ಆ ಚಿಕ್ಕ ಹುಡುಗ ‘ವಿರಾಟ್’ ಆಟಗಾರನಾಗಿ ಬೆಳೆದಿದ್ದಕ್ಕೆ ತುಂಬಾ ಖುಷಿಯಾಗಿದೆ- ತನ್ನ ದಾಖಲೆ ಮುರಿದ ಕೊಹ್ಲಿಗೆ ಕ್ರಿಕೆಟ್ ದೇವರ ಭಾವುಕ ಪೋಸ್ಟ್

ಆ ಚಿಕ್ಕ ಹುಡುಗ ‘ವಿರಾಟ್’ ಆಟಗಾರನಾಗಿ ಬೆಳೆದಿದ್ದಕ್ಕೆ ತುಂಬಾ ಖುಷಿಯಾಗಿದೆ- ತನ್ನ ದಾಖಲೆ ಮುರಿದ ಕೊಹ್ಲಿಗೆ ಕ್ರಿಕೆಟ್ ದೇವರ ಭಾವುಕ ಪೋಸ್ಟ್

ಕ್ರಿಕೆಟ್ ದೇವರೆಂದೇ ಖ್ಯಾತಿಯಾದವರು ಸಚಿನ್ ತೆಂಡೂಲ್ಕರ್. ಕ್ರಿಕೆಟ್ ಜಗತ್ತಿನ ಸಾಮ್ರಾಟ ಆಗಿ ಈಗ ಮೆರೆಯುತ್ತಿರುವವರು ವಿರಾಟ್ ಕೊಹ್ಲಿ. ಇಬ್ಬರೂ ಗುಣದಲ್ಲಿ ಒಂದು ಕೈ ಮೇಲು. ಯಾಕೆಂದರೆ, ವಾಂಖೆಡೆ ಸ್ಟೇಡಿಯಂನಲ್ಲಿ ಬುಧವಾರ ಸೆಮಿಫೈನಲ್ ಪಂದ್ಯ ನೋಡಿದ ಅಭಿಮಾನಿಗಳಿಗೂ ಹೀಗೆ ಅನ್ನಿಸಿದೆ. ಇಬ್ಬರು ಕ್ರಿಕೆಟ್ ದಿಗ್ಗಜರ ಪರಸ್ಪರ ಗೌರವ ಸಮರ್ಪಣೆ ಅಭಿಮಾನಿಗಳ ಮನಗೆದ್ದಿದೆ. ತನ್ನ ದಾಖಲೆ ಮುರಿದ ಕೊಹ್ಲಿಗೆ ಕ್ರಿಕೆಟ್ ದೇವರು ಭಾವನಾತ್ಮಕವಾಗಿ ಅಭಿನಂದಿಸಿದ್ದಾರೆ. ಮಾಸ್ಟರ್ ಬ್ಲಾಸ್ಟರ್‌ಗೆ ರನ್ ಮೆಷಿನ್ ಕೊಹ್ಲಿ ಕೂಡಾ ಅಷ್ಟೇ ಗೌರವದಿಂದ ತಲೆಬಾಗಿದ್ದಾರೆ.

ಇದನ್ನೂ ಓದಿ:  ‘ನೀವು ನಿಜವಾಗಿಯೂ ದೇವರ ಮಗು’ – ವಿರಾಟ್ ಕೊಹ್ಲಿಗೆ ಮುತ್ತಿನ ಸರಮಾಲೆ ನೀಡಿದ ಬಳಿಕ ಪತ್ನಿ ಅನುಷ್ಕಾ ಶರ್ಮಾರ ಹೆಮ್ಮೆಯ ಮಾತು..!

