ಆರ್ ಸಿಬಿಯ ಐದು ವಿದೇಶಿ ಪ್ಲೇಯರ್ಸ್ ತವರಿಗೆ ವಾಪಸ್ – ಪ್ಲೇಆಫ್ಸ್ ರೇಸ್ ನಲ್ಲಿ ಕೆಕೆಆರ್ ಸೇಫ್

ಆರ್ ಸಿಬಿಯ ಐದು ವಿದೇಶಿ ಪ್ಲೇಯರ್ಸ್ ತವರಿಗೆ ವಾಪಸ್ – ಪ್ಲೇಆಫ್ಸ್ ರೇಸ್ ನಲ್ಲಿ ಕೆಕೆಆರ್ ಸೇಫ್

ಜೂನ್ 11ರಿಂದ ನಡೆಯಲಿರೋ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಫೈನಲ್ ಪಂದ್ಯಕ್ಕಾಗಿ ಈಗಾಗ್ಲೇ ಆಸ್ಟ್ರೇಲಿಯಾ ಟೀಂ ಅನೌನ್ಸ್ ಮಾಡಿದೆ. ಈ ಟೀಮ್​ನಲ್ಲಿ ಆರ್​ಸಿಬಿ ಸ್ಟಾರ್ ಬೌಲರ್ ಜೋಶ್ ಹೇಜಲ್​ವುಡ್ ಕೂಡ ಇದ್ದಾರೆ. ಇತ್ತ ಸೌತ್ ಆಫ್ರಿಕಾ ಆಟಗಾರ ಲುಂಗಿ ಎಂಗಿಡಿ ಕೂಡ ಐಸಿಸಿ ಫೈಟ್​ಗಾಗಿ ವಾಪಸ್ ಆಗ್ಬೋದು. ಇವ್ರಿಬ್ಬರು ಕೂಡ ಆರ್ ಸಿಬಿಯ ಪ್ರಮುಖ ಬೌಲರ್ಸ್ ಆಗಿದ್ದಾರೆ. ಸೋ ಇಲ್ಲಿ ಐಪಿಎಲ್​ನ 10 ತಂಡಗಳ ಪೈಕಿ ಮೂರು ಟೀಮ್ ಪ್ಲೇಆಫ್ಸ್ ರೇಸ್​ನಿಂದ ಹೊರ ಬಿದ್ದಿವೆ.

ಇದನ್ನೂ ಓದಿ : ಕೊಹ್ಲಿ ನಿವೃತ್ತಿ ಕೊಡಿಸಿದ್ದೇ ಗಂಭೀರ್? – ಡಬಲ್ ಗೇಮ್ ಆಡಿತಾ BCCI?

ತಂಡಗಳಿಗೆ ರಿಟರ್ನ್ ಟೆನ್ಷನ್!

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಜೋಶ್ ಹ್ಯಾಜಲ್‌ವುಡ್, ಲುಂಗಿ ಎನ್‌ಗಿಡಿ, ರೊಮಾರಿಯೊ ಶೆಫರ್ಡ್, ಜಾಕೋಬ್ ಬೆಥೆಲ್, ಫಿಲ್ ಸಾಲ್ಟ್

