ಟೀಂ ಇಂಡಿಯಾ ಮೊದಲ ವಿಶ್ವಕಪ್ ಪಂದ್ಯಕ್ಕೆ ಕೌಂಟ್‌ಡೌನ್ – ಐರ್ಲೆಂಡ್​ ವಿರುದ್ಧ ಕಾದಾಟ

ಟೀಂ ಇಂಡಿಯಾ ಮೊದಲ ವಿಶ್ವಕಪ್ ಪಂದ್ಯಕ್ಕೆ ಕೌಂಟ್‌ಡೌನ್ –  ಐರ್ಲೆಂಡ್​ ವಿರುದ್ಧ ಕಾದಾಟ

ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಮೊದಲ ವಿಶ್ವಕಪ್ ಪಂದ್ಯ ಆಡ್ತಿದೆ. ಗ್ರೂಪ್ ‘ಎ’ನಲ್ಲಿ ಭಾರತ ಕ್ರಿಕೆಟ್ ತಂಡ ಐರ್ಲೆಂಡ್ ಕ್ರಿಕೆಟ್ ತಂಡವನ್ನು ಇವತ್ತು ಎದುರಿಸಲಿದೆ. ಈ ಪಂದ್ಯಕ್ಕೆ ಇಲ್ಲಿನ ನಾಸೌ ಕೌಂಟಿ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ಆತಿಥ್ಯ ವಹಿಸಿದೆ. ಈಗಾಗ್ಲೇ ಟೀಮ್ ಇಂಡಿಯಾ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು 60 ರನ್ ಅಂತರದ ಗೆಲುವು ಸಾಧಿಸಿದೆ. ಇದೀಗ ರೋಹಿತ್ ಶರ್ಮಾ ಪಡೆ ಅದೇ ಲಯವನ್ನು ಮುಂದುವರೆಸುವ ವಿಶ್ವಾಸದಲ್ಲಿದೆ.  ಟಿ20 ಕ್ರಿಕೆಟ್ ಇತಿಹಾಸದಲ್ಲಿ ಭಾರತ ಹಾಗೂ ಐರ್ಲೆಂಡ್ ತಂಡಗಳು 7 ಬಾರಿ ಮುಖಾಮುಖಿಯಾಗಿವೆ. 7 ಬಾರಿಯೂ ಐರ್ಲೆಂಡ್ ಎದುರು ಭಾರತ ಗೆಲುವಿನ ನಗೆ ಬೀರಿದೆ.

ಇವತ್ತು ವಿಶ್ವಕಪ್‌ನ ಫಸ್ಟ್ ಮ್ಯಾಚ್ ಆಡ್ತಿರೋ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ರೆಡಿಯಾಗಿದೆ. ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್ ಹಾಗೂ ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿಯುವ ರೇಸ್ ನಲ್ಲಿದ್ದಾರೆ. ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿದರೆ ಯಶಸ್ವಿ ಜೈಸ್ವಾಲ್ ಹೊರಬೀಳಲಿದ್ದಾರೆ. ಅಲ್ಲದೆ ಕೊಹ್ಲಿಯ ಸ್ಥಾನದಲ್ಲಿ ಆಲ್​ರೌಂಡರ್ ಶಿವಂ ದುಬೆಗೆ ಚಾನ್ಸ್ ಸಿಗಬಹುದು. ಇನ್ನು ಯಶಸ್ವಿ ಜೈಸ್ವಾಲ್ ಹಾಗೂ ರೋಹಿತ್ ಶರ್ಮಾ ಓಪನರ್​ಗಳಾಗಿ ಕಣಕ್ಕಿಳಿದರೆ ವಿರಾಟ್ ಕೊಹ್ಲಿ 3ನೇ ಕ್ರಮಾಂಕದಲ್ಲಿ ಆಡಬಹುದು. ಇನ್ನು 4ನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಕಣಕ್ಕಿಳಿಯುವುದು ಖಚಿತ. ವಿಕೆಟ್ ಕೀಪರ್ ಬ್ಯಾಟರ್ ಆಗಿ ರಿಷಭ್ ಪಂತ್​ ಪ್ಲೇಯಿಂಗ್ ಲೆವೆನ್ ನಲ್ಲಿ ಆಡಲಿದ್ದಾರೆ.

