ಅನಂತ್ ಅಂಬಾನಿ ಮದುವೆಗೆ ಶುರುವಾಯ್ತು ಕೌಂಟ್‌ಡೌನ್- ಮದುಮಗನ ತೂಕ ಮತ್ತೆ ಹೆಚ್ಚಳ ಆಗಿದ್ದು ಹೇಗೆ?

ಅನಂತ್ ಅಂಬಾನಿ ಮದುವೆಗೆ ಶುರುವಾಯ್ತು ಕೌಂಟ್‌ಡೌನ್- ಮದುಮಗನ ತೂಕ ಮತ್ತೆ ಹೆಚ್ಚಳ ಆಗಿದ್ದು ಹೇಗೆ?

ರಿಲಯನ್ಸ್ ಇಂಡಸ್ಟ್ರೀಸ್ ಉದ್ಯಮಿ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮದುವೆ ಸಮಾರಂಭಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಅನಂತ್ ಅಂಬಾನಿ ತಮ್ಮ ಬಾಲ್ಯದ ಗೆಳತಿ ರಾಧಿಕಾ ಮರ್ಚೆಂಟ್ ಅವರನ್ನು ಮದುವೆಯಾಗುತ್ತಿದ್ದಾರೆ. ಇದರ ಮಧ್ಯೆ, ನಿಶ್ಚಿತಾರ್ಥದಲ್ಲಿ ಕಾಣಿಸಿಕೊಂಡಿರುವ ಅನಂತ್ ಅಂಬಾನಿ ತೂಕದಲ್ಲೂ ಈಗ ಮದುವೆ ಸಿದ್ಧತೆಯಲ್ಲಿರುವ ಅನಂತ್ ಅಂಬಾನಿ ತೂಕದಲ್ಲಿ ಆದ ಬದಲಾವಣೆ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ: 90 ಕೋಟಿ ಮೌಲ್ಯದ ಲೆಹೆಂಗಾ.. 718 ಕೋಟಿ ರೂಪಾಯಿ ವೆಚ್ಚ – ಅಂಬಾನಿ ಮಗಳ ಮದುವೆ ಹೇಗಿತ್ತು ಗೊತ್ತಾ..?

ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರ ಮಗ ಅನಂತ್ ಅಂಬಾನಿ ತಮ್ಮ ತೂಕದ ವಿಚಾರವಾಗಿ ಆವಾಗಾವಾಗ ಗಮನ ಸೆಳೆಯುತ್ತಿರುತ್ತಾರೆ. ಕಳೆ ವರ್ಷ ಇದ್ದಕ್ಕಿದ್ದಂತೆ 108 ಕೆ.ಜಿ ಇಳಿಸಿಕೊಂಡು ಭಾರೀ ಸುದ್ದಿಯಾಗಿದ್ದರು. ವಿಪರೀತ ದಪ್ಪವಾಗಿದ್ದ ಅನಂತ್ ಅಂಬಾನಿ ಕೇವಲ 18 ತಿಂಗಳಲ್ಲಿ 108 ಕೆಜಿ ಇಳಿಸಿಕೊಂಡು ಚಾಕೋಲೇಟ್ ಬಾಯ್ ರೀತಿ ಆಗಿದ್ದು ಅನೇಕರ ಹುಬ್ಬೇರಿಸಿತ್ತು. 208 ಕೆಜಿ ಇದ್ದ ಅನಂತ್ ಅಂಬಾನಿ 100 ಕೆಜಿಗೆ ತಮ್ಮ ತೂಕವನ್ನು ಇಳಿಸಿಕೊಂಡಿದ್ದರು.

ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ 108 ಕೆಜಿ ತೂಕ ಇಳಿಸಿಕೊಂಡಿದ್ದ ಅನಂತ್ ಅಂಬಾನಿಗೆ ಫಿಟ್ನೆಸ್ ಕೋಚ್ ಆಗಿದ್ದವರು ವಿನೋದ್ ಖನ್ನಾ. ಸೆಲೆಬ್ರಿಟಿ ಫಿಟ್ನೆಸ್ ತರಬೇತುದಾರ ವಿನೋದ್ ಚನ್ನಾ ಅವರು ವಿನ್ಯಾಸಗೊಳಿಸಿದ ದಿನಚರಿಯನ್ನು ಅನುಸರಿಸುವ ಮೂಲಕ ಅನಂತ್ ಅಂಬಾನಿ, 18 ತಿಂಗಳೊಳಗೆ 108 ಕೆಜಿ ತೂಕವನ್ನು ಕಳೆದುಕೊಳ್ಳುವಲ್ಲಿ ಯಶಸ್ವಿಯಾದರು. ಯೋಗ, ಕ್ರಿಯಾತ್ಮಕ ತರಬೇತಿ, ತೂಕ ಎತ್ತುವಿಕೆ ಮತ್ತು ಕಾರ್ಡಿಯೋ ವ್ಯಾಯಾಮಗಳನ್ನು ಮಾಡುತ್ತಿದ್ದ ಅನಂತ್ ಅಂಬಾನಿ ದಿನವೂ 21 ಕಿಮೀ ಓಡುತ್ತಿದ್ದರು. ಅಂದರೆ, ದಿನಕ್ಕೆ ಐದರಿಂದ 6 ಗಂಟೆಗಳನ್ನು ಅವರು ಫಿಟ್ನೆಸ್‌ಗಾಗಿಯೇ ಮೀಸಲಿಡುತ್ತಿದ್ದರು.

2017ರಲ್ಲಿ ಅನಂತ್ ಅಂಬಾನಿಯವರ ತಾಯಿ ನೀತಾ ಅಂಬಾನಿ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದರು. ಅನಂತ್ ಅಂಬಾನಿಯ ದೇಹದ ತೂಕದ ಬಗ್ಗೆ ಅನೇಕರು ಅಪಹಾಸ್ಯ ಮಾಡಿದ್ದನ್ನು ನಾನು ಗಮನಿಸಿದ್ದೇನೆ. ಆದರೆ, ಅನಂತ್‌ಗೆ ಆರೋಗ್ಯದ ಸಮಸ್ಯೆ ಇತ್ತು. ಅನಂತ್ ಆಸ್ತಮಾದಿಂದ ಬಳಲುತ್ತಿದ್ದರು. ಆದ್ದರಿಂದ ನಾವು ಅವರಿಗೆ ಸಾಕಷ್ಟು ಸ್ಟೀರಾಯ್ಡ್‌ಗಳನ್ನು ನೀಡಬೇಕಾಯಿತು. ಇದರಿಂದ ಅವರ ದೇಹದ ತೂಕ ಹೆಚ್ಚುತ್ತಾ ಹೋಯಿತು ಎಂದು ಹೇಳಿದ್ದರು. ಅದಾದ ಬಳಿಕ ಮತ್ತೆ ಇದೀಗ ಅನಂತ್ ಅಂಬಾನಿಯ ತೂಕ ಮತ್ತೆ ಹೆಚ್ಚಾಗಿದೆ.

ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ತಮ್ಮ ಗೆಳತಿ ರಾಧಿಕಾ ಮರ್ಚೆಂಟ್ ಅವರನ್ನು ವಿವಾಹವಾಗಲಿದ್ದಾರೆ. ಮಾರ್ಚ್ 1ರಿಂದ 3ರವರೆಗೆ ಗುಜರಾತ್‌ನ ಜಾಮ್ನಾನಗರದಲ್ಲಿ ವಿವಾಹದ ಪೂರ್ವ ಸಂಭ್ರಮಗಳು ನಡೆಯಲಿವೆ.

Sulekha