ಲೋಕಸಭಾ ಚುನಾವಣೆ ಮತಎಣಿಕೆಗೆ ಕೌಂಟ್ ಡೌನ್ – ಎಷ್ಟು ಗಂಟೆಗೆ ಮತ ಎಣಿಕೆ ಆರಂಭ?

ಲೋಕಸಭಾ ಚುನಾವಣೆ ಮತಎಣಿಕೆಗೆ ಕೌಂಟ್ ಡೌನ್ – ಎಷ್ಟು ಗಂಟೆಗೆ ಮತ ಎಣಿಕೆ ಆರಂಭ?

ಲೋಕಸಭೆ ಚುನಾವಣೆಯ ಮತ ಎಣಿಕೆಗೆ ಸಕಲ ಸಿದ್ಧತೆ ನಡೆದಿದೆ. ನಾಳೆ ಬೆಳಗ್ಗೆ 7.45ಕ್ಕೆ ಸ್ಟ್ರಾಂಗ್‌ರೂಂ ಓಪನ್‌ ಮಾಡಲಾಗುತ್ತದೆ. 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಇದನ್ನೂ ಓದಿ: ರೇವಣ್ಣ ಕುಟುಂಬಕ್ಕೆ ಕಂಟಕವಾದ ಅದೊಂದು ಕೇಸ್! – ತಂದೆ, ಮಗ ಬಳಿಕ ಭವಾನಿಗೂ ಜೈಲು ಫಿಕ್ಸ್?

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ತುಷಾರ್‌ ಗಿರಿನಾಥ್‌, ಮೊದಲು ಅಂಚೆ ಮತಗಳ ಎಣಿಕೆ ಆರಂಭವಾಗಲಿದೆ. ನಂತರದಲ್ಲಿ ಇವಿಎಂ ಮತಗಳ ಎಣಿಗೆ ಆರಂಭವಾಗಲಿದೆ. ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮಲ್ಯ ರಸ್ತೆಯ ಸೇಂಟ್‌ ಜೋಸೆಫ್ ಕಾಲೇಜು, ಜಯನಗರದ ಎಸ್.ಎಸ್.ಎಂ.ಆರ್.ವಿ ಕಾಲೇಜು, ವಸಂತನಗರದಲ್ಲಿರುವ ಮೌಂಟ್ ಕಾರ್ಮೆಲ್ ಕಾಲೇಜುಗಳಲ್ಲಿ ಎಣಿಕೆ ಕಾರ್ಯ ನಡೆಯಲಿದೆ. ಅಭ್ಯರ್ಥಿಗಳ ಏಜೆಂಟರು ಬೆಳಗ್ಗೆ 6ಗಂಟೆಯೊಳಗೆ ಮತ ಎಣಿಕೆ ಕೇಂದ್ರಕ್ಕೆ ಬರುವಂತೆ ಸೂಚಿಸಲಾಗಿದೆ ಅಂತ ಹೇಳಿದ್ದಾರೆ.

ಪ್ರತಿ ಟೇಬಲ್‌ಗೆ ಸೂಕ್ಷ್ಮ ವೀಕ್ಷಕ, ಮತ ಎಣಿಕೆ ಮೇಲ್ವಿಚಾರಕರು ಮತ್ತು ಮತ ಎಣಿಕೆ ಸಹಾಯಕರನ್ನು ನಿಯೋಜನೆ ಮಾಡಲಾಗಿದೆ. ಒಂದು ಕೊಠಡಿಯಲ್ಲಿ 14 ಟೇಬಲ್‌ಗಳನ್ನು ಹಾಕಲು ಅವಕಾಶವಿದ್ದು, ದೊಡ್ಡ ಕೊಠಡಿಗಳಿದ್ದರೆ ಹೆಚ್ಚಿನ ಟೇಬಲ್‌ಗಳನ್ನು ಹಾಕಲಾಗುವುದು ಎಂದು ಹೇಳಿದ್ರು.

Shwetha M