‘ದೇಶದ ಜನರಿಗೆ ಮೆದುಳೇ ಇಲ್ಲ ಅಂತಾ ಭಾವಿಸಿದ್ದೀರಾ’ ?- ಆದಿಪುರುಷ್ ಚಿತ್ರ ತಂಡಕ್ಕೆ ಕೋರ್ಟ್ ತರಾಟೆ..!
ಜನಸಾಮಾನ್ಯರು ಉಗಿದು ಉಪ್ಪಿನಕಾಯಿ ಹಾಕಿದ್ದಾಯ್ತು.. ಇದೀಗ ಕೋರ್ಟ್ ಕ್ಲಾಸ್ ತೆಗೆದುಕೊಳ್ಳುವ ಸರದಿ. ಆದಿಪುರುಷ್ ಚಿತ್ರ ತಂಡವನ್ನ ಕೋರ್ಟ್ ಕೂಡ ತರಾಟೆಗೆ ತೆಗೆದುಕೊಂಡಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದ್ದು, ಸಿನಿಮಾ ಬ್ಯಾನ್ ಮಾಡುವಂತೆ ಆಗ್ರಹಿಸಿ ಉತ್ತರಪ್ರದೇಶದ ಅಲಹಾಬಾದ್ ಹೈಕೋರ್ಟ್ಗೆ ಸಾರ್ವಜನಿಕ ಅರ್ಜಿ ಸಲ್ಲಿಕೆಯಾಗಿತ್ತು. ಸಿನಿಮಾದ ಡೈಲಾಗ್ಗಳು ಜನರನ್ನು ಕೆರಳಿಸುವಂತಿದ್ದು, ಇದೊಂದು ಗಂಭೀರ ಪ್ರಕರಣ ಅಂತಾ ಕೋರ್ಟ್ ಹೇಳಿದೆ.
ಇದನ್ನೂ ಓದಿ: ‘ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ಯಾಕೆ ಎಂಬ ಪ್ರಶ್ನೆಗೆ ಆದಿಪುರುಷ್ ಸಿನಿಮಾದಲ್ಲಿದೆ ಉತ್ತರ -ಸೆಹ್ವಾಗ್ ಹೀಗೆ ಹೇಳಿದ್ಯಾಕೆ?
ದೇಶದ ಜನರಿಗೆ ಮೆದುಳೇ ಇಲ್ಲಾ ಅಂತಾ ಭಾವಿಸಿದ್ದೀರಾ. ರಾಮಾಯಣ ಅನ್ನೋದು ನಮ್ಮ ಪಾಲಿಗೆ ಪರಿಶುದ್ಧವಾಗಿದ್ದು, ಮನೆಯಿಂದ ಹೊರ ಹೋಗುವ ಮುನ್ನ ಎಷ್ಟೋ ಮಂದಿ ರಾಮಚರಿತಮಾನಸವನ್ನ ಓದುತ್ತಾರೆ. ಸಿನಿಮಾದಲ್ಲಿ ಅನಗತ್ಯ ವಿಚಾರಗಳು ಪ್ರಸ್ತಾಪವಾಗಿದ್ದು, ಈ ಬಗ್ಗೆಯೂ ನಾವು ಕಣ್ಣು ಮುಚ್ಚಿ ಕುಳಿತರೆ, ಈ ಧರ್ಮದ ಜನರು ತುಂಬಾ ಸಹಿಷ್ಣುಗಳು ಅಂತಾ ಹೇಳುತ್ತಾರೆ. ಇದನ್ನ ಪರೀಕ್ಷಿಸೋಕೆ ಅಂತಾ ಈ ರೀತಿ ಮಾಡುತ್ತಿದ್ದೀರಾ ಅಂತಾ ಆದಿಪುರುಷ್ ಚಿತ್ರ ತಂಡದ ವಿರುದ್ಧ ಹೈಕೋರ್ಟ್ ಜಡ್ಜ್ ಆಕ್ರೋಶ ಹೊರ ಹಾಕಿದ್ದಾರೆ. ಅಷ್ಟೇ ಅಲ್ಲ, ಇಡೀ ಸಿನಿಮಾದಲ್ಲಿ ರಾಮ, ಸೀತೆ, ಲಕ್ಷ್ಮಣ, ಹನುಮಂತ, ರಾವಣ, ಲಂಕೆಯನ್ನ ತೋರಿಸಿ ಇದು ರಾಮಾಯಣಕ್ಕೆ ಸಂಬಂಧಿಸಿದ ಚಿತ್ರ ಅಲ್ಲ ಅಂತಾ ಹೇಳಿದರೆ ಅದನ್ನ ನಂಬೋಕೆ ನಮ್ಮ ಜನರೇನು ಮೂರ್ಖರಾ? ಸಿನಿಮಾ ಪ್ರದರ್ಶನ ವೇಳೆ ದೇಶದಲ್ಲಿ ಯಾರೂ ಕೂಡ ಥಿಯೇಟರ್ಗಳ ಮೇಲೆ ಹಾನಿ ಮಾಡಿಲ್ಲ. ಇದಕ್ಕಾಗಿ ಧನ್ಯತೆ ಇರಲಿ ಅಂತಾ ಕೋರ್ಟ್ ಆದಿಪುರುಷ ಚಿತ್ರತಂಡಕ್ಕೆ ಬುದ್ಧಿವಾದ ಹೇಳಿದೆ.