ಡಿಚ್ಚಿ ಕೊಟ್ಟ ಯಶಸ್ವಿ ಜೈಸ್ವಾಲ್ – ಈ ಬಾರಿ ನಿಷೇಧ ಫಿಕ್ಸ್?
ಎಷ್ಟು ಪಂದ್ಯ.. ಏನು ರೂಲ್ಸ್?

ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಫಸ್ಟ್ ಇನ್ನಿಂಗ್ಸ್ನಲ್ಲಿ ಒಳ್ಳೆ ಸ್ಕೋರ್ ಕಲೆ ಹಾಕಿದೆ. ಮೊದಲ ಪಂದ್ಯದಂತೆಯೇ ಕಂಪ್ಲೀಟ್ ಡಾಮಿನೇಷನ್ ಮಾಡ್ತಿದೆ. ಭಾರತವೇ ಈ ಪಂದ್ಯವನ್ನೂ ಗೆಲ್ಲುವ ಫೇವರೆಟ್ ಟೀಂ ಆಗಿದೆ. ಆದ್ರೆ ಇಲ್ಲಿ ಪ್ರದರ್ಶನಕ್ಕಿಂತ ಜಾಸ್ತಿ ಯಶಸ್ವಿ ಜೈಸ್ವಾಲ್ ಮತ್ತು ಅಸಿತಾ ಫೆರ್ನಾಂಡೋ ನಡುವಿನ ಗಲಾಟೆಯೇ ಹಲ್ಚಲ್ ಎಬ್ಬಿಸಿದೆ. ಒಂದ್ಕಡೆ ಜೈಸ್ವಾಲ್ ವರ್ತನೆ ಬಗ್ಗೆ ವಿರೋಧಗಳು ವ್ಯಕ್ತವಾಗ್ತಿದ್ರೆ ಮತ್ತೊಂದೆಡೆ ಅವ್ರ ಭವಿಷ್ಯದ ಬಗ್ಗೆಯೂ ಬಾರೀ ಚರ್ಚೆಯಾಗ್ತಿದೆ.
ಇದನ್ನೂ ಓದಿ : IPLನಲ್ಲಿ 9 ಟೀಂ ಬದಲಿಸಿದ ಪಿಂಚ್ – ಆಸ್ಟ್ರೇಲಿಯನ್ ಬ್ಯಾಟರ್ ಜಂಪಿಂಗ್ ಸ್ಟಾರ್ ಆಗಿದ್ದೇಗೆ?
ಕೊಲೊಂಬೊದಲ್ಲಿ ನಡೆಯುತ್ತಿರೋ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭಾರತದ ಓಪನರ್ ಯಶಸ್ವಿ ಜೈಸ್ವಾಲ್ ಮತ್ತು ಶ್ರೀಲಂಕಾದ ವೇಗದ ಬೌಲರ್ ಅಸಿತಾ ಫೆರ್ನಾಂಡೋ ನಡುವೆ ಮೈದಾನದಲ್ಲೇ ಗಲಾಟೆಯಾಗಿದೆ. ಹಾಗಂತ ಇದು ಜಸ್ಟ್ ಟಾಕ್ವಾರ್ ಆಗಿ ಉಳಿದಿರಲಿಲ್ಲ. ಫಿಸಿಕಲ್ ಅಸಲ್ಟ್ ಕೂಡ ಆಗಿರುವಂಥದ್ದು. ಹೀಗಾಗಿ ಈ ಪ್ರಕರಣವನ್ನ ಐಸಿಸಿ ಗಂಭೀರವಾಗಿ ಪರಿಗಣಿಸಿದೆ. ಟೆಸ್ಟ್ ಮಾದರಿಯಲ್ಲಿ ಕಳೆದ 9 ಇನ್ನಿಂಗ್ಸ್ಗಳಿಂದಲೂ ಜೈಸ್ವಾಲ್ ಬ್ಯಾಟಿಂಗ್ ಬಂದಿದ್ದೇ ಒಂದು ಅರ್ಧಶತಕ. 2 ಸಲ ಶೂನ್ಯಕ್ಕೆ ಔಟ್ ಆಗಿದ್ದಾರೆ. ಸೋ ಬಿಗ್ ಇನ್ನಿಂಗ್ಸ್ ಇಲ್ಲದೆ ಒದ್ದಾಡ್ತಿರೋ ಜೈಸ್ವಾಲ್‌ಗೆ ಈಗ ಬ್ಯಾನ್ ಭೀತಿ ಶುರುವಾಗಿದೆ.
