ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ – ʻಜೈ ಶ್ರೀರಾಮ್, ಜೈ ಶ್ರೀರಾಮ್ ರಾಜಾರಾಮ್ʼ ಹಾಡಿಗೆ ನೂರಾರು ಟೆಸ್ಲಾ ಕಾರು ಡಾನ್ಸ್!

ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಟಾಪನೆಗೆ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ದೇಶ ವಿದೇಶಗಳಲ್ಲಿ ಶ್ರೀರಾಮನ ಜಪ ಶುರುವಾಗಿದೆ. ಅಮೆರಿಕದಲ್ಲೂ ಶ್ರೀರಾಮನ ಭಕ್ತರಿದ್ದಾರೆ. ಅಲ್ಲಿಯೂ ಸಂಭ್ರಮ ಮನೆಮಾಡಿದೆ. ವಿಶ್ವದ ಪ್ರತಿಷ್ಠಿತ ಕಾರು ಕಂಪನಿಯಾದ ಟೆಸ್ಲಾ ಕಾರು ಆದಿಪುರುಷ್ ಚಿತ್ರದ ʻಜೈ ಶ್ರೀರಾಮ್, ಜೈ ಶ್ರೀರಾಮ್ ರಾಜಾರಾಮ್ʼ ಹಾಡಿಗೆ ವಿಶೇಷ ಗೌರವ ಸೂಚಿಸಿದೆ.
ಇದನ್ನೂ ಓದಿ: ಮೈದಾನಕ್ಕೆ ನುಗ್ಗಿ ಕೊಹ್ಲಿ ಪಾದ ಮುಟ್ಟಿ ತಬ್ಬಿಕೊಂಡ ಅಭಿಮಾನಿ – ಭದ್ರತೆ ಉಲ್ಲಂಘಿಸಿದ ಅಭಿಮಾನಿಗೆ ಕಾನೂನು ಸಂಕಷ್ಟ
ಹೌದು, ವಿದೇಶಗಳಲ್ಲೂ ಶ್ರೀರಾಮನ ಮಹಿಮೆ ಕಂಡುಬರುತ್ತಿವೆ. ಪ್ರಾಣಪ್ರತಿಷ್ಠಾಪನೆಯ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕಾದುಕುಳಿತಿವೆ. ಈ ನಡುವೆ ವಿಶ್ವದ ಪ್ರತಿಷ್ಠಿತ ಕಾರು ಕಂಪನಿಯಾದ ಟೆಸ್ಲಾ ಆದಿಪುರುಷ್ ಚಿತ್ರದ ʻಜೈ ಶ್ರೀರಾಮ್, ಜೈ ಶ್ರೀರಾಮ್ ರಾಜಾರಾಮ್ʼ ಹಾಡಿಗೆ ವಿಶೇಷ ಗೌರವ ಸೂಚಿಸುವುದಕ್ಕಾಗಿ ತನ್ನ ಕಾರುಗಳನ್ನು ಬಳಸಿಕೊಂಡು ಲೈಟ್ ಮೂಲಕ ಡಾನ್ಸ್ ಮಾಡಿಸಿದೆ.
ವಿಶ್ವಹಿಂದೂ ಪರಿಷತ್ ಅಮೆರಿಕದ ಘಟಕ ಆಯೋಜಿಸಿದ್ದ ಮ್ಯೂಸಿಕಲ್ ಲೈಟ್ಶೋ ಕಾರ್ಯಕ್ರಮದಲ್ಲಿ ಟೆಸ್ಲಾ ಕಂಪನಿಯ ಕಾರುಗಳ ಲೈಟ್ ಗಳು ಡಾನ್ಸ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಈ ಹಿಂದೆಯೂ ನೂರಾರು ಕಾರುಗಳನ್ನು ಸಾಲು-ಸಾಲಾಗಿ ನಿಲ್ಲಿಸಿ, ಆರ್ಆರ್ಆರ್ ಚಿತ್ರದ ನಾಟು ನಾಟು ಹಾಡಿಗೆ ಇದೇ ರೀತಿ ಡಾನ್ಸ್ ಮಾಡಿಸಲಾಗಿತ್ತು. ಇದೀಗ, ದೇಶದೆಲ್ಲೆಡೆ ಶ್ರೀರಾಮನ ಸದ್ದು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಶ್ರೀರಾಮನಿಗೆ ನೃತ್ಯದ ಮೂಲಕ ವಿಶೇಷ ಗೌರವವನ್ನು ಟೆಸ್ಲಾ ಕಂಪನಿ ಸಲ್ಲಿಸಿದೆ.
ಈ ವೀಡಿಯೋವನ್ನು ಟೆಸ್ಲಾ ಕಂಪನಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದೆ. ಇದಕ್ಕೆ ರಾಮಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
#WATCH | Vishwa Hindu Parishad (VHP) of America organised an Epic Tesla Musical Light show in Maryland ahead of the Ram Mandir ‘Pran Pratishtha’ in Ayodhya on January 22. pic.twitter.com/8vG8WhHMIO
— ANI (@ANI) January 14, 2024