ಐಪಿಎಲ್ 2024, ಸೀಸನ್ 17ಕ್ಕೆ ಕೌಂಟ್‌ಡೌನ್- RCB Vs CSK ಸೆಣಸಾಟದಲ್ಲಿ ಚೆಪಾಕ್ ಯಾರಿಗೆ ವರವಾಗುತ್ತೆ?

ಐಪಿಎಲ್ 2024, ಸೀಸನ್ 17ಕ್ಕೆ ಕೌಂಟ್‌ಡೌನ್- RCB Vs CSK ಸೆಣಸಾಟದಲ್ಲಿ ಚೆಪಾಕ್ ಯಾರಿಗೆ ವರವಾಗುತ್ತೆ?

ಐಪಿಎಲ್ 2024, ಸೀಸನ್ 17 ಇನ್ನೇನು ಶುರುವಾಗಿಯೇ ಬಿಡ್ತಿದೆ.. ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಅದ್ಧೂರಿ ಉದ್ಘಾಟನಾ ಸಮಾರಂಭವನ್ನು ಬಿಸಿಸಿಐ ಆಯೋಜಿಸಿದೆ. ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್, ಖ್ಯಾತ ಗಾಯಕ ಸೋನು ನಿಗಂ ಸೇರಿದಂತೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಉದ್ಘಾಟನಾ ಪಂದ್ಯಕ್ಕೆ ಮತ್ತಷ್ಟು ರಂಗು ತುಂಬಲಿದ್ದಾರೆ. ಈ ರಂಗಿನ ಗುಂಗಿನ ನಡುವೆ ಮುಖಾಮುಖಿಯಾಗಲಿದ್ದಾರೆ ಅಭಿಮಾನಿಗಳ ಹಾಟ್ ಹಾಟ್‌ ಫೆವರೇಟ್ ಜೋಡಿ ಧೋನಿ ಮತ್ತು ವಿರಾಟ್ ಕೊಹ್ಲಿ. ಫಸ್ಟ್ ಮ್ಯಾಚ್ನ ಫಸ್ಟ್ ಎಕ್ಸ್‌ಪೀರಿಯನ್ಸ್‌ ಪಡ್ಕೊಳ್ಳೋದಿಕ್ಕೆ ಫ್ಯಾನ್ಸ್  ತುದಿಗಾಲಲ್ಲಿ ನಿಂತಿದ್ದಾರೆ. ಚೆಪಾಕ್‌ನಲ್ಲಿ ಮ್ಯಾಜಿಕ್ ಮಾಡೋ ಟೀಮ್ ಯಾವುದು, ಪಿಚ್ ರಿಪೋರ್ಟ್ ಏನ್ ಹೇಳುತ್ತೆ ಎಂಬ ಡಿಟೇಲ್ಸ್ ಇಲ್ಲಿದೆ.

ಇದನ್ನೂ ಓದಿ:ಕೊಹ್ಲಿಯನ್ನು ಭೇಟಿ ಮಾಡಿದ RCB ಸ್ಟಾರ್​ ಶ್ರೇಯಾಂಕಾ –  ವಿರಾಟ್‌ ಬಗ್ಗೆ ಏನಂದ್ರು ಕನ್ನಡತಿ..?