ಹ್ಯಾಟ್ರಿಕ್ ಬೌಂಡರಿ.. ವಿಕೆಟ್.. ಬೌಲರ್ ಮತ್ತು ಬ್ಯಾಟರ್ ವಾರ್!
ಅಷ್ಟಕ್ಕೂ ಈ ಇನ್ಸಿಡೆಂಟ್ ನಡೆದಿದ್ದು ಹೇಗೆ ಅನ್ನೋದನ್ನ ನೋಡೋದಾದ್ರೆ ಭಾರತದ ಮೊದಲ ಇನ್ನಿಂಗ್ಸ್‌ನ 17ನೇ ಓವರ್‌ನಲ್ಲಿ ಲಂಕಾ ಅಸಿತಾ ಫೆರ್ನಾಂಡೋ ಬೌಲಿಂಗ್ ಮಾಡ್ತಿದ್ರು. ಮೂರು ಬೌಂಡರಿಗಳನ್ನು ಬಾರಿಸಿದ್ದರು. ಆದರೆ ಅದೇ ಓವರ್‌ನ ಕೊನೆಯ ಎಸೆತದಲ್ಲಿ ಅಸಿತಾ, ಜೈಸ್ವಾಲ್‌ರನ್ನು ಬೌಲ್ಡ್ ಮಾಡುವಲ್ಲಿ ಯಶಸ್ವಿಯಾದ್ರು. 53 ಬಾಲಲ್ಲಿ 45 ರನ್ ಗಳಿಸಿ ಆಡ್ತಿದ್ದ ಜೈಸ್ವಾಲ್ ವಿಕೆಟ್ ಬೀಳ್ತಿದ್ದಂತೆ ಫೆರ್ನಾಂಡೋ ಫುಲ್ ಅಗ್ರೆಸ್ಸಿವ್ ಆಗಿ ಸೆಲೆಬ್ರೇಟ್ ಮಾಡಿದ್ರು. ಅತ್ತ ಅರ್ಧಶತಕದ ಹೊಸ್ತಿಲಲ್ಲಿ ವಿಕೆಟ್ ಬಿದ್ದ ಬೇಸರದಲ್ಲಿ ಜೈಸ್ವಾಲ್ ಪೆವಿಲಿಯನ್ ಕಡೆ ಹೆಜ್ಜೆ ಹಾಕ್ತಿದ್ರು. ಬಹುಶಃ ಇಷ್ಟಕ್ಕೆ ಸುಮ್ಮನಾಗಿದ್ರೆ ಏನೂ ಆಗ್ತಿರಲಿಲ್ಲ. ಆದ್ರೆ ವಿಕೆಟ್ ತೆಗೆದ ಫೆರ್ನಾಂಡೋ ಜೈಸ್ವಾಲ್ರನ್ನ ಟ್ರಿಗರ್ ಮಾಡೋ ಥರ ಆಚೆ ಹೋಗು ಅಂತಾ ಕಮೆಂಟ್ ಪಾಸ್ ಮಾಡಿ ಸೆಂಡ್ ಆಫ್ ಕೊಟ್ಟಿದ್ದಾರೆ. ಮೊದ್ಲೇ ಔಟ್ ಆಗಿದ್ದಕ್ಕೆ ಸಿಟ್ಟಿನಲ್ಲಿದ್ದ ಜೈಸ್ವಾಲ್ ಬೌಲರ್ ಕಡೆ ವಾಪಸ್ ಬಂದಿದ್ದಾರೆ. ಇಬ್ರೂ ಫೇಸ್ ಟು ಫೇಸ್ ಆಗ್ತಿದ್ದಂತೆ ಇಬ್ಬರ ನಡುವೆ ಟಾಕ್ವಾರ್ ಆಗಿದೆ. ಹಾಗೇ ಪರಸ್ಪರ ನೂಕಾಟ ತಳ್ಳಾಟ ಆಗಿದೆ. ಈ ಟೈಮಲ್ಲಿ ಜೈಸ್ವಾಲ್ ತಮ್ಮ ಹೆಲ್ಮೆಟ್ನಿಂದ ಡಿಚ್ಚಿ ಕೊಡೋ ಥರ ಫೆರ್ನಾಂಡೋ ತಲೆಗೆ ಟಚ್ ಮಾಡಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗ್ತಿರೋದು ಗೊತ್ತಾಗ್ತಿದ್ದಂತೆ ಲಂಕಾದ ಇತರ ಆಟಗಾರರು ಇಂಟರ್ಫಿಯರ್ ಆಗಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಸದ್ಯ ಜೈಸ್ವಾಲ್ ವರ್ತನೆಗೆ ವಿರೋಧಗಳು ವ್ಯಕ್ತವಾಗ್ತಿವೆ.
