ರೋಗಿಗಳಿಗೆ ಸಿಗುವ ಔಷಧಿಯೂ ಸೇಫ್ ಅಲ್ಲ..! – 5 ಕೋಟಿ ನಕಲಿ ಮೆಡಿಸಿನ್ ಜಪ್ತಿ, ಸಚಿವ ಖಾದರ್ ವಾರ್ನಿಂಗ್ ಏನು?
ICUನಲ್ಲೂ ನಕಲಿ ಔಷಧಿಗಳು ಪತ್ತೆ! – ಕ್ಯಾನ್ಸರ್, ಕಿಡ್ನಿ ಸಂಬಂಧಿ ರೋಗಿಗಳೇ ದಂಧೆಕೋರರ ಟಾರ್ಗೆಟ್

ರೋಗಿಗಳಿಗೆ ಸಿಗುವ ಔಷಧಿಯೂ ಸೇಫ್ ಅಲ್ಲ..! – 5 ಕೋಟಿ ನಕಲಿ  ಮೆಡಿಸಿನ್ ಜಪ್ತಿ, ಸಚಿವ ಖಾದರ್ ವಾರ್ನಿಂಗ್ ಏನು?ICUನಲ್ಲೂ ನಕಲಿ ಔಷಧಿಗಳು ಪತ್ತೆ! – ಕ್ಯಾನ್ಸರ್, ಕಿಡ್ನಿ ಸಂಬಂಧಿ ರೋಗಿಗಳೇ ದಂಧೆಕೋರರ ಟಾರ್ಗೆಟ್

ನಿಜಕ್ಕೂ ಬೆಚ್ಚಿಬೀಳಿಸುವ ಸುದ್ದಿಯಿದು. ರೋಗ ಬಂತು ಅಂತಾ ಆಸ್ಪತ್ರೆಗೆ ಹೋದರೆ ಅಲ್ಲೂ ಕೂಡಾ ಮೋಸ. ಹೌದು. ಆರೋಗ್ಯ ಇಲಾಖೆ ನಡೆಸಿದ ದಾಳಿಯಿಂದಾಗಿ ಜನ ಶಾಕ್ ಆಗಿದ್ದಾರೆ. ಯಾಕೆಂದರೆ, 5 ಕೋಟಿ ಮೌಲ್ಯದ ನಕಲಿ ಔಷಧಿ ಜಪ್ತಿಯಾಗಿದೆ.

ಇದನ್ನೂ ಓದಿ:ಈ ಭಾರಿ ಅಂಬಾರಿ ಹೊರಲ್ಲ ಅಭಿಮನ್ಯು – ಕ್ಯಾಪ್ಟನ್ ಅಭಿಮನ್ಯುಗೆ ಆಗಿದ್ದೇನು?

ರೋಗಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ದಂಧೆಕೋರರನ್ನು ಆರೋಗ್ಯ ಇಲಾಖೆ ಹೆಡೆಮುರಿ ಕಟ್ಟಿದೆ. ಕ್ಯಾನ್ಸರ್​, ಕಿಡ್ನಿ ಹಾಗೂ ಐಸಿಯುನಲ್ಲಿ ಬಳಸೋ ದುಬಾರಿ ಔಷಧಿಗಳನ್ನೇ ನಕಲು ಮಾಡಿರೋ ದಂಧೆಕೋರರು ಬಲೆಗೆ ಬಿದ್ದಿದ್ದಾರೆ. ಈ ಮೂಲಕ ರಾಜ್ಯಾದ್ಯಂತ ನಕಲಿ ಔಷಧಗಳು ದಂಧೆ ಜೋರಾಗಿದೆ ಅನ್ನೋ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ.  ಬಿಡದಿ ಸಮೀಪದ ಅಕ್ರಮ ಔಷಧಿ ತಯಾರಿಕಾ ಘಟಕದ ಮೇಲೆ FDA ಅಧಿಕಾರಿಗಳು ದಾಳಿ ನಡೆಸಿದ್ದು, ಲೈಸೆನ್ಸ್ ಇಲ್ಲದೆ ನಕಲಿ ಔಷಧಿ ತಯಾರಿಸುತ್ತಿದ್ದ ಜಾಲ ಪತ್ತೆಯಾಗಿದೆ. ಪ್ರತಿಷ್ಠಿತ ಬಹುರಾಷ್ಟ್ರೀಯ ಔಷಧ ಕಂಪನಿಗಳ ಹೆಸರಿನಲ್ಲಿ ನಕಲಿ ಔಷಧಿ ತಯಾರಿಸಿ.  ಪ್ಯಾಕಿಂಗ್ ಮತ್ತು ಲೇಬಲಿಂಗ್ ಮಾಡುತ್ತಿದ್ದ ಆರೋಪ ಕೇಳಿ ಬಂದಿದೆ. ಈ ಕಂಪನಿಯಲ್ಲಿ ಒಟ್ಟು 4,91,49,575 ಮೌಲ್ಯದ ಔಷಧಿ ಮತ್ತು ಇತರೆ ಸಾಮಗ್ರಿ ವಶಕ್ಕೆ ಪಡೆಯಲಾಗಿದೆ. ದಾಳಿಯಲ್ಲಿ ವಿವಿಧ ಕಂಪನಿಗಳ ಹೆಸರಿನಲ್ಲಿ ತಯಾರಿಸಿದ್ದ ನಕಲಿ ಇಂಜೆಕ್ಷನ್‌ಗಳು ಮತ್ತು ಔಷಧಿಗಳು ಪತ್ತೆಯಾಗಿದೆ.

