ಮಳೆಗೆ ಕೊಚ್ಚಿಹೋದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಪಂದ್ಯ
ಕಿವೀಸ್‌ನಲ್ಲಿ ನಿರಂತರ ಮಳೆ -ಕ್ರಿಕೆಟ್ ಪಂದ್ಯ ರದ್ದು
ವೆಲ್ಲಿಂಗ್ಟನ್ : ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಪಂದ್ಯ ಮಳೆಗೆ ಬಲಿಯಾಗಿದೆ. ಇವತ್ತು ವೆಲ್ಲಿಂಗ್ಟನ್‌ಲ್ಲಿ ಟೀಮ್ ಇಂಡಿಯಾ ಮತ್ತು ಕಿವೀಸ್ ನಡುವೆ ಮೊದಲ ಪಂದ್ಯ ನಡೆಯಬೇಕಿತ್ತು. ಆದರೆ ಕೆಲ ದಿನಗಳಿಂದ ವೆಲ್ಲಿಂಗ್ಟನ್‌ಲ್ಲಿ ಮಳೆ ಸುರಿಯುತ್ತಿತ್ತು. ಹೀಗಾಗಿ ಇವತ್ತು ಪಂದ್ಯ ನಡೆಯುವುದು ಅನುಮಾನ ಎನ್ನಲಾಗ್ತಿತ್ತು. ಕೊನೆಗೂ ಹಾಗೆಯೇ ಆಗಿದೆ. ಇನ್ನೇನು ಪಂದ್ಯ ಆರಂಭವಾಗಬೇಕು ಅನ್ನುವಷ್ಟರಲ್ಲಿ ಮಳೆರಾಯ ಪ್ರತ್ಯಕ್ಷನಾಗಿದ್ದಾನೆ.
ಇದನ್ನೂ ಓದಿ: ಹಾಲಿ ಕೋಚ್‌ಗೆ ಮಾತಿನಲ್ಲೇ ಚುಚ್ಚಿದ ಮಾಜಿ ಕೋಚ್ -ವಿಶ್ರಾಂತಿ ಬಗ್ಗೆ ಶಾಸ್ತ್ರಿ ಪಾಠ
ಭಾರತ ಮತ್ತು ನ್ಯೂಜಿಲೆಂಡ್ ಟೀಮ್‌ನ ಉಭಯ ನಾಯಕರು ಟಾಸ್‌ಗೆ ರೆಡಿಯಾಗಿದ್ದರು. ಟಾಸ್‌ಗೆ ಸಿದ್ಧವಾಗಿರುವ ವೇಳೆಗೆ ಮಳೆ ಸುರಿಯಲಾರಂಭಿಸಿದೆ. ಆಗ ಆರಂಭವಾದ ಮಳೆ ನಿಲ್ಲದೇ ಇದ್ದ ಕಾರಣ ಟಾಸ್ ನಡೆಯಲಿಲ್ಲ. ಜೊತೆಗೆ ಪಂದ್ಯವನ್ನು ಕೂಡಾ ರದ್ದುಗೊಳಿಸಲಾಗಿದೆ. ಒಂದು ಹಂತದಲ್ಲಿ ಮಳೆ ಕೊಂಚ ವಿರಾಮ ತೆಗೆದುಕೊಂಡಿದ್ದರಿಂದ ಆಟ ಶುರುವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಮತ್ತೆ ಸುರಿಯಲಾರಂಭಿಸಿತು. ಭಾರೀ ಮಳೆಯಿಂದಾಗಿ ಕ್ರೀಡಾಂಗಣದ ಹೊರಭಾಗದ ಹಲವೆಡೆ ನೀರು ತುಂಬಿತ್ತು. ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಎರಡೂ ತಂಡಗಳು ಸೋಲು ಕಂಡಿದ್ದವು. ಹೀಗಾಗಿ ಈ ಪಂದ್ಯದ ಮೇಲೆ ಹೆಚ್ಚಿನ ನಿರೀಕ್ಷೆಯಿತ್ತು.
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟಿ20 ಪಂದ್ಯ ನವೆಂಬರ್ 20 ರಂದು ನಡೆಯಲಿದೆ.