ಬೌಲರ್‌ಗ ಳಿಗೆ ನರೈನ್ ಎಚ್ಚರಿಕೆ! – ಆಲೌಟಾದ್ರೂ ಪಂತ್ ಮೆಚ್ಚುಗೆ ಗಳಿಸಿದ್ದೇಕೆ?

ಬೌಲರ್‌ಗ ಳಿಗೆ ನರೈನ್ ಎಚ್ಚರಿಕೆ! – ಆಲೌಟಾದ್ರೂ ಪಂತ್ ಮೆಚ್ಚುಗೆ ಗಳಿಸಿದ್ದೇಕೆ?

ಸ್ಪಿನ್ನರ್ ಸುನಿಲ್ ನರೈನ್ ಈಗ ಬ್ಯಾಟಿಂಗ್ ನಲ್ಲಿ ಮಿಂಚು ಹರಿಸುತ್ತಿದ್ದಾರೆ.. ಅಷ್ಟೇ ಅಲ್ಲ ಕ್ರಿಕೆಟ್ ಅಂದ್ರೆ ಅದೇನಿದ್ರೂ ಬ್ಯಾಟಿಂಗ್ನ ಆಟ ಎಂದು ಸ್ವತಃ ಬೌಲರ್ ಆಗಿದ್ದು ನರೈನ್ ಒಪ್ಪಿಕೊಂಡಿದ್ದಾರೆ.. ತನ್ನ 501ನೇ ಮ್ಯಾಚ್ನಲ್ಲಿ ಅತಿಹೆಚ್ಚಿನ ಸ್ಕೋರ್ ದಾಖಲಿಸಿದ ನಂತರ ಸುನಿಲ್ ನರೈನ್ ಬ್ಯಾಟಿಂಗ್ ಬಗ್ಗೆ ಈಗ ವ್ಯಾಪಕ ಚರ್ಚೆಯಾಗ್ತಿದೆ.. ಆದ್ರೆ ಟೀಂಗೆ ಏನ್ ಬೇಕೋ ಅದನ್ನು ಕೊಡೋದಿಕ್ಕೆ ನಾನ್ ರೆಡಿ ಎನ್ನುತ್ತಲೇ ಕೇವಲ ಬೌಲರ್ ಅಲ್ಲ.. ಬ್ಯಾಟಿಂಗ್ನಲ್ಲೂ ಮತ್ತಷ್ಟು ಮಿಂಚುವ ವಿಶ್ವಾಸ ಮೂಡಿಸಿದ್ದಾರೆ.

ಇದನ್ನೂ ಓದಿ: ರೈತರ ಕಣ್ಮಣಿ ಕುಮಾರಸ್ವಾಮಿ – ಮೈತ್ರಿ ಗೆಲುವು ನಿಶ್ಚಿತ ಎಂದ ನಿಖಿಲ್‌ ಕುಮಾರಸ್ವಾಮಿ

ನಿನ್ನೆ ಜಸ್ಟ್ ಐದೇ ಐದು ರನ್‌ ಗಳಿಂದ ಒಂದು ದಾಖಲೆ ಮುರಿಯೋ ಅವಕಾಶ ತಪ್ಪಿ ಹೋಯ್ತು.. ರಿಂಕು ಸಿಂಗ್ ಇನ್ನೊಂದು ಬಾಲ್ ಆಡೋಕೆ ಸಾಧ್ಯ ಆಗ್ತಿದ್ದರೂ ಕಳೆದ ವಾರ ದಾಖಲಾಗಿದ್ದ ರೆಕಾರ್ಡ್ ಈ ವಾರ ಮುರಿದು ಹೋಗಿ, ಹೊಸ ದಾಖಲೆ ತಲೆ ಎತ್ತಿ ನಿಲ್ಲೋದಿಕ್ಕೆ ಅವಕಾಶವಿತ್ತು.. ಕಳೆದ ವಾರವಷ್ಟೇ ಹೈದ್ರಾಬಾದ್ ಟೀಂನವರು ಮುಂಬೈ ವಿರುದ್ಧ 277 ರನ್ ಹೊಡೆದಿದ್ದರು.. ಅದೇ ರನ್ ಚೇಸ್ ಮಾಡುವಂತಿತ್ತು ಕೆಕೆಆರ್ನ ಬ್ಯಾಟಿಂಗ್.. 272 ರನ್ಗಳನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಎರಡನೇ ಅತಿಹೆಚ್ಚು ಸ್ಕೋರ್  ದಾಖಲಿಸಿದ ರೆಕಾರ್ಡ್ ಈಗ ಕೆಕೆಆರ್ ಪಾಲಾಗಿದೆ.. ಆರ್ಸಿಬಿಯ ರೆಕಾರ್ಡ್ ಮೂರನೇ ಸ್ಥಾನಕ್ಕೆ ಕುಸಿದಿದೆ..

