ನೀವು ಆಗಾಗ ನೆಟ್ಟಿಗೆ ತೆಗಿತೀರಾ? – ನೆಟ್ಟಿಗೆ ತೆಗಿಯೋದು ಖುಷಿ ಕೊಟ್ಟರೂ ಇದರಲ್ಲಿ ಅಪಾಯ!
ಆಗಾಗ ಬೆರಳುಗಳನ್ನು ಮಡಚಿ ನೆಟ್ಟಿಗೆ ತೆಗೆಯುವ ಅಭ್ಯಾಸ ಹಲವರಿಗೆ ಇರುತ್ತದೆ. ನೀವು ಕೂಡ ಇದೇ ರೀತಿ ಮಾಡುತ್ತಿದ್ರೆ ಅದು ಅನಾರೋಗ್ಯದ ಸಂಕೇತ ಎನ್ನುತ್ತಾರೆ ತಜ್ಞರು.
ಈ ರೀತಿ ಪದೇ ಪದೇ ನೆಟ್ಟಿಗೆ ತೆಗೆಯುವುದರಿಂದ ಮೂಳೆಯ ಸಮಸ್ಯೆ ಉಂಟಾಗಬಹುದು. ಪದೇ ಪದೇ ನೆಟ್ಟಿಗೆ ತೆಗೆಯುವುದರಿಂದ ಆರ್ಥರೈಟಿಸ್ ಸಮಸ್ಯೆ ಹೆಚ್ಚಾಗೋ ಸಾಧ್ಯತೆ ಇರುತ್ತೆ. ದೇಹದ ಕೀಲುಗಳಲ್ಲಿ ಒಂದು ರೀತಿಯ ದ್ರವವಿರುತ್ತದೆ. ನೀವು ಬೆರಳುಗಳನ್ನು ಮಡಚಿ ನೆಟ್ಟಿಗೆ ತೆಗೆದಾಗ ಕೀಲುಗಳ ನಡುವೆ ಇರುವ ಈ ದ್ರವದ ಅನಿಲವು ಬಿಡುಗಡೆಯಾಗುತ್ತದೆ. ಇದರಿಂದಾಗಿ ರೂಪುಗೊಂಡ ಗುಳ್ಳೆಗಳು ಸಹ ಸಿಡಿಯುತ್ತವೆ. ಹೀಗಾಗಿಯೇ ಬೆರಳುಗಳನ್ನು ಮಡಚಿದಾಗ ಶಬ್ದ ಬರೋದು.
ಇದನ್ನೂ ಓದಿ: ಚಳಿಗಾಲದಲ್ಲಿ ತೆಂಗಿನ ಎಣ್ಣೆ ಮುಖಕ್ಕೆ ಹಚ್ಚೋದು ಒಳ್ಳೆಯದಾ?
ಪದೇ ಪದೇ ನಿಮ್ಮ ಸಂಧಿಗಳು ಅನೇಕ ಬಾರಿ ಶಬ್ದ ಮಾಡುತ್ತವೆ, ಅತ್ಯಂತ ವೇಗವಾಗಿ ನಡೆದಾಗ ಕೂಡ ಈ ಶಬ್ದ ಬರಬಹುದು. ದೀರ್ಘಕಾಲದವರೆಗೆ ಈ ರೀತಿ ನೆಟ್ಟಿಗೆ ತೆಗೆಯುವುದರಿಂದ ಕೈಗಳ ಹಿಡಿತದ ಬಲದ ಮೇಲೆ ಪರಿಣಾಮ ಬೀರುತ್ತದೆ. ಕೈಗಳಲ್ಲಿ ಊತವೂ ಉಂಟಾಗುತ್ತೆ. ಈ ರೀತಿ ಬೆರಳುಗಳಿಂದ ನೆಟ್ಟಿಗೆ ತೆಗೆದಾಗ ನಿಮಗೆ ನೋವಾಗದೇ ಇದ್ದರೆ ಹೆಚ್ಚು ಸಮಸ್ಯೆಯಿಲ್ಲ. ಆದ್ರೆ ಹಲವು ಬಾರಿ ಈ ರೀತಿ ಮಾಡುತ್ತಲೇ ಇದ್ದರೆ ನಿಮಗೆ ಸಂಧಿವಾತ ಶುರುವಾಗಬಹುದು. ಹೀಗಾಗಿ ಆದಷ್ಟು ಬೇಗ ಈ ಅಭ್ಯಾಸವನ್ನು ಬಿಟ್ಟು ಬಿಡೋದು ಒಳ್ಳೆದು.