ರಕ್ತವನ್ನೇ ಹೆಪ್ಪುಗಟ್ಟಿಸುತ್ತಾ ಕೊವಿಶೀಲ್ಡ್? – ಲಸಿಕೆ ಪಡೆದಿದ್ದ ಅಪ್ಪು.. ಭವಿಷ್ಯ ನಿಜವಾಯ್ತಾ?
ತಪ್ಪೊಪ್ಪಿಗೆ ಬೆನ್ನಲ್ಲೇ ಮೋದಿ ಫೋಟೋ ಮಾಯ!

ಕೊರೊನಾ ವೇಳೆ ಮುಗಿಬಿದ್ದು ಲಸಿಕೆ ಹಾಕಿಸಿಕೊಂಡಿದ್ದ ಜನ ಈಗ ಅಕ್ಷರಶಃ ಭಯ ಬಿದ್ದಿದ್ದಾರೆ. ಏನಾಗುತ್ತೋ ಏನೋ ಅನ್ನೋ ಆತಂಕದಲ್ಲಿದ್ದಾರೆ. ಇದಕ್ಕೆ ಕಾರಣ ಕೋವಿಶೀಲ್ಡ್ ಲಸಿಕೆ ಬಗೆಗಿನ ಸ್ಫೋಟಕ ಮಾಹಿತಿ.  ಕೋವಿಶೀಲ್ಡ್ ಲಸಿಕೆಯಿಂದ ಅಡ್ಡಪರಿಣಾಮ ಇದೆ ಎಂಬುದನ್ನು ಆಸ್ಟ್ರಾಜೆನೆಕಾ ಕಂಪನಿ ಒಪ್ಪಿಕೊಂಡಿರುವುದು ವಿಶ್ವದೆಲ್ಲಡೆ ಭಾರಿ ಸಂಚಲನ ಮೂಡಿಸಿದೆ. ಈ ಲಸಿಕೆ ತೆಗೆದುಕೊಂಡರೆ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪ್ಲೇಟ್‌ಲೇಟ್ ಸಂಖ್ಯೆ ಕಡಿಮೆಯಾಗಬಹುದು ಎಂದು ಕಂಪನಿಯೇ ಹೇಳಿದೆ. ಕೊರೊನಾ ಲಸಿಕೆಯಿಂದ ಉಂಟಾದ ಹಾನಿಯನ್ನು ಆರೋಪಿಸಿ ಅನೇಕ ಕುಟುಂಬಗಳು ಮೊಕದ್ದಮೆ ಹೂಡಿದ್ದವು. ಇದರ ವಿಚಾರಣೆ ವೇಳೆ ಔಷಧೀಯ ಕಂಪನಿಯು ಲಸಿಕೆ ಗಂಭೀರ ಆರೋಗ್ಯ ತೊಂದರೆಗಳನ್ನು ಉಂಟುಮಾಡಬಹುದು ಎಂದು ನ್ಯಾಯಾಲಯದಲ್ಲೇ ಒಪ್ಪಿಕೊಂಡಿದೆ. ಇದರಿಂದ ಸಹಜವಾಗಿ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ.

ಇದನ್ನೂ ಓದಿ: ಸುಡು ಬಿಸಿಲಿನಿಂದ ಪಾರಾಗಲು ಆಟೋ ಚಾಲಕನ ಕ್ರೇಜಿ ಪ್ಲಾನ್‌! – ಮಸ್ತ್‌ ಐಡಿಯಾ ಗೆ ಸೂರ್ಯನೇ ಶಾಕ್!

ಕೊವಿಶೀಲ್ಡ್ ಲಸಿಕೆ ಡೇಂಜರ್? 

