ಭಾರತ- ಅಫ್ಘಾನಿಸ್ತಾನ ಪಂದ್ಯಕ್ಕೆ ಶುರುವಾಯ್ತು ಕೌಂಟ್‌ಡೌನ್ –ಹೋಮ್‌ಗ್ರೌಂಡ್‌ನಲ್ಲಿ ವಿರಾಟ್ ಕೊಹ್ಲಿ ಮೇಲೆ ಅಭಿಮಾನಿಗಳ ಕಣ್ಣು
ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿರುವ ಟೀಮ್ ಇಂಡಿಯಾ ಅಕ್ಟೋಬರ್ 11 ರಂದು ಅಫ್ಘಾನಿಸ್ತಾನ ವಿರುದ್ಧ ಸೆಣೆಸಾಟ ನಡೆಸಲಿದೆ. ದೆಹಲಿಯಲ್ಲಿರುವ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಅಫ್ಘಾನಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ. ರೋಹಿತ್ ಶರ್ಮಾ ಪಡೆ ಈಗಾಗಲೇ ದೆಹಲಿಗೆ ತಲುಪಿದ್ದಾರೆ. ಟೀಂ ಇಂಡಿಯಾದ ರಾಕ್ ಸ್ಟಾರ್ ವಿರಾಟ್ ಕೊಹ್ಲಿಯ ಹೋಮ್ ಗ್ರೌಂಡ್ ನಲ್ಲಿ ಪಂದ್ಯ ನಡೆಯುತ್ತಿರುವುದು ಮತ್ತೊಂದು ವಿಶೇಷ.
ಇದನ್ನೂ ಓದಿ:ಆಸ್ಪತ್ರೆಗೆ ದಾಖಲಾದ ಸ್ಟಾರ್ ಆಟಗಾರ ಶುಭಮನ್ ಗಿಲ್ – ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯದಲ್ಲೂ ಗಿಲ್ ಆಡೋದು ಡೌಟ್?
ಅಫ್ಘಾನಿಸ್ತಾನ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಲು ಟೀಮ್ ಇಂಡಿಯಾ ಸಜ್ಜಾಗಿದೆ. ಅಕ್ಟೋಬರ್ 11ರಂದು ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಪಂದ್ಯ ನಡೆಯಲಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ಈ ಸ್ಟೇಡಿಯಂ ಕಂಪ್ಲೀಟ್ ಆಗಿ ಬ್ಯಾಟಿಂಗ್ ಪಿಚ್. ಡ್ರೈ ಪಿಚ್ ಹೊಂದಿದ್ದು, ಬೌಂಡರಿ ಲೈನ್ ಕೂಡ ಕಡಿಮೆ ಅಂತರದಲ್ಲಿದೆ. ಆದರೆ, ಮ್ಯಾಚ್ ಶುರುವಾದ ಮೇಲೆ ಹಂತ ಹಂತವಾಗಿ ಸ್ಪಿನ್ನರ್ಸ್‌ಗಳಿಗೆ ಒಂದಷ್ಟು ಅಡ್ವಾಂಟೇಜ್ ಸಿಗಬಹುದು. ಅದರಲ್ಲೂ ಸೆಕೆಂಡ್ ಇನ್ನಿಂಗ್ಸ್ ವೇಳೆ ಬೌಲಿಂಗ್ ಮಾಡೋವಾಗ ಡ್ಯೂ ಫ್ಯಾಕ್ಟರ್ ಸಮಸ್ಯೆ ಆಗಿಲ್ಲ ಅಂದ್ರೆ ಸ್ಪಿನ್ನರ್ಸ್‌ಗಳಿಗೆ ಸಾಕಷ್ಟು ಅಡ್ವಾಂಟೇಜ್ ಸಿಗುವ ಸಾಧ್ಯತೆ ಇದೆ. ಒಂದು ವೇಳೆ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿದರೆ ರನ್ ಮಳೆ ಸುರಿಯೋದು ಗ್ಯಾರಂಟಿ. ಫೋರ್, ಸಿಕ್ಸರ್‌ಗಳ ಅಬ್ಬರವನ್ನೂ ಅಭಿಮಾನಿಗಳು ನಿರೀಕ್ಷಿಸಬಹುದು. ಕೆಲ ದಿನಗಳ ಹಿಂದೆ ಇದೇ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಮಾಡಿ 428 ರನ್ ಗಳಿಸಿತ್ತು. ಇತ್ತ ಚೇಸ್ ಮಾಡಿದ್ದ ಶ್ರೀಲಂಕಾ ಕೂಡ 326 ರನ್ ಗಳಿಸಿತ್ತು. ಇವೆಲ್ಲದರ ಜೊತೆಗೆ ಇದು ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ಹೋಮ್ ಗ್ರೌಂಡ್. ಹೀಗಾಗಿ ವಿರಾಟ್ ಕೊಹ್ಲಿ ವಿಶ್ವಕಪ್ ಪಂದ್ಯಾವಳಿಯಲ್ಲಿ ತಮ್ಮ ಹೋಮ್ ಗ್ರೌಂಡ್‌ನಲ್ಲಿ ಸೆಂಚುರಿ ಬಾರಿಸಲಿ ಎಂದು ಅಭಿಮಾನಿಗಳು ಎದುರುನೋಡುತ್ತಿದ್ದಾರೆ. ಹೀಗಾಗಿ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಎಲ್ಲರ ಕಣ್ಣು ಲೋಕಲ್ ಬಾಯ್ ವಿರಾಟ್ ಕೊಹ್ಲಿಯ ಮೇಲೆ ಇರಲಿದೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪ ನಾಯಕ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್.