ನಾಯಿ ಅನ್ಕೊಂಡು ಕರಡಿಯನ್ನ ಸಾಕಿದ ದಂಪತಿ – 2 ವರ್ಷಗಳ ಬಳಿಕ ರಹಸ್ಯ ಗೊತ್ತಾಗಿದ್ದೇ ರೋಚಕ!

ನಾಯಿ ಅನ್ಕೊಂಡು ಕರಡಿಯನ್ನ ಸಾಕಿದ ದಂಪತಿ – 2 ವರ್ಷಗಳ ಬಳಿಕ ರಹಸ್ಯ ಗೊತ್ತಾಗಿದ್ದೇ ರೋಚಕ!

ಈಗ ಮನುಷ್ಯರಿಗಿಂತ ಹೆಚ್ಚಾಗಿ ಪ್ರಾಣಿಗಳನ್ನ ಮುದ್ದು ಮಾಡ್ತಾರೆ. ತಮ್ಮ ಮನೆ ಮಕ್ಕಳಂತೆ ಸಾಕಿಕೊಳ್ತಾರೆ. ತಾವು ಎಲ್ಲೇ ಹೊರಗಡೆ ಹೋದ್ರೂ ಅವುಗಳು ಇವರ ಜೊತೆ ಇರಲೇಬೇಕು. ಅದ್ರಲ್ಲೂ ವೀಕೆಂಡ್​ಗಳಲ್ಲಿ ಪಾರ್ಕ್ ಗೆ ಕರೆದುಕೊಂಡು ಹೋಗ್ತಾರೆ. ಹೀಗೆ ಈ ದಂಪತಿಯೂ ಮುದ್ದಿನಿಂದ ನಾಯಿಯನ್ನ ಸಾಕಿದ್ರು. ಆದ್ರೆ ಅದು ದೊಡ್ಡದಾದ ಮೇಲೆ ಅಸಲಿ ವಿಚಾರ ಗೊತ್ತಾಗಿ ಶಾಕ್ ಆಗಿದ್ದಾರೆ.

ಚೀನಾದ ದಂಪತಿಗೆ ಶ್ವಾನಗಳು ಅಂದ್ರೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ತಮ್ಮ ಮನೆಯಲ್ಲಿ ವಿಶಿಷ್ಟ ತಳಿಯ ನಾಯಿಯನ್ನು ಸಾಕಬೇಕು ಅನ್ನೋ ಆಸೆ. ಇದಕ್ಕಾಗಿ ಅವರು ‘ಟಿಬೆಟಿಯನ್ ಮಸ್ಟಿಫ್’ ಅನ್ನೋ ಜಾತಿಯ ನಾಯಿಯೊಂದನ್ನು ಖರೀದಿ ಮಾಡಿದ್ದರು. ಮೈ ತುಂಬಾ ರೋಮ ಭರಿತವಾದ ಪ್ರಾಣಿ ಅದು. ಆದ್ರೆ, ಎರಡೇ ವರ್ಷದಲ್ಲಿ ಈ ನಾಯಿ ಬರೋಬ್ಬರಿ 114 ಕೆಜಿ ಬೆಳೆದಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಇದು ನಾಲ್ಕು ಕಾಲಿನ ಬದಲು ಎರಡೇ ಕಾಲಿನಲ್ಲಿ ಓಡಾಡೋಕೆ ಶುರು ಮಾಡಿತ್ತು.. ಆಗಲೇ ಗೊತ್ತಾಗಿದ್ದು ನೋಡಿ ಇದು ನಾಯಿ ಅಲ್ಲ, ಕರಡಿ ಅಂತಾ..

