ಹೊಸವರ್ಷಕ್ಕೆ ಶುರುವಾಯ್ತು ಕೌಂಟ್‌ಡೌನ್ – ಬೆಂಗಳೂರಲ್ಲಿ 30 ಫ್ಲೈ ಓವರ್ ಬಂದ್
ಸಿಲಿಕಾನ್ ಸಿಟಿ ಪೊಲೀಸರಿಂದ ಹೈಅಲರ್ಟ್ -1 ಲಕ್ಷಕ್ಕೂ ಅಧಿಕ ಸಿಸಿಟಿವಿಗಳ ಅಳವಡಿಕೆ

ಹೊಸವರ್ಷಕ್ಕೆ ಶುರುವಾಯ್ತು ಕೌಂಟ್‌ಡೌನ್ – ಬೆಂಗಳೂರಲ್ಲಿ 30 ಫ್ಲೈ ಓವರ್ ಬಂದ್ಸಿಲಿಕಾನ್ ಸಿಟಿ ಪೊಲೀಸರಿಂದ ಹೈಅಲರ್ಟ್ -1 ಲಕ್ಷಕ್ಕೂ ಅಧಿಕ ಸಿಸಿಟಿವಿಗಳ ಅಳವಡಿಕೆ

ಬೆಂಗಳೂರು : 2022ಗೆ ಬಾಯ್ ಹೇಳಿ, 2023ಗೆ ವೆಲ್‌ಕಮ್ ಮಾಡುವ ಟೈಮ್ ಬಂದೇ ಬಿಟ್ಟಿದೆ. ಹೊಸ ವರ್ಷಕ್ಕೆ ಕೌಂಟ್‌ಡೌನ್ ಶುರುವಾಗುತ್ತಿದ್ದಂತೆ ಸಿಲಿಕಾನ್ ಸಿಟಿ ಪೊಲೀಸರು ಕೂಡಾ ಹೈ ಅಲರ್ಟ್ ಆಗಿದ್ದಾರೆ. ಡಿಸೆಂಬರ್ 31ರಂದು ರಾತ್ರಿ ಸಿಲಿಕಾನ್ ಸಿಟಿ ಝಗಮಗಿಸಲಿದ್ದು, ಪಾರ್ಟಿ ಗಮ್ಮತ್ತು ರಂಗೇರಲಿದೆ. ಹೀಗಾಗಿಯೇ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೂ ನಗರದ 30 ಫ್ಲೈ ಓವರ್ ಗಳ ಮೇಲೆ ದ್ವಿಚಕ್ರ ಸೇರಿ ಎಲ್ಲ ವಾಹನ ಸಂಚಾರ ನಿಷೇಧಿಸಲಾಗಿದೆ. ಡಿಸೆಂಬರ್ 31ರ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೂ ಏರ್‌ಪೋರ್ಟ್ ಫ್ಲೈ ಓವರ್ ಬಿಟ್ಟು ಇನ್ನುಳಿದ 30 ಫ್ಲೈ ಓವರ್ ಬಂದ್ ಮಾಡಲಾಗುತ್ತಿದೆ.

ಇದನ್ನೂ ಓದಿ:  ಹೊಸ ವರ್ಷಾಚರಣೆಗೆ ನಮ್ಮ ಮೆಟ್ರೋ ಸಂಚಾರ ವಿಸ್ತರಣೆ – ಡಿ. 31 ರಂದು ರಾತ್ರಿ 3 ಗಂಟೆವರೆಗೆ ಮೆಟ್ರೋ ಸಂಚಾರ

ಮಾರ್ಕೆಟ್ ಫ್ಲೈ ಓವರ್, ರಿಚ್ಮಂಡ್ ಸರ್ಕಲ್ ಫ್ಲೈ ಓವರ್, ಸಿಲ್ಕ್ ಬೊರ್ಡ್ ಫ್ಲೈ ಓವರ್, ಆನಂದರಾವ್ ಸರ್ಕಲ್ ಫ್ಲೈ ಓವರ್, ಸೇರಿದಂತೆ ಒಟ್ಟು 30 ಫ್ಲೈ ಓವರ್ ಮೇಲೆ ವಾಹನ ಸಂಚಾರ ನಿಷೇಧಿಸಲಾಗುತ್ತಿದೆ. ಅಹಿತಕರ ಘಟನೆ ನಡೆಯದಂತೆ ಬೆಂಗಳೂರು ನಗರದಲ್ಲಿ 1 ಲಕ್ಷಕ್ಕೂ ಅಧಿಕ ಸಿಸಿಟಿವಿಗಳ ಅಳವಡಿಕೆ ಮಾಡಲಾಗುತ್ತಿದೆ. ಚರ್ಚ್ ಸ್ಟ್ರೀಟ್, ಬ್ರಿಗೇಡ್ ರಸ್ತೆಯೊಂದರಲ್ಲೇ ಸಾವಿರಕ್ಕೂ ಹೆಚ್ಚು ಸಿಸಿಟಿವಿಗಳನ್ನು ಅಳವಡಿಸಲಾಗುತ್ತಿದೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗಳ ಸುತ್ತಮುತ್ತ 37 ಸೇಫ್ ಹೌಸ್ ನ್ಯೂ ಇಯರ್ ಹಾಟ್ ಸ್ಪಾಟ್ನಲ್ಲಿ ವುಮೆನ್ ಸೇಫ್ ಹೌಸ್ ರೆಡಿ ಮಾಡಲಾಗುತ್ತಿದೆ. ಮಹಿಳೆಯರು ಹಾಗೂ ತುರ್ತು ಆರೋಗ್ಯ ಸಮಸ್ಯೆಯಾದವರಿಗಾಗಿ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗಳ ಸುತ್ತಮುತ್ತ 37 ಸೇಫ್ ಹೌಸ್ ನಿರ್ಮಾಣಗೊಳ್ಳುತ್ತಿದೆ.

suddiyaana