ನಿರೂಪಕಿ, ನಟಿ ಅನುಶ್ರೀ ಮದುವೆಗೆ ಕೌಂಟ್‌ಡೌನ್ – ಆಗಸ್ಟ್ 28ರಂದು ಬೆಂಗಳೂರಿನ ರೆಸಾರ್ಟ್‌ನಲ್ಲಿ ವಿವಾಹ

ನಿರೂಪಕಿ, ನಟಿ ಅನುಶ್ರೀ ಅವರ ಮದುವೆಗೆ ಕೌಂಟ್‌ಡೌನ್ ಶುರುವಾಗಿದೆ. ಇದೇ ತಿಂಗಳ 28ರಂದು ಅನುಶ್ರೀ ಮದುವೆಯಾಗಲಿದ್ದಾರೆ. ಕೊಡಗು ಮೂಲದ ರೋಷನ್ ಜೊತೆ ಆಗಸ್ಟ್ 28 ರಂದು ಅನುಶ್ರೀಯವರ ವಿವಾಹ ಕಾರ್ಯಕ್ರಮ ನಡೆಯಲಿದೆ.
ಇದನ್ನೂ ಓದಿ:ಶಿವಣ್ಣ, ಉಪ್ಪಿ, ರಾಜ್ ಬಿ ಶೆಟ್ರ ’45’ ಸಿನಿಮಾ ರಿಲೀಸ್ ಗೆ ಮುಹೂರ್ತ ಫಿಕ್ಸ್! – ಯಾವಾಗ ಚಿತ್ರ ಬಿಡುಗಡೆ ಆಗಲಿದೆ?
ನಿರೂಪಕಿ, ನಟಿ ಅನುಶ್ರೀ ಅವರ ಮದುವೆಗೆ ಸಕಲ ಸಿದ್ಧತೆಗಳು ಶುರುವಾಗಿದೆ. ಬೆಂಗಳೂರಿನ ಹೊರವಲಯದ ರೆಸಾರ್ಟ್‌ನಲ್ಲಿ ಮದುವೆ (Marriage) ಕಾರ್ಯಕ್ರಮ ನಡೆಯಲಿದೆ. ರೋಷನ್ ಮತ್ತು ಅನುಶ್ರೀ ಮದುವೆ ಆಗಸ್ಟ್ 28ರ ಬೆಳಗ್ಗೆ 10:56 ಶುಭ ಮುಹೂರ್ತದಲ್ಲಿ ನಡೆಯಲಿದೆ. ರೋಷನ್ ಅವರು ರಾಮಮೂರ್ತಿ ಅವರ ಪುತ್ರರಾಗಿದ್ದಾರೆ. ನಿರೂಪಕಿ ಅನುಶ್ರೀ ಅವರು ಏಕಾಂಗಿ ನಿರೂಪಣೆಯ ನಂತರ ಅರ್ಧಾಂಗಿ ಆಗುವ ಹೊಸ ಮನ್ವಂತರ’ ಎಂದು ಆಮಂತ್ರಣ ಪತ್ರಿಕೆಯಲ್ಲಿ ಬರೆಯಿಸಿದ್ದಾರೆ.