ಕೆಕೆಆರ್ ಈ ರೀತಿಯದ್ದೊಂದು ಸಾಧನೆ ಮಾಡೋದಿಕ್ಕೆ ಕಾರಣವಾಗಿದ್ದು ಒನ್ ಅಂಡ್ ಒನ್ಲಿ ಸುನಿಲ್ ನರೈನ್.. ಒಂದ್ಕಡೆ ಬೌಲಿಂಗ್ ಮಾಡೋಕೆ ಹೋದ್ರೆ ಬ್ಯಾಟ್ಸ್ಮನ್ಗಳಿಗೆ ಹೊಡೆಯೋಕೆ ಬಿಡಲ್ಲ.. ಅದೇ ಬ್ಯಾಟಿಂಗ್ ಗೆ ಬಂದ್ರೆ ಬೌಲರ್ಗಳನ್ನು ಬೆಂಡೆತ್ತೊದು ಬಿಡ್ತಿಲ್ಲ.. ಬೌಲರ್ ಸುನಿಲ್ ನರೈನ್ ಈಗ ಪಕ್ಕಾ ಆಲ್ರೌಂಡರ್ ಆಗಿ ಬದಲಾಗ್ತಿದ್ದಾರೆ.. ಮೊನ್ನೆಯಷ್ಟೇ ಆರ್‌ಸಿಬಿ ವಿರುದ್ಧ ಸುನಿಲ್ ನರೈನ್ ಅಬ್ಬರಿಸಿದ್ದನ್ನು ಬೆಂಗಳೂರು ಫ್ಯಾನ್ಸ್ ಮರೆಯೋದಿಕ್ಕೆ ಸಾಧ್ಯವೇ ಇಲ್ಲ.. ಅದ್ರಲ್ಲೂ ಒಬ್ಬ ಬೌಲರ್ ಕೈಯಲ್ಲಿ ಹಿಂಗೆಲ್ಲಾ ಹೊಡೆಸಿಕೊಂಡ್ವಲ್ಲ ಅಂತ ನಾವೂ ಬೇಸರ ಪಟ್ಕೊಂಡಿದ್ವಿ.. ಆದ್ರೆ ಆರ್ಸಿಬಿ ಫ್ಯಾನ್ಸ್ ಬೇಸರ ಮರೆಸಬೇಕು ಅಂತೇನೋ ಸುನಿಲ್ ನರೈನ್ ಅದಕ್ಕಿಂತ ಜಾಸ್ತಿ ಅಬ್ಬರವನ್ನು ಡಿಸಿ ವಿರುದ್ಧ ತೋರಿಸಿದ್ದಾರೆ.. ಓಪನಿಂಗ್ ಬ್ಯಾಟ್ಸ್ಮನ್ ಆಗಿ ಬಂದು, ವಿಶಾಖಪಟ್ಟಣಂನ ಮೈದಾನದಲ್ಲಿ ಸಿಡಿಲಿಗಿಂತ ಜಾಸ್ತಿ ಬ್ಯಾಟಿಂಗ್ನಲ್ಲಿ ಮಿಂಚು ಹರಿಸಿದ್ದಾರೆ.. ಕೇವಲ 39 ಎಸೆತಗಳಲ್ಲಿ 85 ರನ್ ಹೊಡೆದು, ವೈಯಕ್ತಿಕವಾಗಿ ವೃತ್ತಿ ಜೀವನದಲ್ಲಿ ಬ್ಯಾಟಿಂಗ್ ಮೂಲಕ ಅತಿಹೆಚ್ಚು ರನ್ ಗಳಿಸಿದ ದಾಖಲೆ ಬರೆದುಕೊಂಡಿದ್ದಾರೆ.. ಮೈದಾನದ ಮೂಲೆ ಮೂಲೆಗೂ ಬಾಲ್ ಅಟ್ಟಿದ್ದ ಸುನಿಲ್ ನರೈನ್ 7 ಬೌಂಡರಿ ಮತ್ತು 7 ಸಿಕ್ಸರ್ಗಳ ಮೂಲಕ ಡಿಸಿ ಬೌಲರ್ಗಳ ಬೆಂಡೆತ್ತಿದ್ದರು.. ಇದಾದ ನಂತರ ಬೌಲಿಂಗ್ನಲ್ಲೂ ಒಂದು ವಿಕೆಟ್ ಕಬಳಿಸಿದ್ದ ಸುನಿಲ್ ನರೈನ್ಗೆ ಸಹಜವಾಗಿಯೇ ಪಂದ್ಯಶೇಷ್ಠ ಪ್ರಶಸ್ತಿ ಒಲಿದಿತ್ತು. ಮ್ಯಾನ್ ಆಫ್ ದಿ ಮ್ಯಾಚ್ ಪಡೆದ್ಮೇಲೆ ಮಾತಾಡಿದ ನರೈನ್ ಐಪಿಎಲ್ನ ಉಳಿದ ಫ್ರಾಂಚೈಸಿಗಳ ಬೌಲರ್ಗಳಿಗೂ ಎಚ್ಚರಿಕೆಯ ಸಂದೇಶ ರವಾನಿಸಿಬಿಟ್ಟಿದ್ದಾರೆ..

