ಆರ್ಸಿಬಿ ಮತ್ತು ಸಿಎಸ್ಕೆ ಕದನಕ್ಕೆ ಕೌಂಟ್ಡೌನ್ – RCBಗೆ ಧೋನಿ, ಜಡ್ಡು ಭಯ..!
ಆರ್ಸಿಬಿ ಮತ್ತು ಸಿಎಸ್ಕೆ ಕದನಕ್ಕೆ ಕೌಂಟ್ಡೌನ್ ಸ್ಟಾರ್ಟ್ ಆಗಿದೆ. ಹೈವೋಲ್ಟೇಜ್ ಮ್ಯಾಚ್ನಲ್ಲಿ ಆರ್ಸಿಬಿ ತಂಡದಲ್ಲಿ ಇವತ್ತು ಭಾರೀ ಬದಲಾವಣೆ ನಿರೀಕ್ಷೆ ಮಾಡಲಾಗಿದೆ. ಸ್ಫೋಟಕ ಬ್ಯಾಟ್ಸ್ಮನ್ ವಿಲ್ ಜಾಕ್ಸ್ ಹಾಗೂ ಟೋಪ್ಲಿ ಇವತ್ತು ಆರ್ಸಿಬಿ ಟೀಮ್ನಲ್ಲಿ ಇಲ್ಲ. ಹೀಗಾಗಿ ವಿಲ್ ಜಾಕ್ಸ್ ಸ್ಥಾನವನ್ನು ಆಸ್ಟ್ರೇಲಿಯಾದ ಆಲ್ರೌಂಡರ್ ಮ್ಯಾಕ್ಸ್ವೆಲ್ ತುಂಬುವ ಭರವಸೆಯಿದೆ. ಜೊತೆಗೆ ವೇಗಿ ವೈಶಾಖ್ ವಿಜಯ್ ಕೂಡ ಪ್ಲೇಯಿಂಗ್ -11ರಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ: ಆರ್ಸಿಬಿ Vs ಸಿಎಸ್ಕೆ ಹೈವೋಲ್ಟೇಜ್ ಮ್ಯಾಚ್ – ಈ ರಸ್ತೆಯಲ್ಲಿ ಸಂಚಾರದಲ್ಲಿ ಭಾರಿ ಬದಲಾವಣೆ
ಹೋಮ್ಗ್ರೌಂಡ್ನಲ್ಲಿ ಗೆಲುವಿನ ನಿರೀಕ್ಷೆಯಲ್ಲಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು. ಆದರೆ, ಚೆನ್ನೈ ತಂಡವನ್ನು ಲೈಟ್ ಆಗಿ ತೆಗೆದುಕೊಳ್ಳೋಕೆ ಚಾನ್ಸೇ ಇಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಫಿನಿಷರ್ ಧೋನಿ ಹಾಗೂ ರವೀಂದ್ರ ಜಡೇಜಾ ಭಯವಿದೆ. ಯಾಕಂದ್ರೆ, ಬೆಂಗಳೂರಿನಲ್ಲಿ ಧೋನಿ ದರ್ಬಾರ್ ಜೋರಾಗಿದೆ. ಚಿನ್ನಸ್ವಾಮಿಯಲ್ಲಿ 413 ರನ್ ಸಿಡಿಸಿರುವ ಧೋನಿ, 82.6ರ ಅವರೇಜ್ ಹೊಂದಿದ್ದಾರೆ. ಮತ್ತೊಂದೆಡೆ ಬೌಲಿಂಗ್ನಲ್ಲಿ ಜಡ್ಡು ವಿಲನ್ ಆಗಿ ಕಾಡುವ ಸಾಧ್ಯತೆ ಇದೆ. ಯಾಕಂದ್ರೆ, ಐಪಿಎಲ್ನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ರನ್ನ 6 ಬಾರಿ ಔಟ್ ಮಾಡಿರೋ ಜಡೇಜಾ, ಕೊಹ್ಲಿಗೂ ಕಂಟಕವಾಗಿದ್ದಾರೆ.
