ಕೆಟ್ಟು ಹೋಗುತ್ತಿದೆಯಾ ಭಾರತದ ಔಷಧಾಲಯ – ಕೆಮ್ಮು ಸಿರಪ್‌ಗೂ ಸಂಕಷ್ಟ ಎದುರಾಗಿದೆಯಾ?

ಕೆಟ್ಟು ಹೋಗುತ್ತಿದೆಯಾ ಭಾರತದ ಔಷಧಾಲಯ – ಕೆಮ್ಮು ಸಿರಪ್‌ಗೂ ಸಂಕಷ್ಟ ಎದುರಾಗಿದೆಯಾ?

ಭಾರತದಲ್ಲಿ ತಯಾರಾಗುವ ಕೆಮ್ಮು ಸೆರಫ್ ಜಗತ್ತಿನಾದ್ಯಂತ ಹಲವು ರಾಷ್ಟ್ರಗಳಿಗೆ ರಫ್ತಾಗುತ್ತೆ. ಭಾರತದ ಕೆಮ್ಮು ಸಿರಫ್​ಗೆ ಈ ಹಿಂದೆ ಭಾರಿ ಬೇಡಿಕೆ ಇತ್ತು. ಆದ್ರೀಗ ಭಾರತದ ಕೆಮ್ಮು ಸಿರಪ್ ನ ಗುಣಮಟ್ಟದ ಬಗ್ಗೆ ಕಳೆದೊಂದು ವರ್ಷದಿಂದ ಭಾರಿ ಚರ್ಚೆಯಾಗ್ತಾ ಇದೆ. ಹೀಗಾಗಿ ದೇಶದ ಫಾರ್ಮ regulatory ಸಂಸ್ಥೆ ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಲವೊಂದು ಕಫ್ ಸಿರಪ್ ಗಳನ್ನ ಬಳಸದಂತೆ ನಿಷೇಧಿಸಿದೆ. ಕಳೆದ ವರ್ಷ ಉಜೇಕಿಸ್ತಾನ ಮತ್ತೂ ಗಾಂಬೀಯಾದಲ್ಲಿ ಭಾರತದಲ್ಲಿ ತಯಾರಾದ ಕೆಮ್ಮು ಸಿರಪ್ ಸೇವನೆಯಿಂದ ನಡೆದ ದುರ್ಘಟನೆಯ ಹಿನ್ನೆಲೆಯಲ್ಲಿ ಇಂತದೊಂದು ನಿರ್ಧಾರವನ್ನ regulatory ಸಂಸ್ಥೆ ಕೈಗೊಂಡಿದೆ.

ಇದನ್ನೂ ಓದಿ:ದೇಶದಲ್ಲಿ ಹೆಚ್ಚಾಯ್ತು ಕೊರೊನಾ ಅಬ್ಬರ! – ಒಂದೇ ದಿನದಲ್ಲಿ 636 ಹೊಸ ಕೇಸ್‌, 3 ಮಂದಿ ಸಾವು

ಈ ಶೀತ-ವಿರೋಧಿ ಔಷಧ ಸಂಯೋಜನೆಯು ಎರಡು ಔಷಧಿಗಳ ಕಾಂಬಿನೇಶನ್ ಆಗಿದೆ (chlorpheniramine maleate and phenylephrin) ಕ್ಲೋರ್ ಫಿನಿರಮೈನ್ ಮೆಲೇಟ್ ಮತ್ತು ಫಿನೈಲೆಫ್ರಿನ್.  