ತಲಾ ಕ್ರೇಜ್ ಕಡಿಮೆಯಾಗಿಲ್ವಾ?  – LSG ಪರ ನಿಂತಿಲ್ವೇಕೆ ಲಕ್ನೋ ಫ್ಯಾನ್ಸ್?
ಗೆದ್ರೂ CSK, IPLನಿಂದ ಔಟ್?

ತಲಾ ಕ್ರೇಜ್ ಕಡಿಮೆಯಾಗಿಲ್ವಾ?  – LSG ಪರ ನಿಂತಿಲ್ವೇಕೆ ಲಕ್ನೋ ಫ್ಯಾನ್ಸ್?ಗೆದ್ರೂ CSK, IPLನಿಂದ ಔಟ್?

ಸತತ 5 ಪಂದ್ಯಗಳ ಸೋಲಿನಿಂದ ಕಂಗೆಟ್ಟಿದ್ದ 5 ಬಾರಿ ಚಾಂಪಿಯನ್ ಚೆನ್ನೈ ಕೊನೆಗೂ ಗೆಲುವಿನ ಹಳಿಗೆ ಮರಳಿದೆ. ಚೇಸಿಂಗ್‌ನಲ್ಲಿ ಪದೇ ಪದೇ ಫೇಲ್ಯೂರ್‌ ಆಗುತ್ತಿದ್ದ ತಂಡವನ್ನು ಈ ಬಾರಿ ಶಿವಂ ದುಬೆ- ನಾಯಕ ಧೋನಿ ಗೆಲುವಿನ ದಡ ಸೇರಿಸಿದ್ದಾರೆ. ಮಂಗಳವಾರ ಲಖನೌ ವಿರುದ್ದ ಚೆನ್ನೈ 5 ವಿಕೆಟ್ ಜಯಗಳಿಸಿ, ಪ್ಲೇ-ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. ಇದು ಚೆನ್ನೈಗೆ 7 ಪಂದ್ಯಗಳಲ್ಲಿ ಸಿಕ್ಕ 2ನೇ ಗೆಲುವು. ಅತ್ತ ಲಖನ್ ತಾನಾಡಿದ 7 ಪಂದ್ಯಗಳಲ್ಲಿ 3ನೇ ಸೋಲು ಕಂಡಿದೆ. ಆದ್ರೆ ಪಂದ್ಯದಲ್ಲಿ ನಾವು ನೀಟಾಗಿ ಗಮನಿಸಿದ್ರೆ ಧೋನಿ ಕ್ರೇಜ್ ಎಷ್ಟರ ಮಟ್ಟಿಗೆ ಇದೆ ಅನ್ನೋದು ಇಡೀ ಜಗತ್ತಿಗೆ ಗೊತ್ತಾಗುತ್ತೆ.. ಹೋಂ ಗ್ರೌಂಡ್‌ನಲ್ಲಿ ನಡೆದ ಪಂದ್ಯ ನಡೆಯದೇ ಇದ್ದರು, ಲಕ್ನೋ ಗ್ರೌಂಡ್‌ನಲ್ಲಿ ಸಿಎಸ್‌ಕೆ ಫ್ಯಾನ್ಸ್ ತುಂಬಿ ಹೋಗಿದ್ರೆ, ಧೋನಿಯ ಕಹಳೆ ಮೊಳಗಿ ಹೋಗಿತ್ತು.

