ಸಿಂಗಾಪುರದಲ್ಲಿ ಮತ್ತೆ ಕೊರೋನಾ ಕಾಟ! – ಎರಡು ವಾರಗಳಲ್ಲಿ 2,000 ಪಾಸಿಟಿವ್ ಕೇಸ್
ಸಿಂಗಾಪುರ: ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿ ಎಂಬಂತೆ ಕೊರೊನಾ ಮತ್ತೆ ತನ್ನ ವರಸೆ ಶುರುಮಾಡಿದೆ. ವಿಶ್ವದಲ್ಲಿ ಎಲ್ಲವೂ ಸಹಜ ಸ್ಥಿತಿಗೆ ಮರಳುವ ಹೊತ್ತಲ್ಲೇ ಮತ್ತೆ ಕೊರೋನಾ ಕರಿನೆರಳು ಬಿದ್ದಿದೆ. ರೂಪಾಂತರಗೊಂಡ ಮಹಾಮಾರಿ ಕೊರೊನಾ ವೈರಸ್ನ ಹೊಸ ಪ್ರಭೇದ ಸಿಂಗಾಪುರದಲ್ಲಿ ಕಾಣಿಸಿಕೊಂಡಿದ್ದು ಅದು ನಿಯಂತ್ರಣ ಮೀರಿ ವ್ಯಾಪಿಸುತ್ತಿರುವುದು ಆತಂಕ ಹೆಚ್ಚು ಮಾಡಿದೆ.
ಸಿಂಗಾಪುರದಲ್ಲಿ ಕಳೆದ ಮೂರು ವಾರಗಳ ಹಿಂದೆ ಇದ್ದ 1,000 ದೈನಿಕ ಪ್ರಕರಣಗಳು ಕಳೆದ ಎರಡು ವಾರಗಳಲ್ಲಿ 2,000ಕ್ಕೆ ಪಾಸಿಟಿವ್ ಏರಿದೆ. ಆದರೆ ಸರ್ಕಾರ ಇದನ್ನು “ಎಂಡೆಮಿಕ್ ರೋಗ’ವಾಗಿ ಪರಿಗಣಿಸುತ್ತದೆ ಎಂದು ಸಿಂಗಾಪುರ ಆರೋಗ್ಯ ಸಚಿವ ಆಂಗ್ ಯೇ ಕುಂಗ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮಕ್ಕಳ ಮೇಲಿನ ದೌರ್ಜನ್ಯ ದೃಶ್ಯ – ಯೂಟ್ಯೂಬ್ ಸೇರಿ ಸೋಶಿಯಲ್ ಮೀಡಿಯಾಗಳಿಗೆ ಕೇಂದ್ರ ಖಡಕ್ ಸೂಚನೆ!
ಇತ್ತೀಚಿನ ಕೋವಿಡ್ ಉಲ್ಬಣಕ್ಕೆ ಇಜಿ.5 ಮತ್ತು ಅದರ ಉಪ-ಪ್ರಭೇದ ಎಚ್ಕೆ.3 ಕಾರಣವೆಂದು ಹೇಳಲಾಗಿದೆ. ಇವೆರಡೂ ಎಕ್ಸ್ಬಿಬಿ ಒಮಿಕ್ರಾನ್ ತಳಿಯ ಪ್ರಭೇದಗಳಾಗಿವೆ. ಹಾಲಿ ದೈನಿಕ ಪ್ರಕರಣಗಳಲ್ಲಿ ಈ ಎರಡು ತಳಿಗಳ ಪಾಲು ಶೇ. 75ರಷ್ಟಿದೆ ಎಂದು ಸಿಂಗಾಪುರ ಸಚಿವರು ವಿವರಿಸಿದ್ದಾರೆ.
ಕೋವಿಡ್-19 ಸೋಂಕಿನ ಮತ್ತೊಂದು ಅಲೆ ಕಾಡುವ ಅಪಾಯ ತಲೆದೋರಿದ್ದು ಮುಂಬರುವ ವಾರಗಳಲ್ಲಿ ಜನರು ಅನಾರೋಗ್ಯದಿಂದ ಆಸ್ಪತ್ರೆಗಳಿಗೆ ದಾಖಲಾಗಬೇಕಾದೀತು ಎಂದು ಸಿಂಗಾಪುರ ಆರೋಗ್ಯ ಸಚಿವ ಆಂಗ್ ಯೇ ಕುಂಗ್ ಎಚ್ಚರಿಸಿದ್ದಾರೆ.