ಕೂಲಿ ಮುಂದೆ ಜಗ್ಗದ ಸು ಫ್ರಮ್ ಸೋ – ವಾರ್‌ಗೂ ಎದೆಕೊಟ್ಟ ರಾಜ್ B ಶೆಟ್ಟಿ
ಯಾರು ಸ್ಟ್ರಾಂಗ್? ಕಲೆಕ್ಷನ್ ಎಷ್ಟು?

ಕೂಲಿ ಮುಂದೆ ಜಗ್ಗದ ಸು ಫ್ರಮ್ ಸೋ – ವಾರ್‌ಗೂ ಎದೆಕೊಟ್ಟ ರಾಜ್ B ಶೆಟ್ಟಿಯಾರು ಸ್ಟ್ರಾಂಗ್? ಕಲೆಕ್ಷನ್ ಎಷ್ಟು?

ಬಾಕ್ಸಾಫೀಸ್‌ನಲ್ಲಿ  ಕೂಲಿ ಮತ್ತು ವಾರ್ ಆರ್ಭಟ ಜೋರಾಗಿದೆ. ಕೂಲಿ ಮತ್ತು ವಾರ್ ಒಂದೇ ದಿನ ರಿಲೀಸ್ ಆಗಿ ಸಿನಿ ಪ್ರೇಕ್ಷಕರು ರಂಜಿಸಿ ಭರ್ಜರಿ ಕಲೆಕ್ಷನ್ ಮಾಡ್ತಿದೆ.. ಈ ಸಿನಿಮಾ ಬಂದ ಮೇಲೆ ಹೌಸ ಫುಲ್ ಪ್ರದರ್ಶನ ಕಾಣುತ್ತಿದ್ದ  ಸು ಫ್ರಮ್ ಸೋ ಮಕಾಡೆ ಮಲುಗುತ್ತೆ ಅಂತ ಎಲ್ಲರೂ ಅಂದ್ಕೊಂಡಿದ್ರು. ಆದ್ರೆ ಯಾರೇ ಬಂದ್ರೂ ನಾನ್ ತಗ್ಗೂದೇ ಇಲ್ಲ ಅಂತ ಸು ಫ್ರಮ್ ಸೋ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಇದೇ ಗುರುವಾರ ಬಿಗ್ ಸ್ಟಾರ್ ಮತ್ತು ಬಿಗ್ ಬಜೆಟ್ ಮೂವಿಗಳಾದ ಕೂಲಿ ಮತ್ತು ವಾರ್ 2 ಚಿತ್ರಗಳು ರಿಲೀಸ್ ಆಗಿವೆ.. ಎರಡೂ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಮಟ್ಟದ ಗಳಿಕೆಯನ್ನು ಗಳಿಸುತ್ತಿವೆ. ಇವೆರೆಡು ಚಿತ್ರಗಳ ನಡುವೆ ಕನ್ನಡದ ಚಿತ್ರ ಸು ಫ್ರಮ್ ಸೋ 100 ಕೋಟಿ ಕ್ಲಬ್ ಗೆ ಸೇರುವತ್ತ ದಾಪುಗಾಲು ಇಟ್ಟಿದೆ. ಈಗಾಗಲೇ 75 ಕೋಟಿಗೂ  ಹೆಚ್ಚು ಕಲೆಕ್ಷನ್ ಮಾಡಿದೆ ಈ ಸಿನಿಮಾ.. ಯಾವುದೇ ಅಬ್ಬರ ಇಲ್ಲದೇ ಬಂದ ಸು ಪ್ರಮ್ ಸೋ ಸಿನಿಮಾ ಬಿಡುಗಡೆ ಕಂಡ ದಿನದಿಂದ ಅದ್ಬುತ ಕಲೆಕ್ಷನ್  ಮಾಡ್ತಿದೆ. ವೀಕ್ ಡೇ ನಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ವೀಕೆಂಡ್‌ನಲ್ಲಂತೂ ಡಬಲ್ ಕಲೆಕ್ಷನ್ ಮಾಡ್ತಿದೆ. ವಾರ್ 2 ಮತ್ತು ಕೂಲಿ ಚಿತ್ರ  ರಿಲೀಸ್ ಆದ ಮೇಲೆ  ಸು ಫ್ರಮ್ ಸೋ ಕಲೆಕ್ಷನ್ ಡಲ್ ಆಗುತ್ತೆ.. ಥಿಯೇಟರ್‌ನಿಂದ ಎತ್ತಗಂಡಿ ಆಗುತ್ತೆ ಅಂತ ಎಲ್ಲರು ಅಂದ್ಕೊಂಡಿದ್ರು. ಆದ್ರೆ  ಕೂಲಿ ಮತ್ತು ವಾರ್ 2 ಚಿತ್ರ ರಿಲೀಸ್ ಆದ್ರೂ ಸು ಫ್ರಮ್ ಸೋ ಸಿನಿಮಾ ಮೇಲೆ ಯಾವುದೇ ಎಫೆಕ್ಟ್ ಬಿದ್ದಿಲ್ಲ.  ಬೆಂಗಳೂರು ಸೇರಿದಂತೆ ಕೇರಳ ಮತ್ತು ಹೈದರಾಬಾದ್ ನಲ್ಲಿ ಎಂದಿನಂತೆ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಶೋಗಳು ನಡೆಯುತ್ತಿವೆ. ಸಾಕಷ್ಟು ಗಳಿಕೆಯನ್ನು ಕಾಣುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನದಲ್ಲಿ ಈ ಚಿತ್ರ 100 ಕೋಟಿ ಕ್ಲಬ್ ಸೇರಲಿದೆ ಎಂದು ನಿರೀಕ್ಷಿಸಲಾಗಿದೆ . ಸ್ಟಾರ್ ನಟರ ಸಿನಿಮಾ ಬಂದ್ರೂ  ಸು ಫ್ರಮ್ ಸೋ ಸಿನಿಮಾವನ್ನ ಯಾವ ಥಿಯೇಟರ್‌ನಿಂದಲೂ ತೆಗೆಯದೇ ಶೋ ನೀಡುತ್ತಿದ್ದಾರೆ .

