RO-KOಗೆ ಆಸಿಸ್ ಸೆಂಡ್ ಆಫ್ – IND Vs AUS ಸರಣಿಯೇ ಕೊನೆನಾ?
ದಿಗ್ಗಜರ ನಿವೃತ್ತಿ ನಿರ್ಲಕ್ಷಿಸಿತಾ BCCI?

ರೋಹಿತ್ ಶರ್ಮಾ ಹಾಗೇ ವಿರಾಟ್ ಕೊಹ್ಲಿ ಒಟ್ಟೊಟ್ಟಿಗೆ ಟಿ-20 ಕ್ರಿಕೆಟ್ ಫಾರ್ಮೆಟ್ಗೆ ವಿದಾಯ ಘೋಷಿಸಿದ್ರು. ಆ ಬಳಿಕ ಇಬ್ಬರೂ ವಾರದ ಅಂತರದಲ್ಲೇ ಟೆಸ್ಟ್ ಕ್ರಿಕೆಟ್ಗೂ ಗುಡ್ ಬೈ ಹೇಳಿದ್ರು. ಇನ್ನು ಏಕದಿನ ಮಾದರಿಯಲ್ಲಿ ಮಾತ್ರ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಾಣಿಸಿಕೊಳ್ತಾರೆ. ಬಟ್ ಅದೂ ಕೂಡ ಇನ್ನೆಷ್ಟು ದಿನ ಅಂತಾ ಹೇಳೋಕಾಗಲ್ಲ. ಈ ವರ್ಷಾಂತ್ಯದಲ್ಲೇ ಏಕದಿನ ಮಾದರಿಗೂ ನಿವೃತ್ತಿಗೂ ಘೋಷಣೆ ಮಾಡಿದ್ರೂ ಅಚ್ಚರಿ ಇಲ್ಲ. ಇದೀಗ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಈ ಇಬ್ಬರು ದಿಗ್ಗಜರಿಬ್ಬರಿಗೆ ವಿಶೇಷ ಬೀಳ್ಕೊಡುಗೆಗೆ ಭರ್ಜರಿ ಪ್ಲ್ಯಾನ್ ಮಾಡಿದೆ. ಅಕ್ಟೋಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಏಕದಿನ ಸರಣಿಯ ವೇಳೆ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ವಿಶೇಷ ಗೌರವ ಸಲ್ಲಿಸಲು ಕ್ರಿಕೆಟ್ ಆಸ್ಟ್ರೇಲಿಯಾ ಮುಂದಾಗಿದೆ.
ಇದನ್ನೂ ಓದಿ : ರೋಹಿತ್ ODI ನಿವೃತ್ತಿಗೆ ಮುಹೂರ್ತ – ಶ್ರೇಯಸ್ ಅಯ್ಯರ್ ಹೆಗಲಿಗೆ ಏಕದಿನ ಸಾರಥ್ಯ?
ಪ್ರಸ್ತುತ ಟೀಂ ಇಂಡಿಯಾ ಆಟಗಾರರು ಜೂನ್ 20ರಿಂದ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಮ್ಯಾಚ್ ಆಡಲಿದ್ದಾರೆ. ಆ ಬಳಿಕ ಬಾಂಗ್ಲಾ ವಿರುದ್ಧ ಟಿ-20 ಹಾಗೇ ಏಕದಿನ ಸರಣಿ ನಡೆಯಲಿದೆ. ಇನ್ನು ಅಕ್ಟೋಬರ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೂರು ಏಕದಿನ ಪಂದ್ಯ ನಡೆಯಲಿವೆ. ಬಹುಶಃ ಈ ಸರಣಿಯೇ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ಕೊನೆಯ ಆಸ್ಟ್ರೇಲಿಯಾ ಸರಣಿ ಆಗಬಹುದು. ಹೀಗಾಗಿ ಇಬ್ಬರು ಲೆಜೆಂಡರಿ ಪ್ಲೇಯರ್ಸ್ಗೆ ಬೀಳ್ಕೊಡುಗೆ ನೀಡಲು ಕ್ರಿಕೆಟ್ ಆಸ್ಟ್ರೇಲಿಯಾ ಸಜ್ಜಾಗಿದೆ. ಅಕ್ಟೋಬರ್ನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿ ವೇಳೆ ಗೌರವ ಸಲ್ಲಿಸೋಕೆ ಮುಂದಾಗಿದ್ದಾರೆ.
