ಬಿಜೆಪಿ ‘ಕೈ’ ಬಿಟ್ಟ ಸಿಪಿವೈ – ಡಿಕೆಶಿ ಪ್ಲ್ಯಾನ್, ಮೈತ್ರಿ ಛಿದ್ರ
ಜೆಡಿಎಸ್ ಸೀಕ್ರೆಟ್ ಸ್ಕೆಚ್‌

ಬಿಜೆಪಿ ‘ಕೈ’ ಬಿಟ್ಟ ಸಿಪಿವೈ – ಡಿಕೆಶಿ ಪ್ಲ್ಯಾನ್, ಮೈತ್ರಿ ಛಿದ್ರಜೆಡಿಎಸ್ ಸೀಕ್ರೆಟ್ ಸ್ಕೆಚ್‌

ರಾಜ್ಯದಲ್ಲಿ ಈಗ ಬೈಎಲೆಕ್ಷನ್ ಫುಲ್ ಟ್ರೆಡಿಂಗ್‌ನಲ್ಲಿದ್ದು, ಚನ್ನಪಟ್ಟಣ ಕ್ಷೇತ್ರ ಕಾದ ಕೆಂಡದಂತಾಗಿದೆ. ಮೈತ್ರಿಯಿಂದ ಯಾರ್ ನಿಲ್ತಾರೆ.? ಕಾಂಗ್ರೆಸ್‌ ಅಭ್ಯರ್ಥಿ ಯಾರು? ಅನ್ನೋದು ಸಾಕಷ್ಟು ಕುತೂಹಲ ಮೂಡಿಸಿತ್ತು. ಅದರಲ್ಲೂ ಸಿಪಿ ಯೋಗೇಶ್ವರ್ ನಡೆಯತ್ತೆ ಎಲ್ಲರ ಚಿತ್ತ ನೆಟ್ಟಿತ್ತು. ಬಿಜೆಪಿಯಿಂದನಾ? ಜೆಡಿಎಸ್‌ನಿಂದನಾ? ಅಥವಾ ಪಕ್ಷೇತರವಾಗಿ ಸ್ಪರ್ಧೆ ಮಾಡ್ತಾರಾ ಅನ್ನೋ ಪ್ರಶ್ನೆ ಕ್ಷೇತ್ರದ ಮತದಾರರನ್ನ ಕಾಡ್ತಿತ್ತು. ಆದ್ರೆ ಸಿಪಿವೈ ತೆಗೆದುಕೊಂಡ ನಿರ್ಧಾರ ಮೈತ್ರಿಗೆ ಬರಸಿಡಿಲೇ ಬಡಿದಂತಾಗಿದೆ.  ಡಿಕೆ ಬ್ರದರ್ಸ್ ಆಪರೇಷನ್ ಸಕ್ಸಸ್ ಆಗಿದೆ.

ಇದನ್ನೂ ಓದಿ:  RCBಯಲ್ಲಿ ಕನ್ನಡಿಗರಿಗೆ ಚಾನ್ಸ್ ಕೊಡಿ! – ಫ್ರಾಂಚೈಸಿಗೆ ಸಿದ್ದು ಸರ್ಕಾರ ಡಿಮ್ಯಾಂಡ್

