ಇಶಾನ್ ಅಮೋಘ ದ್ವಿಶತಕ – ಲೈವ್ ಪಂದ್ಯದಲ್ಲೇ ವೈಭವ್ – ತಿಲಕ್ ಫೈಟ್!
ರಜತ್‌ಗೆ RCB ತಂಡ ಇಷ್ಟವಿಲ್ಲ..!

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು
ದುಲೀಪ್ ಟ್ರೋಫಿ ಫೈನಲ್ ಪಂದ್ಯದ ವೇಳೆ ವೈಭವ್ ಸೂರ್ಯವಂಶಿ & ದಕ್ಷಿಣ ವಲಯದ ನಾಯಕ ತಿಲಕ್ ವರ್ಮಾ ನಡುವೆ ಮಾತಿನ ಚಕಮಕಿ ನಡೆದಿದೆ. ವೈಭವ್ ಮೊದಲ ಎಸೆತದಿಂದಲೇ ಸ್ಫೋಟಕ ಬ್ಯಾಟಿಂಗ್ ಆರಂಭಿಸಿದ್ರು. ಆದ್ರೆ ಅರ್ಧಶತಕದತ್ತ ಸಮೀಪಿಸುತ್ತಿದ್ದಂತೆ ಹಿಡಿತ ಕಳೆದುಕೊಂಡ್ರು. ಇದಕ್ಕೆ ತಿಲಕ್ ವರ್ಮಾ ತಂತ್ರವೂ ಕಾರಣವಾಗಿತ್ತು. ತಿಲಕ್ , ವೈಭವ್‌ನ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸಿದ್ರು. ಏನೋ ವೈಸ್ ಕ್ಯಾಪ್ಟನ್ ಎಂದು ತಿಲಕ್ ವ್ಯಂಗ್ಯವಾಡುತ್ತಿದ್ದಂತೆ, ವೈಭವ್ ತಿರುಗೇಟು ನೀಡಿದ್ದಾರೆ. ಸಣ್ಣ ಸ್ಲೆಡ್ಜಿಂಗ್‌ನಿಂದ ಆರಂಭವಾದದ್ದು ನಂತರ ಗಂಭೀರ ವಾಗ್ವಾದಕ್ಕೆ ತಿರುಗಿದೆ.
ಚೆನ್ನೈನಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಪೂರ್ವ ವಲಯ ತಂಡ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. ಪೂರ್ವ ವಲಯ ತಂಡದ ಕ್ಯಾಪ್ಟನ್ ಇಶಾನ್ ಕಿಶನ್ ಡಬಲ್ ಸೆಂಚುರಿ ಸಿಡಿಸಿದ್ದಾರೆ. ಚೆನ್ನೈನ ಚೆಪಾಕ್ ಮೈದಾನದಲ್ಲಿ ಸೌತ್ ಝೋನ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಈಸ್ಟ್ ಝೋನ್ ತಂಡದ ನಾಯಕ ಕಿಶನ್ ಇದೀಗ ದ್ವಿಶತಕ ಬಾರಿಸಿ ವಿಶೇಷ ದಾಖಲೆ ಬರೆದಿದ್ದಾರೆ.
ಕ್ಯಾಪ್ಟನ್ ರಜತ್ ಪಾಟಿದಾರ್ ಸಂದರ್ಶನವೊಂದರಲ್ಲಿ ಆರ್‌ಸಿಬಿ ತಂಡಕ್ಕೆ ಸೇರಲು ಇಷ್ಟ ಇರಲಿಲ್ಲ ಅನ್ನೋ ವಿಚಾರವನ್ನ ರಿವೀಲ್ ಮಾಡಿದ್ದಾರೆ. ನಿಜವಾಗಿಯೂ ನನಗೆ RCB ಸೇರೋ ಮನಸ್ಸು ಇರಲಿಲ್ಲ, ಯಾಕಂದ್ರೆ ಅಲ್ಲಿ ನಾನು ಬೆಂಚ್ ಕಾಯಬೇಕು ಅಂತ ನನಗೆ ಗೊತ್ತಿತ್ತು. ನೀವು ಎಲ್ಲಿಗಾದ್ರೂ ಹೋದ್ರೆ, ಅಲ್ಲಿ ಆಡುವ 11ರ ಬಳಗದಲ್ಲಿ ಆಡುವಷ್ಟು ಸಾಮರ್ಥ್ಯ ಹೊಂದಿರಬೇಕು ಎಂದು ನಾನು ಭಾವಿಸುತ್ತೇನೆ. ಆದ್ರೆ ನನ್ನ ಕುಟುಂಬದವರು ಕೋಚ್ & ಹಿರಿಯ ಆಟಗಾರರು RCBಗೆ ಹೋಗುವಂತೆ ಮನವೊಲಿಸಿದ್ರು ಎಂದು ರಜತ್ ಪಾಟೀದಾರ್ ಹೇಳಿಕೊಂಡಿದ್ದಾರೆ.
