ಪಿಜಿ, ಹಾಸ್ಟೆಲ್‌ಗಳ ವಿಚಾರದಲ್ಲಿ ಪಾಲಿಕೆ ಅಲರ್ಟ್ – ಮಾರ್ಗಸೂಚಿ ಪಾಲಿಸದಿದ್ದರೆ ಬೀಗ ಗ್ಯಾರಂಟಿ

ಪಿಜಿ ಮತ್ತು ಹಾಸ್ಟೆಲ್ ವಿಚಾರದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಲರ್ಟ್ ಆಗಿದೆ. ಇತ್ತೀಚೆಗೆ ಪಿಜಿಯಲ್ಲಿ ಸಿಲಿಂಡರ್ ಸ್ಫೋಟ ಪ್ರಕರಣ ಹೆಚ್ಚಾಗಿದ್ದು ಈ ವಿಚಾರದಲ್ಲಿ ಪಾಲಿಕೆ ಎಚ್ಚೆತ್ತುಕೊಂಡಿದೆ. ಹೀಗಾಗಿ ಪಿಜಿ ಮತ್ತು ಹಾಸ್ಟೆಲ್‌ಗಳಿಗೆ ಪಾಲಿಕೆ ಕಠಿಣ ಮಾರ್ಗಸೂಚಿ ಹೊರಡಿಸಿದೆ.
ಇದನ್ನೂ ಓದಿ:ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಕಮೆಂಟ್ ಕೇಸ್ – ಇಬ್ಬರು ಆರೋಪಿಗಳು ಅರೆಸ್ಟ್!
ಬೆಂಗಳೂರಿನ ಪಿಜಿಗಳಲ್ಲಿ , ಹಾಸ್ಟೆಲ್ಗಳಲ್ಲಿ ಸಿಲಿಂಡರ್ ಸ್ಫೋಟದ ಪ್ರಕರಣ ಹೆಚ್ಚುತ್ತಿದೆ. ಹೀಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಈ ಪ್ರಕರಣ ತಡೆಯಲು ಕೆಲವೊಂದು ಮಾರ್ಗಸೂಚಿ ಹೊರಡಿಸಿದೆ. ಅಧಿಕಾರಿಗಳು ಮೆಗಾ ಡ್ರೈವ್ ನಡೆಸಿ ನಿಯಮ ಪಾಲನೆಗೆ ಒಂದು ವಾರದ ಡೆಡ್‌ಲೈನ್ ನೀಡಿದ್ದಾರೆ. ಪಾಲಿಕೆಯಿಂದ ನೀಡಲಾದ ನಿಯಮ ಮೀರಿದರೆ ಪರವಾನಗಿ ರದ್ದು ಮಾಡಿ ಸೀಲ್ ಹಾಕುವ ಎಚ್ಚರಿಕೆ ನೀಡಲಾಗಿದೆ. ಸುರಕ್ಷತಾ ದೃಷ್ಟಿಯಿಂದ ಕಟ್ಟುನಿಟ್ಟಿನ ನಿಯಮ ಪಾಲನೆ ಮಾಡಬೇಕೆಂದು ತಾಕೀತು ಮಾಡಲಾಗಿದೆ.
ಇತ್ತೀಚಿನ ದಿನಗಳಲ್ಲಿ ಪಿಜಿಗಳಲ್ಲಿ ಅಕ್ರಮ ಅನಿಲ ಸಂಪರ್ಕ, ಅಸುರಕ್ಷಿತ ಸಿಲಿಂಡರ್ ಬಳಕೆ, ವಿದ್ಯುತ್ ಓವರ್‌ಲೋಡ್ ಪ್ರಕರಣಗಳು ಬಯಲಿಗೆ ಬಂದಿವೆ. ಇದನ್ನು ತಡೆಯಲು ಪಾಲಿಕೆ ಕಠಿಣ ನಿರ್ಧಾರ ಕೈಗೊಂಡಿದೆ. ಪಿಜಿ ಮಾಲೀಕರು ಮತ್ತು ನಿರ್ವಾಹಕರು ಸುರಕ್ಷಾ ನಿಯಮಗಳನ್ನು ಪಾಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಪಾಲಿಕೆ ನೀಡಿರುವ ಪ್ರಮುಖ ಸುರಕ್ಷಾ ಮಾರ್ಗಸೂಚಿಗಳೆಂದರೆ, ಅಧಿಕೃತ ಮತ್ತು ಸುರಕ್ಷಿತ ಅನಿಲ ಸಂಪರ್ಕಗಳನ್ನು ಮಾತ್ರ ಬಳಸಬೇಕು, ಅಕ್ರಮ ಮತ್ತು ಅಸುರಕ್ಷಿತ ಅನಿಲ ಸಿಲಿಂಡರ್‌ಗಳ ಬಳಕೆಗೆ ಸಂಪೂರ್ಣ ನಿಷೇಧ, ಸರಿಯಾದ ಗಾಳಿ ಆವರ್ತನ ಮತ್ತು ಅಗ್ನಿಶಾಮಕ ಉಪಕರಣಗಳನ್ನು ಕಡ್ಡಾಯವಾಗಿ ಇರಿಸಬೇಕು. ಓವರ್‌ಲೋಡ್ ತಪ್ಪಿಸಿ ಸುರಕ್ಷಿತ ವಿದ್ಯುತ್ ಸಂಪರ್ಕ ಬಳಸಬೇಕು. ಪಾಲಿಕೆ ಅಧಿಕಾರಿಗಳು ಪಿಜಿ, ಹಾಸ್ಟಲ್ ಮತ್ತು ಸರ್ವೀಸ್ ಅಪಾರ್ಟ್‌ಮೆಂಟ್‌ಗಳಲ್ಲಿ ಮೆಗಾ ಡ್ರೈವ್ ನಡೆಸಿ ನಿಯಮ ಪಾಲನೆ ಬಗ್ಗೆ ಪರಿಶೀಲಿಸುತ್ತಿದ್ದಾರೆ. ಒಂದು ವಾರದೊಳಗೆ ಎಲ್ಲ ಸುರಕ್ಷಾ ನಿಯಮಗಳನ್ನು ಪಾಲಿಸಬೇಕು ಎಂದು ಸೂಚನೆ ನೀಡಲಾಗಿದೆ. ನಿಯಮ ಮೀರಿದರೆ ಪರವಾನಗಿ ರದ್ದುಗೊಳಿಸಿ ಪಿಜಿಗೆ ಸೀಲ್ ಹಾಕಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ನೋಡಿರಿ