ಕ್ಲೋರ್ ಫಿನಿರಮೈನ್ ಮೆಲೇಟ್ ಅಲರ್ಜಿ-ವಿರೋಧಿ  ಔಷಧವಾಗಿದ್ದು, ಇದು ಮೂಗು ಸೋರುವಿಕೆ,  ಸೀನುವಿಕೆಯಂತಹ ಅಲರ್ಜಿಯ ಲಕ್ಷಣಗಳನ್ನು ನಿವಾರಿಸುತ್ತೆ. ಫಿನೈಲ್ಫ್ರಿನ್  ಇದು ಸಣ್ಣ ರಕ್ತನಾಳಗಳನ್ನು ಕಿರಿದಾಗಿಸುತ್ತದೆ, ಇದು ಮೂಗು ಕಟ್ಟುವಿಕೆಗೆ ಪರಿಹಾರವನ್ನು ನೀಡುತ್ತದೆ. ಈ ಎರಡು ಅಂಶಗಳು ಹೆಚ್ಚಿನ ಎಲ್ಲಾ ಓವರ್ ದಿ ಕೌಂಟರ್ ಕಫ್ ಸಿರಪ್ ಗಳಲ್ಲಿ ಕಂಡು ಬರುತ್ತೆ. ಓವರ್ ದಿ ಕೌಂಟರ್ ಸಿರಪ್ ಗಳು ಅಂದರೇ ಅವುಗಳನ್ನ ಡಾಕ್ಟರ್ prescription ಇಲ್ಲದೆಯೂ ಮೆಡಿಕಲ್ ಗಳಿಂದ ಖರೀದಿಸಬಹುದು. ಹೆಚ್ಚಿನ ಎಲ್ಲಾ ಕಫ್ ಸಿರಪ್ ಗಳು ಓವರ್ ದಿ ಕೌಂಟರ್ ಮೆಡಿಸಿನ್ ಗಳಾಗಿದ್ದು ಹಾಗಾಗಿ ಇನ್ನೂ ಮುಂದೆ ಈ ಅಂಶಗಳನ್ನ ಹೊಂದಿರುವ ಸಿರಪ್ ಗಳ ಮೇಲೆ ನಾಲ್ಕು ವರುಷ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಬಳಸಬಾರದು ಎಂಬ ವಾರ್ನಿಂಗ್ ಲೇಬಲ್ ಕಡ್ಡಾಯವಾಗಿ ಹೊಂದಿರಬೇಕಾಗುತ್ತೆ. ಮಗುವಿನ ಪ್ರತಿರಕ್ಷಣಾ ವ್ಯವಸ್ಥೆಯು ವಯಸ್ಕರಿಗಿಂತ ತುಂಬಾ ಭಿನ್ನವಾಗಿರುವುದರಿಂದ, ಈ ಸಂಯೋಜನೆಯೊಂದಿಗೆ ಔಷಧಿಗಳು ಹಲವಾರು ಅಡ್ಡ ಪರಿಣಾಮಗಳನ್ನು ಹೊಂದಿರುತ್ತವೆ. ಮಕ್ಕಳ ದೇಹ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು ಅಂದರೇ ಅರೆನಿದ್ರಾವಸ್ಥೆಯನ್ನು ಉಂಟುಮಾಡಬಹುದು ಮತ್ತು ಮೆದುಳಿನ ಮೇಲೆ ನೇರವಾಗಿ ಪರಿಣಾಮ ಬೀರಬಹುದು.

ಬಹುಷಃ ನಿಮಗೆ ನೆನಪಿರಬಹುದು ಕಳೆದ ವರುಷ ಉಜ್ಬೇಕಿಸ್ತಾನ್ ದಲ್ಲಿ  ದೊಡ್ಡ ದುರ್ಘಟನೆ ಯೊಂದು ನಡೆದಿತ್ತು. ನಮ್ಮ ದೇಶದಲ್ಲಿ ಅಂದರೇ ಭಾರತದಲ್ಲೇ ತಯಾರಿಸಿದ ಕೆಮ್ಮು ಸಿರಪ್  ಉಜೇಕಿಸ್ತಾನ್ ದ ಸುಮಾರು 149 ಮಕ್ಕಳು ಸಾವಿಗೆ ಕಾರಣವಾಗಿತ್ತು. ನಿಗದಿತ ಪ್ರಮಾಣ ಕ್ಕಿಂತ ಜಾಸ್ತಿ ಸೇವಿಸಿದ ಕಾರಣ ಅಡ್ಡ ಪರಿಣಾಮಗಳು ಉಂಟಾಗಿ ಅದೂ ನೂರಾರು ಮಕ್ಕಳ ಸಾವಿಗೆ ಕಾರಣವಾಗಿತ್ತು . ಹಾಗಿದ್ದರೂ ಅಲ್ಲಿ ನಿಗದಿತ ಪ್ರಮಾಣಕ್ಕಿಂತ ಜಾಸ್ತಿ ಸೇವಿಸಿದ್ದಕ್ಕಿಂತಲೂ ಮುಖ್ಯವಾಗಿ ಅಲ್ಲಿ ಆ ಸಿರಪ್ ನಲ್ಲಿ ಕಂಡು ಬಂದಿದ್ದ ಡೈಥಿಲೀನ್ ಗ್ಲೈಕೋಲ್ ಎಂಬ ವಿಷಕಾರಿ ರಾಸಾಯನಿಕವೇ ಕಾರಣ ಎಂಬುದು ವಾಸ್ತವವಾಗಿತ್ತು. ಇಂತಹ ಘಟನೆಗಳು ಕೇವಲ ಉಜ್ಬೇಕಿಸ್ತಾನ್ ಕ್ಕೆ ಮಾತ್ರ ನಿಂತಿಲ್ಲ. ದೇಶದ ಕಫ್ ಸಿರಪ್ ನ ಗುಣಮಟ್ಟದ ಮಾನದಂಡದ ಕುರಿತಾದ ಪ್ರಶ್ನೆಗಳು 1972 ರಲ್ಲಿ  ತಮಿಳುನಾಡಿನಲ್ಲಿ 15 ಮಕ್ಕಳು ಸತ್ತಾಗ ಸಿರಪ್ ನಲ್ಲಿ ಇದ್ದ ಡೈಥಿಲೀನ್ ಗ್ಲೈಕೋಲ್  ಎಂಬ ರಾಸಾಯನಿಕವೇ ಇದ್ದಕ್ಕೆ ಕಾರಣ ಎಂದೂ ಬಯಲಾದಾಗಲೇ ಹುಟ್ಟಿಹಾಕಿತ್ತು. ಇಂತಹ ಘಟನೆಗಳು ಒಂದಾ ಎರಡಾ..! ಗಾಂಬೀಯಾ ದೇಶದಲ್ಲೂ 66  ಮಕ್ಕಳ ಸಾವಿಗೆ ಇದೇ ಕಫ್ ಸಿರಪ್ ಕಾರಣವಾಗಿತ್ತು. 2020 ರಲ್ಲಿ ಜಮ್ಮು ಕಾಶ್ಮೀರ ದಲ್ಲಿ 12 ಮಕ್ಕಳು ಸಾವನ್ನಪ್ಪುತ್ತಾರೆ. ಶೀತ, ಕೆಮ್ಮು ವಿನೊಂದಿಗೆ ಬಳಲುತ್ತಿದ್ದ ಆರೋಗ್ಯವಂತ ಮಕ್ಕಳು ಇದ್ದಕಿದ್ದಂತೆ ಕಿಡ್ನಿ ಫೇಲ್ಯೂರ್ ಗೆ ಒಳಗಾಗುತ್ತಾರೆ. ಅನಾರೋಗ್ಯದ ವರದಿಯ ಆಧಾರದ ಮೇಲೆ ಈ ಪ್ರದೇಶದಲ್ಲಿ ಹೆಚ್ಚಿನ ಮಕ್ಕಳ ಮೇಲೆ ಪರಿಣಾಮ ಬೀರುವುದನ್ನು ತಡೆಯಲು ನಿಗೂಢ ಕಾಯಿಲೆಯ ಮೂಲವನ್ನು ಪತ್ತೆಹಚ್ಚಲು ಭಾರತ ಸರ್ಕಾರವು  ತಜ್ಞರನ್ನ ನೇಮಿಸುತ್ತೆ. ತಜ್ಞರು ಈ ನಿಗೂಢವನ್ನು ಭೇದಿಸುವ ಹೊತ್ತಿಗೆ, ಜಮ್ಮು ಕಾಶ್ಮೀರದ ರಾಮನಗರದ ಎರಡು ತಿಂಗಳಿಂದ ಆರು ವರ್ಷದೊಳಗಿನ 12 ಮಕ್ಕಳು ಮೂತ್ರಪಿಂಡ ವೈಫಲ್ಯದಿಂದ ಸಾವನ್ನಪ್ಪುತ್ತಾರೆ. ಕೆಮ್ಮಿನ ಸಿರಪ್ ನಲ್ಲಿ ಇದ್ದ ಅದೇ ಡೈಥಿಲೀನ್ ಗ್ಲೈಕೋಲ್ ಅಷ್ಟೂ ಮಕ್ಕಳ ಸಾವಿಗೆ ಕಾರಣವಾಗಿತ್ತು. ಇನ್ನೂ 2023 ರಲ್ಲೇ ಅಮೇರಿಕಾದಲ್ಲಿ eye drop ನಿಂದಾಗಿ ಕಣ್ಣಿನ infection, ಕುರುಡುತನ ಕ್ಕೆ ಹಲವಾರು ಜನರು ಒಳಗಾಗಿದ್ದರು.. ಆ ಸಂಧರ್ಭದಲ್ಲೂ ಚರ್ಚೆಗೆ ಒಳಗಾಗಿದ್ದು ತಮಿಳುನಾಡಿನ ಗ್ಲೋಬಲ್ ಫಾರ್ಮ ಎನ್ನುವ ಕಂಪನಿ.. ಹಾಗಾಗಿ ಗ್ಲೋಬಲ್ ಫಾರ್ಮ ಕಂಪನಿ eye drop ಅನ್ನೂ ಸ್ವಯಂ ನಿರ್ಧಾರದಿಂದ ಮಾರುಕಟ್ಟೆಯಿಂದ ಹಿಂದಕ್ಕೆ ತೆಗೆದುಕೊಂಡಿತ್ತು. ಇಂತಹ ದುರ್ಘಟನೆಗಳು ದೇಶದ ಔಷದಿ ಕಂಪನಿ ಗಳ ಮೇಲೆ ಅನೇಕ ಪ್ರಶ್ನೆಗಳನ್ನ ಸೃಷ್ಟಿ ಮಾಡಿತ್ತು. ಜಾಗತಿಕ ಮಟ್ಟದಲ್ಲಿ  ಔಷದಿ ಕ್ಷೇತ್ರದಲ್ಲಿ ಭಾರತವೂ ಅತ್ಯಂತ ವೇಗವಾಗಿ ಬೆಳೆಯುತ್ತಾ ಇದ್ದ ಸಂಧರ್ಭದಲ್ಲಿ ಪದೇ ಪದೇ ನಡೆಯುತ್ತಿರುವ ಇಂತಹ ದುರ್ಘಟನೆ ಮೆಡಿಸಿನ್ಸ್ ಕುರಿತಾಗಿ ಸಾಮಾನ್ಯ ಜನರಿಗಿದ್ದ ನಂಬಿಕೆಯನ್ನ ಅಲ್ಲಾಡುವಂತೆ ಮಾಡುತ್ತಾ ಇರೋದು ಸುಳ್ಳಲ್ಲ.

ಭಾರತವೂ ಫಾರ್ಮ ಕ್ಷೇತ್ರದಲ್ಲಿ ಅಂತ್ಯಂತ ಟಾಪ್ ಸ್ಥಾನದಲ್ಲಿದೆ. ಔಷದಿ ಕ್ಷೇತ್ರದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಶ್ವದ ಮೂರನೇ ದೇಶ ಭಾರತ. 2021 ರಲ್ಲಿ ಭಾರತದ ಜಿಡಿಪಿ ಗೆ ಫಾರ್ಮ ಉದ್ಯಮದ ಕೊಡುಗೆ 1.72 ರಷ್ಟು ಇತ್ತು. ವಿಶ್ವದಲ್ಲಿ ಅತೀ ಹೆಚ್ಚು ಜನರಿಕ್ ಮೆಡಿಸಿನ್ ಗಳನ್ನ ರಫ್ತ್ತು ಮಾಡುವ ದೇಶವೂ ಕೂಡಾ ನಮ್ಮದೇ. ಜನರಿಕ್ ಮೆಡಿಸಿನ್ ಗಳು ಬ್ರಾಂಡೆಡ್ ಮೆಡಿಸಿನ್ ಗಳ ಕಾಪಿ ಗಳಾಗಿದ್ದು ಅವುಗಳನ್ನ ಕಡಿಮೆ ಬೆಲೆಗೆ ಮಾರುಕಟ್ಟೆ ಗೆ ಬಿಡಲಾಗುತ್ತೆ.  