ರಾಮಮಂದಿರ ಲೋಕಾರ್ಪಣೆಗೆ ಕ್ಷಣಗಣನೆ – ಈ ರಾಜ್ಯಗಳಲ್ಲಿ ಮದ್ಯ ನಿಷೇಧ!
ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಸಕಲ ಸಿದ್ಧತೆಗಳು ನಡೆಯುತ್ತಿದೆ. ಜನವರಿ 22 ರಂದು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು, ಎಲ್ಲೆಲ್ಲೂ ಶ್ರೀರಾಮನ ಜಪ ಶುರುವಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ದಿನವನ್ನು ಮದ್ಯ ಮಾರಾಟ ನಿಷೇಧ ದಿನ ಎಂದು ನಿರ್ಧರಿಸಲಾಗಿದೆ.
ಹೌದು, ಜನವರಿ 22 ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆ ನಡೆಯಲಿದ್ದು, ಆ ದಿನವನ್ನು ಮದ್ಯ ಮಾರಾಟ ನಿಷೇಧ ದಿನ ಎಂದು ಛತ್ತೀಸ್‌ಗಢ ಸರ್ಕಾರ ನಿರ್ಧರಿಸಿದ್ದು, ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ: ರೈಲಿನ ಬೋಗಿಯಲ್ಲಿ ನೇತಾಡಿದ್ರೆ ಹುಷಾರ್! – ಒಳಗೆ ಹೋಗಿ ಅಂತಾ ಪ್ರಯಾಣಿಕರಿಗೆ ನಿಯಮ ಹೇಳಿಕೊಡುತ್ತೆ ಈ ಶ್ವಾನ!
ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರು ತಮ್ಮ ವಿಡಿಯೋವೊಂದನ್ನು ಸೋಛತ್ತೀಸ್‌ಗಢವು ಭಗವಾನ್ ಶ್ರೀರಾಮನ ತಾಯಿಯ ಜನ್ಮಸ್ಥಳವಾಗಿರುವುದು ನಮ್ಮ ಅದೃಷ್ಟ. ಜನವರಿ 22 ರಂದು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಸ್ಥಾನದಲ್ಲಿ ಶ್ರೀ ರಾಮಲಾಲಾ ಪ್ರಾಣ ಪ್ರತಿಷ್ಠ ಸಮಾರಂಭ ನಡೆಯಲಿದೆ. ಈ ಬಗ್ಗೆ ಇಡೀ ಛತ್ತೀಸ್‌ಗಢದಲ್ಲಿ ಸಂತಸದ ವಾತಾವರಣವಿದೆ. ಈ ದಿನ ಇಡೀ ರಾಜ್ಯದಲ್ಲಿ ಹಬ್ಬದ ವಾತಾವರಣ ಇರಲಿದೆ. ದೀಪಾವಳಿಯಂತೆಯೇ ಮನೆಗಳಲ್ಲಿಯೂ ದೀಪಗಳನ್ನು ಬೆಳಗಿಸಲಾಗುತ್ತದೆ. ಇಡೀ ಛತ್ತೀಸ್‌ಗಢದಲ್ಲಿ ಜನವರಿ 22 ರಂದು ಡ್ರೈ ಡೇ( ಮದ್ಯ ನಿಷೇಧ) ದಿನವನ್ನಾಗಿ ಘೋಷಿಸಲು ಛತ್ತೀಸ್‌ಗಢ ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ಇನ್ನು ರಾಮ ಮಂದಿ ಉದ್ಘಾಟನೆ ಇರುವುದರಿಂದ ಜನವರಿ 22 ರಂದು ಅಯೋಧ್ಯೆಯಿಂದ ಸುಮಾರು 84 ಕಿಮೀ ಸುತ್ತಾಮುತ್ತಾ ಮದ್ಯ ನಿಷೇಧ ಮಾಡಲಾಗಿದೆ. ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಕೋಸಿ ಪರಿಕ್ರಮ್ ಮಾರ್ಗದಲ್ಲಿರುವ ಮದ್ಯದಂಗಡಿಯನ್ನು ಕೂಡ ಬೇರೆಡೆಗೆ ರಪ್ತು ಮಾಡಲಾಗಿದೆ ಎಂದು ಅಬಕಾರಿ ಸಚಿವ ನಿತಿನ್ ಅಗರ್ವಾಲ್ ತಿಳಿಸಿದ್ದಾರೆ.