ವಶಕ್ಕೆ ಪಡೆದ ಔಷಧಿಗಳಲ್ಲಿ Pfizer ಸೇರಿದಂತೆ ಪ್ರಮುಖ MNC ಕಂಪನಿಗಳ ಹೆಸರಿನ ಉತ್ಪನ್ನಗಳು, ನಕಲಿ ಔಷಧಿಗಳ ಜೊತೆಗೆ ಬಾಟಲ್, ಬಾಕ್ಸ್, ಕ್ಯಾಪ್,ಸ್ಟಾಪರ್, ಲೇಬಲ್ ಹಾಗೂ ಪ್ಯಾಕಿಂಗ್ ಸಾಮಗ್ರಿ ಜಪ್ತಿ ಮಾಡಿದ್ದಾರೆ. ಪ್ರತಿಷ್ಠಿತ MNC ಕಂಪನಿಗಳ ಹೆಸರನ್ನು ಬಳಸಿಕೊಂಡು ನಕಲಿ ಔಷಧಿಗಳಿಗೆ ಬ್ರ್ಯಾಂಡ್ ರೂಪ ಬಾಟಲ್‌ಗಳಿಗೆ ಲೇಬಲ್ ಅಂಟಿಸಿ, ಕ್ಯಾಪ್,ಸ್ಟಾಪರ್ ಹಾಕಿ ಮಾರುಕಟ್ಟೆಗೆ ರವಾನಿಸಲು ಸಿದ್ಧಪಡಿಸಲಾಗುತ್ತಿತ್ತು ಔಷಧಿಗಳ ನಕಲಿ ತಯಾರಿಕೆ ಜೊತೆಗೆ ಪ್ಯಾಕಿಂಗ್ ಮತ್ತು ಲೇಬಲಿಂಗ್‌ನ ಸಂಪೂರ್ಣ ವ್ಯವಸ್ಥೆ ಘಟಕದಲ್ಲೇ ಇತ್ತು. ಕೆಲವು ಔಷಧಿಗಳಲ್ಲಿ ಅವಧಿ ಮೀರಿದ ಉತ್ಪನ್ನಗಳೂ ಪತ್ತೆಯಾಗಿವೆ.

ಇದೀಗ ಪತ್ತೆಯಾದ  ಔಷಧಿಗಳು ಈಗಾಗಲೇ ಮಾರುಕಟ್ಟೆಗೆ ಹೋಗಿವೆಯೇ ಎಂಬುದರ ಬಗ್ಗೆ FDA ಅಧಿಕಾರಿಗಳಿಂದ ತನಿಖೆ ನಡೆಸಲಾಗುತ್ತದೆ ಎಂದು ಸಚಿವ ಖಾದರ್ ಎಚ್ಚರಿಕೆ ನೀಡಿದ್ದಾರೆ.  ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಯುಟಿ ಖಾದರ್ ಅವ್ರು, ಬೇರೆ ರಾಷ್ಟ್ರ, ರಾಜ್ಯಗಳ ನಕಲಿ ಔಷಧಿಗಳಿಂದ ಮಾತ್ರೆ ತಂದು ಇಲ್ಲಿ ಮಲ್ಟಿನ್ಯಾಷನಲ್ ಕಂಪನಿ ಲೇಬಲ್ ಹಾಕಿದ್ದಾರೆ. ಐಸಿಯುನಲ್ಲಿ ಬಳಸುವ ಔಷಧಿ ಕೂಡ ನಕಲಿ ಮಾಡಿದ್ದಾರೆ. ಯಾವೆಲ್ಲಾ ಆಸ್ಪತ್ರೆಗಳಿಗೆ ಇದು ತಲುಪಿದೆ ಅನ್ನೋದನ್ನ ಪರೀಕ್ಷಿಸಿ ಕ್ರಮ ತೆಗೆದುಕೊಳ್ಳೋದಾಗಿ ಸಚಿವರು ತಿಳಿಸಿದ್ದಾರೆ.

Sulekha

Leave a Reply

Your email address will not be published. Required fields are marked *