ಅನುಶ್ರೀ ವಯಸ್ಸು 37.. ಹೀಗಾಗಿ ಅನುಶ್ರೀ ಮದುವೆ ಬಗ್ಗೆ ಸಾಕಷ್ಟು ಗಾಸಿಪ್ ಹರಿದಾಡಿತ್ತು.. ಕೆಲ ಫೇಮಸ್ ನಟರೊಂದಿಗೆ ಹೆಸ್ರು ತಳುಕುಹಾಕಿಕೊಂಡಿತ್ತು. ಕೆಲವರಂತೂ ಅನುಶ್ರೀಯ ಫೋಟೋವನ್ನ ಬೇರೆ ನಟರ ಫೋಟೋ ಜೊತೆ ಎಡಿಟ್ ಮಾಡಿ ವೈರಲ್ ಮಾಡಿದ್ದೂ ಇದೆ. ಹೀಗಾಗೇ ಅನುಶ್ರೀ ಆದಷ್ಟು ಬೇಗ ಸಿಹಿಸುದ್ದಿ ಕೊಡ್ತೀನಿ ಅಂತ ಹೇಳಿದ್ರು. ಅಂತೂ ಅನುಶ್ರೀ ಆಗಸ್ಟ್ 28ರಂದು ಹಸೆಮಣೆ ಏರಲಿದ್ದಾರೆ. ಮದುವೆ ಸರಳವಾಗಿ ನಡೆಯಲಿದೆ. ಅದ್ದೂರಿಯಾಗಿ ರಿಸೆಪ್ಷನ್ ಆಯೋಜಿಸಲು ಎರಡೂ ಕುಟುಂಬಗಳು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ ಎನ್ನಲಾಗ್ತಿದೆ. ಈಗಾಗಲೇ ಮದುವೆಯ ತಯಾರಿಗಳು ಶುರುವಾಗಿದ್ದು, ಅನುಶ್ರೀ ಮತ್ತು ರೋಷನ್ ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ. ಅನುಶ್ರೀ ಮಂಗಳೂರು ಮೂಲದವರು. ಸುರತ್ಕಲ್ ನಲ್ಲಿ ಹುಟ್ಟಿ ಬೆಳದ ಈಕೆ ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರ ತಂದೆ ಚಿಕ್ಕ ವಯಸ್ಸಿನಲ್ಲಿಯೇ ಮನೆ ಬಿಟ್ಟು ಹೋಗಿದ್ದರು. ಆ ಬಳಿಕ ಅವರ ತಾಯಿಯೇ ಅನುಶ್ರೀಯನ್ನು, ಅವರ ತಮ್ಮನನ್ನು ಸಾಕಿದ್ದರು. ಬಡ ಕುಟುಂಬದಲ್ಲಿ ಬೆಳೆದ ಈಕೆ ಅಮ್ಮನಿಗೆ ಸಹಾಯ ಆಗ್ಲಿ ಅಂತ ಓದುವಾಗ ಪಾರ್ಟ್ಟೈಮ್ ಕೆಲಸ ಮಾಡಿದ್ದೂ ಇದೆ. ಅದಾದ ಬಳಿಕ ಮಹಾನಗರಿ ಬೆಂಗಳೂರಿಗೆ ಕಾಲಿಟ್ರು. ಸಿಲಿಕಾನ್ ಸಿಟಿಗೆ ಬಂದ ಅನುಶ್ರೀ ಆಯ್ಕೆ ಮಾಡಿಕೊಂಡಿದ್ದು ನಿರೂಪಣೆಯನ್ನ.. ವೃತ್ತಿಬದುಕಿಗೆ ಕಾಲಿಟ್ಟ ಬಳಿಕ ಅನುಶ್ರೀ ಇಡೀ ಕುಟುಂಬದ ಜವಾಬ್ದಾರಿಯನ್ನು ಹೊತ್ತಿಕೊಂಡಿದ್ದಾರೆ. ಇದೀಗ ಬಡತನದಲ್ಲಿ ಬೆಳದ ಈ ಕುಡ್ಲದ ಹುಡುಗಿ ಫೇಮಸ್ ಆಂಕರ್ ಆಗಿದ್ದಾರೆ. ಬಹಳಷ್ಟು ರಿಯಾಲಿಟಿ ಶೋಗಳ ನಿರೂಪಣೆ ಮಾಡಿರುವ ಅನುಶ್ರೀ ಸಾವಿರಾರು ಇವೆಂಟ್ಗಳ ನಿರೂಪಣೆ ಮಾಡಿದ್ದಾರೆ. ಬಿಗ್ ಬಾಸ್ ಕನ್ನಡ, ಡ್ಯಾನ್ಸ್ ಶೋನಲ್ಲಿಯೂ ಅನುಶ್ರೀ ಅವರು ಭಾಗವಹಿಸಿದ್ದರು. ಜೊತೆಗೆ, ‘ಬೆಂಕಿಪಟ್ಣ’ ಸೇರಿದಂತೆ, ಕೆಲವು ಸಿನಿಮಾದಲ್ಲಿಯೂ ನಟಿಸಿದ್ದಾರೆ. ‘ಉಪ್ಪು ಹುಳಿ ಖಾರ’ ಸಿನಿಮಾದಲ್ಲಿಯೂ ಅವರು ನಟಿಸಿದ್ದರು.

ನೋಡಿರಿ