ಇನ್ನು ಚೆನ್ನೈ ಟೀಮ್ಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮಹತ್ವದ ಪಂದ್ಯ. ಚೆನ್ನೈ ಟೀಮ್ನಲ್ಲೂ ಕೂಡಾ ಬದಲಾವಣೆ ಕಂಡು ಬರಲಿದೆ. ಸ್ಟಾರ್ ವೇಗಿ ದೀಪಕ್ ಚಹಾರ್ ಇವತ್ತು ಟೀಮ್ಗೆ ಜಾಯ್ನ್ ಆಗಬಹುದು ಎನ್ನಲಾಗ್ತಿದೆ. ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ರೂ. 14 ಕೋಟಿಗೆ ಸಹಿ ಮಾಡಿದ ಚಹಾರ್, ಮೇ 1 ರಿಂದ ಸಿಎಸ್ಕೆ ಪರ ಆಡಿಲ್ಲ. ಇಂಜುರಿಗೆ ತುತ್ತಾದ ಪರಿಣಾಮ ಅವರು ಪಂದ್ಯದಿಂದ ಹೊರಗುಳಿದಿದ್ದರು. ನೆಟ್ಸ್ನಲ್ಲಿ ಬೌಲಿಂಗ್ ಅಭ್ಯಾಸ ಮಾಡುತ್ತಿರುವ ವಿಡಿಯೋವನ್ನು ಈಗ ಚಹಾರ್ ಹಂಚಿಕೊಂಡಿದ್ದಾರೆ. ಹೀಗಾಗಿ ಇವತ್ತು ಚಹರ್ ಎಂಟ್ರಿ ಗ್ಯಾರಂಟಿ. ಮುಂಬೈ ವಿರುದ್ಧದ ಪಂದ್ಯದಲ್ಲಿ ಗೆಲುವಿನೊಂದಿಗೆ ಲಕ್ನೋ ತಂಡ ಈ ಬಾರಿಯ ಐಪಿಎಲ್ಗೆ ವಿದಾಯ ಹೇಳಿದೆ. ಆದ್ರೆ, ಈ ಗೆಲುವಿನ ಬೆನ್ನಲ್ಲೇ ಎಲ್ಎಸ್ಜಿ ತಂಡವು ಪಾಯಿಂಟ್ಸ್ ಟೇಬಲ್ನಲ್ಲಿ ಒಂದು ಸ್ಥಾನ ಜಿಗಿತ ಕಂಡಿದೆ. 7ನೇ ಸ್ಥಾನದಿಂದ 6ನೇ ಸ್ಥಾನಕ್ಕೆ ಜಂಪ್ ಆಗಿದೆ. ಇನ್ನು, ನಮ್ಮ ಆರ್ಸಿಬಿ 7ನೇ ಸ್ಥಾನಕ್ಕೆ ಕುಸಿದಿದೆ. ಇವತ್ತು ಆರ್ಸಿಬಿ ಎಸ್ಕೆ ವಿರುದ್ಧ ಪ್ಲೇ-ಆಫ್ ಡಿಸೈಡರ್ ಪಂದ್ಯವನ್ನಾಡಲಿದೆ. ಇವತ್ತಿನ ಪಂದ್ಯದಲ್ಲಿ ಆರ್ಸಿಬಿ ಸಿಎಸ್ಕೆ ವಿರುದ್ಧ 18 ರನ್ಗಳ ಅಂತರ ಅಥವಾ 18.1 ಓವರ್ ಒಳಗೆ ಗೆಲುವು ಸಾಧಿಸಬೇಕಿದೆ. ಹೀಗಾದರೆ ಆರ್ಸಿಬಿ ಪ್ಲೇ-ಆಫ್ಗೆ ಹೋಗಲಿದೆ.