ಇದನ್ನೂ ಓದಿ : ನಾಯಿ- ಕೋಳಿ ನಡುವೆ ಬಿಗ್ ಫೈಟ್ – ಹುಂಜನ ಸಹವಾಸವೇ ಬೇಡ ಎಂದು ಓಡಿದ  ಶ್ವಾನ

ಚೀನಾದ ಯುನಾನ್ ಪ್ರಾಂತ್ಯದಲ್ಲಿ ಇರೋ ಸಣ್ಣ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ನಿವಾಸಿ ಸು ಯುನ್ ಅವರು ರಜೆ ಹಿನ್ನೆಲೆ ಟಿಬೆಟ್‌ ಪ್ರವಾಸಕ್ಕೆ ತೆರಳಿದ್ದಾಗ ಈ ಪ್ರಾಣಿಯನ್ನು ಖರೀದಿಸಿದ್ದರು. ಇದನ್ನು ಟಿಬೆಟಿಯನ್ ಮಸ್ಟಿಫ್ ತಳಿಯ ನಾಯಿ ಎಂದೇ ಭಾವಿಸಿದ್ದರು. ಏಕೆಂದರೆ ಈ ನಾಯಿಗಳು ಕಪ್ಪು ಹಾಗೂ ಕಂದು ಬಣ್ಣದ ರೋಮಗಳನ್ನು ಹೊಂದಿರುತ್ತವೆ. ಈ ನಾಯಿಯು ಥೇಟ್ ಏಷ್ಯಾದ ಕಪ್ಪು ಕರಡಿ ರೀತಿಯಲ್ಲೇ ಇರುತ್ತವೆ. ಆದ್ರೆ ಈ ನಾಯಿಗಳು ಹೆಚ್ಚೆಂದರೆ 70 ಕೆ. ಜಿ. ತೂಕ ಆಗುವವರೆಗೆ ಬೆಳೆಯಬಲ್ಲವು. ಆದ್ರೆ, ಚೀನಾ ದಂಪತಿ ನಾಯಿ ಎಂದು ಭಾವಿಸಿ ಖರೀದಿಸಿ ತಂದಿದ್ದ ಕರಡಿಯು ಬರೋಬ್ಬರಿ 114 ಕೆ. ಜಿ. ಬೆಳೆದಿತ್ತು..

ಚೀನಾ ನಿವಾಸಿ ಸು ಯುನ್ ಅವರು ಈ ಕರಡಿಯನ್ನು ನಾಯಿ ಎಂದು ಭಾವಿಸಿ ಕರೆತಂದ ವೇಳೆ ಈ ಪ್ರಾಣಿಯು ಅತಿ ಹೆಚ್ಚು ಆಹಾರ ಸೇವನೆ ಮಾಡ್ತಿರೋದನ್ನು ಗಮನಿಸಿದರು. ನಾಯಿಗಿಂತಾ ಹೆಚ್ಚಾಗಿ ಆಹಾರ ಸೇವನೆ ಮಾಡುತ್ತಿತ್ತು. ಅದರಲ್ಲೂ ಹಣ್ಣುಗಳನ್ನು ಹೆಚ್ಚಾಗಿ ಸೇವನೆ ಮಾಡುತ್ತಿತ್ತು. ಈ ನಾಯಿಗಾಗಿ ಪ್ರತಿ ದಿನ ನಾನು ಒಂದು ದೊಡ್ಡ ಬಾಕ್ಸ್ ಹಣ್ಣು ತರುತ್ತಿದೆ, ದಿನಕ್ಕೆ 2 ಬಕೆಟ್ ನೂಡಲ್ಸ್‌ ಕೊಡ್ತಿದ್ದೆ ಎನ್ನುತ್ತಾರೆ, ಸು ಯುನ್. ಆದರೆ, ದಿನೇ ದಿನೇ ಈ ಪ್ರಾಣಿಯು ಕರಡಿ ರೀತಿ ಕಾಣಲು ಆರಂಭವಾಯ್ತು. ಇದಕ್ಕೆ 2 ವರ್ಷ ವಯಸ್ಸು ಆಗುತ್ತಿದ್ದಂತೆಯೇ ಕರಡಿಯಂತೆಯೇ ಕಾಣುತ್ತಿತ್ತು. ಆಗ ನನಗೆ ಇದು ನಾಯಿಯಲ್ಲ, ಕರಡಿ ಅನ್ನೋದು ದೃಢವಾಯ್ತು ಎಂದು ಅವರು ವಿವರಿಸಿದ್ದಾರೆ.

