RCB ವೇಗಿ ಯಶ್ ದಯಾಳ್‌ಗೆ ಕೋರ್ಟ್ ರಿಲೀಫ್ – ಬಂಧನಕ್ಕೆ ಹೈಕೋರ್ಟ್ ತಡೆ

RCB ವೇಗಿ ಯಶ್ ದಯಾಳ್‌ಗೆ ಕೋರ್ಟ್ ರಿಲೀಫ್ – ಬಂಧನಕ್ಕೆ ಹೈಕೋರ್ಟ್ ತಡೆ

ಕ್ರಿಕೆಟಿಗ ಯಶ್ ದಯಾಳ್ ಅವರಿಗೆ ಕೋರ್ಟ್ ರಿಲೀಫ್ ನೀಡಿದೆ. ಯುವತಿಗೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಯಶ್ ದಯಾಳ್ ಸಧ್ಯ ಬಂಧನದಿಂದ ತಪ್ಪಿಸಿಕೊಂಡಿದ್ದಾರೆ.  ಒಬ್ಬ ವ್ಯಕ್ತಿಯನ್ನು 1 ದಿನ, 2 ದಿನ ಅಥವಾ 3 ದಿನ ಮೋಸ ಮಾಡಬಹುದು. ಆದರೆ ಒಬ್ಬ ವ್ಯಕ್ತಿ 5 ವರ್ಷ ಮೋಸ ಹೋಗಲು ಹೇಗೆ ಸಾಧ್ಯ ಎಂದು ವಿಚಾರಣೆ ವೇಳೆ ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.

ಇದನ್ನೂ ಓದಿ:ಯಾರಿಗೂ ಬೇಡವಾದ ದ್ರಾವಿಡ್ ಪುತ್ರ – ಆರ್‌ಸಿಬಿ ಪಡಿಕ್ಕಲ್‌ಗೆ ಬಂಪರ್ ಲಾಟ್ರಿ

ಮಹಿಳೆಯೊಬ್ಬರಿಗೆ ಲೈಂಗಿಕ ದೌರ್ಜನ್ಯ ನೀಡಿದ್ದಾರೆ ಎನ್ನುವ ಆರೋಪ ಎದುರಿಸುತ್ತಿರುವ ಕ್ರಿಕೆಟಿಗ ಯಶ್‌ ದಯಾಳ್‌ ಸದ್ಯಕ್ಕೆ ನಿರಾಳರಾಗಿದ್ದಾರೆ. ಅವರನ್ನು ಬಂಧಿಸಿದಂತೆ ಅಲಹಾಬಾದ್‌ ಹೈಕೋರ್ಟ್‌ ಪೊಲೀಸರಿಗೆ ಸೂಚಿಸಿದೆ. ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ಪ್ರಶ್ನಿಸಿ ದಯಾಳ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಮುಂದಿನ ವಿಚಾರಣೆ ತನಕ ಅವರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು ಎಂದಿದೆ. ಜೂ.21ರಂದು ಮಹಿಳೆಯೊಬ್ಬರು ದಯಾಳ್‌ ತಮ್ಮನ್ನು ವಿವಾಹವಾಗುವುದಾಗಿ ನಂಬಿಸಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯವೆಸೆಗಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು. ಈ ಸಂಬಂಧ ಜು.6ರಂದು ಎಫ್‌ಐಆರ್‌ ದಾಖಲಾಗಿತ್ತು. ‘ಒಬ್ಬ ವ್ಯಕ್ತಿಯನ್ನು 1 ದಿನ, 2 ದಿನ ಅಥವಾ 3 ದಿನ ಮೋಸ ಮಾಡಬಹುದು. ಆದರೆ ದೂರುದಾರೆಯು ಕ್ರಿಕೆಟಿಗನ ಜೊತೆ 5 ವರ್ಷದಿಂದ ಸಂಬಂಧವಿಟ್ಟುಕೊಂಡಿದ್ದಾಗಿ ಹೇಳಿದ್ದಾರೆ. ಒಬ್ಬ ವ್ಯಕ್ತಿ 5 ವರ್ಷ ಮೋಸ ಹೋಗಲು ಹೇಗೆ ಸಾಧ್ಯ’ ಎಂದು ವಿಚಾರಣೆ ವೇಳೆ ನ್ಯಾಯಪೀಠ ಅಭಿಪ್ರಾಯಿಸಿದೆ.

ಮುಂದಿನ ವಿಚಾರಣೆಯವರೆಗೆ ದಯಾಳ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ನ್ಯಾಯಾಲಯ ನಿರ್ದೇಶಿಸಿದೆ ಎಂದು ಅವರ ಪರ ವಕೀಲ ಗೌರವ್ ತ್ರಿಪಾಠಿ ತಿಳಿಸಿದ್ದಾರೆ. ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಪ್ರಶ್ನಿಸಿ ದಯಾಳ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ವರ್ಮಾ ಮತ್ತು ಅನಿಲ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ದೂರುದಾರರ ಪ್ರಕಾರ, ಇಬ್ಬರೂ ಸುಮಾರು ಐದು ವರ್ಷಗಳ ಹಿಂದೆ ಭೇಟಿಯಾದೆವು. ದಯಾಳ್ ಮದುವೆಯ ಆಮಿಷವೊಡ್ಡಿ ತನ್ನನ್ನು ಭಾವನಾತ್ಮಕವಾಗಿ, ಮಾನಸಿಕವಾಗಿ ಮತ್ತು ದೈಹಿಕವಾಗಿ ಶೋಷಿಸಿದ್ದಾರೆ. ಮದುವೆ ವಿಷಯವನ್ನು ದಯಾಳ್ ಮುಂದೂಡುತ್ತಲೇ ಇದ್ದರು ಮತ್ತು ಅಂತಿಮವಾಗಿ ದಯಾಳ್ ಇತರ ಮಹಿಳೆಯರೊಂದಿಗೆ ಸಂಬಂಧ ಹೊಂದಿರುವುದು ತಿಳಿಯಿತು ಎಂದು ಸಂತ್ರಸ್ತೆ ಹೇಳಿದ್ದಾರೆ. ಆರಂಭದಲ್ಲಿ ಜೂನ್ 21 ರಂದು ಮುಖ್ಯಮಂತ್ರಿಗಳ ಆನ್‌ಲೈನ್ ದೂರು ಪೋರ್ಟಲ್ (ಐಜಿಆರ್ಎಸ್) ಮೂಲಕ ಸಂತ್ರಸ್ತೆ ಯಶ್ ದಯಾಳ್ ಅವರ ವಿರುದ್ಧ ದೂರು ಸಲ್ಲಿಸಿದ್ದರು.

Sulekha