2028ರ ಒಲಿಂಪಿಕ್ಸ್ ಕ್ರೀಡೆಗಳ ಪಟ್ಟಿಗೆ ಕ್ರಿಕೆಟ್ ಸೇರ್ಪಡೆ – 123 ವರ್ಷಗಳ ಬಳಿಕ ಕ್ರಿಕೆಟ್‌ಗೆ ಒಲಿದ ಸ್ಥಾನ
ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ನ್ನ ಕೂಡ ಸೇರ್ಪಡೆಗೊಳಿಸಬೇಕು ಅನ್ನೋ ಒತ್ತಾಯ ಕಳೆದ ಹಲವು ವರ್ಷಗಳಿಂದ ಕೇಳಿ ಬರುತ್ತಲೇ ಇತ್ತು. ಇದೀಗ ಕೊನೆಗೂ ಅಂತಾರಾಷ್ಟ್ರೀಯ ಒಲಿಂಪಿಕ್ ಕಮಿಟಿ ಕ್ರಿಕೆಟ್ನ್ನ ಒಲಿಂಪಿಕ್ಸ್‌ನಲ್ಲಿ ಸೇರ್ಪಡೆಗೊಳಿಸಲು ನಿರ್ಧರಿಸಿದೆ. 2028ರ ಒಲಿಂಪಿಕ್ಸ್ ಕ್ರೀಡೆಗಳ ಪಟ್ಟಿಗೆ ಈಗ ಕ್ರಿಕೆಟ್ ಕೂಡ ಸೇರ್ಪಡೆಯಾಗಿದೆ. 123 ವರ್ಷಗಳ ಬಳಿಕ ಕ್ರಿಕೆಟ್‌ಗೆ ಈ ಸ್ಥಾನ ಲಭಿಸಿದೆ.
ಇದನ್ನೂ ಓದಿ: ಆಂಗ್ಲರ ವಿರುದ್ಧ ಅಫ್ಘಾನಿಸ್ತಾನದ ಮರೆಯಲಾಗದ ಗೆಲುವು – ಭಾರತೀಯ ಕ್ರಿಕೆಟ್ ದಿಗ್ಗಜರಿಂದಲೂ ಅಭಿನಂದನೆ
2028ರ ಒಲಿಂಪಿಕ್ಸ್‌ನಲ್ಲಿ ಟಿ-20 ಕ್ರಿಕೆಟ್ ಕೂಡ ಇರಲಿದೆ. 2028ರ ಒಲಿಂಪಿಕ್ಸ್ ಅಮೆರಿಕ ಲಾಸ್ ಏಂಜಲಿಸ್ನಲ್ಲಿ ನಡೆಯಲಿದೆ. ಈಗಾಗ್ಲೇ ಅಮೆರಿಕದಲ್ಲಿ ಕೆಲ ಕ್ರಿಕೆಟ್ ಸ್ಟೇಡಿಯಂಗಳನ್ನ ನಿರ್ಮಾಣ ಮಾಡಲಾಗಿದೆ. 2024ರಲ್ಲಿ ವೆಸ್ಟ್ಇಂಡೀಸ್ ಜೊತೆಗೆ ಅಮೆರಿಕದಲ್ಲಿ ಕೂಡ ಟಿ-20 ವಿಶ್ವಕಪ್ ಟೂರ್ನಿ ನಡೆಯಲಿದೆ. ಕೇವಲ ಕ್ರಿಕೆಟ್ ಮಾತ್ರವಲ್ಲ ಬೇಸ್ಬಾಲ್, ಸಾಫ್ಟ್ಬಾಲ್, ಸ್ಕ್ವಾಶ್ನ್ನ ಕೂಡ 2028ರ ಒಲಿಂಪಿಕ್ಸ್ಗೆ ಸೇರ್ಪಡೆಗೊಳಿಸಲಾಗಿದೆ. ಅಂತೂ ಕ್ರಿಕೆಟ್ನ್ನ ಸೇರಿಸಿರೋದ್ರಿಂದ ಭಾರತಕ್ಕೆ ಮತ್ತೊಂದು ಪದಕ ಸಿಗುವ ಚಾನ್ಸ್ ಹೆಚ್ಚಾಗಿದೆ. ಆದ್ರೆ, 2028ರ ಒಲಿಂಪಿಕ್ಸ್ಗೆ ಟೀಂ ಇಂಡಿಯಾದ ಕ್ರಿಕೆಟ್ ತಂಡದಲ್ಲಿ ಯಾರೆಲ್ಲಾ ಆಡ್ತಾರೆ ಅನ್ನೋದೆ ಕುತೂಹಲ. ರೋಹಿತ್ ಶರ್ಮಾ ಆಡೋದು ಡೌಟ್.. ವಿರಾಟ್ ಕೊಹ್ಲಿ ಆಡಿದರೂ ಆಶ್ಚರ್ಯ ಇಲ್ಲ.
ಮತದಾನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಐಒಸಿ ಅಧ್ಯಕ್ಷ ಥಾಮಸ್ ಬಾಚ್ ಅವರು, ಒಲಿಂಪಿಕ್ಸ್‌ನಲ್ಲಿ ಇತರೆ ಕ್ರೀಡೆಗಳೊಂದಿಗೆ ಕ್ರಿಕೆಟ್ ಸೇರ್ಪಡೆ ಕುರಿತು ಘೋಷಣೆ ಮಾಡಿದರು. ಲಾಸ್ ಏಂಜಲೀಸ್ 2028 ರ ಸಂಘಟನಾ ಸಮಿತಿಯು ಶಿಫಾರಸು ಮಾಡಿದ ಐದು ಕ್ರೀಡೆಗಳನ್ನು ಸೇರಿಸುವ ಪ್ರಸ್ತಾಪಕ್ಕೆ 99 IOC ಸದಸ್ಯ ರಾಷ್ಟ್ರಗಳ ಪೈಕಿ ಎರಡು ರಾಷ್ಟ್ರಗಳು ಮಾತ್ರ ಅಸಮ್ಮತಿ ಸೂಚಿಸಿವೆ. ವಿಶ್ವದಾದ್ಯಂತ ಅಂದಾಜು 2.5 ಶತಕೋಟಿ ಅಭಿಮಾನಿಗಳನ್ನು ಹೊಂದಿರುವ ವಿಶ್ವದ ಎರಡನೇ ಅತ್ಯಂತ ಜನಪ್ರಿಯ ಕ್ರೀಡೆಯನ್ನು ಸ್ವಾಗತಿಸಲು ನಾವು ರೋಮಾಂಚನಗೊಂಡಿದ್ದೇವೆ ಎಂದು ಥಾಮಸ್ ಬಾಚ್ ತಿಳಿಸಿದ್ದಾರೆ.