60% ಕನ್ನಡ ಫಲಕ ಇಲ್ಲವೆಂದು ಮಳಿಗೆ ಮುಚ್ಚಬೇಡಿ – ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶ

60% ಕನ್ನಡ ಫಲಕ ಇಲ್ಲವೆಂದು ಮಳಿಗೆ ಮುಚ್ಚಬೇಡಿ – ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶ

ವಾಣಿಜ್ಯ ಮಳಿಗೆಗಳಲ್ಲಿ ಕನ್ನಡ ಬೋರ್ಡ್‌ ಕಡ್ಡಾಯ ಹಾಕಬೇಕು ಎಂಬ ಕೂಗು ಜೋರಾಗಿಯೇ ಇದೆ. ಶೇ.60 ರಷ್ಟು ಕನ್ನಡ ಬಳಕೆ ಮಾಡದ ವಾಣಿಜ್ಯ ಸಂಸ್ಥೆಗಳ ವಿರುದ್ದ ಬಿಬಿಎಂಪಿ ಕ್ರಮಕೈಗೊಳ್ಳುತ್ತಿದೆ. ಈ ಬೆನ್ನಲ್ಲೇ ಇದೀಗ ಬಲವಂತದ ಕ್ರಮ ಜರುಗಿಸಬಾರದು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ರಾಜ್ಯ ಸರ್ಕಾರ ಜಾರಿಗೆ ತಂದಿರುವ ನಿಯಮ ಪ್ರಕಾರ, ನಾಮಫಲಕದಲ್ಲಿ ಕನ್ನಡ ಬಳಸದಿರುವ ಮಳಿಗೆಗಳನ್ನು ಬಂದ್‌ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ಕ್ರಮವನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ತಕರಾರರು ಅರ್ಜಿ ಸಲ್ಲಿಕೆಯಾಗಿತ್ತು.

ಇದನ್ನೂ ಓದಿ:  ಚಿಕ್ಕಬಳ್ಳಾಪುರಕ್ಕೆ ಸುಮಲತಾ ಶಿಫ್ಟ್! – ಮಂಡ್ಯದಿಂದ ಹೆಚ್ ಡಿ ಕುಮಾರಸ್ವಾಮಿ ಕಣಕ್ಕೆ?

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ, ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಮಾಡದ ವಾಣಿಜ್ಯ ಸಂಸ್ಥೆಗಳನ್ನು ಮುಚ್ಚುವು ದಾಗಿ (ಸೀಲ್ಡ್ ಡೌನ್) ತಿಳಿಸಿರುವುದು ಕಠಿಣ ಕ್ರಮವಾಗಲಿದೆ. ದಂಡ ಹಾಕುವ ಅಥವಾ ಪರವಾನಗಿ ರದ್ದುಪಡಿಸುವ ಕ್ರಮವಾದರೆ ಯೋಚಿಸಬಹುದು. ಆದರೆ, ಸಂಸ್ಥೆಯನ್ನೇ ಮುಚ್ಚುವುದು ಸರಿಯಾದ ಕ್ರಮವಲ್ಲ. ಮೇಲಾಗಿ ಕಾಯ್ದೆ ಮೂಲಕ ನಿಯಮಗಳನ್ನು ಸುತ್ತೋಲೆ ರೂಪದಲ್ಲಿ ಜಾರಿಗೊಳಿಸಲು ಸಾಧ್ಯವಿಲ್ಲ. ಆದ್ದರಿಂದ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ನ್ನಡ ಬಳಕೆ ಮಾಡದ ವಾಣಿಜ್ಯ ಸಂಸ್ಥೆಗಳನ್ನು ಸೀಲ್ ಡೌನ್ ಮಾಡುವಂತಹ ಬಲವಂತದ ಕ್ರಮ ಜರುಗಿಸಬಾರದು. ಉಳಿದಂತೆ ಸುತ್ತೋಲೆ ಉಲ್ಲೇಖಿಸಿರುವ ಇತರೆ ಅಂಶಗಳು ಅರ್ಜಿ ಕುರಿತ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಮಧ್ಯಂತರ ಆದೇಶ ಮಾಡಿತು.

ಯಾವ ದಿನದಿಂದ ‘ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ಕಾಯ್ದೆ-2022’ ಜಾರಿ ಮಾಡಲಾಗಿದೆ ಎಂಬ ಬಗ್ಗೆ ಗೆಜೆಟ್ ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ತಿಳಿಸಿಲ್ಲ. ಆ ಕುರಿತು ಸರ್ಕಾರ ಮಾಹಿತಿ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಶುಕ್ರವಾರಕ್ಕೆ (ಮಾ.22) ಮುಂದೂಡಿದೆ.

ಇನ್ನು ಶೇ.60ರಷ್ಟು ಕನ್ನಡ ಬಳಕೆಗೆ ರೂಪಿಸಿರುವ ಕಾಯ್ದೆಯ ನಿಯಮಗಳನ್ನು ನ್ಯಾಯಾಲಯ ಪರಿಶೀಲಿಸಿ ಉತ್ತರ ಸಹ ನೀಡಲಿದೆ. ಕಾಯ್ದೆಯ ಎಲ್ಲ ಅಂಶಗಳಿಗೆ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಲಿದೆ. ವಾಣಿಜ್ಯ ಸಂಸ್ಥೆಗಳನ್ನು ಮುಚ್ಚುವುದನ್ನು ನ್ಯಾಯಾ ಲಯ ಸಹ ಒಪ್ಪುವುದಿಲ್ಲ. ಆದರೆ, ನಾಮಫಲಕದಲ್ಲಿ ಕನ್ನಡವನ್ನು ದೊಡ್ಡದಾಗಿ ಬಳಸಿದರೆ ನಿಮಗೆ ಯಾವ ಸಮಸ್ಯೆಯಾಗುತ್ತದೆ ಎಂಬುದು ನನಗೆ ಅರ್ಥ ವಾಗುತ್ತಿಲ್ಲ. ಕನ್ನಡ ಬಳಕೆಗೆ ಸಮಯಾವಕಾಶ ಬೇಕಾದರೆ ಸರ್ಕಾರ ಒದಗಿಸಲಿದೆ ಎಂದು ನ್ಯಾಯಮೂರ್ತಿ ಗಳು ಹೇಳಿದರು.

Shwetha M