ಲಾರಿಗೆ ಕಾರು ಡಿಕ್ಕಿ, ಅಪಘಾತದಲ್ಲಿ ನಾಲ್ವರು ಸಾವು – ಜಾರ್ಖಂಡ್ ಸಚಿವೆಯ ಪುತ್ರಿ ಬಲಿ

ಲಾರಿಗೆ ಕಾರು ಡಿಕ್ಕಿ, ಅಪಘಾತದಲ್ಲಿ ನಾಲ್ವರು ಸಾವು – ಜಾರ್ಖಂಡ್  ಸಚಿವೆಯ ಪುತ್ರಿ ಬಲಿ

ಜಾರ್ಖಂಡ್‌ನಲ್ಲಿ ಭೀಕರ ಅಫಘಾತ ನಡೆದಿದಿದೆ. ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಸಚಿವರ ಪುತ್ರಿ ಸೇರಿ ನಾಲ್ವರು ಬಲಿಯಾಗಿದ್ದಾರೆ. ಜಾರ್ಖಂಡ್‌ನ ಜಮ್ಶೆಡ್‌ಪುರದಲ್ಲಿ ನಡೆದ ಈ ಒಂದು ಭಯಾನಕ ರಸ್ತೆ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.

ಅಪಘಾತ ಸಂಭವಿಸಿದ ಕೂಡಲೇ ಸುತ್ತಮುತ್ತಲಿನ ಜನರು ಸ್ಥಳಕ್ಕೆ ಓಡಿಬಂದಿದ್ದಾರೆ. ಪೊಲೀಸರು ಕೂಡ ತಕ್ಷಣ ತಲುಪಿದ್ದಾರೆ. ಕಾರು ತುಂಬಾ ಹಾನಿಗೊಳಗಾಗಿದ್ದರಿಂದ ಒಳಗಿದ್ದ ಜನರು ಸಿಲುಕಿಕೊಂಡಿದ್ದರು. ಗ್ಯಾಸ್ ಕಟ್ಟರ್ ಬಳಸಿ ಕಾರನ್ನು ಕತ್ತರಿಸಿ ಅವರನ್ನು ಹೊರತೆಗೆಯಬೇಕಾಯಿತು. ಸಾಕಷ್ಟು ಪ್ರಯತ್ನದ ನಂತರ ನಾಲ್ವರ ದೇಹಗಳನ್ನು ಹೊರತೆಗೆಯಲಾಯಿತು. ಸ್ಥಳೀಯರು ಪೊಲೀಸರಿಗೆ ಸಹಾಯ ಮಾಡಿದರು. ನಂತರ ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸುವ ಕೆಲಸವನ್ನು ಪ್ರಾರಂಭಿಸಿದರು.

ಇದನ್ನೂ ಓದಿ: ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ದುರಂತ!- ಬಸ್‌ಗೆ ಬೆಂಕಿ – 9 ಮಂದಿ ಸಾವು!

ಪೊಲೀಸರು ಅಪಘಾತದ ಕಾರಣವನ್ನು ತನಿಖೆ ಮಾಡುತ್ತಿದ್ದಾರೆ. ಕಾರು ಎಷ್ಟು ವೇಗದಲ್ಲಿ ಬಂದಿತ್ತು, ಟ್ರಕ್ ಯಾವ ಸ್ಥಳದಲ್ಲಿ ನಿಂತಿತ್ತು ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸ್ಥಳದಲ್ಲಿದ್ದ ಜನರನ್ನು ಕೂಡ ಪ್ರಶ್ನಿಸಲಾಗುತ್ತಿದೆ. ಅಪಘಾತದ ಸುದ್ದಿ ತಿಳಿದ ಕೂಡಲೇ ಸಚಿವೆ ದೀಪಿಕಾ ಪಾಂಡೆ ಸಿಂಗ್ ಅವರ ಕುಟುಂಬದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಅವರ ಮಗಳ ಸಾವಿನ ಸುದ್ದಿ ರಾಜಕೀಯ ಮತ್ತು ಆಡಳಿತ ವಲಯಗಳಲ್ಲಿ ದುಃಖ ತಂದಿದೆ.

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಈ ದುರಂತದ ಬಗ್ಗೆ ತಮ್ಮ ಆಳವಾದ ದುಃಖ ವ್ಯಕ್ತಪಡಿಸಿದ್ದಾರೆ. ಸಚಿವ ಡಾ. ಇರ್ಫಾನ್ ಅನ್ಸಾರಿ ಮತ್ತು ವಿರೋಧ ಪಕ್ಷದ ನಾಯಕ ಬಾಬು ಲಾಲ್ ಮರಾಂಡಿ ಕೂಡ ಸಂತಾಪ ಸೂಚಿಸಿದ್ದಾರೆ. ಮುಖ್ಯಮಂತ್ರಿ ಸೊರೆನ್ ತಮ್ಮ ಎಕ್ಸ್  ಖಾತೆಯಲ್ಲಿ ‘ಜಮ್ಶೆಡ್‌ಪುರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಹ ಸಚಿವೆ ಮತ್ತು ಸಹೋದರಿ ದೀಪಿಕಾ ಪಾಂಡೆ ಸಿಂಗ್ ಅವರ ಮಗಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ ದುರಂತ ಸುದ್ದಿಯಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ಮಗುವನ್ನು ಕಳೆದುಕೊಂಡ ದುಃಖ ಪದಗಳಿಗೆ ಮೀರಿದ್ದು. ಯಾವುದೇ ಪೋಷಕರಿಗೆ ಅಥವಾ ಕುಟುಂಬಕ್ಕೆ ಇದು ಅಸಹನೀಯ

Kishor KV

Leave a Reply

Your email address will not be published. Required fields are marked *