ಪ್ರಖ್ಯಾತ ಲಸಿಕಾ ತಯಾರಿಕಾ ಸಂಸ್ಥೆ ಆಸ್ಟ್ರಾಜೆನಿಕಾ ತನ್ನ ಕೋವಿಡ್ ಲಸಿಕೆಯಿಂದ ಅಡ್ಡ ಪರಿಣಾಮ ಉಂಟಾಗುತ್ತದೆ ಎಂದು ನ್ಯಾಯಾಲಯದಲ್ಲಿ ಒಪ್ಪಿಕೊಂಡಿದೆ. ಈ ಅಡ್ಡ ಪರಿಣಾಮವನ್ನು ಥ್ರೋಂಬೋಸಿಸ್ ವಿತ್ ಥ್ರೋಂಬೋ ಸೈಟೋಪೇನಿಯಾ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ರಕ್ತ ಹೆಪ್ಪುಗಟ್ಟುವಿಕೆ ಹಾಗೂ ರಕ್ತ ಕಣಗಳ ಸಂಖ್ಯೆ ಕಡಿಮೆ ಆಗುವ ಆರೋಗ್ಯ ಸಮಸ್ಯೆ ಇದು. ಕೋವಿಡ್ 19 ಲಸಿಕೆಗೂ ಈ ಸಿಂಡ್ರೋಮ್‌ಗೂ ನೇರ ಸಂಪರ್ಕವಿದೆ. ಈ ಸಿಂಡ್ರೋಮ್‌ ಕಾಣಿಸಿಕೊಂಡರೆ ಹಲವು ರೀತಿಯ ಲಕ್ಷಣಗಳು ಕಂಡು ಬರುತ್ತವೆ. ಉಸಿರಾಟ ತಗ್ಗುವಿಕೆ, ಎದೆ ನೋವು, ಕಾಲು ಊದಿಕೊಳ್ಳುವುದು, ನಿರಂತರ ತಲೆ ನೋವು ಹಾಗೂ ಹೊಟ್ಟೆ ನೋವು ಕಾಣಿಸಿಕೊಳ್ಳಬಹುದು. ಇದನ್ನ ಬಹುರಾಷ್ಟ್ರೀಯ ಔಷಧ ತಯಾರಿಕಾ ಸಂಸ್ಥೆಯಾದ ಆಸ್ಟ್ರಾಜೆನಿಕಾ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದೆ.  ಹಾಗೇ ಟಿಎಸ್‌ಎಸ್ ಲಕ್ಷಣಗಳು ಲಸಿಕೆ ಪಡೆದವರಲ್ಲಿ ಅತಿ ವಿರಳವಾಗಿ ಕಾಣಿಸಿಕೊಳ್ಳುತ್ತದೆ ಎಂದು ಸ್ಪಷ್ಟವಾಗಿ ನಮೂದಿಸಿದೆ. ಇದೇ ಲಸಿಕೆಯ ಆವೃತ್ತಿಗೆ ಕೋವಿಶೀಲ್ಡ್ ಎಂದು ಹೆಸರಿಟ್ಟು ಭಾರತದಲ್ಲಿ ತಯಾರಿಸಿ ಹಂಚಿಕೆ ಮಾಡಲಾಗಿತ್ತು.

ಔಷಧಿ ಕಂಪನಿಯು ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಎಂಬ ತಪ್ಪೊಪ್ಪಿಗೆ ಬೆನ್ನಲ್ಲೇ ಭಾರತ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಆಸ್ಟ್ರಾಜೆನಿಕಾ ಸಂಸ್ಥೆಯ ಭಾರತೀಯ ಆವೃತ್ತಿಯಾದ ಕೋವಿಶೀಲ್ಡ್‌ ಲಸಿಕೆಯನ್ನು ದೇಶದಲ್ಲಿ ಜನರಿಗೆ ನೀಡಲು ಸರ್ಕಾರ ಅನುಮತಿಸಿದ್ದು ಏಕೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸುತ್ತಿದ್ದಾರೆ. ಈ ಲಸಿಕೆಯಿಂದ ಬಹುತೇಕ ಭಾರತೀಯರು ಟಿಎಸ್‌ಎಸ್ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ದಿ ಹೆಲ್ತಿ ಇಂಡಿಯನ್ ಪ್ರಾಜೆಕ್ಟ್‌ ತಂಡ ಫ್ಯಾಕ್ಟ್‌ ಚೆಕ್ ನಡೆಸಿದ್ದು, ಈ ವಾದಗಳು ಅರ್ಧ ಸತ್ಯ ಎಂದು ಸಾಬೀತಾಗಿವೆ. ಕೋವಿಶೀಲ್ಡ್‌ ಲಸಿಕೆಯಿಂದ ಟಿಎಸ್‌ಎಸ್ ಅಡ್ಡ ಪರಿಣಾಮ ಇದೆ ಅನ್ನೋದು ಸತ್ಯವಾದರೂ ಅದು ಅತ್ಯಂತ ವಿರಳ ಅಡ್ಡ ಪರಿಣಾಮವಾಗಿದೆ.

ಲಸಿಕೆ ಪಡೆದವರಿಗೆ ಭಯ! 