ಜೈಸ್ವಾಲ್ ವರ್ತನೆಗೆ ಮಾಜಿ ಕ್ರಿಕೆಟಿಗರು ಸಿಟ್ಟು!
ಕ್ರಿಕೆಟ್ನಲ್ಲಿ ಅಗ್ರೆಸ್ಸಿವ್ ಆಗಿ ಆಡ್ಬೇಕು ಅನ್ನೋದೇನೋ ನಿಜ. ಹಾಗೇ ಸ್ಲೆಡ್ಜ್, ಟ್ರಿಗರ್ ಇದೆಲ್ಲಾ ಮಾಮೂಲಿಯೇ. ಬಟ್ ಎಲ್ಲದಕ್ಕೂ ಒಂದು ಲಿಮಿಟ್ ಇರುತ್ತೆ. ಈಗ ಫಸ್ಟ್ ಮ್ಯಾಚಲ್ಲಿ ಲಂಕಾ ಆಟಗಾರರನಿಗೆ ಜೈಸ್ವಾಲ್ ಐಪಿಎಲ್ ಆಫರ್ ನೀಡಿದ್ರು. ಈ ಬಾಲ್ ಸಿಕ್ಸ್ ಹೊಡೆದ್ರೆ ಐಪಿಎಲ್ಗೆ ತಗೊಳ್ಳೋಕೆ ನಾನ್ ಹೇಳ್ತೇನೆ ಅಂದಿದ್ರು. ನೆಕ್ಸ್ಟ್ ಬಾಲಲ್ಲೇ ಲಂಕಾ ಪ್ಲೇಯರ್ ಕ್ಯಾಚ್ ಔಟ್ ಆಗಿದ್ರು. ಇದನ್ನೆಲ್ಲಾ ಸ್ಮಾರ್ಟ್ ಕ್ರಿಕೆಟಿಂಗ್ ಅಂತಾ ಅಪ್ರಿಶಿಯೇಟ್ ಮಾಡಿದ್ರು. ಬಟ್ ಈ ಸಲ ಜೈಸ್ವಾಲ್ ವರ್ತನೆಗೆ ವಿರೋಧಗಳು ವ್ಯಕ್ತವಾಗಿವೆ. ಮಾಜಿ ಕ್ರಿಕೆಟರ್ಸ್ ಕೂಡ ಈ ಬಗ್ಗೆ ಕಮೆಂಟ್ಸ್ ಮಾಡಿದ್ದಾರೆ. ಟೀಂ ಇಂಡಿಯಾ ಮಾಜಿ ಬ್ಯಾಟರ್ ಸಂಜಯ್ ಮಂಜ್ರೇಕರ್, ಜೈಸ್ವಾಲ್ ಲಿಮಿಟ್ ಕ್ರಾಸ್ ಮಾಡಿದ್ದಾರೆ ಎಂದಿದ್ರೆ ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ಕೂಡ ಜೈಸ್ವಾಲ್ ಫೆರ್ನಾಂಡೋ ಬಳಿ ಅಷ್ಟು ಹತ್ತಿರಕ್ಕೆ ಹೋಗಬಾರದಿತ್ತು ಎಂದಿದ್ದಾರೆ. ಶ್ರೀಲಂಕಾ ತಂಡದ ಬೌಲಿಂಗ್ ಕೋಚ್ ರಯಾನ್ ವಾನ್ ನೀಕರ್ಕ್, ಘಟನೆಯನ್ನು ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಪರಿಶೀಲಿಸಬೇಕಾಗಿದೆ ಎಂದಿದ್ದಾರೆ. ಇನ್ನು ರವೀಂದ್ರ ಜಡೇಜಾ ಕೂಡ ಇದು