ಉತ್ತರ ಪ್ರದೇಶ ಟಿ20 ಲೀಗ್‌ನ 4ನೇ ಆವೃತ್ತಿಯಲ್ಲಿ ಮೀರತ್ ಮೇವರಿಕ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾನುವಾರ ಲಕ್ನೋದ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ, ಸ್ಟಾರ್ ಆಟಗಾರ ರಿಂಕು ಸಿಂಗ್ ನಾಯಕತ್ವದ ಮೀರತ್ ತಂಡವು ಭುವನೇಶ್ವರ್ ಕುಮಾರ್ ನೇತೃತ್ವದ ಲಕ್ನೋ ಫಾಲ್ಕನ್ಸ್ ವಿರುದ್ಧ 94 ರನ್‌ಗಳ ಭರ್ಜರಿ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು ಕಂಡಿರುವ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಗೊಂದಲ ಮುಂದುವರಿದಿದೆ. ಈಗಾಗಲೇ 7 ಆಟಗಾರರು ಹಾಗೂ ಮುಖ್ಯ ಕೋಚ್ ಅವರನ್ನು ಬದಲಾಯಿಸಿರುವ ಪಿಸಿಬಿ, ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ಅಂತಿಮ ಟೆಸ್ಟ್‌ಗೂ ಮುನ್ನ ಆಟಗಾರರ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದೆ. ಭ್ರಷ್ಟಾಚಾರ ಅಥವಾ ಮ್ಯಾಚ್ ಫಿಕ್ಸಿಂಗ್ ಆತಂಕದಿಂದ ಮಂಡಳಿ ಈ ಕ್ರಮ ಕೈಗೊಂಡಿರಬಹುದು ಎನ್ನಲಾಗಿದೆ. ಪಂದ್ಯವಿಲ್ಲದ ದಿನಗಳಲ್ಲೂ ಸುದೀರ್ಘ ಅವಧಿಗೆ ವೈಯಕ್ತಿಕ ಫೋನ್ ವಶಪಡಿಸಿಕೊಂಡಿರುವುದು ಅಪನಂಬಿಕೆ ಹಾಗೂ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಇದನ್ನೂ ಓದಿ: ಅಭಿ Vs ವೈಭವ್ Vs ಸಂಜು – AFG ಸರಣಿ ಓಪನರ್ಸ್ ಯಾರು?
ಟೀಂ ಇಂಡಿಯಾ ವೇಗಿ ಅರ್ಶದೀಪ್ ಸಿಂಗ್ ಹಾಗೂ ಮಾಡೆಲ್-ನಟಿ ಸಮ್ರೀನ್ ಕೌರ್ ಡೇಟಿಂಗ್ ಸುದ್ದಿ ಹಲವು ತಿಂಗಳಿನಿಂದ ಸದ್ದು ಮಾಡುತ್ತಿತ್ತು. ಇದೀಗ ಇವರಿಬ್ಬರು ತಮ್ಮ ಪ್ರೇಮ ಸಂಬಂಧವನ್ನು ಅಧಿಕೃತಗೊಳಿಸಿದ್ದು, ಪರಸ್ಪರರ ಕೈಬರಹದ ವಿಶೇಷ ಮ್ಯಾಚಿಂಗ್ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅರ್ಶದೀಪ್ ತೋಳಿನ ಮೇಲೆ ಸಮ್ರೀನ್ ಬರೆದ ‘AS’ ಮತ್ತು ಸಮ್ರೀನ್ ತೋಳಿನ ಮೇಲೆ ಅರ್ಶದೀಪ್ ಬರೆದ ‘SK’ ಅಕ್ಷರಗಳ ಹಚ್ಚೆಗಳಿವೆ.
