128 ವರ್ಷದ ಬಳಿಕ ಒಲಿಂಪಿಕ್ಸ್ಗೆ ಕ್ರಿಕೆಟ್ – 6 ತಂಡದಲ್ಲಿ ಪಾಕ್ಗೆ ಚಾನ್ಸ್ ಸಿಗುತ್ತಾ?
ಪಾಕ್ ಕನಸಿಗೆ ಶ್ರೀಲಂಕಾ ಕೊಳ್ಳಿ?

ಲಾಸ್ ಏಂಜಲೀಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಅನ್ನು ಕೂಡ ಆಡಲಾಗುತ್ತದೆ. ಇದಕ್ಕಾಗಿ 6 ತಂಡಗಳನ್ನು ಆಯ್ಕೆ ಮಾಡಲಾಗುವುದು ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಖಚಿತಪಡಿಸಿದೆ. ಈ ಹೇಳಿಕೆ ಬೆನ್ನಲ್ಲೇ ಪಾಕಿಸ್ತಾನ್ ತಂಡಕ್ಕೆ ಟೆನ್ಷನ್ ಶುರುವಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು 128 ವರ್ಷಗಳ ಬಳಿಕ ಜಾಗತಿಕ ಕ್ರೀಡಾ ಹಬ್ಬ ಎನಿಸಿಕೊಂಡಿರುವ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಕಮ್‌ಬ್ಯಾಕ್ ಮಾಡಿರುವ ಬಗ್ಗೆ ಮಹತ್ವದ ಅಪ್‌ಡೇಟ್ ನೀಡಿದೆ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಪುರುಷರ ಹಾಗೂ ಮಹಿಳೆಯರ ಕ್ರಿಕೆಟ್ ಪಂದ್ಯಗಳು ನಡೆಯಲಿದ್ದು, ಈ ಕ್ರೀಡಾಕೂಟದಲ್ಲಿ ತಲಾ 6 ತಂಡಗಳು ಪಾಲ್ಗೊಳ್ಳಲಿವೆ ಎಂದು ತಿಳಿಸಿದೆ. ಈ ಕ್ರೀಡಾಕೂಟದಲ್ಲಿ 90 ಆಟಗಾರರು ಪಾಲ್ಗೊಳ್ಳಲಿದ್ದಾರೆ.
ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ 5 ಹೊಸ ಕ್ರೀಡೆಗಳನ್ನು ಸೇರ್ಪಡೆ ಮಾಡಿದ್ದು, ಈ ಪೈಕಿ ಕ್ರಿಕೆಟ್ ಕೂಡಾ ಒಂದೆನಿಸಿದೆ. ಒಲಿಂಪಿಕ್ಸ್‌ಗೆ ಕ್ರಿಕೆಟ್ ತಂಡವು ಅರ್ಹತೆ ಪಡೆಯಲು ಇನ್ನೂ ಕ್ವಾಲಿಫಿಕೇಷನ್ ನಿಯಮಾವಳಿಗಳು ಅಂತಿಮವಾಗಿಲ್ಲ. ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಹೊರತುಪಡಿಸಿ, ಬಹುತೇಕ 100 ದೇಶಗಳು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಆಡುತ್ತಿವೆ. ಹೀಗಾಗಿ ಒಲಿಂಪಿಕ್ಸ್‌ಗೆ ಕ್ವಾಲಿಫಿಕೇಷನ್ ನೀಡುವ ವಿಚಾರದಲ್ಲಿ ಕೊಂಚ ಸವಾಲಾಗುವ ಸಾಧ್ಯತೆಯಿದೆ. ಇನ್ನು ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಿರುವ ಅಮೆರಿಕಗೆ ನೇರ ಅರ್ಹತೆ ಸಿಗಲಿದೆ. . ಅಂದರೆ ಒಲಿಂಪಿಕ್ಸ್ ಅರ್ಹತೆಗೆ ನಿಗದಿ ಮಾಡಲಾದ ಸಮಯದ ವೇಳೆ ಐಸಿಸಿ ತಂಡಗಳ ಶ್ರೇಯಾಂಕವನ್ನು ಪರಿಗಣಿಸಿ 6 ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ. ಐಸಿಸಿ 12 ಪೂರ್ಣ ಸದಸ್ಯರ ತಂಡಗಳನ್ನು ಒಲಿಂಪಿಕ್ಸ್ ಸಮಿತಿಗೆ ಶಿಫಾರಸ್ಸು ಮಾಡಲಿದ್ದು, ಈ ತಂಡಗಳ ಶ್ರೇಯಾಂಕದ ಆಧಾರ ಮೇಲೆ 6 ತಂಡಗಳನ್ನು ಒಲಿಂಪಿಕ್ಸ್ ಅಂಗಳದಲ್ಲಿ ಕಣಕ್ಕಿಳಿಸಲಾಗುತ್ತದೆ ಎಂದು ವರದಿಯಾಗಿದೆ. ಭಾರತ, ಅಫ್ಘಾನಿಸ್ತಾನ್ ಆಸ್ಟ್ರೇಲಿಯಾ, ಬಾಂಗ್ಲಾದೇಶ್, ಇಂಗ್ಲೆಂಡ್ ಐರ್ಲೆಂಡ್ ನ್ಯೂಝಿಲೆಂಡ್ ಪಾಕಿಸ್ತಾನ್ ಸೌತ್ ಆಫ್ರಿಕಾ ಶ್ರೀಲಂಕಾ ವೆಸ್ಟ್ ಇಂಡೀಸ್ ಝಿಂಬಾಬ್ವೆ ಟಾಪ್ 12ನೇ ಸ್ಥಾನದಲ್ಲಿವೆ. ಇದಾಗ್ಯೂ ಯಾವುದಾದರೂ ಸಹ ಸದಸ್ಯ ರಾಷ್ಟ್ರದ ತಂಡ ಮುಂದಿನ 2 ವರ್ಷಗಳ ಒಳಗೆ ಐಸಿಸಿ ಟಿ20 ತಂಡಗಳ ಶ್ರೇಯಾಂಕ ಪಟ್ಟಿಯ ಟಾಪ್-6 ನಲ್ಲಿ ಕಾಣಿಸಿಕೊಂಡರೆ ಅವರು ಅರ್ಹತೆ ಪಡೆಯಲಿದ್ದಾರೆ.
Full Gfx: ಪಾಕಿಸ್ತಾನ ತಂಡಕ್ಕೆ ಚಾನ್ಸ್ ಸಿಗುತ್ತಾ?
ಪ್ರಸ್ತುತ ಟಿ20 ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ತಂಡ ಅಗ್ರಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಇನ್ನು ಇಂಗ್ಲೆಂಡ್ ಮತ್ತು ನ್ಯೂಝಿಲೆಂಡ್ ತಂಡಗಳು ಕ್ರಮವಾಗಿ 3ನೇ ಮತ್ತು 4ನೇ ಸ್ಥಾನಗಳಲ್ಲಿದೆ. ಐದನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್ ತಂಡವಿದ್ದರೆ, ಆರನೇ ಸ್ಥಾನದಲ್ಲಿ ಸೌತ್ ಆಫ್ರಿಕಾ ತಂಡವಿದೆ. ಇನ್ನು ಪಾಕಿಸ್ತಾನ್ ತಂಡ 7ನೇ ಸ್ಥಾನದಲ್ಲಿದೆ. ಅಂದರೆ ಒಲಿಂಪಿಕ್ಸ್ಗೆ 6 ತಂಡಗಳು ಮಾತ್ರ ಅರ್ಹತೆ ಪಡೆಯಲಿದೆ. ಮುಂದಿನ ಒಂದು ವರ್ಷದೊಳಗೆ ಪಾಕಿಸ್ತಾನ್ ತಂಡ ಟಾಪ್-6 ನಲ್ಲಿ ಕಾಣಿಸಿಕೊಳ್ಳದಿದ್ದರೆ, ಒಲಿಂಪಿಕ್ಸ್ನಿಂದ ಹೊರಬೀಳುವುದು ಖಚಿತ. ಹೀಗಾಗಿ ಪಾಕ್ ಪಡೆಗೆ ಮುಂಬರುವ ಟಿ20 ಸರಣಿಗಳು ತುಂಬಾ ಮಹತ್ವದ್ದಾಗಿ ಪರಿಣಮಿಸಿದೆ. ಒಂದು ವೇಳೆ ಪಾಕಿಸ್ತಾನವನ್ನ ಹಿಂದಿಕ್ಕಿ ಶ್ರೀಲಂಕಾ ಕೂಡ ಟಾಪ್ 6 ರಲ್ಲಿ ಸ್ಥಾನವನ್ನ ಪಡೆಯಬಹುದು.. ಹೀಗಾಗಿ ಇದುಸಾಕಷ್ಟು ಇಂಟ್ರೆಸ್ಟಿಂಗ್ ಆಗಿದೆ.