ಮುಂಬೈ ಇಂಡಿಯನ್ಸ್ : ರಿಯಾನ್ ರಿಕಲ್ಟನ್ ಮತ್ತು ಕಾರ್ಬಿನ್ ಬಾಷ್

ಪಂಜಾಬ್ ಕಿಂಗ್ಸ್ : ಮಾರ್ಕೊ ಜಾನ್ಸೆನ್, ಜೋಶ್ ಇಂಗ್ಲಿಸ್

ಗುಜರಾತ್ ಟೈಟಾನ್ಸ್: ಜೋಸ್ ಬಟ್ಲರ್, ಶೆರ್ಫೇನ್ ರುದರ್‌ಫೋರ್ಡ್, ಜೆರಾಲ್ಡ್ ಕೋಟ್ಜಿ

ಡೆಲ್ಲಿ ಕ್ಯಾಪಿಟಲ್ಸ್: ಮಿಚೆಲ್ ಸ್ಟಾರ್ಕ್ ಮತ್ತು ಟ್ರಿಸ್ಟಾನ್ ಸ್ಟಬ್ಸ್

ಲಕ್ನೋ ಸೂಪರ್ ಜೈಂಟ್ಸ್: ಶೆಮರ್ ಜೋಸೆಫ್

ರೇಸ್​ನಲ್ಲಿರೋ ತಂಡಗಳ ಪೈಕಿ ಕೆಕೆಆರ್ ತಂಡ ಸ್ವಲ್ಪ ಸೇಫ್ ಆಗಬಹುದು. ತಂಡದಲ್ಲಿ ಮೂವರು ವೆಸ್ಟ್ ಇಂಡೀಸ್ ಪ್ಲೇಯರ್ಸ್ ಇದ್ರೂ ಅವರ್ಯಾರೂ ಏಕದಿನ ಪಂದ್ಯಗಳನ್ನ ಆಡಲ್ಲ. ಇಂಗ್ಲೆಂಡ್‌ನ ಮೊಯಿನ್ ಅಲಿ ಮತ್ತು ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಆಲ್ರೆಡಿ ರಿಟೈರ್ಡ್ ಆಗಿದ್ದಾರೆ. ಸ್ಪೆನ್ಸರ್ ಜಾನ್ಸನ್ ಮತ್ತು ಅನ್ರಿಚ್ ನಾರ್ಟ್ಜೆ ಟೆಸ್ಟ್ ತಂಡದಲ್ಲಿದ್ದಾರೆ. ಅಫ್ಘಾನಿಸ್ತಾನ ಈ ಪಂದ್ಯದಲ್ಲಿ ಆಡದ ಕಾರಣ ರಹಮಾನಲ್ಲಾ ಗುರ್ಬಾಜ್ ಕೂಡ ಇಡೀ ಸೀಸನ್​ನಲ್ಲಿ ಕಂಟಿನ್ಯೂ ಆಗ್ತಾರೆ.

ಎಲ್ಲವೂ ಅಂದುಕೊಂಡಂತೆ ಆಗಿದ್ರೆ ಮೇ 25ಕ್ಕೆ ಫೈನಲ್ ಮ್ಯಾಚ್ ಮುಗಿದು ಐಪಿಎಲ್ ಟೂರ್ನಿಯೇ ಕಂಪ್ಲೀಟ್ ಆಗ್ತಿತ್ತು. ಬಟ್ 9 ದಿನ ವಿಸ್ತರಣೆಯಾಗಿದ್ದೇ ಈಗ ಒಂದಷ್ಟು ವೇರಿಯೇಷನ್ಸ್ ಕ್ರಿಯೇಟ್ ಮಾಡ್ತಿದೆ. ಇದ್ರಿಂದ  ಫ್ರಾಂಚೈಸಿಗಳಿಗೆ ವಿದೇಶಿ ಆಟಗಾರರ ಆಬ್ಸೆನ್ಸ್ ಟೆನ್ಷನ್ ಕಾಡ್ತಿದೆ. ಅದ್ರಲ್ಲೂ ಚೊಚ್ಚಲ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಆರ್​ಸಿಬಿಗೆ ದೊಡ್ಡ ಹೊಡೆತ ಬೀಳಲಿದೆ. ಈಗಾಗಲೇ ಆಸ್ಟ್ರೇಲಿಯಾದ ವೇಗಿ ಜೋಶ್ ಹ್ಯಾಜಲ್​ವುಡ್ ಗಾಯದಿಂದ ಬಳಲುತ್ತಿದ್ದಾರೆ. ರಿಕವರ್ ಆಗಿ ಕಮ್ ಬ್ಯಾಕ್ ಮಾಡ್ತಾರೆ ಅಂದ್ರೂ ಕೂಡ ಜೂನ್ 11ರಿಂದ ವಿಶ್ವಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ತಂಡದಲ್ಲಿ ಅವಕಾಶ ಪಡೆದಿರುವುದರಿಂದ ಐಪಿಎಲ್ ಟೂರ್ನಿಯಿಂದ ಹೊರಗುಳಿಯಬೇಕಾಗುತ್ತೆ. ಇಂಗ್ಲೆಂಡ್, ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ, ಸೌತ್ ಆಫ್ರಿಕಾ ಮ್ಯಾಚ್​ಗಳ ಹೊರತಾಗಿ ಆರ್​ಸಿಬಿಯಲ್ಲಿ ವಿದೇಶಿ ಆಟಗಾರರ ಪಟ್ಟಿಯಲ್ಲಿ ಟಿಮ್ ಡೇವಿಡ್ ಹಾಗೂ ನುವಾನ್ ತುಷಾರ ಉಳಿಯಲಿದ್ದಾರೆ. ಸೋ ಈ ಸೀಸನ್​ನಲ್ಲಿ ಆರ್​ಸಿಬಿ ಪರ ವಿದೇಶಿ ಆಟಗಾರರ ಪರ್ಪಾಮೆನ್ಸ್ ಹೇಗಿದೆ ಅನ್ನೋದನ್ನ ನೋಡೋದಾದ್ರೆ..

