ಜನಸಾಮಾನ್ಯರಿಗೆ ದರ ಏರಿಕೆಯ ಬರೆ – ಅಡುಗೆ ಎಣ್ಣೆ ಇನ್ನುಮುಂದೆ ಬಲು ದುಬಾರಿ!

ಬಸ್, ಮೆಟ್ರೋ, ಹಾಲು ಸೇರಿದಂತೆ ದಿನನಿತ್ಯದ ವಸ್ತುಗಳ ಬೆಲೆ ಗಗನಕ್ಕೆರುತ್ತಿದೆ. ದರ ಏರಿಕೆಯಿಂದ ಕಂಗೆಟ್ಟಿರುವ ಜನಸಾಮಾನ್ಯರಿಗೆ ಮತ್ತೊಂದು ಶಾಕಿಂಗ್ ಸುದ್ದಿಯಿದೆ. ಈಗ ಅಡುಗೆ ಎಣ್ಣೆಗೆ ಬೆಲೆ ಏರಿಕೆಯ ಬರೆ ಬಿದ್ದಿದೆ. ಅದರಲ್ಲೂ ತೆಂಗಿನಕಾಯಿ ಎಣ್ಣೆ ದರ ಲೀಟರ್‌ಗೆ 300 ರೂ. ಗಡಿ ದಾಟಿದೆ.
ಇದನ್ನೂ ಓದಿ: RCB ಹ್ಯಾಟ್ರಿಕ್ ಗೆ MI ಕೊಳ್ಳಿ.. ಲೇಡಿ ABD ಪೆರ್ರಿ ಅಬ್ಬರ ವ್ಯರ್ಥ – ತಪ್ಪು ಮಾಡಿದ್ದೆಲ್ಲಿ ಮಂದಾನ?
ಕಳೆದ ಒಂದು ತಿಂಗಳಿನಿಂದ ಖಾದ್ಯ ತೈಲ ಬೆಲೆ ಏರಿಕೆಯಾಗುತ್ತಿದೆ. ಹೀಗಾಗಿ ಒಂದು ತಿಂಗಳ ಹಿಂದಿನ ಬೆಲೆಗೂ ಈಗಿನ ಬೆಲೆಗೂ 10 – 20 ರೂ. ಏರಿಕೆಯಾಗಿದೆ. ಜಾಗತಿಕ ಮಟ್ಟದಲ್ಲಿ ಪೂರೈಕೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೂರ್ಯಕಾಂತಿ ಎಣ್ಣೆಯ ದರ ಏರಿಕೆಯಾಗಿದೆ. ಪ್ರಮುಖವಾಗಿ ಸನ್ ಫ್ಲವರ್, ಪಾಮ್ ಆಯಿಲ್, ಕಡಲೇಕಾಯಿ ಎಣ್ಣೆ, ಅರಳೆಎಣ್ಣೆ ಹಾಗೂ ಸಾಸಿವೆ ಎಣ್ಣೆಯಲ್ಲಿ 10-20 ರೂ. ರೂ. ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.
ಸಾಧಾರಣವಾಗಿ ಮಾರ್ಚ್ ಮಧ್ಯಭಾಗದಿಂದ ರಾಜ್ಯದಲ್ಲಿ ಬಿಸಿಲು ಹೆಚ್ಚಾಗುತ್ತದೆ. ಆದರೆ ಈ ಬಾರಿ ಜನವರಿ ಕೊನೆಯಿಂದಲೇ ಉಷ್ಣಾಂಶ ಏರಿಕೆಯಾಗುತ್ತಿದ್ದು ಎಳೆನೀರಿಗೆ ಹೆಚ್ಚು ಬಳಕೆಯಾಗುತ್ತಿವೆ. ಇದರ ಜೊತೆ ಕೊಬ್ಬರಿಯ ದರವೂ ಏರಿಕೆಯಾಗಿದೆ. 1 ವರ್ಷದಿಂದ ಕ್ವಿಂಟಾಲ್‌ಗೆ 8 ರಿಂದ 8,500 ರೂ. ಇದ್ದ ಕೊಬ್ಬರಿ ಪ್ರಸ್ತುತ 14,500 ರಿಂದ 15 ಸಾವಿರ ರೂ.ಗಳಿಗೆ ಏರಿಕೆಯಾಗಿದೆ. ಎಳನೀರು ಯಥೇಚ್ಛವಾಗಿ ಮಾರಾಟವಾಗುತ್ತಿರುವ ಕಾರಣ ಕೊಬ್ಬರಿ ಬೇಡಿಕೆ ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ. ಇದರ ನೇರ ಪರಿಣಾಮ ತೆಂಗಿನ ಎಣ್ಣೆಯ ಮೇಲೆ ಬಿದ್ದಿದೆ. ಇದರಿಂದಾಗಿ ತೆಂಗಿನ ಎಣ್ಣೆ ದರ ಏರಿಕೆಯಾಗುತ್ತಿದೆ. ಹೀಗಾಗಿ ಒಂದು ಲೀಟರ್ ತೆಂಗಿನಕಾಯಿ ಎಣ್ಣೆ ಬೆಲೆಯಲ್ಲಿ 50 ರೂ. ಹೆಚ್ಚಾಗಿದೆ.

ನೋಡಿರಿ

