ದೇಶದಾದ್ಯಂತ ಕೊರೊನಾ ಆರ್ಭಟ – ಕರ್ನಾಟಕದಲ್ಲೇ ರೂಪಾಂತರಿ ಜೆಎನ್.1 ಗರಿಷ್ಠ ಕೇಸ್!
ದೇಶದಾದ್ಯಂತ ಕೋವಿಡ್ ರೂಪಾಂತರಿ ಜೆಎನ್.1 ಅರ್ಭಟ ಜೋರಾಗಿದೆ. ದಿನದಿಂದ ದಿನಕ್ಕೆ ವೇಗವಾಗಿ ಹರಡುತ್ತಿದೆ. ಇದೀಗ ಜೆಎನ್.1 ಪ್ರಕರಣಗಳ ಸಂಖ್ಯೆ 511 ಕ್ಕೆ ಏರಿಕೆಯಾಗಿದೆ. ಈ ಪೈಕಿ ರಾಜ್ಯದಲ್ಲಿಯೇ 199 ಪಾಸಿಟಿವ್ ಕೇಸ್ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಅವಳಿ ಬಾಂಬ್ ಸ್ಫೋಟ – 100ಕ್ಕೂ ಅಧಿಕ ಮಂದಿ ಸಾವು, 150ಕ್ಕೂ ಹೆಚ್ಚು ಮಂದಿಗೆ ಗಾಯ
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಕಳೆದ 24 ಗಂಟೆಗಳ ಅವಧಿಯಲ್ಲಿ ಗಂಟೆಗಳಲ್ಲಿ 760 ಹೊಸ ಕೋವಿಡ್ 19 ಪ್ರಕರಣಗಳು ಪತ್ತೆಯಾಗಿದೆ, ಇಬ್ಬರು ಮೃತಪಟ್ಟಿದ್ದಾರೆ. ಇನ್ನು ಕೊರೊನಾ ರೂಪಾಂತರಿ ತಳಿ ಜೆಎನ್ ಪ್ರಕರಣಗಳ ಸಂಖ್ಯೆ 511 ಕ್ಕೆ ಏರಿಕೆಯಾಗಿದ್ದು, ಈ ಪೈಕಿ ರಾಜ್ಯದಲ್ಲಿಯೇ 199 ಪಾಸಿಟಿವ್ ಕೇಸ್ ಪತ್ತೆಯಾಗಿದೆ. ಇದುವರೆಗೆ ಅತ್ಯಂತ ಹೆಚ್ಚು ಪ್ರಕರಣ ಗಳಿದ್ದ ಕೇರಳದಲ್ಲಿ ಈಗ 148 ಕೇಸು ಗಳಿದ್ದು, ಆ ರಾಜ್ಯ ದ್ವಿತೀಯ ಸ್ಥಾನ ಪಡೆದು ಕೊಂಡಿದೆ. ಇನ್ನು ಗೋವಾದಲ್ಲಿ 47, ಗುಜರಾತ್ನಲ್ಲಿ 36, ಮಹಾರಾಷ್ಟ್ರದಲ್ಲಿ 32, ತಮಿಳುನಾಡಿನಲ್ಲಿ 26, ದಿಲ್ಲಿಯಲ್ಲಿ 15 ಪ್ರಕರಣಗಳು ದೃಢಪಟ್ಟಿವೆ.
ಕರ್ನಾಟಕದಲ್ಲಿ ಬುಧವಾರ 260 ಮಂದಿಯಲ್ಲಿ ಕೋವಿಡ್ ದೃಢಪಟ್ಟಿದೆ. ಈ ಪೈಕಿ ಬೆಂಗಳೂರಲ್ಲೇ 134 ಕೋವಿಡ್ ಕೇಸುಗಳಿವೆ. ಕೊಪ್ಪಳದಲ್ಲಿ ಓರ್ವರು ಮೃತಪಟ್ಟಿದ್ದಾರೆ. 7,497 ಮಂದಿಗೆ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದ್ದು, ಶೇ. 3.46 ಪಾಸಿಟಿವಿಟಿ ದರ ದಾಖ ಲಾಗಿದೆ. 228 ಮಂದಿ ಕೋವಿಡ್ ಮುಕ್ತರಾಗಿದ್ದಾರೆ. ಸದ್ಯ 1,175 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ ಹೋಮ್ ಐಸೊಲೇಷನ್ನಲ್ಲಿ 1,107 ಮಂದಿ, ಆಸ್ಪತ್ರೆಯಲ್ಲಿ 68, ವೆಂಟಿಲೇಟರ್ ಸಹಿತ ಐಸಿಯುನಲ್ಲಿ ನಾಲ್ವರು ಮತ್ತು ಐಸಿಯುನಲ್ಲಿ 17 ಮಂದಿ ಇದ್ದಾರೆ.