ಬೆಂಗಳೂರು ಕಂಬಳಕ್ಕೆ ಕೌಂಟ್‌ಡೌನ್!‌ – ರಾಜ್ಯ ರಾಜಧಾನಿಯಲ್ಲಿ ಮೂರು ದಿನ ಟ್ರಾಫಿಕ್‌ ಜಾಮ್‌!

ಬೆಂಗಳೂರು ಕಂಬಳಕ್ಕೆ ಕೌಂಟ್‌ಡೌನ್!‌ – ರಾಜ್ಯ ರಾಜಧಾನಿಯಲ್ಲಿ ಮೂರು ದಿನ ಟ್ರಾಫಿಕ್‌ ಜಾಮ್‌!

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಕಂಬಳ ನಡೆಯಲಿದೆ. ನವೆಂಬರ್‌ 25, 26 ರಂದು ಅರಮನೆ ಮೈದಾನದಲ್ಲಿ ಕಂಬಳ ನಡೆಯಲಿದೆ. ಐತಿಹಾಸಿಕ ಕ್ಷಣಕ್ಕೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಕಂಬಳಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಎರಡು ದಿನಗಳ ಕಾಲ ರಾಜ್ಯ ರಾಜಧಾನಿಯಲ್ಲಿ ನಡೆಯಲಿರುವ ಕಂಬಳವನ್ನು ದಕ್ಷಿಣ ಭಾರತದ ಜನಪ್ರಿಯ ನಟಿ ಅನುಷ್ಕಾ ಶೆಟ್ಟಿ ಉದ್ಘಾಟಿಸಲಿದ್ದಾರೆ. ಶುಕ್ರವಾರ (ನವೆಂಬರ್‌ 24) ತುಳುಕೂಟ ನಡೆಯಲಿದೆ. ಈ ಹಿನ್ನೆಲೆ ನಗರದಲ್ಲಿ ಮೂರು ದಿನ ಟ್ರಾಫಿಕ್ ಜಾಮ್ ಆಗಲಿದೆ.

ಇದನ್ನೂ ಓದಿ: ಬೆಂಗಳೂರು ಕಂಬಳಕ್ಕೆ 1 ಕೋಟಿ ರೂ. ಅನುದಾನ ಘೋಷಿಸಿದ ಸಿಎಂ ಸಿದ್ದರಾಮಯ್ಯ!

ನವೆಂಬರ್ 24, 25 ರಂದು ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಕರಾವಳಿ ಜನಪದ ಕ್ರೀಡೆ ಕಂಬಳ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಲಕ್ಷಾಂತರ ಮಂದಿ ಭಾಗಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಮೂರು ದಿನಗಳ ಕಾಲ ಟ್ರಾಫಿಕ್‌ ಜಾಮ್‌ ಆಗುವ ಸಾಧ್ಯತೆ ಇದೆ. ಹೀಗಾಗಿ ಈ ಕೆಳಗಿನ ಮಾರ್ಗದಲ್ಲಿ ಟ್ರಾಫಿಕ್‌ ಜಾಮ್ ಆಗಲಿದ್ದು, ಪ್ರಯಾಣಿಕರು ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಕೋರಲಾಗಿದೆ.

ಅರಮನೆ ಮೈದಾನದ ಸುತ್ತಮುತ್ತಲಿನ ಪ್ರದೇಶಗಳಾದ ಗುಟ್ಟಹಳ್ಳಿ, ಸದಾಶಿವನಗರ, ವೈಯಾಲಿಕಾವಲ್, ನ್ಯೂ ಬಿಇಎಲ್ ರಸ್ತೆ, ಮೇಖ್ರಿ ವೃತ್ತ, ಜಯಮಹಲ್ ಮುಖ್ಯರಸ್ತೆ, ಕಂಟೋನ್ಮೆಂಟ್ ಸ್ಟೇಷನ್, ಹೆಬ್ಬಾಳ, ಗಂಗೇನಹಳ್ಳಿ, ಬಳ್ಳಾರಿ ರಸ್ತೆ ಇತ್ಯಾದಿ ಕಡೆ  ಭಾರಿ ಟ್ರಾಫಿಕ್ ಜಾಮ್ ಆಗಲಿದೆ. ಆದ್ದರಿಂದ,   ಮೂರು ದಿನ ಅಂದರೆ ನವೆಂಬರ್ 24, 25, 26 ರಂದು ಬಳ್ಳಾರಿ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚರಿಸದೇ ಇರುವುದು ಉತ್ತಮ.

200 ಜೊತೆ ಕೋಣಗಳು ಕಂಬಳದಲ್ಲಿ ಭಾಗವಹಿಸಲಿದ್ದು, ಕೋಣಗಳನ್ನು ತರುವ ವಾಹನ ಸೇರಿ 300ಕ್ಕೂ ಹೆಚ್ಚು ವಾಹನಗಳು ಕರಾವಳಿಯಿಂದ ಬೆಂಗಳೂರಿಗೆ ಬರಲಿದೆ. ಕರಾವಳಿಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಹುಲಿ ವೇಷದ ನೃತ್ಯ, ಸಂಸ್ಕೃತಿ, ಕಲೆಗಳ ಪ್ರದರ್ಶನ, ಚಿತ್ರ ಮತ್ತು ಗೊಂಬೆ ಪ್ರದರ್ಶನ, ಇರಲಿದೆ. ಕರಾವಳಿಯ ವಿಶೇಷ ತಿಂಡಿ-ತಿನಿಸುಗಳ 80 ಸ್ಟಾಲ್‌ಗಳು ಇರಲಿವೆ.

Shwetha M