2027ರ ಏಕದಿನ ವಿಶ್ವಕಪ್ ಹಿನ್ನೆಲೆಯಲ್ಲಿ ಟೀಂ ಇಂಡಿಯಾವನ್ನ ಕಟ್ಟೋದು ಬಿಸಿಸಿಐಗೆ ಇಂಪಾರ್ಟೆಂಟ್ ಇದೆ. 2027ರ ವೇಳೆಗೆ ರೋಹಿತ್ ಶರ್ಮಾ ಅವರ ವಯಸ್ಸು 40 ಆಗಿರಲಿದೆ. ಇನ್ನು ವಿರಾಟ್ ಕೊಹ್ಲಿಗೆ 38 ವರ್ಷವಾಗುತ್ತೆ. ಹೀಗಾಗಿ ಮುಂಬರುವ ಏಕದಿನ ಸರಣಿಗಳು ವಿರಾಟ್ ಕೊಹ್ಲಿ ಹಾಗೂ ಶರ್ಮಾ ಪಾಲಿಗೆ ನಿರ್ಣಾಯಕ. ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ 3 ಪಂದ್ಯಗಳ ಬಳಿಕ ಇಬ್ಬರ ಏಕದಿನ ವಿಶ್ವಕಪ್ ಭವಿಷ್ಯ ಕೂಡ ನಿರ್ಧಾರವಾಗಲಿದೆ. ಏಕೆಂದರೆ ಮುಂಬರುವ ಏಕದಿನ ವಿಶ್ವಕಪ್ ನಡೆಯಲಿರುವುದು ಸೌತ್ ಆಫ್ರಿಕಾ, ಝಿಂಬಾಬ್ವೆ ಹಾಗೂ ನಮೀಬಿಯಾದಲ್ಲಿ. ಆಫ್ರಿಕಾದ ಪಿಚ್ಗಳು ವೇಗದ ಬೌಲಿಂಗ್ಗೆ ಸಹಕಾರಿ. ಇತ್ತ ಆಸ್ಟ್ರೇಲಿಯಾದಲ್ಲಿರುವುದು ಕೂಡ ಸೀಮ್ ಬೌಲಿಂಗ್ಗೆ ಸಹಕಾರಿಯಾಗುವಂತಹ ಪಿಚ್ಗಳು. ಈ ಪಿಚ್ಗಳಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಫೇಲ್ಯೂರ್ ಆದ್ರೆ ಏಕದಿನ ತಂಡದಿಂದ ಹೊರಬೀಳುವುದು ಖಚಿತ ಎನ್ನಲಾಗ್ತಿದೆ. 2027ರ ಏಕದಿನ ವಿಶ್ವಕಪ್ಗೂ ಒಂದು ವರ್ಷ ಮುಂಚಿತವಾಗಿ ಭಾರತ ತಂಡದ ಔಟ್ಲೈನ್ಸ್ ಸಿದ್ಧವಾಗ್ತವೆ. ಅದಕ್ಕೂ ಮುನ್ನ ಈ ವರ್ಷ ಟೀಮ್ ಇಂಡಿಯಾ, ಬಾಂಗ್ಲಾದೇಶ್, ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧ ತಲಾ 3 ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ.
ಸದ್ಯ ಐಪಿಎಲ್ ಬಳಿಕ ರೆಸ್ಟ್ ಮೂಡ್ನಲ್ಲಿ ರೋಹಿತ್ & ಕೊಹ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಏಕದಿನ ಸರಣಿ ಮೂಲಕ ಮತ್ತೆ ಮೈದಾನಕ್ಕಿಳಿಯಲಿದ್ದಾರೆ. ಆಗಸ್ಟ್ 17, ಆಗಸ್ಟ್ 20 ಹಾಗೇ ಆಗಸ್ಟ್ 23 ರಂದು ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿಯು ಅಕ್ಟೋಬರ್ 19 ರಿಂದ ಶುರುವಾಗಲಿದೆ. ಮೂರು ಪಂದ್ಯಗಳ ಈ ಸರಣಿಯ ಮೊದಲ ಮ್ಯಾಚ್ ಪರ್ತ್ನಲ್ಲಿ ನಡೆದರೆ, ಅಕ್ಟೋಬರ್ 23 ರಂದು ಅಡಿಲೇಡ್ನಲ್ಲಿ 2ನೇ ಪಂದ್ಯ ನಡೆಯಲಿದೆ. ಹಾಗೆಯೇ ಅಕ್ಟೋಬರ್ 25 ರಂದು ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ಕೊನೇ ಮ್ಯಾಚ್ ಫಿಕ್ಸ್ ಆಗಿದೆ. ಬಹುಶಃ ಅಕ್ಬೋರ್ 25ರ ಪಂದ್ಯವೇ ಇಬ್ಬರಿಗೂ ಕೊನೇ ಆದ್ರೂ ಆಗಬಹುದು. ಹೀಗಾಗಿ ಇಬ್ಬರು ದಿಗ್ಗಜರಿಗೆ ವಿಶೇಷ ಬೀಳ್ಕೊಡುಗೆಗೆ ಆಸ್ಟ್ರೇಲಿಯಾ ರೆಡಿಯಾಗಿದೆ. ಆದ್ರೆ ಟೀಂ ಇಂಡಿಯಾವನ್ನ ಉತ್ತುಂಗಕ್ಕೇರಿಸಿದ ಇಂಥ ಲೆಜೆಂಡರಿ ಪ್ಲೇಯರ್ಸ್ಗೆ ಫೇರ್ವೆಲ್ ಮ್ಯಾಚ್ ಆಡಿಸದೇ ವಿದಾಯ ಕೊಡಿಸಿದ ಬಿಸಿಸಿಐ ನಡೆ ನಿಜಕ್ಕೂ ಖಂಡನೀಯ.