ದೇಶದಲ್ಲಿ ಮತ್ತೆ ಕೊರೊನಾ ಕರಿನೆರಳು – ಕರ್ನಾಟಕದಲ್ಲಿ ಆತಂಕ ಹೆಚ್ಚಾಗಿದ್ದೇಕೆ?

ದೇಶದಲ್ಲಿ ಮತ್ತೆ ಕೊರೊನಾ ಕರಿನೆರಳು – ಕರ್ನಾಟಕದಲ್ಲಿ ಆತಂಕ ಹೆಚ್ಚಾಗಿದ್ದೇಕೆ?

ಬೆಂಗಳೂರು: ದಿನಕಳೆದಂತೆ ದೇಶದಲ್ಲಿ ಕೊರೊನಾ ವೈರಸ್ ಕಾಟ ಹೆಚ್ಚಾಗುತ್ತಲೇ ಇದೆ. ಒಂದೇ ದಿನದಲ್ಲಿ 1,134 ಮಂದಿಗೆ ವೈರಸ್ ವಕ್ಕರಿಸಿದ್ದು, ಐವರು ಮೃತಪಟ್ಟಿದ್ದಾರೆ. ಸದ್ಯ ದೇಶದಲ್ಲಿ ಆ್ಯಕ್ಟಿವ್ ಕೊರೊನಾ ಕೇಸ್ ಗಳ ಸಂಖ್ಯೆ 7,026ಕ್ಕೆ ಏರಿಕೆಯಾಗಿದೆ.

ಇನ್ನು ಒಂದು ವರ್ಷದ ಸೋಂಕಿಗೊಳಗಾಗಿ ಆಸ್ಪತ್ರೆಗೆ ದಾಖಲಾಗಿ ಬಳಿಕ ಡಿಸ್ಚಾರ್ಜ್ ಆದ ಹಲವರಲ್ಲಿ ಈಗ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಉಸಿರಾಟದ ಸಮಸ್ಯೆ, ಆಯಾಸ, ಮಾನಸಿಕವಾಗಿ ಅಸ್ವಸ್ಥಗೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಪ್ರಬಲ ಭೂಕಂಪ – 11 ಮಂದಿ ಸಾವು, 150ಕ್ಕೂ ಹೆಚ್ಚು ಮಂದಿಗೆ ಗಾಯ

ಚುನಾವಣಾ ತಯಾರಿಯಲ್ಲಿರುವ ಕರ್ನಾಟಕದಲ್ಲಂತೂ ಅತೀ ಹೆಚ್ಚು ಪಾಸಿಟಿವ್ ಕೇಸ್ ಗಳು ಪತ್ತೆಯಾಗುತ್ತಿವೆ. ಕಳೆದ ಸೋಮವಾರದ ವೇಳೆಗೆ ರಾಜ್ಯದಲ್ಲಿ ಒಟ್ಟು 616 ಮಂದಿಗೆ ವೈರಸ್ ಅಟ್ಯಾಕ್ ಆಗಿತ್ತು. ಈ ಪೈಕಿ 394 ಸೋಂಕಿತರು ಬೆಂಗಳೂರಿಗರೇ ಆಗಿದ್ದಾರೆ. ರಾಜ್ಯದ ಆಸ್ಪತ್ರೆಗಳಲ್ಲಿ ವ್ಯಾಕ್ಸಿನ್ ಕೊರತೆಯುಂಟಾಗಿದ್ದು, ಹೀಗಾಗಿ ಕರ್ನಾಟಕಕ್ಕೆ ಹೆಚ್ಚಿನ ವ್ಯಾಕ್ಸಿನ್ ರವಾನಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ರಾಜ್ಯದ ಆಸ್ಪತ್ರೆಗಳೆಲ್ಲಾ ಹೈಅಲರ್ಟ್ ಸ್ಥಿತಿಯಲ್ಲಿವೆ.

suddiyaana