ಜನರಿಕ್ ಮೆಡಿಸಿನ್ಸ್, ಓವರ್ ದಿ ಕೌಂಟರ್ ಮೆಡಿಸಿನ್ಸ್, ಲಸಿಕೆ ಗಳು ಈ ಎಲ್ಲಾ ತಯಾರಿಕೆ ಯಲ್ಲೂ ಭಾರತವೇ ನಂಬರ್ ಒನ್. ಹಾಗಾಗಿಯೇ ಪ್ರಧಾನಿ ನರೇಂದ್ರ ಮೋದಿಯವರು ಭಾರತವೂ ವಿಶ್ವದ ಔಷಧಾಲಯ ( pharmacy of the world )ವೆಂದು ಬಣ್ಣಿಸಿದ್ದರು. US ನಲ್ಲಿ ಮಾರಾಟವಾಗುವ  ಜೆನೆರಿಕ್ ಔಷಧಿಗಳಲ್ಲಿ ಸುಮಾರು 40% ಮತ್ತು UK ಯಲ್ಲಿ ವಿತರಿಸಲಾಗುವ ಎಲ್ಲಾ ಔಷಧಿಗಳಲ್ಲಿ ಕಾಲು ಭಾಗವು ಭಾರತದಿಂದ ಹೋಗುತ್ತವೆ. ಎಚ್ಐವಿ ವಿರುದ್ಧ ಹೋರಾಡಲು ದೇಶವು ಜಾಗತಿಕವಾಗಿ ಆಂಟಿ-ರೆಟ್ರೋವೈರಲ್ ಔಷಧಿಗಳನ್ನು ಮೂರನೇ ಎರಡರಷ್ಟು ಪೂರೈಸುತ್ತದೆ. 2014 ರಲ್ಲಿ ಭಾರತವು ಪೋಲಿಯೊ ಮುಕ್ತವಾಗೋದಿಕ್ಕೆ ಭಾರತದ ಲಸಿಕೆಯ ಕೊಡುಗೆ ಅಗಾಧ. ಕೋವಿಡ್ -19 ಎದುರಿಸೋದಿಕ್ಕೆ ಕೋವಿಡ್ vaccine ತಯಾರಿಸುವ ಮೂಲಕ  ಜಾಗತಿಕ ಮಟ್ಟದಲ್ಲಿ ತನ್ನ ಸಾಮರ್ಥ್ಯವನ್ನ ಎತ್ತಿ ಹಿಡಿದಿತ್ತು. ಹಾಗಿದ್ರು ಭಾರತದ ಜನರಿಕ್ ಔಷದಿ ಮತ್ತೂ ಓವರ್ ದಿ ಕೌಂಟರ್ ಸಿರಪ್ ಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ಪ್ರತಿ ಬಾರಿಯೂ ಸುರಕ್ಷಿತೆಯ ಕುರಿತಾಗಿ ಪ್ರಶ್ನೆಗಳನ್ನ ಹುಟ್ಟಿ ಹಾಕಿಸಿಕೊಳ್ಳುತ್ತನೇ ಇದೆ.

ಜಗತ್ತಿನ ಔಷದಾಲಯ ವೆಂದು ಕರೆಸಿಕೊಂಡರೂ ಇಂತಹ ಟ್ರಾಜಿಡಿ ಗಳು ನಡೆದಾಗ ಜಾಗತಿಕ ಮಟ್ಟದಲ್ಲಿ ಭಾರತದ ಹೆಸರು ಮತ್ತೇ ಮತ್ತೇ ಮುನ್ನೆಲೆ ಗೆ ಬಂದು ನಿಲ್ಲೋದಾದರೂ ಯಾಕೆ ..! ಪ್ರತಿ ಬಾರಿಯೂ  ವಿಶ್ವ ಆರೋಗ್ಯ ಸಂಸ್ಥೆಯು ಕೆಮ್ಮು ಸಿರಪ್ನ ಗುಣಮಟ್ಟದ ಮಾನದಂಡಗಳ ಕುರಿತಾಗಿ ವಿವರಣೆ ಕೇಳುತ್ತಲೇ ಇರುತ್ತೆ. ಸಾಮಾನ್ಯವಾಗಿ ಕಫ್ ಸಿರಪ್ ಗಳು ಓವರ್ ದಿ ಕೌಂಟರ್ ಮೆಡಿಸಿನ್ ಗಳಾಗಿ ಪರಿಗಣಿಸಲಾಗುತ್ತೆ. ಇಂತಹ ಔಷದಿಗಳನ್ನ ನಾವು ವೈದ್ಯರ prescription ಇಲ್ಲದೇ ನೇರವಾಗಿ ಮೆಡಿಕಲ್ ನಿಂದ ಕೊಂಡು ಕೊಳ್ಳಲಾಗುತ್ತೆ. ಹಾಗಾಗಿ ಸಾಮಾನ್ಯವಾಗಿ ಜನರು ಕೂಡಾ ಇದನ್ನೇ ಬಯಸುತ್ತಾರೆ. ಆದರೆ ಇಂತಹ ಗುಣ ಮಟ್ಟದ ಪರಿಶೀಲನೆಗೆ ಒಳಗಾಗದ ನಕಲಿ ಔಷದಿಗಳು ಮಾರುಕಟ್ಟೆ ಯಲ್ಲಿ ಓಡಾಡುತ್ತಾ ಇರುತ್ತೆ. ಇನ್ನೂ  ಜನರಿಕ್ ಮೆಡಿಸಿನ್ಸ್ ಬಗ್ಗೆ ಸಿಂಪಲ್ ಆಗಿ ಹೇಳೋದಾದ್ರೆ ಒರಿಜಿನಲ್ ಡ್ರಗ್ ಉತ್ಪಾದಕರ patent ಅವಧಿ ಮುಗಿದ ನಂತರ ಇತರೆ ಕಂಪನಿಗಳು ಮಾರುಕಟ್ಟೆಗೆ ತರುವ ಬ್ರಾಂಡೆಡ್ ಔಷಧಿಗಳ ಅಗ್ಗದ ಬೆಲೆಯ ಮೆಡಿಸಿನ್ಸ್ ಗಳಾಗಿರುತ್ತದೆ. ಬ್ರಾಂಡೆಡ್ ಔಷದಿ ಮತ್ತೂ ಈ ಜನರಿಕ್ ಮೆಡಿಸಿನ್ಸ್ ಗಳ ಸಾಮರ್ಥ್ಯ ಮತ್ತೂ ಪರಿಣಾಮ ಗಳು ಒಂದೇ ಆಗಿರುತ್ತವೆ. ಆದರೆ ಪ್ರತಿ ಬಾರಿಯೂ ಚರ್ಚೆಗೆ ಒಳಗಾಗೋದು ಔಷದಿಯ ಗುಣಮಟ್ಟದ ಬಗ್ಗೆ. ಯಾಕಂದ್ರೆ ಮೆಡಿಸಿನ್ಸ್ ನ ಗುಣ ಮಟ್ಟವು ಅಂದರೇ ಕ್ವಾಲಿಟಿ ಯೂ ಆಯಾ ದೇಶಗಳ regulatory ಸಂಸ್ಥೆ ಅಂದ್ರೆ ಫಾರ್ಮ ನಿಯಂತ್ರಣ ಮಂಡಳಿಯ ಮೇಲಿರುತ್ತವೆ.  ಈ ಹಿಂದೆ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರು ಭಾರತದ ಜನರಿಕ್ ಮೆಡಿಸಿನ್ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಜನರಿಕ್ ಔಷದಿಗಳನ್ನ prescription ಮಾಡಲು ಯಾವ ರೀತಿಯಲ್ಲಿ ಒತ್ತಡವಿರುತ್ತೆ ಅನ್ನೋ ಕುರಿತಾಗಿ ವಿವರಿಸುತ್ತಾರೆ. ಯಾಕಂದ್ರೆ ಭಾರತದಲ್ಲಿ ಜನರಿಕ್ ಔಷಧಿ ಯಾಗಿರಲಿ, ಓವರ್ ದಿ ಕೌಂಟರ್ ಸಿರಪ್ ಗಳಾಗಿರಲಿ, ಅವುಗಳ ಕ್ವಾಲಿಟಿ ಯ ಪರಿಶೀಲನೆಯಲ್ಲಿ ಬಿಗಿಯಾದ ನಿಯಂತ್ರಣ ವಿಲ್ಲ.