ಆರ್ ಸಿಬಿ ಪರ ವಿದೇಶಿ ಆಟಗಾರರ ಅಬ್ಬರ!

ಆಟಗಾರ                            ಪಂದ್ಯ         ರನ್                    ವಿಕೆಟ್

ಲಿಯಾಮ್ ಲಿವಿಂಗ್ ​ಸ್ಟೋನ್          7            87                        2

ಫಿಲ್ ಸಾಲ್ಟ್                                      9             239

ಜಾಕೋಬ್ ಬೆಥೆಲ್​                            2              67

ಜೋಶ್ ಹೇಜಲ್ ​ವುಡ್                    10                                        18

ಟಿಮ್ ಡೇವಿಡ್                                   6            186

ರೊಮಾರಿಯೊ ಶೆಫರ್ಡ್                     1              53

ಲುಂಗಿ ಎನ್‌ ಗಿಡಿ                                   3                                           3

ನುವಾನ್ ತುಷಾರ                               0                     0                          0

ಹೀಗೆ 8 ಆಟಗಾರರನ್ನ ಆರ್ ಸಿಬಿ ಹರಾಜಿನಲ್ಲಿ ಖರೀದಿ ಮಾಡಿತ್ತು. ಇವ್ರ ಪೈಕಿ ಶ್ರೀಲಂಕಾ ಮೂಲದ ಆಟಗಾರ ನುವಾನ್ ತುಷಾರ ಒಬ್ರನ್ನ ಬಿಟ್ಟು ಉಳಿದವ್ರೆಲ್ಲಾ ಪ್ಲೇಯಿಂಗ್ 11ನಲ್ಲಿ ಕಣಕ್ಕಿಳಿದಿದ್ದಾರೆ. ಪ್ಲೇಆಫ್ಸ್ ಹೊಸ್ತಿಲಲ್ಲಿರೋ ಆರ್​ಸಿಬಿ ಈಗಾಗ್ಲೇ 11 ಪಂದ್ಯಗಳನ್ನ ಆಡಿದ್ದು ಲೀಗ್ ಹಂತದಲ್ಲಿ ಇನ್ನು ಮೂರು ಪಂದ್ಯಗಳಷ್ಟೇ ಬಾಕಿ ಇದೆ. ಈ ಪೈಕಿ ಒಂದು ಪಂದ್ಯ ಗೆದ್ರೂ ಪ್ಳೇಆಫ್​ಗೆ ಎಂಟ್ರಿ ಕೊಡಲಿದೆ. ಆದ್ರೆ ನಿರ್ಣಾಯಕ ಹಂತದಲ್ಲೇ ಸಾಲ್ಟ್, ಬೆಥೆಲ್, ಶೆಫರ್ಡ್, ಎಂಗಿಡಿ, ಹೇಜಲ್​ವುಡ್ ತವರಿನ ಪಂದ್ಯಗಳಿಗಾಗಿ ವಾಪಸ್ ಆಗ್ಬಬಹುದು. ಇವ್ರೆಲ್ಲಾ ಆರ್​ಸಿಬಿಯ ಮೇನ್ ಪ್ಲೇಯರ್ಸ್ ಆಗಿದ್ದು ಮುಂದಿನ ಪಂದ್ಯಗಳಿಗೆ ಕಣಕ್ಕಿಳಿಯದೇ ಇದ್ರೆ ಟೀಮ್​ ಬ್ಯಾಲೆನ್ಸ್ ಮಿಸ್ ಆಗುತ್ತೆ. ಹಾಗೇ ಸಕ್ಸಸ್ ಜರ್ನಿಯನ್ನ ಕಂಟಿನ್ಯೂ ಮಾಡೋಕೆ ಸ್ಟ್ರಗಲ್ ಕೂಡ ಶುರುವಾಗುತ್ತೆ.

Shantha Kumari

Leave a Reply

Your email address will not be published. Required fields are marked *