ಮನೆಯೊಳಗೆ ಚಪ್ಪಲಿ ಬಳಸುತ್ತೀರಾ? – ತಪ್ಪದೇ ಈ ಸ್ಟೋರಿ ಓದಿ

ಹಿಂದೆಲ್ಲಾ ಮನೆಯೊಳಗೆ ಚಪ್ಪಲಿ ಇಡುತ್ತಿರಲಿಲ್ಲ. ಆದ್ರೆ ಎಲ್ಲರೂ ಮನೆಯೊಳಗೆ ಚಪ್ಪಲಿ ಬಳಸುತ್ತಾರೆ. ವಾಸ್ತು ಶಾಸ್ತ್ರದಲ್ಲಿ ನಾವು ಧರಿಸುವ ಚಪ್ಪಲಿಗಳ ಬಗ್ಗೆಯೂ ನಿಯಮಗಳಿವೆ. ವಾಸ್ತು ಶಾಸ್ತ್ರಜ್ಞರು ಹೇಳುವಂತೆ ಚಪ್ಪಲಿಗಳನ್ನು ತಪ್ಪಾಗಿ ಇಡುವುದು, ಅಡುಗೆಮನೆ ಅಥವಾ ಪೂಜಾ ಕೋಣೆಯಲ್ಲಿ ಪಾದರಕ್ಷೆಗಳನ್ನು ಧರಿಸುವುದರಿಂದ ಅಶಾಂತಿ, ಅಡೆತಡೆಗಳು ಮತ್ತು ನಕಾರಾತ್ಮಕತೆ ಹೆಚ್ಚಾಗುತ್ತದೆ.
ಇದನ್ನೂ ಓದಿ: ಶಬರಿಮಲೆ ಅಯ್ಯಪ್ಪ ದೇವಾಲಯದ 18 ಪವಿತ್ರ ಮೆಟ್ಟಿಲುಗಳ ಮಹತ್ವವೇನು? -ಅಯ್ಯಪ್ಪನ ಭಕ್ತರು ಇದನ್ನು ತಪ್ಪದೇ ತಿಳಿದುಕೊಳ್ಳಿ
ಜ್ಯೋತಿಷಿ ಸಂಜೀತ್ ಕುಮಾರ್ ಮಿಶ್ರಾ ಅವರ ಪ್ರಕಾರ, ಅಡುಗೆಮನೆಗೆ ಶೂ ಧರಿಸಿ ಪ್ರವೇಶಿಸುವ ವ್ಯಕ್ತಿಯ ಮೇಲೆ ಗ್ರಹಗಳು ನಕಾರಾತ್ಮಕ ಪರಿಣಾಮವನ್ನು ಬೀರಬಹುದು. ಶೂಗಳು ಮಾತ್ರವಲ್ಲ, ಹೊರಗೆ ಧರಿಸುವ ಚಪ್ಪಲಿಗಳು ಸಹ ಈ ವರ್ಗಕ್ಕೆ ಸೇರುತ್ತವೆ. ನಿಮಗೆ ಬರಿಗಾಲಿನಲ್ಲಿ ನಡೆಯಲು ಸಾಧ್ಯವಾಗದಿದ್ದರೆ ಅಡುಗೆಮನೆಗೆ ಬಳಸಲೆಂದೇ ಬೇರೆ ಚಪ್ಪಲಿಗಳನ್ನು ಇಟ್ಟುಕೊಳ್ಳಲು ಪ್ರಯತ್ನಿಸಿ ಅಥವಾ ಡೋರ್‌ಮ್ಯಾಟ್ ಬಳಸಿ.
ಹಳೆಯ ಚಪ್ಪಲಿಗಳು ಶನಿ ಮತ್ತು ರಾಹುವನ್ನು ಆಕರ್ಷಿಸುತ್ತವೆ. ಇದು ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ, ಯಾವಾಗಲೂ ಸ್ವಚ್ಛವಾದ ಬಟ್ಟೆ ಮತ್ತು ಚಪ್ಪಲಿ ಶೂಗಳನ್ನು ಧರಿಸುವುದರಿಂದ ನಿಮ್ಮ ವ್ಯಕ್ತಿತ್ವ ಸುಧಾರಿಸುತ್ತದೆ. ಅನೇಕ ಜನರು ಹೊರಗೆಡೆ ಹಾಕಿಕೊಂಡು ಹೋಗಿದ್ದ ಚಪ್ಪಲಿಗಳನ್ನು ಮನೆಯೊಳಗೆ ಹಾಕಿಕೊಂಡು ಬಂದು ಹಾಸಿಗೆಯ ಬಳಿ ಅವುಗಳನ್ನು ತೆಗೆಯುತ್ತಾರೆ, ಅದು ಸರಿಯಲ್ಲ. ಶೆಲ್ಫ್‌ನಲ್ಲಿ ನಿರ್ದಿಷ್ಟ ಸ್ಥಳದಲ್ಲಿ ಶೂಗಳನ್ನು ಇರಿಸಿ. ತಲೆಯ ಬಳಿ ಶೂಗಳನ್ನು ಇಟ್ಟುಕೊಳ್ಳುವುದರಿಂದ ಮಾನಸಿಕ ಸಮಸ್ಯೆಗಳ ಜೊತೆಗೆ ಒತ್ತಡವೂ ಹೆಚ್ಚಾಗುತ್ತದೆ.

ನೋಡಿರಿ