ಕ್ರಿಕೆಟ್ ಅಂದ್ರೆ ಈಗ ಕೇವಲ ಬ್ಯಾಟಿಂಗ್ ಮಾತ್ರ.. ಹೀಗಾಗಿ ನಾನು ಬ್ಯಾಟಿಂಗ್ ಮೂಲಕ ತಂಡಕ್ಕೆ ಹೆಚ್ಚು ನೆರವಾಗುವ ಪ್ರಯತ್ನ ಮಾಡ್ತಿದ್ದೇನೆ ಎಂದು ನರೈನ್ ಹೇಳಿದ್ದಾರೆ.. ಈ ಮೂಲಕ ಬೇರೆ ತಂಡಗಳ ಬೌಲರ್‌ಗಳ ಮನಸ್ಸಿನಲ್ಲೂ ನರೈನ್ ನಡುಕ ಹುಟ್ಟಿಸಿದ್ದಾರೆ.. ಯಾಕಂದ್ರೆ ನರೈನ್ ಹೊಡೆತಕ್ಕೆ ಆರ್ಸಿಬಿ ಬೌಲರ್ಗಳು ಆಲ್ರೆಡಿ ನಲುಗಿ ಹೋಗಿದ್ದರು.. ಈಗ ಡಿಸಿ ಬೌಲರ್‌ಗಳೂ ಚೆನ್ನಾಗಿಯೇ ಹೊಡೆಸಿಕೊಂಡಿದ್ದಾರೆ.. ಇನ್ನು ನರೈನ್ಗೆ ಸಾಥ್ ನೀಡಿದ್ದ ಕೆಕೆಆರ್ನ ಯುವ ಆಟಗಾರ ಅಂಗ್ಕ್ರಿಶ್ ರಘುವಂಶಿ ಹೊಸ ದಾಖಲೆ ಬರೆದಿದ್ದಾರೆ.. ಡಿಸಿ ವಿರುದ್ಧ ಚೊಚ್ಚಲ ಪಂದ್ಯವಾಡಿದ ರಘುವಂಶಿ, ಕೇವಲ 27 ಎಸೆತಗಳಲ್ಲಿ 54 ರನ್ ಹೊಡೆದಿದ್ದರು.. ಈ ಮೂಲಕ ಡೆಬ್ಯು ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಅತ್ಯಂತ ಚಿಕ್ಕ ವಯಸ್ಸಿನ ಆಟಗಾರ ಎಂಬ ದಾಖಲೆ ರಘುವಂಶ ಪಾಲಾಗಿದೆ.. ಈ ಹಿಂದೆ 19 ವರ್ಷ 1 ದಿನದಲ್ಲಿ ಚೊಚ್ಚಲ ಪಂದ್ಯವಾಡಿದ್ದ ಶ್ರೀವತ್ಸ್ ಗೋಸ್ವಾಮಿ 2008ರಲ್ಲಿ ಅರ್ಧಶತಕ ಸಿಡಿಸಿದ ಯಂಗೆಸ್ಟ್ ಪ್ಲೇಯರ್ ಎಂಬ ದಾಖಲೆ ಬರೆದಿದ್ದರು.. ಆದ್ರೆ ಬುಧವಾರ 18 ವರ್ಷ  303 ದಿನಗಳ ರಘುವಂಶಿ ಈಗ ಚೊಚ್ಚಲ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಯಂಗೆಸ್ಟ್ ಪ್ಲೇಯರ್ ರೆಕಾರ್ಡ್ ಅನ್ನು ತಮ್ಮ ಹೆಸರಿಗೆ ಬದಲಾಯಿಸಿಕೊಂಡಿದ್ದಾರೆ.. ಹೀಗೆ ದಾಖಲೆಗಳ ಮೇಲೆ ದಾಖಲೆ ಬರೆದಿರುವ ಕೆಕೆಆರ್ ಆಡಿರುವ ಮೂರೂ ಪಂದ್ಯಗಳನ್ನು ಗೆದ್ದು ಪಾಯಿಂಟ್ ಟೇಬಲ್‌ನಲ್ಲಿ ನಂಬರ್ 1 ಸ್ಥಾನದಲ್ಲಿದೆ.. ನೆಟ್ ರನ್ ರೇಟ್ ಪ್ಲಸ್ 2.5ನಲ್ಲಿದ್ದು, ಡಿಸಿ ವಿರುದ್ಧದ ದೊಡ್ಡ ಅಂತರದ ಗೆಲುವಿನ ನಂತರ, ಆದಷ್ಟು ಬೇಗ ಪ್ಲೇಆಫ್‌ಗೆ ಎಂಟ್ರಿಕೊಡುವ ಭರವಸೆಯನ್ನು ಕೆಕೆಆರ್ ಮೂಡಿಸಿದೆ.. ಆದ್ರೆ ಅತ್ತ ಹೀನಾಯವಾಗಿ ಸೋತರೂ ಡಿಸಿ ತಂಡದ ಕ್ಯಾಪ್ಟನ್ ರಿಷಬ್ ಪಂತ್ ಮಾತು ಎಲ್ಲರ ಮೆಚ್ಚುಗೆ ಪಾತ್ರವಾಗಿದೆ..