ಸಿಪಿ ಯೋಗೇಶ್ವರ್‌ ಸಾಕಷ್ಟು  ಸರ್ಕಸ್‌ ಮಾಡಿ, ಕೊನೆಗೂ ಕಾಂಗ್ರೆಸ್‌ಗೆ ಸೇರಿದ್ದಾರೆ.  ಮಾಜಿ ಸಚಿವ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಕ್ಯಾಂಪ್‌ಗೆ ಕಾಲಿಟ್ಟಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾ‌ರ್ ಸೇರಿದಂತೆ ಕಾಂಗ್ರೆಸ್ ಪ್ರಮುಖರ ಸುಮ್ಮಖದಲ್ಲಿ ಕಾಂಗ್ರೆಸ್ ಸೇರಿರುವ ಸಿಪಿವೈ  ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ನಿರೀಕ್ಷೆಯನ್ನು ತಲೆಕೆಳಗೆ ಮಾಡಿದ್ದಾರೆ. ಮೈತ್ರಿ ಧರ್ಮದ ಪಾಲನೆಗೆ ಬಗ್ಗದ ಸೈನಿಕ ತನ್ನ ನಡೆಯಂತೆ ಕಾಂಗ್ರೆಸ್‌ ಸೇರಿದ್ದಾರೆ. ಹೀಗಾಗಿ ಚನ್ನಪಟ್ಟಣ ಅಖಾಡದಲ್ಲಿ ಕಾಂಗ್ರೆಸ್‌ನಿಂದ ಸೈನಿಕ ಸ್ಪರ್ಧಿಸುವುದು ಪಿಕ್ಸ್ ಆಗಿದೆ. ಹಾಗಿದ್ರೆ ಸಿಪಿವೈ ಕಾಂಗ್ರೆಸ್‌ನಿಂದ ಸೇರಿದ್ರೆ ಎಷ್ಟು ಪ್ಲೆಸ್ ಆಗಲಿದೆ. ಅವರ ಸೋಲು ಗೆಲುವಿನ ಹಾದಿಯನ್ನ ನೋಡೋಣ ಬನ್ನಿ..