ಅಪಾಯಕಾರಿ ವಿಚಾರ ಎಂದಿದ್ದಾರೆ. ಇನ್ನು ಹರ್ಷ್ ಬೋಗ್ಲೆ ಕೂಡ ಜೈಸ್ವಾಲ್ ತಮ್ಮ ಲೈನ್ ಕ್ರಾಸ್ ಮಾಡಿದಂತೆ ಕಾಣ್ತಿದೆ ಎಂದಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಜೈಸ್ವಾಲ್ ಬಗ್ಗೆ ಬೋಗ್ಲೆ ಮಾತನಾಡಿರೋ ವಿಡಿಯೋವನ್ನು ಕ್ರಿಕ್ ಬಜ್ ತನ್ನ ಇನ್ಸ್ಟ್ರಾಗ್ರಾಂನಲ್ಲಿ ಹಾಕಿದ್ದು ಈ ವಿಡಿಯೋಗೆ ಯಶಸ್ವಿ ಜೈಸ್ವಾಲ್ ಕಮೆಂಟ್ ಮಾಡಿದ್ದಾರೆ. ಆತ ಏನು ಹೇಳಿದ ಅನ್ನೋದು ಗೊತ್ತಿಲ್ಲದೆ ಇದ್ದರೆ ದಯವಿಟ್ಟು ಜಡ್ಜ್ಮೆಂಟ್ ಮಾಡ್ಬೇಡಿ. ಯಾರಾದ್ರೂ ತಮ್ಮ ಲೈನ್ ಕ್ರಾಸ್ ಮಾಡಿದ್ರೆ ಭಾರತ ಕೂಡ ಫೈಟ್ ಮಾಡುತ್ತೆ ರಿಪ್ಲೈ ಕೊಡುತ್ತೆ ಅನ್ನೋ ಮೂಲಕ ತಮ್ಮ ವರ್ತನೆಯನ್ನ ಸಮರ್ಥನೆ ಮಾಡಿಕೊಂಡಿದ್ದಾರೆ. ಬಟ್ ಇಲ್ಲಿ ಬೌಲರ್ ಕೆಣಕಿದ್ದು ನಿಜವೇ ಆಗಿದ್ರೂ ಜೈಸ್ವಾಲ್‌ಗೆ ಈ ಡಿಚ್ಚಿ ಬ್ಯಾಕ್ಫೈಯರ್ ಆಗೋದು ಗ್ಯಾರಂಟಿ. ಯಾಕಂದ್ರೆ ಈ ವಿಚಾರ ಬರೀ ಮೈದಾನಕ್ಕಷ್ಟೇ ಸೀಮಿತವಾಗಲ್ಲ. ಬ್ಯಾನ್ ಭೀತಿಯೂ ಎದುರಾಗಿದೆ. ಸದ್ಯಕ್ಕೆ ಘಟನೆ ಸಂಬಂಧ ಶಿಕ್ಷೆ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ. ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಘಟನೆ ಪರಿಶೀಲಿಸಿ ಯಾವ ICC Code of Conduct ಆರ್ಟಿಕಲ್ ಅಡಿಯಲ್ಲಿ ಪ್ರಕರಣ ದಾಖಲಿಸುತ್ತಾರೆ ಎಂಬುದರ ಮೇಲೆ ಶಿಕ್ಷೆ ನಿರ್ಧಾರವಾಗಲಿದೆ.
