ಜೈಲರ್ ಸಿನಿಮಾದಲ್ಲಿ ಆರ್‌ಸಿಬಿ ಜೆರ್ಸಿ ವಿರುದ್ಧ ಕಾನೂನು ಸಮರ – ದೃಶ್ಯಕ್ಕೆ ಕತ್ತರಿಹಾಕಲು ಕೋರ್ಟ್ ಆದೇಶ

ಜೈಲರ್ ಸಿನಿಮಾದಲ್ಲಿ ಆರ್‌ಸಿಬಿ ಜೆರ್ಸಿ ವಿರುದ್ಧ ಕಾನೂನು ಸಮರ – ದೃಶ್ಯಕ್ಕೆ ಕತ್ತರಿಹಾಕಲು ಕೋರ್ಟ್ ಆದೇಶ

ಸೂಪರ್‌ಸ್ಟಾರ್ ರಜಿನಿಕಾಂತ್‌ಗೆ ಸೂಪರ್ ಸಕ್ಸಸ್ ತಂದುಕೊಟ್ಟ ಚಿತ್ರ ಜೈಲರ್. ಈ ಚಿತ್ರದ ವಿರುದ್ಧ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ಕಾನೂನು ಸಮರ ಸಾರಿತ್ತು. ಇದೀಗ ಜೈಲರ್ ಸಿನಿಮಾ ತಂಡ ಹಾಗೂ ಆರ್‌ಸಿಬಿ ಎರಡೂ ಕಡೆಯಿಂದಲೂ ಒಪ್ಪಂದಕ್ಕೆ ಬಂದಿದ್ದು, ಈ ಪ್ರಕರಣವನ್ನು ಇತ್ಯರ್ಥ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ:  400 ಕೋಟಿ ರೂಪಾಯಿ ಬಾಚಿದ ‘ಜೈಲರ್’ ಸಿನಿಮಾ – ಚಿತ್ರ ಗೆದ್ದ ಖುಷಿಯಲ್ಲಿ ಸೂಪರ್ ಸ್ಟಾರ್ ರಜಿನಿಕಾಂತ್

ಜೈಲರ್ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಈ ಚಿತ್ರದ ಕಲೆಕ್ಷನ್ 600 ಕೋಟಿ ರೂಪಾಯಿ ಸಮೀಪಿಸಿದೆ. ಈ ಮಧ್ಯೆ ‘ಜೈಲರ್’ ನಿರ್ಮಾಣ ಮಾಡಿರುವ ಸನ್ ಪಿಕ್ಚರ್ಸ್ ಹಾಗೂ ಐಪಿಎಲ್ ತಂಡ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ಮಧ್ಯೆ ಕಾನೂನು ಸಮರ ನಡೆದಿತ್ತು. ಈ ಚಿತ್ರದ ದೃಶ್ಯವೊಂದರಲ್ಲಿ ಕಾಂಟ್ರ್ಯಾಕ್ಟ್ ಕಿಲ್ಲರ್ ಆರ್‌ಸಿಬಿ ಜೆರ್ಸಿ ಧರಿಸಿ ಬರುತ್ತಾನೆ. ಇದನ್ನು ತೆಗೆದು ಹಾಕಬೇಕು ಎಂದು ಕೋರ್ಟ್‌ಗೆ ಆರ್‌ಸಿಬಿ ಮನವಿ ಮಾಡಿತ್ತು. ಈ ಪ್ರಕರಣವನ್ನು ಇತ್ಯರ್ಥ ಮಾಡಿಕೊಳ್ಳಲು ಸನ್ ಪಿಕ್ಚರ್ಸ್ ಒಪ್ಪಿದೆ. ಈ ದೃಶ್ಯವನ್ನು ಮಾರ್ಪಾಡು ಮಾಡುವ ಭರವಸೆಯನ್ನು ಕೋರ್ಟ್ಗೆ ನೀಡಿದೆ. ಸಿನಿಮಾದಲ್ಲಿ ಕಥಾ ನಾಯಕನನ್ನು ಬೆನ್ನತ್ತಿ ಬರುವ ಕಾಂಟ್ರ್ಯಾಕ್ಟ್ ಕಿಲ್ಲರ್ ಆರ್‌ಸಿಬಿ ಜೆರ್ಸಿ ಧರಿಸಿರುತ್ತಾನೆ. ಜೊತೆಗೆ ಮಹಿಳೆಯ ಬಗ್ಗೆ ಕೆಟ್ಟ ಭಾಷೆ ಪ್ರಯೋಗಿಸುತ್ತಾನೆ. ಈ ದೃಶ್ಯವನ್ನು ಆರ್‌ಸಿಬಿಯ ಕಾನೂನು ತಂಡ ಪ್ರಶ್ನೆ ಮಾಡಿತ್ತು. ‘ನಮ್ಮ ಜೆರ್ಸಿಯ ಅನಧಿಕೃತ ಬಳಕೆಯು ಬ್ರ್ಯಾಂಡ್‌ನ ಜನಪ್ರಿಯತೆ ಮತ್ತು ಅದರ ಪ್ರಾಯೋಜಕರ ಹಿತಾಸಕ್ತಿಗಳಿಗೆ ಹಾನಿ ಉಂಟು ಮಾಡಬಹುದು’ ಎಂದು ಆರ್‌ಸಿಬಿ ದೆಹಲಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ‘ಆರ್‌ಸಿಬಿ ಜೆರ್ಸಿ ಇರುವ ದೃಶ್ಯಕ್ಕೆ ಕತ್ತರಿ ಹಾಕಿ ಅಥವಾ ಮಾರ್ಪಾಡು ಮಾಡಿ’ ಎಂದು ಸನ್ ಪಿಕ್ಚರ್ಸ್‌ಗೆ ಕೋರ್ಟ್ ಆದೇಶ ನೀಡಿದೆ. ಈಗ ಎರಡೂ ಕಡೆಯುವರು ಒಂದು ಒಪ್ಪಂದಕ್ಕೆ ಬಂದಿದ್ದು, ಈ ಪ್ರಕರಣವನ್ನು ಇತ್ಯರ್ಥ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ‘ನಾವು ದೃಶ್ಯವವನ್ನು ಮಾರ್ಪಾಡು ಮಾಡುತ್ತೇವೆ. ಸೆಪ್ಟೆಂಬರ್ 1ರಿಂದ ಥಿಯೇಟರ್‌ನಲ್ಲಿ ಮಾರ್ಪಾಡು ಮಾಡಿದ ದೃಶ್ಯ ಬಿತ್ತರ ಆಗಲಿದೆ. ಒಟಿಟಿಯಲ್ಲೂ ಆ ದೃಶ್ಯವನ್ನು ಬದಲಿಸಿ ರಿಲೀಸ್ ಮಾಡಲಾಗುವುದು ಎಂದು ಸನ್ ಪಿಕ್ಚರ್ಸ್ ಪರ ವಕೀಲರು ಕೋರ್ಟ್‌ಗೆ ತಿಳಿಸಿದ್ದಾರೆ.

suddiyaana