ಮದುವೆಯಲ್ಲಿ ವಧುವಿಗೆ ₹1.11 ಕೋಟಿ ಹಣ ಗಿಫ್ಟ್ ಕೊಟ್ಟ ಮಾವ

ಮದುವೆಯಲ್ಲಿ ವಧುವಿಗೆ ₹1.11 ಕೋಟಿ ಹಣ ಗಿಫ್ಟ್ ಕೊಟ್ಟ ಮಾವ

ಮದುವೆ ಅಂದ ಮೇಲೆ ಸಂಭ್ರಮ ಇದ್ದದ್ದೇ. ಮದುವೆ ವೇಳೆ ಮದುಮಕ್ಕಳಿಗೆ ಉಡುಗೊರೆ ನೀಡುವುದು ಕಾಮನ್. ಅದ್ರಲ್ಲೂ ಹತ್ತಿರದ ಸಂಬಂಧಿಗಳಾದ್ರೆ ಸ್ವಲ್ಪ ಜಾಸ್ತಿ ಬೆಲೆ ಬಾಳೋ ಗಿಫ್ಟ್ ನೇ ಕೊಡ್ತಾರೆ. ಬಟ್ಟೆ, ಚಿನ್ನ, ಗೃಹಬಳಕೆ ವಸ್ತುಗಳು ಇಲ್ಲದಿದ್ರೆ ಹಣ. ಹೀಗೇ ತಮ್ಮಿಷ್ಟದ ಹಾಗೂ ತಮ್ಮ ಕೈಲಾದಷ್ಟು ಕಾಣಿಕೆ ಕೊಡ್ತಾರೆ. ಆದ್ರೆ ಇಲ್ಲಿ ಸೋದರ ಸೊಸೆಗೆ ಮಾವ ಕೊಟ್ಟಿರೋ ಉಡುಗೊರೆ ನೋಡಿದ್ರೆ ನೀವೇ ಶಾಕ್ ಆಗ್ತೀರಾ.

ಮದುವೆ ವೇಳೆ ಗಿಫ್ಟ್ ಕೊಡೋದು ಇದ್ದದ್ದೇ. ಆದ್ರೆ ಈ ಮದುವೆಯಲ್ಲಿ ಸೋದರ ಸೊಸೆಗೆ ಮಾವ ಬಂಡಲ್​ಗಟ್ಟಲೆ ಹಣ ಕೊಟ್ಟಿದ್ದಾರೆ. ಇಡೀ ಮದುವೆ ಮನೆಯೇ ಬೆಕ್ಕಸ ಬೆರಗಾಗುವಂತಹ ಕಾಣಿಕೆ ನೀಡಿದ್ದಾರೆ. ಸಾವಿರ, ಲಕ್ಷ ಅಲ್ಲ ಬರೋಬ್ಬರಿ 1.11 ಕೋಟಿ ಕ್ಯಾಶ್ ನ ಗಿಫ್ಟ್ ಆಗಿ ನೀಡಿದ್ದಾರೆ. ಎಲ್ಲವೂ ಕೂಡ 500 ರೂಪಾಯಿ ಮುಖಬೆಲೆಯ ನೋಟುಗಳು. ಕಂತೆ ಕಂತೆ ನೋಟುಗಳನ್ನ ನೋಡಿ ಮದುವೆಗೆ ಬಂದವರೆಲ್ಲಾ ಹುಬ್ಬೇರಿಸಿದ್ದಾರೆ.

ಇದನ್ನೂ ಓದಿ: ಪಾತಾಳಕ್ಕೆ ಕುಸಿದ ಪಾಕ್‌ ಆರ್ಥಿಕತೆ – ಒಂದು ಸೈಡ್ ಮಾತ್ರ ನೋಟು ಪ್ರಿಂಟ್!

ಹರ್ಯಾಣದಲ್ಲಿ ನಡೆದ ಮದುವೆಯಲ್ಲಿ ಇಂಥಾದ್ದೊಂದು ಘಟನೆ ನಡೆದಿದೆ. ಸದ್ಗುರುದಾಸ್ ಎನ್ನುವವರ  ಪುತ್ರಿ ಶಿವಾನಿ ಮತ್ತು ಶೀತಲ್ ಅವರ ವಿವಾಹವು ಜಜ್ಜರ್ ಜಿಲ್ಲೆಯ ಸಿಕಂದರಪುರ ಗ್ರಾಮದಲ್ಲಿ ನಡೆದಿತ್ತು. ಮದುವೆಗೂ ಕೆಲ ಗಂಟೆಗಳ ಮೊದಲು ಕಾರ್ಯಕ್ರಮಗಳನ್ನ ಏರ್ಪಡಿಸಲಾಗಿತ್ತು. ಸಂಬಂಧಿಗಳೆಲ್ಲಾ ಒಂದಾಗಿ ಡ್ಯಾನ್ಸ್ ಮಾಡುವ ಸಂಭ್ರಮಿಸುತ್ತಿದ್ದರು. ಈ ವೇಳೆ ಕೆಲವ್ರು ಮದುಮಕ್ಕಳಿಗೆ ತಾವು ತಂದ ಉಡುಗೊರೆಗಳನ್ನ ನೀಡ್ತಿದ್ರು. ಆಗ ವಧು ಶಿವಾನಿಯ ಸೋದರ ಮಾವ ಓಂಪ್ರಕಾಶ್ ಎನ್ನುವವರು ತಮ್ಮ ತಂಗಿಯ ಮಗಳಿಗೆ ದುಡ್ಡಿನ ಬಂಡಲ್​ಗಳನ್ನು ತೆಗೆದು ಕೊಟ್ಟಿದ್ದಾರೆ. ಅದೂ ಕೂಡ ಒಂದಲ್ಲ ಎರಡಲ್ಲ ಬರೋಬ್ಬರಿ 1.11 ಕೋಟಿ ರೂಪಾಯಿಯಷ್ಟು ನೋಟುಗಳು.

ಓಂ ಪ್ರಕಾಶ್ ಅವರು ಈ ಹಿಂದೆಯೇ ತಮ್ಮ ತಂಗಿಯ ಇಬ್ಬರು ಮಕ್ಕಳ ಮದುವೆಗೆ 15 ತೊಲ ಚಿನ್ನ ಹಾಗೂ ಅರ್ಧ ಕೆಜಿ ಬೆಳ್ಳಿಯನ್ನು ನೀಡಿದ್ದರು. ಇದೀಗ ಮೂರನೇ ಮಗಳ ಮದುವೆಗೆ ಭರ್ಜರಿ ಉಡುಗೊರೆಯನ್ನೇ ನೀಡಿದ್ದಾರೆ. ಇನ್ನು ಓಂಪ್ರಕಾಶ್ ಅವ್ರು ಜಮೀನುದಾರರಾಗಿದ್ದು ಶ್ರೀಮಂತ ಕುಟುಂಬವಾಗಿದೆ. ಹೀಗಾಗಿ ತಮ್ಮ ಅಂತಸ್ತಿನಂತೆಯೇ ಕಾಣಿಕೆಯಲ್ಲೂ ದೊಡ್ಡಸ್ತಿಕೆ ತೋರಿಸಿದ್ದಾರೆ. ಕೆಲವ್ರು ಈ ಗಿಫ್ಟ್ ನೋಡಿ ದುಡ್ಡಿರೋರು ಕೊಡ್ತಾರೆ ಅಂತಿದ್ರೆ ಇನ್ನೂ ಕೆಲವ್ರು ಆಶ್ಚರ್ಯಗೊಂಡಿದ್ದಾರೆ.

Shwetha M