ಮತ್ತೆ ಹಸುವಿನ ಕೆಚ್ಚಲು ಕಟ್! ಕಾಫಿನಾಡಲ್ಲಿ ಪರಮ ನೀಚರ ಕೃತ್ಯ!!
ಮತ್ತೆ ಹಸುವಿನ ಕೆಚ್ಚಲು ಕಟ್! ಕಾಫಿನಾಡಲ್ಲಿ ಪರಮ ನೀಚರ ಕೃತ್ಯ!!

ಕರ್ನಾಟಕದ ಜನ ಮಗ್ಧತೆಗೆ ಹೆಸರುವಾಸಿಯಾದವರು. ಆದ್ರೆ ಕರ್ನಾಟಕದಲ್ಲೇ ಹಸುವಿನ ಕೆಚ್ಚಲು ಕತ್ತಿರಿಸುವ ನೀಚರು ಹೆಚ್ಚಾಗಿದ್ದಾರೆ. ಚಾಮರಾಜಪೇಟೆಯ ವಿನಾಯಕನಗರದಲ್ಲಿ ಮೂರು ಹಸುಗಳ ಕೆಚ್ಚಲು ಕತ್ತರಿಸಿ ಕ್ರೌರ್ಯ ಮೆರೆದ ಘಟನೆ ಜನವರಿಯಲ್ಲಿ ನಡೆದಿತ್ತು. ಇದು ಕರ್ನಾಟಕದಾದ್ಯಂತ ಮಾತ್ರವಲ್ಲದೆ, ದೇಶದಾದ್ಯಂತ ಸುದ್ದಿಯಾಗಿತ್ತು. ಅದಾದ ನಂತರ, ಜಾನುವಾರುಗಳ ವಿರುದ್ಧ ಅಂಥದ್ದೇ ಕೆಲವು ಕ್ರೌರ್ಯದ ಪ್ರಕರಣಗಳು ವರದಿಯಾಗಿದ್ದವು. ಇದೀಗ ಚಿಕ್ಕಮಗಳೂರಿನಲ್ಲಿ ಮತ್ತೆ ಅಂಥದ್ದೇ ನೀಚ ಕೃತ್ಯ ನಡೆದಿದೆ.
ಹಸುವಿನ ಕೆಚ್ಚಲು ಕತ್ತರಿಸಿದ ನೀಚರು
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ತಮ್ಮಿಹಳ್ಳಿಯಲ್ಲಿ ಶೇಖರಪ್ಪ ಅನ್ನೋರು 20 ರಿಂದ 25 ಹಸುಗಳನ್ನ ಸಾಕಿದ್ರು. ಈ ಹಸುಗಳ ಮೇಲೆ ಕಣ್ಣು ಹಾಕಿದ ನೀಚರು ಹಸುವನ್ನು ರಾತ್ರೋರಾತ್ರಿ ಹಸು ಕಳ್ಳತನ ಮಾಡೋಕೆ ಟ್ರೈ ಮಾಡಿದ್ದಾರೆ. 20 ಹಸುಗಳನ್ನ ತಂತಿ ಬೇಲಿಯೊಳಗೆ ಸೇರಿದೆ ಬೇರೆ ಕಡೆ ಶಿಫ್ಟ್ ಮಾಡೋಕೆ ಪ್ಲ್ಯಾನ್ ಮಾಡಿದ್ದಾರೆ. ಆದ್ರೆ ಅದು ಸಕ್ಸಸ್ ಆಗಿಲ್ಲ. ಯಾವಾಗ ತಮ್ಮ ಪ್ಲ್ಯಾನ್ ಫೆಲ್ಯೂರ್ ಆಯ್ತೋ ಪಾಪಿಗಳು ರೊಚ್ಚಿಗೆದ್ದು, ಒಂದು ಹಸುವಿನ ಕೆಚ್ಚಲು ಕತ್ತರಿಸಿ ರಕ್ತ ಹರಿಸಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಹಸು ಕೆಚ್ಚಲು ಕತ್ತರಿಸಿದ್ರಿಂದ ಆ ಮುಖ ಪ್ರಾಣಿ ನರಳಿ ನರಳಿ ಪ್ರಾಣ ಬಿಟ್ಟಿದೆ.. ಹಾಲು ಹರಿಯುತ್ತಿದ್ದ ಜಾಗದಲ್ಲಿ ನೀರಿನಂತೆ ರಕ್ತ ಹರಿದಿದೆ.. ನಿಜಕ್ಕೂ ಈ ವಿಷ್ಯಕೇಳಿದ್ರೇನೆ ನಮ್ಮ ಕಣ್ಣಲ್ಲಿ ನೀರು ಬರುತ್ತೆ. ಆ ಪಾಪಿಗಳ ವಿರುದ್ಧ ರಕ್ತ ಕುದಿಯುತ್ತೆ. ಯಗಟಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಬೀರೂರು ಸರ್ಕಲ್ ಇನ್‌ಸ್ಪೆಕ್ಟರ್ ಶ್ರೀಕಾಂತ್ ಹಾಗೂ ಯಗಟಿ ಪಿಎಸ್‌ಐ ಮಂಜುನಾಥ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹತ್ತಿರದ ಸಿಸಿಟಿವಿ ಗಳನ್ನು ಪರಿಶೀಲಿಸುತ್ತಿದ್ದು, ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಚುರುಕುತನದಿಂದ ಕಾರ್ಯನಿರ್ವಹಿಸುತ್ತಿದ್ದಾರೆ.
