90 ಕೋಟಿ ಮೌಲ್ಯದ ಲೆಹೆಂಗಾ.. 718 ಕೋಟಿ ರೂಪಾಯಿ ವೆಚ್ಚ – ಅಂಬಾನಿ ಮಗಳ ಮದುವೆ ಹೇಗಿತ್ತು ಗೊತ್ತಾ..?
ಮದುವೆ ಎನ್ನುವುದು ಗಂಡು ಹೆಣ್ಣಿನ ಮಿಲನ ಅಷ್ಟೇ ಅಲ್ಲ. ಅದೊಂದು ಪವಿತ್ರ ಬಂಧನ. ಇತ್ತೀಚೆಗೆ ಪ್ರೇಮ ವಿವಾಹಗಳೂ ಹೆಚ್ಚಾಗುತ್ತಿವೆ. ಮದುವೆಯಿಂದ ಸಮಾಜದಲ್ಲಿ ಒಂದು ಶಿಸ್ತುಬದ್ಧ ಜೀವನವಿರುತ್ತದೆ. ನಮ್ಮದೇ ಆದ ಕೆಲವು ಕೌಟುಂಬಿಕ ಕರ್ತವ್ಯಗಳೆಲ್ಲವೂ ಸರಾಗವಾಗಿ ನಡೆಯುತ್ತವೆ. ಮದುವೆ ಒಂದು ಮರೆಯಲಾಗದ ಕ್ಷಣ ಆಗಿರೋದ್ರಿಂದ ಅದನ್ನ ಅತ್ಯಂತ ಸಂಭ್ರಮದಿಂದ ನಡೆಸಲಾಗುತ್ತದೆ. ಅವರವರ ಅನುಕೂಲಕ್ಕೆ ತಕ್ಕಂತೆ ಮದುವೆಗಳನ್ನ ಮಾಡಲಾಗುತ್ತೆ. ಶ್ರೀಮಂತರ ಮದುವೆಗೆ ಬಳಸುವ ದುಡ್ಡಲ್ಲಿ ಇಡೀ ಒಂದು ಊರನ್ನೇ ಕೊಂಡುಕೊಳ್ಳಬಹುದು. ಅದ್ರಲ್ಲೂ ಇವರ ಮದುವೆಗೆ ಖರ್ಚು ಮಾಡಿರುವ ಹಣ ಕೇಳಿದ್ರೆ ತಲೆಯೇ ತಿರುಗುತ್ತೆ.
ಇದನ್ನೂ ಓದಿ : ಸ್ಮಾರ್ಟ್ ಫೋನ್ ಗಳನ್ನು ಹಾಳಾಗುವವರೆಗೂ ಉಪಯೋಗಿಸಬಹುದಾ – ಎಷ್ಟು ವರ್ಷಕ್ಕೊಮ್ಮೆ ಮೊಬೈಲ್ ಗಳನ್ನ ಬದಲಿಸಬೇಕು?