ಕಾಂಗ್ರೆಸ್‌ ‘ಕೈ’ ಹಿಡಿದ ಸೈನಿಕ

ಸೈನಿಕ ಚಿತ್ರದಲ್ಲಿ ನಾಯಕನಾಗಿ ನಟಿಸಿ ಖ್ಯಾತಿ ಗಳಿಸಿರುವ ಸಿಪಿ ಯೋಗೇಶ್ವರ್​​ ಅವರು 1999ರಲ್ಲಿ  ರಾಜಕಾರಣಕ್ಕೆ ದುಮುಕಿದ್ರು.  1999ರಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿ ಕಾಂಗ್ರೆಸ್​ನ‌ ಕಾಂತ ಸಾದತ್ ಅಲಿ ಖಾನ್ ಅವರನ್ನು 2282 ಮತಗಳ ಅಂತರದಿಂದ ಸೋಲಿಸಿದರು. ನಂತರ ಸಿಪಿ ಯೋಗೇಶ್ವರ್​ ಅವರು ಕಾಂಗ್ರೆಸ್​ ಸೇರ್ಪಡೆಯಾದರು. 2004‌ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್​​ನ ಅಶ್ವಥ್ ಎಂ​ಸಿ ಅವರನ್ನು ಸೋಲಿಸಿ 16,169‌ ಮತಗಳ ಅಂತರದಿಂದ ಗೆದ್ರು. ಮತ್ತೆ 2008‌ರಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿದರು. ಆಗಲೂ ಜೆಡಿಎಸ್ ಅಭ್ಯರ್ಥಿಯನ್ನು 4,930 ಮತಗಳ ಅಂತರದಿಂದ ಸೋಲಿಸಿ ವಿಜಯಪತಾಕೆ ಹಾರಿಸಿದರು. ನಂತರ 2009ರಲ್ಲಿ ಪ್ರಥಮ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿದರು. ಈ ಚುನಾವಣೆಯಲ್ಲಿ ಜೆಡಿಎಸ್​ನ ಅಶ್ವತ್ಥ್ ಎಮ್​ಸಿ ಅವರ ವಿರುದ್ಧ 2282 ಮತಗಳ ಅಂತರದಿಂದ ಸೋತ್ರು . ಬಳಿಕ, 2011 ರಲ್ಲಿ ಮತ್ತೆ ಬಿಜೆಪಿಯಿಂದ ಸ್ಪರ್ಧಿಸಿದರು. ಈ ಚುನಾವಣೆಯಲ್ಲಿ ಸಿಪಿ ಯೋಗೇಶ್ವರ್​ ಜೆಡಿಎಸ್​ ಅಭ್ಯರ್ಥಿ ನಾಗರಾಜು ಅವರನ್ನು 17,803 ಮತಗಳ ಅಂತರದಿಂದ ಸೋಲಿಸಿ, ಅಭೂತಪೂರ್ವ ಜಯಗಳಿಸಿದರು. 2013‌ರಲ್ಲಿ ಸಮಾಜವಾದಿ ಪಾರ್ಟಿಯಿಂದ ಸ್ಪರ್ಧಿಸಿ, ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರನ್ನು 6,464 ‌ಮತಗಳಿಂದ ಸೋಲು ಉಣಿಸಿದರು. 2018ರಲ್ಲಿ ಹೆಚ್​ಡಿ ಕುಮಾರಸ್ವಾಮಿ ಅವರ ವಿರುದ್ಧ 21 ಸಾವಿರ ಮತಗಳ ಅಂತರದಿಂದ ಸೋಲು ಕಂಡರು. ಮತ್ತೆ 2023ರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೆಚ್​ಡಿ ಕುಮಾರಸ್ವಾಮಿ ಅವರ ವಿರುದ್ಧ 15 ಸಾವಿರಕ್ಕೂ ಅಧಿಕ ಮತಗಳಿಂದ ಸೋಲುಂಡರು. ಈ ಬಾರಿ ಮತ್ತೆ  ಬಿಜೆಪಿಯಿಂದ ಹೊರ ಬಂದು ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡೋಕೆ ರೆೆಡಿಯಾಗಿದ್ದಾರೆ. ಅಲ್ಲದೇ ಬೇಡಿಕೆಯಿಟ್ಟೇ ಸಿಪಿವೈ ಕಾಂಗ್ರೆಸ್‌ಗೆ ಸೇರಿದ್ದಾರೆ ಅನ್ನೋ ಮಾತು ಕೇಳಿ ಬರ್ತಿದೆ. ಚುನಾವಾಣೆಯಲ್ಲಿ ಅಷ್ಟು ಕರ್ಚುಗಳನ್ನ ಕಾಂಗ್ರೆಸ್‌ ಭರಿಸಬೇಕು. ಹಾಗೇ ಡಿಕೆ ಬ್ರದರ್ಸ್ಸ ಬೆಂಬಲಿಗರು ಯಾವುದೇ ಕಾರಣಕ್ಕೂ ಚನ್ನಪಟ್ಟಣದಲ್ಲಿ ಹಸ್ತಕ್ಷೇಪ ಮಾಡಬಾರದು. ಚನ್ನಪಟ್ಟಣ ಅಭಿವೃದ್ಧಿಗೆ ವಶೇಷ ಅನುದಾನ ನೀಡಬೇಕು ಅನ್ನೋ ಷರತ್ತು ಹಾಕಿದ್ದಾರೆ ಅನ್ನೋ ಮಾತು ಕೇಳಿ ಬರ್ತಿದೆ.

 ‘ಕೈ’ ಸೇರಿದ್ದು ಯೋಗೇಶ್ವರ್‌ಗೆ ಪ್ಲಸ್‌

ಸಿಪಿ ಯೋಗೇಶ್ವರ್‌ ಕಾಂಗ್ರೆಸ್ ಸೇರಿದ್ರಿಂದ ಹೆಚ್ಚು ಲಾಭ ಆಗಲಿದೆ ಅನ್ನೋ ಮಾತು ಕೇಳಿ ಬರ್ತಿದೆ.

ಯೋಗೇಶ್ವರ್‌ಗೆ ಗೆಲುವು ಪಕ್ಕಾ?

