ಪಾಕ್‌ನಲ್ಲಿ ಚುನಾವಣೆಗೆ ಕೌಂಟ್‌ಡೌನ್‌ – ಸ್ವತಂತ್ರ ಅಭ್ಯರ್ಥಿಯ ಕಚೇರಿಯ ಹೊರಗೆ ಬಾಂಬ್‌ ಸ್ಫೋಟ, 26 ಮಂದಿ ಸಾವು

ಪಾಕ್‌ನಲ್ಲಿ ಚುನಾವಣೆಗೆ ಕೌಂಟ್‌ಡೌನ್‌ – ಸ್ವತಂತ್ರ ಅಭ್ಯರ್ಥಿಯ ಕಚೇರಿಯ ಹೊರಗೆ ಬಾಂಬ್‌ ಸ್ಫೋಟ, 26 ಮಂದಿ ಸಾವು

ಪಾಕಿಸ್ತಾನ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಗುರುವಾರ ಪಾಕ್‌ನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. ಈ ಹೊತ್ತಲ್ಲೇ ದುಷ್ಕರ್ಮಿಗಳು ದುಷ್ಕೃತ್ಯ  ಎಸಗುತ್ತಿದ್ದಾರೆ. ಬುಧವಾರ ನೈಋತ್ಯ ಪಾಕಿಸ್ತಾನದ ಸ್ವತಂತ್ರ ಅಭ್ಯರ್ಥಿಯ ಚುನಾವಣಾ ಕಚೇರಿಯಲ್ಲಿ ಎರಡು ಬಾಂಬ್ ಸ್ಫೋಟಗಳು ಸಂಭವಿಸಿದೆ. ಈ ಸ್ಟೋಟದಲ್ಲಿ 26 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಸಿಎಂ ಕಚೇರಿಗೆ ಬೀಗ ಜಡಿಯಲು ಮುಂದಾದ ಪ್ರತಿಭಟನಾಕಾರರು! – ಬಿಜೆಪಿ ನಾಯಕರು ಪೊಲೀಸ್‌  ವಶಕ್ಕೆ

ಪ್ರಾಂತೀಯ ಸರ್ಕಾರದ ವಕ್ತಾರ ಜನ್ ಅಚಕ್ಝೈ  ಈ ಬಗ್ಗೆ ಮಾಹಿತಿ ನೀಡಿದ್ದು, ಬಲೂಚಿಸ್ತಾನ್ ಪ್ರಾಂತ್ಯದ ಪಿಶಿನ್ ಜಿಲ್ಲೆಯಲ್ಲಿ ಈ ದಾಳಿ ನಡೆದಿದೆ ಎಂದು ಹೇಳಿದ್ದಾರೆ. ಈ ಸ್ಟೋಟದಲ್ಲಿ 26 ಮಂದಿ ಸಾವನ್ನಪ್ಪಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.

ಪಿಶಿನ್ ಜಿಲ್ಲೆಯ ಸ್ವತಂತ್ರ ಚುನಾವಣಾ ಅಭ್ಯರ್ಥಿಯ ಕಚೇರಿಯಲ್ಲಿ ನಡೆದ ಮೊದಲ ದಾಳಿಯಲ್ಲಿ 12 ಮಂದಿ ಸಾವನ್ನಪ್ಪಿದ್ದರು. ಬುಧವಾರ ಅಫ್ಘಾನ್ ಗಡಿಯ ಸಮೀಪದಲ್ಲಿರುವ ಕಿಲ್ಲಾ ಸೈಫುಲ್ಲಾ ಎಂಬ ಪಟ್ಟಣದಲ್ಲಿ ಎರಡನೇ ಸ್ಫೋಟವು ಜಮಿಯತ್ ಉಲೇಮಾ ಇಸ್ಲಾಂನ ಕಚೇರಿಯ ಬಳಿ ಸ್ಫೋಟಗೊಂಡಿದೆ ಎಂದು ಪ್ರಾಂತ್ಯದ ಮಾಹಿತಿ ಸಚಿವರು ತಿಳಿಸಿದ್ದಾರೆ.

ಪಾಕ್‌ನಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಭದ್ರತೆ ಒದಗಿಸಲಾಗಿದೆ. ಬಲೂಚಿಸ್ತಾನದಲ್ಲಿ ಇತ್ತೀಚೆಗೆ ಉಗ್ರರ ದಾಳಿಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಾಂತಿ ಕಾಪಾಡಲೆಂದು ಪಾಕಿಸ್ತಾನದಾದ್ಯಂತ ಹತ್ತಾರು ಪೊಲೀಸ್ ಮತ್ತು ಅರೆಸೈನಿಕ ಪಡೆಗಳನ್ನು ನಿಯೋಜಿಸಿದ್ದರೂ ಸಹ ಬಾಂಬ್ ಸ್ಫೋಟ ಸಂಭವಿಸಿದೆ.

Shwetha M