ನಾವು ಆಲ್ಔಟ್ ಆದ್ರೂ ಪರವಾಗಿಲ್ಲ.. ಚೇಸ್ ಮಾಡಲು ಪ್ರಯತ್ನ ಪಡದೇ ಇರಬಾರದು ಎಂಬ ಮನಸ್ಥಿತಿಯಲ್ಲೇ ಬ್ಯಾಟಿಂಗ್ ಮಾಡಿದ್ದೆವು ಎಂದು ಪಂತ್ ಹೇಳಿದ್ದಾರೆ..  ತಂಡದ ಮನಸ್ಥಿತಿ ಕೇವಲ ಪಂತ್ ಬಾಯಲ್ಲಿ ಮಾತ್ರವಲ್ಲ.. ಅವರ ಬ್ಯಾಟಿಂಗ್ನಲ್ಲೂ ವ್ಯಕ್ತವಾಗಿತ್ತು.. ಸಾವು ಗೆದ್ದು ಬಂದ ಸಾಹಸಿ ಪಂತ್ ಐಪಿಎಲ್ನಲ್ಲಿ ಈಗ ಸತತ ಎರಡನೇ ಅರ್ಧಶತಕ ದಾಖಲಸಿದ್ದಾರೆ.. ಆದ್ರೆ 25 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್ಗಳ ಮೂಲಕ 55 ರನ್ ಸಿಡಿಸಿದ್ದರು ರಿಷಬ್ ಪಂತ್.. ಆದ್ರೆ ಚೇಸ್ ಮಾಡಲು ಹೋಗಿ 17.2 ಓವರ್ಗಳಲ್ಲಿ ಕೇವಲ166 ರನ್ ಹೊಡೆದು ಆಲೌಟ್ ಆಯಿತು ಡಿಸಿ.. ಸೋತರೂ ಮಾತಿನ ಮೂಲಕ ಪಂತ್ ಅಭಿಮಾನಿಗಳ ಮನಗೆದ್ದಿದ್ದಾರೆ.. ಇದೇ ವೇಳೆ ಡಿಸಿಯ ಸ್ಟಾರ್ ಆಟಗಾರರಿಗೂ ಪಂತ್ ಬಿಸಿ ಮುಟ್ಟಿಸಿದ್ದಾರೆ..  ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ತಿಳಿದು ಆಡಿದರೆ ಪಂದ್ಯ ಗೆಲ್ಲಬಹುದು ಎನ್ನುವ ಸಂದೇಶ ರವಾನಿಸಿದ್ದಾರೆ.. ಈ ಮೂಲಕ ಡಿಸಿ ಮತ್ತೆ ಸಿಡಿದೇಳುವ ವಿಶ್ವಾಸ ಮೂಡಿಸಿದೆ.. ಅದರಲ್ಲೂ ರಿಷಬ್ ಪಂತ್ ಬ್ಯಾಟಿಂಗ್ ಲಯ ಕಂಡು ಕೊಂಡಿರೋದ್ರಿಂದ ಡೆಲ್ಲಿ ಕ್ಯಾಪಿಟಲ್ಸ್ನಲ್ಲೂ ಉತ್ಸಾಹ ಮೂಡಿದೆ.. ಚೈನ್ನೈ ಸೂಪರ್ ಕಿಂಗ್ಸ್ ವಿರುದ್ಧ ಜಯ ದಾಖಲಿಸಿಕೊಂಡಿದ್ದ ಡಿಸಿ, ಮುಂದಿನ ಪಂದ್ಯಗಳಲ್ಲಿ ಹೇಗೆ ಕಂಬ್ಯಾಕ್ ಮಾಡುತ್ತದೆ ಎಂದು ನೋಡಬೇಕಿದೆ.

Shwetha M