ಚನ್ನಪಟ್ಟಣದಲ್ಲಿ 60 ಸಾವಿರ ಮತಗಳು ಸಿಪಿ ಯೋಗೇಶ್ವರ್‌ ಅವರದ್ದೇ ಇದೆ. ಆ ಮತಗಳು ಅವರು ಯಾವ ಪಕ್ಷಕ್ಕೆ ಸೇರಿದ್ರೂ ಮಿಸ್ ಆಗಲ್ಲ. ಹಾಗೇ ಕಾಂಗ್ರಸ್ ಮತಗಳು ಸಿಪಿ ಯೋಗೇಶ್ವರ್‌ಗೆ ಬಂದೇ ಬರುತ್ತೆ.. ಕಳೆದ ಬಾರಿ ಜೆಡಿಎಸ್ ಪಾಲಾಗಿದ್ದ ಮುಸ್ಮಿಂ ಮತಗಳು ಈ ಬಾರಿ ಕಾಂಗ್ರೆಸ್‌ಗೆ ಬರುತ್ತೆ.. ಹೀಗಾಗಿ ಈ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ನಿಂತಿರೋದ್ರಿಂದ ಸಿಪಿ ಯೋಗೇಶ್ವರ್‌ಗೆ ಹಚ್ಚು ಲಾಭ ಆಗಲಿದೆ. ಹಾಗೇ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ 2,32,836 ಮತದಾರರಿದ್ದು, ಅವರಲ್ಲಿ 1,12,271 ಪುರುಷ, 1,20,557 ಮಹಿಳಾ, 8 ಜನ ತೃತೀಯ ಲಿಂಗಿ ಮತದಾರರಿದ್ದಾರೆ. ಹೀಗಾಗಿ ಪಕ್ಕಾ ಪ್ಲ್ಯಾನ್ ಮಾಡಿ ಡಿಕೆ ಶಿವಕುಮಾರ್ ಯೋಗೇಶ್ವರ್‌ನನ್ನ ಕಾಂಗ್ರೆಸ್ ಪಕ್ಷಕ್ಕೆ ಸೆಳೆದಿದ್ದಾರೆ.

ಮೈತ್ರಿಯಿಂದ ಅಭ್ಯರ್ಥಿ ಯಾರು?

ಇಷ್ಟು ದಿನ ಮೈತ್ರಿ ಅಭ್ಯರ್ಥಿ ಸಿಪಿವೈನಾ ಅಥವಾ ನಿಖಿಲ್ ಕುಮಾರಸ್ವಾಮಿ ಅನ್ನೋ ಗೊಂದಲವಿತ್ತು. ಆದ್ರೆ ಸಿಪಿವೈ ಕಾಂಗ್ರೆಸ್ ಸೇರಿದ್ದಾರೆ. ಹಾಗಾಗಿ ಮೈತ್ರಿ ನಾಯಕರಿಗೆ ಫುಲ್ ಟೆನ್ಶನ್ ಆಗಿದ್ದಾರೆ. ಯಾರನ್ನ ಅಭ್ಯರ್ಥಿ ಮಾಡಬೇಕು ಅನ್ನೋ ಗೊಂದಲ ಹೆಚ್ಚಾಗಿದೆ. ಒಂದು ವೇಳೆ ನಿಖಿಲ್‌ನ ಅಭ್ಯರ್ಥಿ ಮಾಡಿ ಸೋತ್ರೆ ಮುಖಭಂಗವಾಗುತ್ತೆ.. ಸತತ ಸೋಲಿನಿಂದ ನಿಖಿಲ್‌ ಕಂಗೆಟ್ಟು ಹೋಗಬಹುದು. ಹೀಗಾಗಿ ಸಂಸದ ಡಾ. ಮಂಜುನಾಥ್ ಅವರ ಪತ್ನಿ ಅಂದ್ರೆ ದೇವೇಗೌಡರ ಮಗಳಾಗದ ಅನಸೂಯ  ಅವರನ್ನ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಸೋಕೆ ಜೆಡಿಎಸ್‌ ಬಿಜೆಪಿ ಪ್ಲ್ಯಾನ್ ಮಾಡುತ್ತಿದೆ.

Shwetha M