇಗೆ ಎದುರಿಸಬೇಕು ಅನ್ನೋದು ಧೋನಿ ನಾಯಕತ್ವದ ಚೆನ್ನೈ ತಂಡಕ್ಕಷ್ಟೇ ಗೊತ್ತು ಅಂತಾ ಗವಾಸ್ಕರ್ ಹೇಳಿದ್ದಾರೆ.

ಆರ್‌ಸಿಬಿ ವಿರುದ್ಧ ಗೆಲುವು ದಾಖಲಿಸಿದ ನಂತರ ಮಾತನಾಡಿದ ಸಿಎಸ್‌ಕೆ ಕ್ಯಾಪ್ಟನ್ ಧೋನಿ, ‘ನಾನು ವಿಕೆಟ್ ಹಿಂದಿನಿಂದ ಮೌಲ್ಯಮಾಪನ ಮಾಡುತ್ತಲೇ ಇರುತ್ತೇನೆ. ಯಾವತ್ತೂ ಫಲಿತಾಂಶದ ಬಗ್ಗೆ ಯೋಚಿಸುವುದಿಲ್ಲ. ಬದಲಾಗಿ ಆ ಸಂದರ್ಭಕ್ಕೆ ಏನು ಉತ್ತಮವಾಗಿ ಮಾಡಬಹುದು ಎಂಬುದನ್ನಷ್ಟೆ ಯೋಚಿಸುತ್ತಿರುತ್ತೇನೆ. ಡೆತ್ ಓವರ್ ಯುವ ಬೌಲರ್​ಗಳಿಗೆ ಕಷ್ಟಕರವಾಗಿದೆ. ಈ ಸಮಯದಲ್ಲಿ ಸುತ್ತಲೂ ಇಬ್ಬನಿ ಇರುತ್ತದೆ. ಹೀಗಿದ್ದರೂ ಅವರು ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ’ ಎಂದು ತನ್ನ ತಂಡದ ಆಟಗಾರರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಆರ್​ಸಿಬಿ ಪರ ಮ್ಯಾಕ್ಸ್​ವೆಲ್ ಮತ್ತು ಫಾಫ್ ಡುಪ್ಲೆಸಿಸ್ ನೀಡಿದ ಬ್ಯಾಟಿಂಗ್ ಪ್ರದರ್ಶನವನ್ನು ಧೋನಿ ಹಾಡಿ ಹೊಗಳಿದ್ದಾರೆ. ಯಾವಾಗ ನೀವು 220 ರನ್​ಗಳ ಟಾರ್ಗೆಟ್ ನೀಡುತ್ತೀರೊ ಆಗ ಗುರಿ ಬೆನ್ನಟ್ಟುವ ತಂಡ ಸತತವಾಗಿ ದೊಡ್ಡ ಹೊಡೆತಗಳನ್ನು ಹೊಡೆಯುತ್ತಲೇ ಇರಬೇಕು. ಒಂದುವೇಳೆ ಫಾಫ್ ಡುಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್​ವೆಲ್ ಔಟಾಗದೆ ಅದೇ ಮಾದರಿಯಲ್ಲಿ ಬ್ಯಾಟ್ ಬೀಸುತ್ತಿದ್ದರೆ ಆರ್​ಸಿಬಿ 18ನೇ ಓವರ್​ನಲ್ಲೇ ಗೆಲುವು ಸಾಧಿಸುತ್ತಿತ್ತು ಎಂದು ಧೋನಿ ಹೇಳಿದ್ದಾರೆ.

 

suddiyaana