ಜೈಸ್ವಾಲ್ ಗೆ ಶಿಕ್ಷೆ ಏನು?
ಲೆವೆಲ್ 1 ರ ಉಲ್ಲಂಘನೆ ಎಂದು ಪರಿಗಣಿಸಿದರೆ ಸಾಮಾನ್ಯ ಶಿಕ್ಷೆ
ಐಸಿಸಿ ಆರ್ಟಿಕಲ್ 2.12ರ ಅಡಿಯಲ್ಲಿ ಅನಗತ್ಯ ದೈಹಿಕ ಸಂಪರ್ಕ
ಐಸಿಸಿಯಿಂದ ಕಠಿಣ ಎಚ್ಚರಿಕೆ, ಪಂದ್ಯದ ಸಂಭಾವನೆ ಕಡಿತ, ಶೇ.50ರಷ್ಟು ದಂಡ
ಜೈಸ್ವಾಲ್ ಖಾತೆಗೆ 1 ಅಥವಾ 2 ಡಿಮೆರಿಟ್ ಪಾಯಿಂಟ್ಸ್ ಸೇರಿಸಬಹುದು
ಲೆವೆಲ್ 4 ರ ಉಲ್ಲಂಘನೆ ಎಂದು ಪರಿಗಣಿಸಿದರೆ ಗಂಭೀರ ಶಿಕ್ಷೆ ಸಾಧ್ಯತೆ
ಉದ್ದೇಶಪೂರ್ವಕ ‘ಹೆಡ್‌ಬಟ್’ ಅಥವಾ ದೈಹಿಕ ದೌರ್ಜನ್ಯ ಅಥವಾ ಹಿಂಸಾಚಾರ
ಕನಿಷ್ಠ 5 ಟೆಸ್ಟ್ ಪಂದ್ಯಗಳು, 10 ಏಕದಿನ ಪಂದ್ಯಗಳಿಂದ ಅಮಾನತು
ಗಂಭೀರವಾದ ಹಿಂಸಾಚಾರ ಎಂದು ಸಾಬೀತಾದರೆ ಜೀವಿತಾವಧಿ ನಿಷೇಧ
ಅಲ್ಲಿಗೆ ಜೈಸ್ವಾಲ್‌ಗೆ ಯಾವ ಥರದ ಶಿಕ್ಷೆ ನೀಡಬಹುದು ಅನ್ನೋ ಕಂಪ್ಲೀಟ್ ಈಗ ಮ್ಯಾಚ್ ರೆಫರಿ ಡಿಸಿಷನ್ ಮೇಲೆಯೇ ನಿಂತಿದೆ. ಜೈಸ್ವಾಲ್‌ಗೆ ಎಚ್ಚರಿಕೆಯಷ್ಟೇನಾ? ಮ್ಯಾಚ್ ಫೀಸ್‌ಗೆ ಕತ್ತರಿ ಬೀಳುತ್ತಾ? ಇಲ್ಲವೇ ಟೆಸ್ಟ್ ನಿಷೇಧದ ಶಾಕ್ ಕೊಡುತ್ತಾ ಅನ್ನೋದೆಲ್ಲವೂ ಮ್ಯಾಚ್ ರೆಫರಿ ಕೈಯಲ್ಲಿದೆ. ಜೈಸ್ವಾಲ್ ಅವರ ಈ ವರ್ತನೆಯನ್ನು ಐಸಿಸಿ ನೀತಿ ಸಂಹಿತೆಯ ಯಾವ ಹಂತದ (Level) ಅಡಿಯಲ್ಲಿ ಪರಿಗಣಿಸುತ್ತಾರೆ ಅನ್ನೋದ್ರ ಮೇಲೆ ಶಿಕ್ಷೆಯ ಪ್ರಮಾಣ ನಿರ್ಧಾರ ಆಗುತ್ತೆ.

ನೋಡಿರಿ