ಸಾಮಾನ್ಯವಾಗಿ ಜೆನೆರಿಕ್ ಔಷಧಿಗಳ ತಯಾರಕರು ಯುರೋಪಿಯನ್ ಮತ್ತು ಅಮೇರಿಕನ್ ಮಾರುಕಟ್ಟೆಗಳಿಗೆ ಉತ್ತಮ ಗುಣಮಟ್ಟದ ಔಷಧಿಗಳನ್ನು ಉತ್ಪಾದಿಸುತ್ತಾರೆ, ಅಲ್ಲಿ ನಿಯಂತ್ರಣವು ಬಿಗಿಯಾಗಿರುತ್ತದೆ ಆದರೆ ಭಾರತದಲ್ಲಿ ಕಳಪೆ ಮತ್ತು ಪರಿಣಾಮಕಾರಿಯಲ್ಲದ ಔಷಧಿಗಳನ್ನು ಮಾರಾಟ ಮಾಡುತ್ತವೆ ಎಂಬ ಗಂಭೀರ ವಾದವು ಇಲ್ಲಿದೆ. ಹಾಗಾಗಿ ಭಾರತದಲ್ಲಿ ತಯಾರಾಗುತ್ತಿರುವ ಜೆನೆರಿಕ್ ಔಷಧಗಳು ಎಲ್ಲಾ ನಿಯಂತ್ರಕ ಅನುಸರಣೆಯನ್ನು ಅನುಸರಿಸಿ ಸರಿಯಾದ ಮಾರ್ಗದ ಮೂಲಕ ಮಾರುಕಟ್ಟೆಗೆ ಬರಬೇಕು ಅನ್ನೋದು ಅವರ ವಾದವಾಗಿತ್ತು. ಅಗ್ಗದ ಔಷಧ ಎಂದೂ ಕ್ವಾಲಿಟಿ ಯಲ್ಲಿ ಕಾಂಪ್ರೊಮೈಸ್ ಮಾಡಿ ಮಾರುಕಟ್ಟೆ ಬಿಡೋದು ಸಾಮಾನ್ಯ ಜನರ ಜೀವನದಲ್ಲಿ ಆಟವಾಡಿದಂತೆ. ಯಾಕಂದ್ರೆ ಇಂತಹ ಜನರಿಕ್ ಮೆಡಿಸಿನ್ಸ್ prescribe ಮಾಡೋದೇ ಸರ್ಕಾರಿ ಆಸ್ಪತ್ರೆ ಗಳಲ್ಲಿ, ಜನ ಔಷದಿ ಕೇಂದ್ರಗಳಲ್ಲಿ. ಹಾಗಾಗಿ ಜಾಗತಿಕ ಮಟ್ಟದಲ್ಲಿ ಬಾರಿ ಚರ್ಚೆಗೆ ಒಳಗಾಗುತ್ತಿರುವ ಭಾರತದ ಫಾರ್ಮ ಉದ್ಯಮವೂ ತನ್ನ ನಂಬಿಕೆಯನ್ನ ಮತ್ತೇ ಮರುಸ್ಥಾಪಿಸುವ ಅಗತ್ಯವಿದೆ. ದೇಶದಲ್ಲಿ ನಕಲಿ ಔಷದಿಗಳಾಗಿರಲಿ, ಗುಣ ಮಟ್ಟದ ಪರಿಶೀಲನೆಗೆ ಒಳಗಾಗದೆ ಮಾರುಕಟ್ಟೆಯಲ್ಲಿ ಓಡಾಡುತ್ತಿರುವ ಯಾವುದೇ ಔಷದಿಗಳೇ ಆಗಿರಲಿ, ಇವುಗಳನ್ನ ಮಟ್ಟಹಾಕೋದಿಕ್ಕೆ ದೇಶದ  ಫಾರ್ಮ regulatory ಸಂಸ್ಥೆಯಾದ The Central Drugs Standard Control Organisation ಕಟ್ಟುನಿಟ್ಟಿನ ನಿಯಮಗಳನ್ನ ಜಾರಿಗೆ ತರಲೇಬೇಕಾಗಿದೆ. ಇಲ್ಲದಿದ್ದಲ್ಲಿ ಫಾರ್ಮಸಿ ಆಫ್ ದಿ ವರ್ಲ್ಡ್ ಎಂದೂ ಕರೆಸಿಕೊಳ್ಳುತ್ತಿರುವ ನಮ್ಮ ದೇಶ ಜೊತೆಗೇ  ಗುಣಮಟ್ಟವೇ ಆದ್ಯತೆ ಎಂಬ ಒಳ್ಳೆಯ motto ದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಇತರೆ ಸಂಸ್ಥೆಗಳು ಕೂಡಾ ಮುಂದೊಂದು ದಿನ ತನ್ನ ನಂಬಿಕೆಯನ್ನ ಮತ್ತೇ ಗಳಿಸೋದಿಕ್ಕೆ ಹಲವಾರು ಪರೀಕ್ಷೇಗೆ ಒಳಗಾಗಲೇಬೇಕಾಗುತ್ತೆ ಅನ್ನೋದಂತೂ ಸುಳ್ಳಲ್ಲ.

Sulekha