ಪೊಲೀಸರು ಇಲ್ಲಿ ಕೇಸ್ ದಾಖಲಿಸಿಕೊಂಡು ಸುಮ್ಮನೆ ಬಿಡಬಾರದು.. ಅವರಿಗೆ ತಕ್ಕ ಶಿಕ್ಷೆ ನೀಡಬೇಕು.. ಅವರಿಗೆ ಇಂಚಿಂಚೂ ನರಕ ತೋರಿಸಬೇಕು. ಇನ್ನೂ ಈ ರೀತಿಯ ಘಟನೆ ಇದೇ ಮೊದಲೇನಲ್ಲ. ಚಾಮರಾಜಪೇಟೆಯ ವಿನಾಯಕನಗರದಲ್ಲಿ ಮೂರು ಹಸುಗಳ ಕೆಚ್ಚಲು ಕತ್ತರಿಸಿ ಕ್ರೌರ್ಯ ಮೆರೆದ ಘಟನೆ ಜನವರಿಯಲ್ಲಿ ನಡೆದಿತ್ತು. ಘಟನೆ ಸಂಬಂಧ ಪೊಲೀಸ್ ದೂರು ಸಹ ದಾಖಲಾಗಿ, ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಪ್ರಾಣಿಗಳ ಮೇಲಿನ ಈ ರೀತಿಯ ಹಿಂಸೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಬೆಂಗಳೂರಿನ ಘಟನೆ ದೇಶದಾದ್ಯಂತ ಸುದ್ದಿಯಾಗಿತ್ತು. ಅದಾದ ಕೆಲವೇ ದಿನಗಳಲ್ಲಿ ಮೈಸೂರಿನಲ್ಲೂ ಸಹ ಮಚ್ಚಿನಿಂದ ಹಸುವಿನ ಬಾಲ ಕತ್ತರಿಸಿ ವಿಕೃತಿ ಮೆರೆಯಲಾಗಿತ್ತು. ಆ ನಂತರ ಉತ್ತರ ಕನ್ನಡ ಜಿಲ್ಲೆಯಲ್ಲ ಅಂಥದ್ದೇ ಘಟನೆ ವರದಿಯಾಗಿತ್ತು.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸಾಲ್ಕೋಡು ಗ್ರಾಮದಲ್ಲಿ ಕೃಷ್ಣ ಆಚಾರಿ ಎಂಬುವವರಿಗೆ ಸೇರಿದ ಹಸುವಿನ ತಲೆ ಕಡಿದು ಬಳಿಕ ಅದರ ದೇಹವನ್ನು ಕೊಂಡೊಯ್ಯಲಾಗಿತ್ತು. ಗರ್ಭ ಧರಿಸಿದ್ದ ಹಸುವಿನ ತಲೆ ಕಡಿದ ಪ್ರಕರಣ ಕೂಡ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿತ್ತು. ಈಗ ಮತ್ತೆ ಚಿಕ್ಕಮಗಳೂರಿನಲ್ಲಿ ಇಂತದ್ದೇ ಘಟನೆ ರಿಪೀಟ್ ಆಗಿದೆ. ಇವೆಲ್ಲಾ ವನ್ನೂ ನೋಡಿದ್ರೆ ಮನುಷ್ಯನಿದೆ ದೇವರು ಎಂತಹ ಕೆಟ್ಟು ಬುದ್ದಿ ಕೊಟ್ಟಿದ್ದಾನೆ ಅನ್ಸುತ್ತೆ. ನೀಚರರಲ್ಲಿ ಪರಮ ನೀಚರೇ ಇಂತಹ ಕೆಲಸ ಮಾಡೋದು. ಇವರು ಪೊಲೀಸ್ ಕೈಯಿಂದ ತಪ್ಪಿಸಿಕೊಂಡ್ರು ಆ ದೇವರೇ ತಕ್ಕ ಶಿಕ್ಷೆ ನೀಡ್ತಾನೆ. ಅದು ಕೂಡ ಘೋರವಾಗಿಯೇ ಇರುತ್ತೆ.