ಭಾರತದಲ್ಲಿ ಸಾವಿರಾರು ಶ್ರೀಮಂತರು ಇದ್ದಾರಾದ್ರೂ ದೇಶ ಮಾತ್ರ ಬಡತನದಲ್ಲೇ ಇದೆ. ಭಾರತದಲ್ಲಿ ಇಶಾ ಅಂಬಾನಿ ಮತ್ತು ಆನಂದ್ ಪಿರಮಾಲ್ ಅವರ ವಿವಾಹವು 700 ಕೋಟಿ ರೂಪಾಯಿಗಿಂತ ಹೆಚ್ಚು ಬಜೆಟ್‌ನೊಂದಿಗೆ ನಡೆದಿದ್ದು, ಅತ್ಯಂತ ದುಬಾರಿ ವಿವಾಹವೆಂದು ಪರಿಗಣಿಸಲ್ಪಟ್ಟಿದೆ. ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪುತ್ರಿ ಮದುವೆ ಸಮಾರಂಭ 2018ರಲ್ಲಿ ನಡೆದಿದ್ದು, ಮದುವೆ ಸಮಾರಂಭಕ್ಕೆ ಬರೋಬ್ಬರಿ 100 ಮಿಲಿಯನ್ ಡಾಲರ್ (ಸುಮಾರು 718 ಕೋಟಿ ರೂ.) ಖರ್ಚು ಮಾಡಲಾಗಿದೆ. ವಿವಾಹಕ್ಕೆ ಇಂಗ್ಲೆಂಡ್ ರಾಜ ಕುಟುಂಬ ಹಾಲಿವುಡ್, ಬಾಲಿವುಡ್ ನಟರು, ದೇಶ, ವಿದೇಶ ಗಣ್ಯ ಉದ್ಯಮಿಗಳು ಆಗಮಿಸುತ್ತಾರೆ. ಇವರಿಗೆ ಸೌಲಭ್ಯ ನೀಡಲೆಂದೇ ಮುಂಬೈಯಲ್ಲಿರುವ ಬಹುತೇಕ ಸ್ಟಾರ್ ಹೋಟೆಲ್ ಗಳನ್ನು ಬುಕ್ ಮಾಡಲಾಗಿತ್ತು. ಅಲ್ಲದೇ ಮದುವೆ ಆಗಮಿಸುವ ಅತಿಥಿಗಳಿಗೆ 100ಕ್ಕೂ ಹೆಚ್ಚು ಚಾರ್ಟರ್ ವಿಮಾನಗಳನ್ನು ಬುಕ್ ಮಾಡಲಾಗಿತ್ತು.
ಏಷ್ಯಾದ ಶ್ರೀಮಂತ ಉದ್ಯಮಿ ಎಂದ ಹೆಗ್ಗಳಿಕೆ ಪಡೆದಿರುವ ಮುಕೇಶ್ ಅಂಬಾನಿ ತಮ್ಮ ಮಗಳ ವಿವಾಹ ಕಾರ್ಯಕ್ರಮದಲ್ಲಿ ಕೇವಲ ಶ್ರೀಮಂತರಿಗೆ ಮಾತ್ರವಲ್ಲದೇ ಸುಮಾರು 5,100 ಬಡ ಮಕ್ಕಳಿಗೂ ಕೂಡ 4 ನಾಲ್ಕು ದಿನಗಳ ಕಾಲ ಊಟದ ವ್ಯವಸ್ಥೆ ಮಾಡಿದ್ದರು. ಅಲ್ಲದೇ ಭಾರತದ ಪ್ರಮುಖ ಸಂಪ್ರದಾಯಿಕ ಕಲೆಗಳಿಗೆ ಬೆಂಬಲ ನೀಡಲು ವಿವಿಧ ಕಲಾವಿದರಿಗೆ ವ್ಯವಸ್ಥೆಯನ್ನು ಏರ್ಪಡಿಸಿದ್ದರು. ಮದುವೆಯ ಪ್ರಮುಖ ಕಾರ್ಯಕ್ರಮ ಮುಂಬೈನ ಮನೆಯಲ್ಲಿ ನಡೆದಿದ್ದು, ಮದುವೆಯ ಒಂದು ಆಮಂತ್ರಣ ಪತ್ರಿಕೆಗೆ 3 ಲಕ್ಷ ರೂ. ಖರ್ಚು ಮಾಡಲಾಗಿತ್ತು. ಉದ್ಯಮಿ ಮುಕೇಶ್ ಅಂಬಾನಿ ಅವರ ಮಗಳು ಇಶಾ ಅಂಬಾನಿ ಮತ್ತು ಆನಂದ್ ಪಿರಾಮಲ್ ಅವರ ಮದುವೆಗೆ 700 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು. ಇಶಾ ಅಂಬಾನಿ 90 ಕೋಟಿ ರೂಪಾಯಿ ಬೆಲೆಯ ವಿಶ್ವದ ಅತ್ಯಂತ ದುಬಾರಿ ಲೆಹೆಂಗಾವನ್ನು ಧರಿಸಿದ್ದರು.