ಮುದ್ದಿನ ಶ್ವಾನಕ್ಕಾಗಿ ಬರೋಬ್ಬರಿ 15 ಲಕ್ಷ ಖರ್ಚು ಮಾಡಿದ ದಂಪತಿ! – ಇಂಡಿಯಾ To ಆಸ್ಟ್ರೇಲಿಯಾ ಶ್ವಾನ ರೋಚಕ ಜರ್ನಿ ಹೇಗಿತ್ತು?

ಅನೇಕರು ಶ್ವಾನವನ್ನು ತಮ್ಮ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ಅನೇಕ ಮನೆಗಳಲ್ಲಿ ಶ್ವಾನವನ್ನು ತಮ್ಮ ಮನೆಯ ಸದಸ್ಯರಂತೆಯೇ ಜನ ನೋಡುತ್ತಾರೆ. ತಾವು ಸಾಕಿದ ನಾಯಿಗಾಗಿ ಏನು ಬೇಕಾದ್ರೂ ಮಾಡಲು ರೆಡಿ ಇರ್ತಾರೆ. ಇದೀಗ ಇಲ್ಲೊಂದು ದಂಪತಿ ನಾಯಿಗಾಗಿ 15 ಲಕ್ಷ ಖರ್ಚು ಮಾಡಿದ್ದಾರೆ.
ಇದನ್ನೂ ಓದಿ: ಗಂಡ ತಮಾಷೆ ಮಾಡಿದ್ದೇ ತಪ್ಪಾಯ್ತಾ? – ಮಂಗ ಎಂದು ಕರೆದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಖ್ಯಾತ ಮಾಡೆಲ್!
ಅಚ್ಚರಿಯಾದ್ರೂ ಸತ್ಯ. ಹೈದರಾಬಾದ್ ಮೂಲದ ದಂಪತಿ ಶ್ವಾನ ಪ್ರೇಮಿಗಳು. ಹೀಗಾಗಿ ತಾವು ಸಾಕಿದ ನಾಯಿಯನ್ನು ಆಸ್ಟ್ರೇಲಿಯಾಗೆ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದರು. ಆದರೆ ಆ ನಾಯಿಯನ್ನು ನೇರವಾಗಿ ಆಸ್ಟ್ರೇಲಿಯಾಕ್ಕೆ ಕರೆದೊಯ್ಯಲು ಸಾಧ್ಯವಿಲ್ಲ. ಯಾಕಂದ್ರೆ ಆಸ್ಟ್ರೇಲಿಯಾದ ರೂಲ್ಸ್ ಪ್ರಕಾರ ನಾಯಿ 6 ತಿಂಗಳ ಕಾಲ ರೇಬೀಸ್ ಮುಕ್ತ ದೇಶದಲ್ಲಿ ಇರಬೇಕಾಗುತ್ತದೆ. ಆನಂತರ ನಾಯಿಯನ್ನು ತೆಗೆದುಕೊಂಡು ಹೋಗಲು ಅವಕಾಶ ಸಿಗುತ್ತದೆ. ಈ ಹಿನ್ನೆಲ್ಲೆಯಲ್ಲಿ ಶ್ವಾನ ಪ್ರೇಮಿಗಳು ನಾಯಿಯನ್ನು 6 ತಿಂಗಳು ದುಬೈನಲ್ಲಿ ಇರಿಸಿದ್ದರು. ಅಷ್ಟೇ ಅಲ್ಲ ಈ ದಂಪತಿ ನಾಯಿಗಾಗಿ ಒಂದು ತಿಂಗಳು ದುಬೈನಲ್ಲೇ ಉಳಿದುಕೊಂಡಿದ್ದರು. ಉಳಿದ 5 ತಿಂಗಳು ಅವರು ಫೋನ್ ಮತ್ತು ವೀಡಿಯೊ ಕಾಲ್ ಮೂಲಕ ಆ ನಾಯಿಯನ್ನು ಪರಿಶೀಲಿಸುತ್ತಲೇ ಇದ್ದರು. ಅದಾದ ನಂತರ ಅವರು ಆಸ್ಟ್ರೇಲಿಯಾಕ್ಕೆ ಮರಳಿದರು.
ಇದೀಗ ಹೈದರಾಬಾದ್ನ ಈ ದಂಪತಿ ತಮ್ಮ ಮುದ್ದಿನ ಸಾಕು ನಾಯಿಯನ್ನು ಆಸ್ಟ್ರೇಲಿಯಾಕ್ಕೆ ಕರೆದುಕೊಂಡು ಹೋಗಲು 1.5 ಮಿಲಿಯನ್ (15 ಲಕ್ಷ ರೂ.) ಖರ್ಚು ಮಾಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. “ಸ್ಕೈ ನಮ್ಮ ಸಾಕುಪ್ರಾಣಿ ಮಾತ್ರವಲ್ಲ, ಅದು ನಮ್ಮ ಮಗುವಿನಂತೆ” ಎಂದು ಅವರು ಹೇಳಿದ್ದಾರೆ. ಇದೀಗ ಈ ಘಟನೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.

ನೋಡಿರಿ