ಇನ್ನು ಕ್ರಿಕೆಟ್ ಮಲ್ಟಿಸ್ಪೋರ್ಟ್ಸ್ ಇವೆಂಟ್‌ನಲ್ಲಿ ಈಗಾಗಲೇ ಎಂಟ್ರಿಕೊಟ್ಟಿದೆ. 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮೊದಲ ಸಲ ಮಹಿಳಾ ಕ್ರಿಕೆಟ್‌ಗೆ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಆ ಕ್ರೀಡಾಕೂಟದಲ್ಲಿ ಆಸ್ಟ್ರೇಲಿಯಾ ಚಿನ್ನ ಹಾಗೂ ಭಾರತ ಬೆಳ್ಳಿ ಪದಕ ಜಯಿಸಿತ್ತು. ಇನ್ನು ಇದಾದ ಬಳಿಕ 2023ರಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ 14 ಪುರುಷ ಹಾಗೂ 9 ಮಹಿಳಾ ಕ್ರಿಕೆಟ್ ತಂಡಗಳು ಪಾಲ್ಗೊಂಡಿದ್ದವು. ಈ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಹಾಗೂ ಪುರುಷ ತಂಡಗಳು ಚಿನ್ನದ ಪದಕ ಗೆದ್ದಿತ್ತು.
T20 ಮಾದರಿಯಲ್ಲಿ ನಡೆಯುತ್ತಾ?
2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಟಿ20 ಮಾದರಿಯಲ್ಲಿ ಪಂದ್ಯಾವಳಿಗಳು ನಡೆಯಲಿವೆ ಎನ್ನಲಾಗುತ್ತಿದೆ. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್ ಸೇರಿದಂತೆ ಬಲಿಷ್ಠ ತಂಡಗಳು ಲಾಸ್ ಏಂಜಲೀಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಕೊನೆಗೂ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಬೇಕು ಎನ್ನುವ ಅಭಿಮಾನಿಗಳ ಕನಸು ನನಸಾಗುತ್ತಿದೆ.
1900ರಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ನಲ್ಲಿ ಗೆದ್ದೋರು ಯಾರು?
1900ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಒಮ್ಮೆ ಮಾತ್ರ ಕ್ರಿಕೆಟ್ ಕ್ರೀಡಾಕೂಟ ಆಯೋಜನೆಗೊಂಡಿತ್ತು. ಆ ಒಲಿಂಪಿಕ್ಸ್‌ನಲ್ಲಿ ಗ್ರೇಟ್ ಬ್ರಿಟನ್ ಹಾಗೂ ಫ್ರಾನ್ಸ್ ತಂಡಗಳು ಪಾಲ್ಗೊಂಡಿದ್ದವು. ಕೇವಲ ಎರಡು ತಂಡಗಳು ಪಾಲ್ಗೊಂಡಿದ್ದ ಈ ಒಲಿಂಪಿಕ್ಸ್ ನಲ್ಲಿ ಗ್ರೇಟ್ ಬ್ರಿಟನ್ ಚಿನ್ನದ ಪದಕ ಜಯಿಸಿದರೆ, ಫ್ರಾನ್ಸ್ ಬೆಳ್ಳಿ ಪದಕ ಜಯಿಸಿತ್ತು. ಒಟ್ನಲ್ಲಿ ಯಾವ ತಂಡ ಒಲಿಂಪಿಕ್ಸ್‌ನಲ್ಲಿ ಚಾನ್ಸ್ ಸಿಗುತ್ತೋ ಇಲ್ವೋ ಗೊತ್ತಿಲ್ಲ, ಟೀಂ ಇಂಡಿಯಾ ಮಾತ್ರ ಪಕ್ಕಾ ಒಲಿಂಪಿಕ್ಸ್‌ಗೆ ಎಂಟ್ರಿಕೊಡುತ್ತೆ.