ಭಾರತ & ಪಾಕಿಸ್ತಾನದ ನಡುವೆ ರಾಜತಾಂತ್ರಿಕ ಉದ್ವಿಗ್ನತೆಯ ನಡುವೆಯೂ, ಮಹಿಳಾ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಅಪರೂಪದ ಸೌಹಾರ್ದಯುತ ಘಟನೆ ನಡೆದಿದೆ. ಶನಿವಾರ ಪಂದ್ಯಕ್ಕೂ ಮುನ್ನ ಭಾರತೀಯ ರಾಷ್ಟ್ರಗೀತೆ ವೇಳೆ ಪಾಕಿಸ್ತಾನ ಅರ್ಶದ್ ಹನೀಫ್ ಭಾರತೀಯರ ಜತೆ ಸೇರಿ ರಾಷ್ಟ್ರಗೀತೆಯನ್ನು ಅಚ್ಚುಕಟ್ಟಾಗಿ ಹಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಮಹಿಳಾ ಏಷ್ಯಾ ಕಪ್ ಕ್ರಿಕೆಟ್ ಪಂದ್ಯದಲ್ಲಿ, ಭಾರತ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಮಣಿಸಿದೆ. ಭಾರತದ ಈ ಅದ್ಭುತ ಗೆಲುವಿನ ಬೆನ್ನಲ್ಲೇ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಪಾಕಿಸ್ತಾನದ ಕಾಲೆಳೆದಿದ್ದಾರೆ. ಆಜ್ ಸಂಡೇ ಹೈ ಕ್ಯಾ? ಎಂದು ಪೋಸ್ಟ್ ಮಾಡುವ ಮೂಲಕ ವ್ಯಂಗ್ಯವಾಡಿದ್ದಾರೆ. ಅಂದ್ಹಾಗೆ 2025ರ ಪುರುಷರ ಏಷ್ಯಾ ಕಪ್ ವೇಳೆ ಸತತ 3 ಭಾನುವಾರಗಳಂದು ಭಾರತ & ಪಾಕಿಸ್ತಾನ ಮುಖಾಮುಖಿಯಾಗಿದ್ದವು. ಆಗ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ ಪಾಕಿಸ್ತಾನವನ್ನು ಸೋಲಿಸಿದಾಗ ಪಠಾಣ್, ಸಂಡೇ ಕೈಸಾ ರಹಾ ಪಡೋಸಿಯೋ? ಎಂದು ಕೇಳಿದ್ದರು.
ಟೀಂ ಇಂಡಿಯಾ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ಸುರೇಶ್ ರೈನಾ, ಆಕಾಶ್ ಚೋಪ್ರಾ ಅವರೊಂದಿಗಿನ ಸಂದರ್ಶನದಲ್ಲಿ ತಮ್ಮ ನಿವೃತ್ತಿ ಬಗ್ಗೆ ಮೌನ ಮುರಿದಿದ್ದಾರೆ. ನಮ್ಮ ಕಾಲದಲ್ಲಿ ನಿಯಮಗಳು ಬದಲಾಗಿದ್ದವು. ಯುವರಾಜ್ ಸಿಂಗ್ & ನಾನು ಆರಂಭದಲ್ಲಿ ಯೋ-ಯೋ ಫಿಟ್‌ನೆಸ್ ಪರೀಕ್ಷೆಯಲ್ಲಿ ವಿಫಲರಾಗಿದ್ದೆವು ಎಂಬುದು ನಿಜ. ಆದ್ರೆ ನಾವು ಕಷ್ಟಪಟ್ಟು ಅಭ್ಯಾಸ ಮಾಡಿ, ಅದೇ ಯೋ-ಯೋ ಪರೀಕ್ಷೆಯಲ್ಲಿ ಸಕ್ಸಸ್ ಆಗಿ ತೋರಿಸಿದೆವು. ಅಷ್ಟೇ ಅಲ್ಲ, ದೇಶೀಯ ಕ್ರಿಕೆಟ್‌ನಲ್ಲಿ ಭರ್ಜರಿಯಾಗಿ ರನ್ ಗಳಿಸಿ ನಮ್ಮಲ್ಲಿರುವ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದೆವು. ಆದ್ರೂ ನಮಗೆ ಭಾರತ ತಂಡದಲ್ಲಿ ಅವಕಾಶ ಸಿಕ್ಕಿಲ್ಲ ಎಂದು ಸುರೇಶ್ ರೈನಾ ಹೇಳಿಕೊಂಡಿದ್ದಾರೆ.
ಐಪಿಎಲ್‌ನ ಅತ್ಯಂತ ಜನಪ್ರಿಯ ಫ್ರಾಂಚೈಸಿಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರು ಬದಲಾಗಲಿದೆ ಎನ್ನುವ ಸಾಮಾಜಿಕ ಜಾಲತಾಣಗಳ ವದಂತಿಗಳಿಗೆ ಕೊನೆಗೂ ಪೂರ್ಣ ವಿರಾಮ ಬಿದ್ದಿದೆ. ತಂಡದ ನೂತನ ಚೇರ್ಮನ್ ಆರ್ಯಮನ್ ಬಿರ್ಲಾ ಅವರು ಆರ್‌ಸಿಬಿ ಹೆಸರು ಬದಲಾಗುವುದಿಲ್ಲ ಎಂದು ಅಧಿಕೃತವಾಗಿ ಸ್ಪಷ್ಟಪಡಿಸಿದ್ದಾರೆ.

ನೋಡಿರಿ