ಧೋನಿ ಧೋನಿ ಧೋನಿ.. 43 ವರ್ಷದ ಎಂಎಸ್‌ ಧೋನಿ ಬ್ಯಾಟ್ ಹಿಡಿದು ಫಿಲ್ಡ್‌ಗೆ ಇಳಿದ್ರೆ ನೆಕ್ಟ್‌ ಲವೆಲ್ ಕ್ರೇಜ್‌.. ಧೋನಿ ಬ್ಯಾಟ್‌ನಿಂದ ಸಿಕ್ಸ್ ಫೋರ್‌ಗಳು ಹೊಗುತ್ತಿದ್ದರೇ ಫ್ಯಾನ್ಸ್‌ ಹರ್ಷ ಆಕಾಶಕ್ಕೆ ಮುಟ್ಟುತ್ತೆ.. ಸಿಎಸ್ಕೆ100 ಜನ ಅಭಿಮಾನಿಗಳಲ್ಲಿ 70 ಜನ ಧೋನಿಗಾಗಿ ಸಿಎಸ್‌ಕೆಯನ್ನ ಸಪೋರ್ಟ್ ಮಾಡ್ತಾರೆ. ಧೋನಿ ಬ್ಯಾಟಿಂಗ್‌ಗಾಗಿ ಕಾಯ್ತಾರೆ. ಸಿಎಸ್‌ಕೆ ಮ್ಯಾಚ್ ಎಲ್ಲೇ ಇರ್ಲಿ, ಆ ಸ್ಟೇಡಿಯಂ ಕಂಪ್ಲೀಂಟ್ ಎಲ್ಲೋ ಮಯವಾಗಿರುತ್ತೆ. ಸ್ಟೇಡಿಯಂ ಕಿತ್ತು ಹೋಗುವ ಹಾಗೇ ಧೋನಿ ಧೋನಿ ಅಂತಾ ಕೂಗ್ತಾನೆ ಇರ್ತಾರೆ.. ಧೋನಿ ಫ್ಯಾನ್ಸ್ ಕ್ರೇಜ್‌ನನ್ನ ಬಾಯಿ ಮಾತಳಲ್ಲಿ ಹೇಳೋಕೆ ಆಗಲ್ಲ ಬಿಡಿ..

ಐಪಿಎಲ್​ನ 30ನೇ ಪಂದ್ಯ ಲಕ್ನೋದ ಏಕಾನ ಸ್ಟೇಡಿಯಂನಲ್ಲಿ  ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆಯಿತು. ಆದ್ರೆ ಪಂದ್ಯದಲ್ಲಿ ಪ್ರೇಕ್ಷಕರ ಗ್ಯಾಲರಿ ನೋಡಿದ್ರೆ, ಎಲ್ಲಾ ಎಲ್ಲೋ ಕಲರ್‌ನಲ್ಲಿ ತುಂಬಿ ಹೋಗಿತ್ತು.. ಸಿಎಸ್‌ಕೆ ಫ್ಯಾನ್ಸ್‌ನಿಂದ ತುಂಬಿ ತುಳುಕುತಿತ್ತು. ಧೋನಿಗೂ ಕೂಡ ನಾನು ಎಲ್ಲೋ ಹೋಂ ಗ್ರೌಂಡ್‌ನಲ್ಲೇ ಆಡುತ್ತಿದ್ದೇನೆ ಅನ್ನೋ ಫೀಲ್ ಬಂದಿತ್ತೋ ಏನು, ಅದ್ದಕ್ಕೆ ತಂಡವನ್ನ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವನ್ನ ವಹಿಸಿದ್ರು. ಈ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದ್ದು ಮಹೇಂದ್ರ ಸಿಂಗ್ ಧೋನಿ ..ಅದು ಕೂಡ ಕೇವಲ 26 ರನ್​ಗಳಿಸುವ ಮೂಲಕ.