ಆಸ್ಟ್ರಾಜೆನಿಕಾ ಸಂಸ್ಥೆಯ ಭಾರತೀಯ ಆವೃತ್ತಿಯಾದ ಕೋವಿಶೀಲ್ಡ್‌ ಲಸಿಕೆಯನ್ನು ದೇಶಾದ್ಯಂತ ನೀಡಲಾಗಿದೆ. ಆದರೆ, ಕಳೆದ ಕೆಲವು ವರ್ಷಗಳಲ್ಲಿ ಅತ್ಯಂತ ವಿರಳ ಸಂಖ್ಯೆಯ ಜನರಲ್ಲಿ ಟಿಎಸ್‌ಎಸ್ ಕಾಣಿಸಿಕೊಂಡಿದೆ.  ಇದು ಅತ್ಯಂತ ವಿರಳ ಅಡ್ಡ ಪರಿಣಾಮಗಳಾಗಿದ್ದು, ಲಸಿಕೆ ನೀಡಿದ ಕೆಲ ಹೊತ್ತಿನಲ್ಲೇ ಕಾಣಿಸಿಕೊಳ್ಳುತ್ತವೆ. ಆದರೆ, ಭಾರತದಲ್ಲಿ ವ್ಯಾಪಕವಾಗಿ ಕೋವಿಶೀಲ್ಡ್‌ ಲಸಿಕೆ ನೀಡಲಾಗಿದೆ. ದೇಶದ ಎಲ್ಲಿಯೂ ಲಸಿಕೆ ನೀಡಿದ ಬಳಿಕ ಈ ರೀತಿಯ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಉದಾಹರಣೆಗಳಿಲ್ಲ. ಹೀಗಾಗಿ ಲಸಿಕೆ ಪಡೆದವರು ಭಯ ಪಡುವ ಅಗತ್ಯವೇನೂ ಇಲ್ಲ.  ಜೊತೆಗೆ ಕೋವಿಡ್ – 19 ಹಾವಳಿ ನಿಯಂತ್ರಿಸುವ ನಿಟ್ಟಿನಲ್ಲಿ ಈ ಲಸಿಕೆಯು ಅತ್ಯಂತ ಸುರಕ್ಷಿತ ಹಾಗೂ ಪರಿಣಾಮಕಾರಿ ಪಾತ್ರ ವಹಿಸಿದೆ .

ಹೀಗೆ ಕೋವಿಶೀಲ್ಡ್ ವಿವಾದದ ನಡುವೆ ಅಚ್ಚರಿಯ ಬೆಳವಣಿಗೆಯೊಂದು ನಡೆದಿದೆ. ಕೋವಿಶೀಲ್ಡ್‌ ಅಡ್ಡಪರಿಣಾಮದ ಬಗ್ಗೆ ಸುದ್ದಿಯಾಗುತ್ತಿದ್ದಂತೆ ಜನರು ತಮ್ಮ ಲಸಿಕೆ ಪ್ರಮಾಣಪತ್ರವನ್ನು ಡೌನ್‌ಲೋಡ್‌ ಮಾಡಿಕೊಳ್ಳುತ್ತಿದ್ದಾರೆ. ಈ ಹಿಂದೆ ಪ್ರಮಾಣಪತ್ರದಲ್ಲಿ ದೊಡ್ಡದಾಗಿ ಕಾಣಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಈಗ ಮಾಯವಾಗಿರುವುದನ್ನು ಕಂಡು ಆಶ್ಚರ್ಯಗೊಂಡಿದ್ದಾರೆ. ಪ್ರಮಾಣಪತ್ರದಿಂದ ಪ್ರಧಾನಿ ಚಿತ್ರ ತೆಗೆದಿರುವುದಕ್ಕೆ ಇದು ಕೋವಿಶೀಲ್ಡ್ ಎಫೆಕ್ಟ್ ಎಂದು ಗೇಲಿ ಮಾಡಿದ್ದಾರೆ. ಮತ್ತೊಂದೆಡೆ ಪುನೀತ್ ರಾಜ್​ಕುಮಾರ್ ವ್ಯಾಕ್ಸಿನ್ ಹಾಕಿಸಿಕೊಂಡಿದ್ದ ಪೋಸ್ಟ್ ಕೂಡ ವೈರಲ್ ಆಗುತ್ತಿದೆ. ಅಪ್ಪು ಲಸಿಕೆ ಹಾಕಿಸಿಕೊಂಡಾದ ಇಂದು ನನ್ನ ಮೊದಲ ಡೋಸ್ ಲಸಿಕೆ ಸಿಕ್ಕಿದೆ. ನೀವು 45 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದರೆ ನೀವು ಲಸಿಕೆ ಹಾಕಿಸಿಕೊಳ್ಳಬಹುದು ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಅಭಿಮಾನಿಯೊಬ್ಬರು ಸರ್ ಕೋವಿಶೀಲ್ಡ್ ಲಸಿಕೆ ತಗೋಬೇಡಿ. 45 ವರ್ಷ ಮೇಲ್ಪಟ್ಟವರಿಗೆ ಅದು ಒಳ್ಳೆಯದಲ್ಲ ಎಂದು ಮಾಡಿದ್ದ ಕಾಮೆಂಟ್ ಕೂಡ ವೈರಲ್ ಆಗುತ್ತಿದೆ. ಒಟ್ನಲ್ಲಿ ಕೊರೊನಾ ಟೈಮಲ್ಲಿ ವ್ಯಾಕ್ಸಿನ್​ಗಾಗಿ ದಿನಗಟ್ಟಲೆ ಕಾದು ಕ್ಯೂನಲ್ಲಿ ನಿಂತು ಹಾಸಿಕೊಂಡಿದ್ದ ಜನ ಇಂದು ಅದೇ ವ್ಯಾಕ್ಸಿನ್​ನಿಂದ ಭಯ ಬೀಳುವಂತಾಗಿದೆ.

Shwetha M

Leave a Reply

Your email address will not be published. Required fields are marked *