ಫಿಫಾ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕೌಂಟ್ ಡೌನ್ – ಮೆಸ್ಸಿ ಮೇಲೆ ಅಭಿಮಾನಿಗಳ ಕಣ್ಣು

ಫಿಫಾ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕೌಂಟ್ ಡೌನ್ – ಮೆಸ್ಸಿ ಮೇಲೆ ಅಭಿಮಾನಿಗಳ ಕಣ್ಣು

ಕತಾರ್: ಫಿಫಾ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕೌಂಟ್ ಡೌನ್ ಶುರುವಾಗಿದೆ. ಕತಾರ್‌ನ ರಾಷ್ಟ್ರೀಯ ದಿನದಂದು ಭಾನುವಾರ ರಾತ್ರಿ ಲುಸೈಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ರೋಚಕ ಪಂದ್ಯ ನೋಡಲು ಫುಟ್‌ಬಾಲ್ ಅಭಿಮಾನಿಗಳು ಕಾಯ್ತಿದ್ದಾರೆ. ಅರ್ಜೆಂಟೀನಾ ತಂಡ ಮೂರನೇ ವಿಶ್ವಕಪ್ ಗೆಲ್ಲಲು ಬಲಿಷ್ಠ ಫ್ರಾನ್ಸ್ ತಂಡದ ವಿರುದ್ಧ ಸೆಣಸಾಡಲಿದೆ. ಫ್ರಾನ್ಸ್ ತಂಡ ಕೂಡಾ ವಿಶ್ವಕಪ್ ತನ್ನಲ್ಲೇ ಉಳಿಸಿಕೊಳ್ಳಲು ಪ್ರಬಲ ಹೋರಾಟ ನೀಡುವ ಉತ್ಸಾಹದಲ್ಲಿದೆ.

ಇದನ್ನೂ ಓದಿ:  ‘ಗೋಲ್ಡನ್ ಬೂಟ್’ ಯಾರಿಗೆ ?- ಮೆಸ್ಸಿ, ಎಂಬಪ್ಪೆ ನಡುವೆ ‘ಅದೃಷ್ಟ’ದ ಸೆಣಸಾಟ

ಫೈನಲ್ ಪಂದ್ಯದ ಕೇಂದ್ರ ಬಿಂದುವಾಗಿರುವ ಅರ್ಜೆಂಟಿನಾ ತಂಡದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿಗೆ ಇಂಜುರಿ ಸಮಸ್ಯೆ ಎದುರಾಗಿತ್ತು. ಹೀಗಾಗಿ ಈ ಮಹತ್ವದ ಪಂದ್ಯದಿಂದ ಹೊರಗುಳಿಯಲಿದ್ದಾರಾ ಎಂಬ ಆತಂಕ ಮೂಡಿಸಿತ್ತು. ಆದರೆ, ಈಗ ಲಿಯೋನೆಲ್ ಮೆಸ್ಸಿ ಫೀಲ್ಡಿಗಿಳಿಯಲಿದ್ದಾರೆ. ತಮ್ಮ ವೃತ್ತಿಜೀವನದ ಕೊನೇ ವಿಶ್ವಕಪ್ ಪಂದ್ಯವನ್ನು ಆಡಲಿದ್ದಾರೆ.

ಐದು ಗೋಲು ಬಾರಿಸಿರುವ ಮೆಸ್ಸಿ ಫೈನಲ್ ಪಂದ್ಯದಲ್ಲಿ ಅರ್ಜೆಂಟಿನಾ ತಂಡದ ಭರವಸೆ ಆಟಗಾರರಾಗಿದ್ದಾರೆ. ಇನ್ನು ಫ್ರಾನ್ಸ್ ತಂಡ ಕೂಡಾ ಯುವ ಆಟಗಾರ ಕೈಲಿಯನ್ ಎಂಬಪ್ಪೆ ಮೇಲೆ ಭರವಸೆ ಇಟ್ಟಿದೆ. ಎಂಬಪ್ಪೆ ಕೂಡಾ ವಿಶ್ವಕಪ್‌ನಲ್ಲಿ ಒಟ್ಟು 5 ಗೋಲು ಬಾರಿಸಿದ್ದು, ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ.

ಮೆಸ್ಸಿ ಟೀಮ್ ಫೈನಲ್‌ಗೇರುತ್ತಿದ್ದಂತೆ ಎಸ್‌ಬಿಐ ಬ್ಯಾಂಕ್‌ನ ಪಾಸ್‌ಬುಕ್ ಸೋಷಿಯಲ್ ಮೀಡಿಯಾದಲ್ಲಿ ಬಾರಿ ಟ್ರೆಂಡ್ ಆಗುತ್ತಿದೆ. ಇದಕ್ಕೆ ಕಾರಣ ಅರ್ಜೆಂಟೀನಾ ತಂಡದ ಜೆರ್ಸಿ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಎಸ್‌ಬಿಐ ಬ್ಯಾಂಕ್‌ನ ಪಾಸ್‌ಬುಕ್ ಮತ್ತು ಅರ್ಜೆಂಟೀನಾ ಜೆರ್ಸಿಯನ್ನ ಪೋಸ್ಟ್ ಮಾಡಿ ನೆಟ್ಟಿಗರು ಫನ್ನಿಯಾಗಿ ಕಮೆಂಟ್ ಮಾಡ್ತಿದ್ದಾರೆ.

suddiyaana