ಏಕಾನ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್  ತಂಡವು 20 ಓವರ್​ಗಳಲ್ಲಿ 166 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸಿಎಸ್​ಕೆ ಪರ ಯುವ ದಾಂಡಿಗ ಶೇಖ್ ರಶೀದ್ 27 ರನ್ ಬಾರಿಸಿದರು. ಮತ್ತೊಂದೆಡೆ ಉತ್ತಮ ಸಾಥ್ ನೀಡಿದ ರಚಿನ್ ರವೀಂದ್ರ 37 ರನ್​ಗಳಿಸಿದರು.  ತಂಡ ಗೆಲ್ಲಲು 30 ಎಸೆತಗಳಲ್ಲಿ 55 ರನ್ ಅಗತ್ಯವಿದ್ದಾಗ ಸಿಎಸ್‌ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರೀಸ್‌ಗೆ ಬಂದರು. ಆದರೆ ಅದಾದ ನಂತರ ಧೋನಿ ಎಂತಹ ಇನ್ನಿಂಗ್ಸ್ ಆಡಿದರು ಎಂದರೆ ಪಂದ್ಯದ ಗತಿಯೇ ಬದಲಾಯಿತು. ಅವರು ಕೇವಲ 11 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 26 ರನ್ ಗಳಿಸಿ ಅಜೇಯರಾಗುಳಿದರು.  ಧೋನಿ ಒಂದೇ ಕೈಯಿಂದ ಸಿಕ್ಸ್ ಸಿಡಿಸಿದ್ದು ನೋಡಲು ಅಮೋಘವಾಗಿತ್ತು. ಇವರು ಇಂಪ್ಯಾಕ್ಟ್ ಪ್ಲೇಯರ್ ಶಿವಂ ದುಬೆ ಅವರೊಂದಿಗೆ 27 ಎಸೆತಗಳಲ್ಲಿ 56 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಚೆನ್ನೈ ಸೂಪರ್ ಕಿಂಗ್ಸ್ ತಂಡವು 19.3 ಓವರ್​ಗಳಲ್ಲಿ 168 ರನ್ ಬಾರಿಸಿ 5 ವಿಕೆಟ್​ಗಳ ಗೆಲುವು ದಾಖಲಿಸಿತು.    ಈ 26 ರನ್​ಗಳೊಂದಿಗೆ ಮಹೇಂದ್ರ ಸಿಂಗ್ ಧೋನಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಅತ್ಯಂತ ಹಿರಿಯ ಆಟಗಾರ ಎಂಬ ದಾಖಲೆಯನ್ನು ಧೋನಿ ತಮ್ಮದಾಗಿಸಿಕೊಂಡರು.

ವಿಕೆಟ್ ಕೀಪಿಂಗ್‌ನಲ್ಲಿ ಧೋನಿ ಮ್ಯಾಜಿಕ್ 

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ 43 ವರ್ಷದ ಮಹೇಂದ್ರ ಸಿಂಗ್ ಧೋನಿ ಅವರ ವಿಕೆಟ್ ಕೀಪಿಂಗ್ ಮ್ಯಾಜಿಕ್ ಮುಂದುವರೆದಿದೆ. ಕಳೆದ ಕೆಲ ಪಂದ್ಯಗಳಲ್ಲಿ ಅತ್ಯದ್ಭುತ ಸ್ಟಂಪಿಂಗ್​ನೊಂದಿಗೆ ಗಮನ ಸೆಳೆದಿದ್ದ ಧೋನಿ, ಈ ಬಾರಿ ಅತ್ಯುತ್ತಮ ರನೌಟ್​ನೊಂದಿಗೆ ಸಂಚಲನ ಸೃಷ್ಟಿಸಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ಪರ ಕೊನೆಯ ಓವರ್​ನಲ್ಲಿ ಅಬ್ದುಲ್ ಸಮದ್ ಬ್ಯಾಟಿಂಗ್ ಮಾಡುತ್ತಿದ್ದರು. ಇತ್ತ ಸಿಎಸ್​ಕೆ ಪರ ಮತೀಶ ಪತಿರಾಣ ಬೌಲಿಂಗ್ ಮಾಡುತ್ತಿದ್ದರು. 20ನೇ ಓವರ್​ನ 2ನೇ ಎಸೆತವನ್ನು ಪತಿರಾಣ ವೈಡ್ ಎಸೆದಿದ್ದಾರೆ. ಚೆಂಡು ದೂರ ಸಾಗಿ ವಿಕೆಟ್ ಕೀಪರ್ ಕೈ ಸೇರುವಷ್ಟರಲ್ಲಿ ಒಂದು ರನ್ ಕಲೆಹಾಕಲು ನಾನ್ ಸ್ಟ್ರೈಕ್​ನಿಂದ ರಿಷಭ್ ಪಂತ್ ಓಡಿದ್ದಾರೆ. ಅತ್ತ ಕಡೆಯಿಂದ ಅಬ್ದುಲ್ ಸಮದ್ ನಾನ್​ ಸ್ಟ್ರೈಕ್​ನತ್ತ ಓಡಿ ಬರುವಷ್ಟರಲ್ಲಿ ಧೋನಿ ಅಂಡರ್ ಆರ್ಮ್ ಥ್ರೋ ಎಸೆದರು. ಚೆಂಡು ಗಾಳಿಯಲ್ಲಿ ತೇಲುತ್ತಾ ಬಂದು ನೇರವಾಗಿ ವಿಕೆಟ್​ಗೆ ಬಡಿದಿದೆ. ಈ ಅದ್ಭುತ ಅಂಡರ್ ಆರ್ಮ್ ಥ್ರೋ ರನೌಟ್ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಧೋನಿಯ ಕೀಪಿಂಗ್ ಚಮತ್ಕಾರಕ್ಕೆ ಅಭಿಮಾನಿಗಳು ಮೆಚ್ಚುಗೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಸಿಎಸ್‌ಕೆ ಪ್ಲೇ ಆಫ್ ತಲುಪುತ್ತಾ?