ಟಿ20 ವಿಶ್ವಕಪ್​ನ 8ನೇ ಪಂದ್ಯದಲ್ಲಿ ಭಾರತ ಮತ್ತು ಐರ್ಲೆಂಡ್ ತಂಡಗಳು ಕಣಕ್ಕಿಳಿಯಲಿದೆ. ನ್ಯೂಯಾರ್ಕ್​ನಲ್ಲಿ ಇಂದು ನಡೆಯಲಿರುವ ಈ ಪಂದ್ಯಕ್ಕೆ ಇದೀಗ ಮಳೆ ಭೀತಿ ಎದುರಾಗಿದೆ. ಏಕೆಂದರೆ ಹವಾಮಾನ ವರದಿ ಪ್ರಕಾರ ನ್ಯೂಯಾರ್ಕ್​ ಭಾಗದಲ್ಲಿ ಇಂದು ಮಳೆಯಾಗುವ ಸಾಧ್ಯತೆಯಿದೆ. ಭಾರತ ಮತ್ತು ಐರ್ಲೆಂಡ್ ನಡುವಣ ಪಂದ್ಯವು ಅಮೆರಿಕ ಕಾಲಮಾನ ಬೆಳಿಗ್ಗೆ 10.30 ರಿಂದ ಶುರುವಾಗಲಿದೆ. ಈ ವೇಳೆಗೆ ಮಳೆಯಾಗುವ ಸಾಧ್ಯತೆ ತುಂಬಾ ಕಡಿಮೆಯಿದೆ ಅಂತಾ ಹವಾಮಾನ ಇಲಾಖೆ ತಿಳಿಸಿದೆ. ಒಂದು ವೇಳೆ ಮಳೆಯಿಂದಾಗಿ ಪಂದ್ಯ ರದ್ದಾದರೆ ಉಭಯ ತಂಡಗಳು ತಲಾ ಒಂದೊಂದು ಅಂಕಗಳನ್ನು ಹಂಚಿಕೊಳ್ಳಲಿದೆ. ಇತ್ತ ಈ ಪಂದ್ಯದಲ್ಲಿ ಭಾರತ ತಂಡವೇ ಗೆಲ್ಲುವ ಫೇವರೇಟ್ ಆಗಿದ್ದು, ಹೀಗಾಗಿ ಇಂದಿನ ಪಂದ್ಯವು ಮಳೆಯಿಂದಾಗಿ ರದ್ದಾದರೆ ಐರ್ಲೆಂಡ್ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ.

T20 ವಿಶ್ವಕಪ್​​ನಲ್ಲಿ ಟೀಮ್ ಇಂಡಿಯಾದ ಜೊತೆ ಐರ್ಲೆಂಡ್​ ಕಾದಾಡಲಿದೆ. ​​​​ ಭಾರತವೇ ಗೆಲ್ಲುವ ಫೇವರಿಟ್ ತಂಡವಾದರೂ ಐರ್ಲೆಂಡ್​​ ತಂಡವನ್ನ ಹಗುರವಾಗಿ ತೆಗೆದುಕೊಳ್ಳುವಂತಿಲ್ಲ. ಬಲಾಢ್ಯ ತಂಡಗಳಿಗೆ ಟಕ್ಕರ್ ಕೊಡಬಲ್ಲ ಕೆಪಾಸಿಟಿ ಐರಿಷ್​​ ತಂಡಕ್ಕಿದೆ. ಟೀಮ್ ಇಂಡಿಯಾ ಇಂದು ಐರ್ಲೆಂಡ್ ವಿರುದ್ಧ ಬಹಳ ಎಚ್ಚರಿಕೆಯಿಂದ ಆಡಬೇಕಿದೆ. ಬೆರಳು ಕೊಟ್ರೆ ಅಂಗೈಯೇ ನುಂಗಬಲ್ಲ ತಂಡವೆಂದೇ ಫೇಮಸ್ ಆಗಿದೆ ಐರಿಷ್ ಟೀಮ್ . ಐರ್ಲೆಂಡ್​​ ಯಾಕೆ ಡೇಂಜರಸ್​ ಅನ್ನೋದಕ್ಕೆ ಕಳೆದ ಟಿ20 ವಿಶ್ವಕಪ್​ನಲ್ಲಿ ಐರ್ಲೆಂಡ್​ ಮಾಜಿ ಚಾಂಪಿಯನ್​ ವೆಸ್ಟ್​ಇಂಡೀಸ್​ಗೆ ಸೋಲಿನ ರುಚಿ ತೋರಿಸಿತ್ತು. ಇದೇ ಪಂದ್ಯಾವಳಿಯಲ್ಲಿ ಐರ್ಲೆಂಡ್​​​, ಇಂಗ್ಲೆಂಡ್​ ತಂಡಕ್ಕೂ ಬಿಗ್ ಶಾಕ್ ಕೊಟ್ಟಿತ್ತು. ಟಿ20 ಸ್ಪೆಶಲಿಸ್ಟ್​ಗಳಿರೋ ತಂಡವೆಂದೇ ಗುರುತಿಸಲ್ಪಟ್ಟಿದೆ ಐರ್ಲೆಂಡ್. ಹೀಗಾಗಿ ಐರಿಷ್ ಟೀಮ್ ಬಾಲಬಿಚ್ಚದಂತೆ ಕ್ಯಾಪ್ಟನ್ ರೋಹಿತ್ ಟೀಮ್ ನೋಡಿಕೊಳ್ಳಬೇಕಿದೆ.

suddiyaana