2 ದಿನದಲ್ಲಿ ಕೂಲಿ – ವಾರ್ ಸೇರಿ 250 ಕೋಟಿ ಕಲೆಕ್ಷನ್

ಇನ್ನೂ ಕೂಲಿ ಮತ್ತು ವಾರ್ ಸಿವಿಮಾಗಳ ವಿಚಾರಕ್ಕೆ ಬಂದ್ರೂ ಪ್ಲ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಎರಡು ಸಿನಿಮಾಗಳು ಭರ್ಜರಿ ಕಲೆಕ್ಷನ್ ಮಾಡ್ತಿವೆ.  ರಜನಿಕಾಂತ್ ಮುಖ್ಯಭೂಮಿಕೆಯಲ್ಲಿರುವ  ಕೂಲಿ ಮತ್ತು ಹೃತಿಕ್ ರೋಷನ್ – ಜೂನಿಯರ್ ಎನ್‌ಟಿಆರ್ ಇದೇ ಮೊದಲ ಬಾರಿಗೆ ಸ್ಕ್ರೀನ್​ ಶೇರ್ ಮಾಡಿದ ‘ವಾರ್ 2’ ಚಿತ್ರಗಳು ಆಗಸ್ಟ್ 14 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿವೆ. ಮಿಶ್ರ ಪ್ರತಿಕ್ರಿಯೆಗಳ ನಡುವೆ ಎರಡೂ ಸಿನಿಮಾಗಳು ಬಹುತೇಕ ಮೆಚ್ಚುಗೆಯನ್ನೇ ಪಡೆದು ಮುನ್ನುಗ್ಗುತ್ತಿವೆ.

150 ಕೋಟಿ ಗಡಿ ದಾಟಿದ ಕೂಲಿ

ರಜಿನಿಕಾಂತ್ ಅಭಿನಯನದ ಕೂಲಿ ಮೊದಲ ದಿನ 65 ಕೋಟಿ ಕಲೆಕ್ಷನ್ ಮಾಡಿದ್ರೆ ಎರಡನೇ ದಿನ 53 ಕೋಟಿ ಕಲೆಕ್ಷನ್ ಮಾಡಿದೆ. ಮೊದಲ ಎರಡು ದಿನದಲ್ಲೇ 118 ಕಲೆಕ್ಷನ್ ಮಾಡಿದೆ. ಇನ್ನೂ ವೀಕೆಂಡ್ ಇರೋದ್ರಿಂದ ಶನಿವಾರ ಮತ್ತು ಭಾನುವಾರ ಕೂಲಿ ಸಿನಿಮಾದ ಕಲೆಕ್ಷನ್ ದುಪ್ಪಟ್ಟು ಆಗಲಿದೆ. ಸೋಮವಾರದ ವೇಳೆಗೆ ಕೂಲಿ ಸಿನಿಮಾದ ಕಲೆಕ್ಷನ್ 300 ಕೋಟಿ ಗಡಿ ದಾಟಲಿದೆ.

ಭರ್ಜರಿ ಕಲೆಕ್ಷನ್ ಮಾಡ್ತಿರೋ ವಾರ್

ಇನ್ನೂ ವಾರ್ ಕೂಡ ಕಲೆಕ್ಷನ್‌ನಲ್ಲಿ ಹಿಂದೆ ಬಿದ್ದಿಲ್ಲ. ವಾರ್ ಮೊದಲ ದಿನ 51 ಕೋಟಿ ಕಲೆಕ್ಷನ್ ಮಾಡಿದ್ರೆ, ಎರಡನೇ ದಿನ ಅಂದ್ರೆ ಸ್ವಾತಂತ್ರ್ಯ ದಿನಚಾರಣೆಯ ದಿನ 56 ಕೋಟಿ ಕಲೆಕ್ಷನ್ ಮಾಡಿದೆ. ಮೊದಲ ಎರಡು ದಿನದಲ್ಲಿ ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ವಾರ್.. ವೀಕೆಂಡ್‌ನಲ್ಲಿ ಇದು ಕೂಡ ಡಬಲ್ ಕಲೆಕ್ಷನ್ ಮಾಡಲಿದ್ದು, 250 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡೋ ಸಾಧ್ಯತೆ ಇದೆ. ಒಟ್ನಲ್ಲಿ ಕೂಲಿ ಮತ್ತು ವಾರ್‌ಗಳ ಆರ್ಭಟದ ನಡುವೆ ಕೂಡ  ನಮ್ಮ ಕನ್ನಡದ ಸು ಫ್ರಮ್ ಸೋ ಘರ್ಜಿಸುತ್ತಿರುವುದು ಖುಷಿಯ ವಿಚಾರ..

Kishor KV