26 ವರ್ಷ ಮನೆಗೆಲಸ ಮಾಡಿದ ಪತ್ನಿ – ಗಂಡನಿಂದ ಸಿಕ್ತು ಬರೋಬ್ಬರಿ 79 ಲಕ್ಷ ರೂ. ಪರಿಹಾರ!

26 ವರ್ಷ ಮನೆಗೆಲಸ ಮಾಡಿದ ಪತ್ನಿ – ಗಂಡನಿಂದ ಸಿಕ್ತು ಬರೋಬ್ಬರಿ 79 ಲಕ್ಷ ರೂ. ಪರಿಹಾರ!

ಮದುವೆಯಾಗಿ ಗಂಡನ ಮನೆಗೆ ಹೋದ ಮೇಲೆ ಹೆಣ್ಣಿಗೆ ಹತ್ತಾರು ಜವಾಬ್ದಾರಿ ಇರುತ್ತವೆ. ತವರು ಮನೆ ಮರೆತು, ತನ್ನ ಜೊತೆಗಾರನ ಮನೆಗೆ ಬಂದ ಮೇಲೆ  ಅಡುಗೆ ಮಾಡುವುದು, ಮಕ್ಕಳ ಪಾಲನೆ ಪೋಷಣೆ ಮಾಡುವುದು ಒಟ್ಟಾರೆ ಮನೆಯ ಜವಾಬ್ದಾರಿ ಹೊತ್ತಿರುತ್ತಾಳೆ. ಆದರೆ ಈ ಎಲ್ಲಾ ಜವಾಬ್ದಾರಿಗಳನ್ನು ಖುಷಿಯಿಂದಲೇ ಮಾಡುತ್ತಾಳೆ ವಿನಃ ಸಂಬಳಕ್ಕಾಗಿ ಅಲ್ಲ. ಆದರೆ ಇಲ್ಲೊಬ್ಬಳು ಮಹಿಳೆ ತಾನು ಮನೆ ಕೆಲಸ ಮಾಡಿದ್ದಕ್ಕಾಗಿ ಗಂಡನಿಂದ ಪರಿಹಾರ ನೀಡುವಂತೆ ಕೋರ್ಟ್‌ ಮೆಟಿಲೇರಿದ್ದಾಳೆ.

ಇದನ್ನೂ ಓದಿ: ಬಿಜೆಪಿ ಅಸಮಾಧಾನಿತ ನಾಯಕರಿಗೆ ಕಾಂಗ್ರೆಸ್‌ ಗೇಟ್‌ ಬಂದ್‌! – ಆಪರೇಷನ್‌ ಹಸ್ತಕ್ಕೆ ಬ್ರೇಕ್‌ ಹಾಕಿದ್ರಾ ಸಿಎಂ ಸಿದ್ಧರಾಮಯ್ಯ

ಹೌದು, ವಿಚಿತ್ರವಾದ್ರೂ ಸತ್ಯ. ಈ ಘಟನೆ ಸ್ಪೇನ್ ನಲ್ಲಿ ನಡೆದಿದೆ. ಇಲ್ಲಿ ಮಹಿಳೆಯೊಬ್ಬಳು ತಾನು 26 ವರ್ಷಗಳಿಂದ ಗೃಹಿಣಿಯಾಗಿ ಮಾಡಿದ ಮನೆಗೆಲಸಕ್ಕೆ ಪತಿ ತನಗೆ ಪರಿಹಾರ ನೀಡಬೇಕು ಎಂದು ಕೋರ್ಟ್​​​​ ಮೊರೆ ಹೋಗಿದ್ದಾಳೆ. ಇದೀಗ ಕೋರ್ಟ್‌ ಆಕೆಯ ಪರವಾಗಿ ತೀರ್ಪು ನೀಡಿದೆ. ಆಕೆಗೆ ಪರಿಹಾರ ನೀಡುವಂತೆ ಆದೇಶಿಸಿದೆ.

ಅಷ್ಟಕ್ಕೂ ಆಗಿದ್ದೇನು?

1996 ರಲ್ಲಿ ಮದುವೆಯಾಗಿದ್ದ ಈ ದಂಪತಿಗಳು ಕೆಲ ಭಿನ್ನಾಭಿಪ್ರಾಯದಿಂದ 2022ರಲ್ಲಿ ವಿಚ್ಛೇಧನ ಪಡೆದುಕೊಂಡಿದ್ದರು. ಸುಮಾರು 26 ವರ್ಷದ ದಾಂಪತ್ಯ ಜೀವನದಲ್ಲಿ ಪತ್ನಿ ಮನೆಯ ಕೆಲಸ ಹಾಗೂ ಮಗಳನ್ನು ಬೆಳೆಸುವುದರಲ್ಲಿಯೇ ಜೀವನ ಕಂಡುಕೊಂಡಿದ್ದಳು. ಸ್ವಂತ ಜೀವನ ನಿರ್ವಹಣೆಗೆ ಏನು ಕಂಡುಕೊಂಡಿಲ್ಲದ್ದ ಕಾರಣ ಪತ್ನಿ ನ್ಯಾಯಾಲಯದ ಮೊರೆ ಹೋಗಿದ್ದಾಳೆ.

ಇದೀಗ ನ್ಯಾಯಾಲಯವು 26 ವರ್ಷಗಳಿಂದ ಗೃಹಿಣಿಯಾಗಿ ಮಾಡಿದ ಮನೆಗೆಲಸಕ್ಕೆ ರೂ.79 ಲಕ್ಷ 48 ಸಾವಿರ ಪರಿಹಾರ ನೀಡುವಂತೆ ಪತಿಗೆ ಆದೇಶಿಸಿದೆ. ಸ್ಪೇನ್‌ನ ಪಾಂಟೆವೆಡ್ರಾದಲ್ಲಿನ ಪ್ರಾಂತೀಯ ನ್ಯಾಯಾಲಯವು ಇತ್ತೀಚೆಗೆ ಈ ತೀರ್ಪು ನೀಡಿದೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

Shwetha M