ಇಷ್ಟು ದಿನಗಳ ಕಾಲ ಬೇರೆ ತಂಡಗಳ ಪ್ಲೇ ಆಫ್‌ ಕನಸಿಗೆ ಕೊಳ್ಳಿ ಇಡುತ್ತಿದ್ದ ಚೆನ್ನೈ ತಂಡ ಈಗ ಪ್ಲೇ ಆಫ್‌ ಲೆಕ್ಕಾಚಾರ ಆರಂಭಿಸಿದೆ.  ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ತನ್ನ ಅಬ್ಬರದ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಈ ಲೀಗ್‌ನಲ್ಲಿ ಸಿಎಸ್‌ಕೆ ಆಡಿದ 7 ಪಂದ್ಯಗಳಲ್ಲಿ 2 ಜಯ, 5 ಸೋಲು ಕಂಡಿದ್ದು, ಅಂಕ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿ ಅಂದ್ರೆ ಕೊನೆಯಲ್ಲಿದೆ. ಸದ್ಯದ ಸಿಎಸ್‌ಕೆ ಪ್ರದರ್ಶನ ನೋಡಿದರೆ ಪ್ಲೇ ಆಫ್‌ ಹಾದಿ ಕಷ್ಟಕರವಾಗಿದೆ. ಐಪಿಎಲ್‌ ಇತಿಹಾಸದಲ್ಲಿ ಚೆನ್ನೈ ಇಷ್ಟೊಂದು ಪಂದ್ಯಗಳನ್ನು ಎಂದಿಗೂ ಸೋತಿರಲಿಲ್ಲ. ರುತುರಾಜ್ ಗಾಯಕ್ವಾಡ್‌ ಲೀಗ್ ಮಧ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದು ಮತ್ತೆ ನಾಯಕನ ಚುಕ್ಕಾಣಿ ಕೂಲ್ ಕ್ಯಾಪ್ಟನ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಹೆಗಲೇರಿದೆ. ಆದ್ರೂ ಪ್ಲೇ ಆಫ್ ಕನಸು ನನಸಾಗೋದು ಕಷ್ಟ..

ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಇನ್ನೂ 7 ಪಂದ್ಯಗಳು ಬಾಕಿ ಇವೆ. ಉಳಿದಿರುವ 7 ಪಂದ್ಯಗಳಲ್ಲಿ6 ಪಂದ್ಯಗಳಲ್ಲಿ ಸಿಎಸ್‌ಕೆ ಗೆದ್ದರೆ, ಅದು ಪ್ಲೇಆಫ್‌ಗೆ ಅರ್ಹತೆ ಪಡೆಯಬಹುದು. ಆದರೆ ಇದಕ್ಕಾಗಿ ಅದರ ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ. ಚೆನ್ನೈ ತವರಿನಲ್ಲಿ ಸಾಲು ಸಾಲು ಪಂದ್ಯಗಳನ್ನು ಸೋತಿದೆ. ಮೊದಲ ಪಂದ್ಯವನ್ನು ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಗೆದ್ದಿದ್ದು ಬಿಟ್ಟರೆ ಉಳಿದ ಪಂದ್ಯಗಳಲ್ಲಿ ತವರಿನಲ್ಲಿ ಮುಖಭಂಗ ಅನುಭವಿಸಿದೆ. ಮೊದಲು ಚೆನ್ನೈನಲ್ಲಿ ಆರ್‌ಸಿಬಿ 17 ವರ್ಷಗಳ ಬಳಿಕ ಜಯ ಸಾಧಿಸಿದರೆ, 10 ವರ್ಷಗಳ ಬಳಿಕ ಸಿಎಸ್‌ಕೆ ತಂಡವನ್ನು ತವರಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿವೆ. ಅಲ್ಲದೆ ಕೆಕೆಆರ್‌ ವಿರುದ್ಧವೂ ಚೆನ್ನೈ 8 ವಿಕೆಟ್‌ಗಳ ಹೀನಾಯ ಸೋಲು ಕಂಡಿದ್ದು, ತವರಿನಲ್ಲಿ ಹೀನಾಯ ಸೋಲನ್ನು ಕಂಡಿದೆ. ಇದೇ ರೀತಿಯ ಪರಿಸ್ಥಿತಿಯನ್ನು ಈ ಹಿಂದೆ ಮುಂಬೈ ಇಂಡಿಯನ್ಸ್ ಎದುರಿಸಿತ್ತು. 2015ರಲ್ಲಿ ಮುಂಬೈ ಸಾಲು ಸಾಲು ಸೋಲನ್ನು ಕಂಡರೂ ಸಹ ಪ್ರಶಸ್ತಿಯನ್ನು ಎತ್ತಿ ಸಂಭ್ರಮಿಸಿತ್ತು. ಸಿಎಸ್‌ಕೆ ಸೋಲಿನಿಂದ ಪಾಠ ಕಲಿತು ಮುಂಬರುವ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಪಾಯಿಂಟ್ಸ್ ಟೇಬಲ್‌ನಲ್ಲಿ ಮುನ್ನಡೆ ಸಾಧಿಸಬಹುದಾಗಿದೆ. ಇದಕ್ಕೆ ಸಿಎಸ್‌ಕೆ ಸಂಘಟಿತ ಆಟದ ಪ್ರದರ್ಶನ ನೀಡುವುದು ಅನಿವಾರ್ಯವಾಗಿದೆ. ಧೋನಿ ನಾಯಕತ್ವದ ಪಟ್ಟ ಅಲಂಕರಿಸಿದ ಮೇಲೆ 2 ರಲ್ಲಿ ಒಂದು ಪಂದ್ಯ ಸಿಎಸ್‌ಕೆ ಗೆದ್ದಿದೆ. ಇನ್ನೂ ಉಳಿದ 7 ರಲ್ಲಿ 6 ಪಂದ್ಯ ಒಳ್ಳೆಯ ರನ್‌ರೇಟ್‌ನಲ್ಲಿ ಗೆದ್ದರೆ ಸಿಎಸ್‌ಕೆ ಪಕ್ಕ ಪ್ಲೇ ಆಫ್‌ಗೆ ಹೋಗುವ ಚಾನ್ಸ್ ಇದೆ. ಒಮ್ಮೆ ಎಲ್ಲಾದ್ರೂ ಪ್ಲೇ ಆಫ್‌ಗೆ ಹೋದ್ರೆ? ಧೋನಿ ಎಲ್ಲಾದ್ರೂ ಈ ಐಪಿಎಲ್‌ನಲ್ಲಿ ಕಪ್ ಗೆದ್ದರೆ , ತಲಾ ಈ ಸೀಸನ್‌ನಲ್ಲೇ ಐಪಿಎಲ್‌ಗೆ ವಿದಾಯ ಹೇಳುವುದಂತು ಪಕ್ಕ.. ಫ್ಯಾನ್ಸ್‌ಗೂ ಕೂಡ ಧೋನಿ ಕೊನೆಯದಾಗಿ ಐಪಿಎಲ್‌ ಕಪ್‌ಗೆ ಮುತ್ತಿಡಬೇಕು ಅನ್ನೋದೆ ಆಸೆ.

Shwetha M

Leave a Reply

Your email address will not be published. Required fields are marked *