ಕೂಡಲೇ ಈ ಕರಡಿಯ ಕುರಿತು ಮಾಹಿತಿ ಸಂಗ್ರಹಿಸಿದ ಸು ಯುನ್ ಅವರಿಗೆ ಇದು ಅಳಿವಿನಂಚಿನಲ್ಲಿ ಇರುವ ಜೀವ ಸಂಸತಿ ಅನ್ನೋದು ದೃಢಪಟ್ಟಿತು. ಅಷ್ಟೇ ಅಲ್ಲ, ಈ ಕಾಡು ಪ್ರಾಣಿಯನ್ನು ಮನೆಯಲ್ಲಿ ಸಾಕೋದು ಕಾನೂನು ಬಾಹಿರ ಅನ್ನೋ ಸಂಗತಿ ಗೊತ್ತಾಯ್ತು. ಇದಾದ ಬಳಿಕ ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳನ್ನು ಸಂಪರ್ಕ ಮಾಡಿದ ಸು ಯುನ್, ಈ ಪ್ರಾಣಿಯ ಪರಿಶೀಲನೆ ನಡೆಸಿ ಎಂದು ಮನವಿ ಮಾಡಿದರು. ಸು ಯುನ್ ಅವರ ಮನೆಗೆ ಬಂದ ಅಧಿಕಾರಿಗಳಿಗೆ ಈ ಪ್ರಾಣಿಯು ನಾಯಿ ಅಲ್ಲ, ಏಷ್ಯಾದ ಕಪ್ಪು ಕರಡಿ ಅನ್ನೋದು ಮೇಲ್ನೋಟಕ್ಕೇ ದೃಢಪಟ್ಟಿತು. ಜೊತೆಗೆ ಇದೊಂದು ಅಳಿವಿನಂಚಿನಲ್ಲಿ ಇರುವ ಜೀವಿಯಾಗಿದ್ದು, ಇದರ ಸಂರಕ್ಷಣೆ ಅತ್ಯಗತ್ಯ ಎಂದು ಅವರು ಸು ಯುನ್ ಅವರಿಗೆ ಮಾಹಿತಿ ನೀಡಿ ತಮ್ಮ ವಶಕ್ಕೆ ಪಡೆದರು.

ಈ ಕರಡಿಯು ಇನ್ನೂ ಪುಟ್ಟ ಮರಿಯಾಗಿರುವ ಕಾರಣ ಸದ್ಯ 114 ಕೆ. ಜಿ. ತೂಗುತ್ತಿದೆ. ಈ ಕರಡಿಯು ಪೂರ್ಣ ಪ್ರಮಾಣದ ಬೆಳವಣಿಗೆ ಕಂಡ ಬಳಿಕ ಬರೋಬ್ಬರಿ 182 ಕೆ. ಜಿ. ಗಾತ್ರ ತಲುಪುತ್ತದೆ. ಅಷ್ಟೇ ಅಲ್ಲ 3 ಮೀಟರ್ ಉದ್ದ ಬೆಳೆಯುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸದ್ಯ ಈ ಜೀವಿಯನ್ನು ಸು ಯುನ್ ಅವರ ಮನೆಯಿಂದ ತೆರವು ಮಾಡಲಾಗಿದೆ. ವನ್ಯ ಜೀವಿ ಸಂರಕ್ಷಣಾ ಕೇಂದ್ರಕ್ಕೆ ಕರೆ ತರಲಾಗಿದ್ದು, ಇದರ ಮೇಲೆ ನಿಗಾ ವಹಿಸಲಾಗಿದೆ.

suddiyaana