ಚೆನ್ನೈನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಸಿಎಸ್​ಕೆ ಮತ್ತು ಆರ್​ಸಿಬಿ ತಂಡಗಳು ಕಣಕ್ಕಿಳಿಯಲಿವೆ. ಈ ಪಂದ್ಯ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವುದು ಸಿಎಸ್​ಕೆ ಪಾಲಿಗೆ ಪ್ಲಸ್ ಪಾಯಿಂಟ್. ಯಾಕೆಂದ್ರೆ, ಉಭಯ ತಂಡಗಳು ಇದುವರೆಗೆ 8 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಅಲ್ಲಿ ನಡೆದ ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 7 ಬಾರಿ ಭರ್ಜರಿ ಜಯ ಸಾಧಿಸಿದೆ. ಇನ್ನು ಆರ್​ಸಿಬಿ ತಂಡ ಗೆದ್ದಿರುವುದು ಕೇವಲ 1 ಬಾರಿ ಮಾತ್ರ. ಅದು ಕೂಡ 2008 ರ ಸೀಸನ್‌ 1ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮಾ್ರ… ಇದಾದ ಬಳಿಕ ಚೆನ್ನೈನಲ್ಲಿ ಸಿಎಸ್​ಕೆ ವಿರುದ್ಧ ಆರ್​ಸಿಬಿ ಗೆಲುವಿನ ನಗೆ ಬೀರೋದಿಕ್ಕೆ ಸಾಧ್ಯವೇ ಆಗಿಲ್ಲ. ಸಿಎಸ್​ಕೆ ರೆಕಾರ್ಡ್‌ ಇಲ್ಲಿಗೇ ನಿಂತಿಲ್ಲ.. ಅದು ತವರು ನೆಲದಲ್ಲಿ ಇದುವರೆಗೆ 64 ಪಂದ್ಯಗಳನ್ನಾಡಿದೆ. ಈ ವೇಳೆ 18 ಪಂದ್ಯಗಳಲ್ಲಿ ಸೋತರೆ, 46 ಪಂದ್ಯಗಳಲ್ಲಿ ಜಯಬೇರಿ ಬಾರಿಸಿದೆ. ಇದೇ ಕಾರಣಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ತವರಿನ ಹುಲಿಗಳೆಂದು ಫೇಮಸ್ ಆಗಿರೋದು. ಆದ್ರೆ ನಂಬರ್ಸ್‌ ಆರ್‌ ಜಸ್ಟ್‌ ನಂಬರ್ಸ್‌ ಅಷ್ಟೇ. ಹಳೇ ರೆಕಾರ್ಡೇ ಬೇರೆ.. ಹೊಸ ಆಟವೇ ಬೇರೆ ಅನ್ನೋದು ಆರ್‌ಸಿಬಿ ಅಭಿಮಾನಿಗಳಲ್ಲಿರುವ ವಿಶ್ವಾಸ.. ಸೋಲು ಗೆಲುವು ಏನೇ ಇದ್ದರೂ ಚಿದಂಬರಂ ಸ್ಟೇಡಿಯಂನಲ್ಲಿ ಟಾಸ್ ತುಂಬಾನೇ ಮ್ಯಾಟರ್ ಆಗುತ್ತೆ. ಈ ಮೈದಾನದಲ್ಲಿ ಟಾಸ್ ಕೂಡ ಪ್ರಮುಖ ಪಾತ್ರವಹಿಸುತ್ತದೆ. ಇದಕ್ಕೆ ಸಾಕ್ಷಿಯೇ ಸಿಎಸ್​ಕೆ ಗೆದ್ದಿರುವ ಪಂದ್ಯಗಳ ಸಂಖ್ಯೆ. ಅಂದರೆ ಚೆನ್ನೈನಲ್ಲಿ ಧೋನಿ ಪಡೆ ಗೆದ್ದಿರುವ 46 ಪಂದ್ಯಗಳಲ್ಲಿ ಸಿಎಸ್​ಕೆ 30 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿತ್ತು. ಇಲ್ಲಿ ಸಿಎಸ್​ಕೆ ತಂಡ ಮೇಲುಗೈ ಹೊಂದಿದ್ದರೂ, ಟಾಸ್ ಗೆದ್ದರೆ ಒಂದು ಮಟ್ಟಿಗೆ ಪಂದ್ಯ ಗೆಲ್ಲೋದು ಗ್ಯಾರಂಟೀ ಅಂತಾನೇ ಹೇಳಬಹುದು.. ಆದ್ರೆ ಆರ್‌ಸಿಬಿ ಟಾಸ್‌ ಸೋಲೋದ್ರಲ್ಲೂ ರೆಕಾರ್ಡ್‌ ಹೊಂದಿರೋದ್ರಿಂದ ಈ ಬಾರಿಯಾದ್ರೂ ಟಾಸ್‌ನ ಅದೃಷ್ಟ ಕೈಹಿಡಿದ್ರೆ ಪಂದ್ಯದ ಫಲಿತಾಂಶ ಕೂಡ ನಮ್ಮ ಪರವಾಗಿ ಇರುತ್ತೆ ಎನ್ನುವುದು ಫ್ಯಾನ್ಸ್‌ ನಿರೀಕ್ಷೆ.

Sulekha