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 50ನೇ ಶತಕ ಸಿಡಿಸುವ ಮೂಲಕ ತನ್ನ ದಾಖಲೆಯನ್ನು ಮುರಿದ ವಿರಾಟ್ ಕೊಹ್ಲಿ ಸಾಧನೆಗೆ ಕ್ರಿಕೆಟ್ ದೇವರು ಮನಸ್ಪೂರ್ತಿಯಾಗಿ ಅಭಿನಂದಿಸಿದ್ದಾರೆ. ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ, ಕೊಹ್ಲಿ ತಮ್ಮ ವೃತ್ತಿಬದುಕಿನ 80ನೇ ಶತಕವನ್ನು ದಾಖಲಿಸಿದರು. ಜೊತೆಗೆ ಕ್ರಿಕೆಟ್ ದೇವರ ದಾಖಲೆಯನ್ನು ಮುರಿದು ವಿಶ್ವದಾಖಲೆ ಬರೆದರು. ಅಷ್ಟೇ ಅಲ್ಲ, ಮಾಸ್ಟರ್ ಬ್ಲಾಸ್ಟರ್ ಸಚಿನ್ ದಾಖಲೆ ಮುರಿದ ಕಿಂಗ್ ಕೊಹ್ಲಿ ಮೈದಾನದಲ್ಲಿಯೇ ಶಿರಭಾಗಿ ಸಚಿನ್ ಅವರಿಗೆ ಗೌರವ ಸಮರ್ಪಿಸಿದರು. ಇದಕ್ಕೆ ಪ್ರತಿಯಾಗಿ ಸಚಿನ್ ತೆಂಡೂಲ್ಕರ್ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಗೌರವ ತೋರಿದರು. ಪಂದ್ಯ ಮುಗಿದ ಮೇಲೆ ಸಚಿನ್ ತೆಂಡೂಲ್ಕರ್ ತನ್ನ ದಾಖಲೆಯನ್ನು ಮುರಿದ ಕೊಹ್ಲಿಯನ್ನು ತಬ್ಬಿಕೊಂಡು ಸಂತಸ ವ್ಯಕ್ತಪಡಿಸಿದರು.

ಈ ಕುರಿತು ಮಾತನಾಡಿದ ಸಚಿನ್, ಕೊಹ್ಲಿಗೆ ಭಾವುಕ ನುಡಿಗಳ ಮೂಲಕ ಧನ್ಯವಾದ ಅರ್ಪಿಸಿದ್ದಾರೆ. ‘ಅಂದು ನಾನು ನಿಮ್ಮನ್ನು ಮೊದಲ ಬಾರಿಗೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಭೇಟಿಯಾದಾಗ, ನನ್ನ ಪಾದಗಳನ್ನು ಮುಟ್ಟುವಂತೆ ಇತರ ತಂಡದ ಸದಸ್ಯರು ನಿಮ್ಮನ್ನ ತಮಾಷೆ ಮಾಡಿದ್ದರು. ಆ ದಿನ ನನಗೆ ನಗು ತಡೆಯಲಾಗಲಿಲ್ಲ. ಆದ್ರೆ ಅತೀ ಶೀಘ್ರದಲ್ಲೇ, ನಿಮ್ಮ ಉತ್ಸಾಹ ಮತ್ತು ಕೌಶಲ್ಯದಿಂದ ನೀವು ನನ್ನ ಹೃದಯ ಮುಟ್ಟಿದ್ದೀರಿ. ಆ ಚಿಕ್ಕ ಹುಡುಗ ‘ವಿರಾಟ್’ ಆಟಗಾರನಾಗಿ ಬೆಳೆದಿದ್ದಕ್ಕೆ ನನಗೆ ತುಂಬಾ ಖುಷಿಯಾಗಿದೆ ಎಂದು ಭಾವುಕವಾಗಿ ಮಾತನಾಡಿದ್ದಾರೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ 117 ರನ್ಗಳ ಇನ್ನಿಂಗ್ಸ್ ಆಡಿದ ವಿರಾಟ್ ಕೊಹ್ಲಿ, ಈ ಶತಕದೊಂದಿಗೆ ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ್ದ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್  ಅವರು ಏಕದಿನ ಕ್ರಿಕೆಟ್ನಲ್ಲಿ 49 ಶತಕಗಳನ್ನು ಬಾರಿಸುವ ಮೂಲಕ ಏಕದಿನದಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿರುವ ಆಟಗಾರ ಎಂಬ ದಾಖಲೆ ಬರೆದಿದ್ದರು. ಇದೀಗ 50ನೇ ಶತಕ ಸಿಡಿಸಿರುವ ವಿರಾಟ್ ಕೊಹ್ಲಿ ತಮ್ಮ ಹೆಸರಿಗೆ ಈ ದಾಖಲೆಯನ್ನು ಬರೆದುಕೊಂಡಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ಈ ಇನ್ನಿಂಗ್ಸ್ ನೋಡಿದ ಅಭಿಮಾನಿಗಳಲು ಹುಚ್ಚೆದ್ದು ಕುಣಿದರು.

Sulekha