ಸೂರ್ಯವಂಶಿನ ಡ್ರಾಪ್ ಮಾಡಿದ್ದೇ ಶ್ರೇಯಸ್ – ಗುಟ್ಟಾಗಿ ಹಾರ್ದಿಕ್ ಪಾಂಡ್ಯ 2ನೇ ಮದುವೆ

ಸೂರ್ಯವಂಶಿನ ಡ್ರಾಪ್ ಮಾಡಿದ್ದೇ ಶ್ರೇಯಸ್ –  ಗುಟ್ಟಾಗಿ ಹಾರ್ದಿಕ್ ಪಾಂಡ್ಯ 2ನೇ ಮದುವೆ

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು. 

ಟೀಮ್ ಇಂಡಿಯಾ ದೀರ್ಘ ಬಿಡುವಿನ ನಂತರ ಮತ್ತೆ ಮೈದಾನಕ್ಕಿಳಿದಿದೆ. ಇದರಿಂದ ಆಟಗಾರರಲ್ಲಿ ತುಸು ಜಡತ್ವ ಎದ್ದು ಕಾಣುತ್ತಿತ್ತು ಎಂದು ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಒಪ್ಪಿಕೊಂಡಿದ್ದಾರೆ. ಕ್ರಿಕೆಟ್ ಶಿಶುಗಳ ಮುಂದೆ ಮಂಡಿಯೂರಿದ ನಂತರ ನಾಯಕ ಶ್ರೇಯಸ್ ಅಯ್ಯರ್ ತಂಡದ ಸೋಲಿಗೆ ಜಡತ್ವದ ಕಾರಣ ನೀಡಿದ್ದಾರೆ. ಯಾವುದೇ ಪರಿಸ್ಥಿತಿಯನ್ನು ಅಥವಾ ಎದುರಾಳಿ ತಂಡವನ್ನು ಹಗುರವಾಗಿ ಪರಿಗಣಿಸಬೇಡಿ. ಸುಮ್ಮನೆ ಮೈದಾನಕ್ಕೆ ಬಂದು ಪಂದ್ಯ ಗೆಲ್ಲಲು ಸಾಧ್ಯವಿಲ್ಲ. ಅದಕ್ಕಾಗಿ ಕಷ್ಟಪಡಬೇಕು. ತಪ್ಪುಗಳನ್ನು ತಿದ್ದಿಕೊಂಡು, ಮುಂದಿನ ಪಂದ್ಯಕ್ಕೆ ಕಣಕ್ಕಿಳಿಯುತ್ತೇವೆ ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ.

ಇದನ್ನೂ ಓದಿ: 5.. 1.. 3.. 148ಕ್ಕೆ ALL OUT – ಭಾರತದ ಅಹಂಗೆ ಐರ್ಲೆಂಡ್ ಪೆಟ್ಟು

ಐರ್ಲೆಂಡ್ ವಿರುದ್ಧದ ಮೊದಲ ಪಂದ್ಯದಿಂದ ವೈಭವ್ ಸೂರ್ಯವಂಶಿ ಔಟಾಗಿದ್ದರು.  ಆದರೆ, ಸೂರ್ಯವಂಶಿನ ಡ್ರಾಪ್ ಮಾಡಿದ್ದೇ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಎಂದು ಹೇಳಲಾಗುತ್ತಿದೆ. ಸೂರ್ಯವಂಶಿಗಿಂತ ಸೀನಿಯನ್ ಬ್ಯಾಟರ್‌ಸ್ ತಂಡದಲ್ಲಿದ್ದರು. ತಂಡ ಸಂಯೋಜನೆ ಮಾಡುವಾಗ ಸೂರ್ಯವಂಶಿಗೆ ಸ್ಲಾಟ್ ಇರಲಿಲ್ಲ. ಹೀಗಾಗಿ ಸೂರ್ಯವಂಶಿಯನ್ನ ಪ್ಲೆಯಿಂಗ್ ಲೆವೆನ್‌ ನಿಂದ ಹೊರಗಿಡಲಾಗಿದೆ ಎಂದು ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಹೇಳಿಕೆ ನೀಡಿದ್ದರು.

ವೈಭವ್ ಸೂರ್ಯವಂಶಿ ಬಗ್ಗೆ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಮಾತಾಡಿದ್ದಾರೆ., ‘ವೈಭವ್ ಅವರನ್ನು ಸುರಕ್ಷಿತವಾಗಿಡುವುದು ಮುಖ್ಯ. ಅವರಿಗೆ ಬೆಂಬಲ ಮತ್ತು ಸಹಾಯ ಬೇಕು. ಆದಾಗ್ಯೂ, ಅವರಿಗೆ ಮುಕ್ತವಾಗಿ ಆಡಲು ಸ್ವಾತಂತ್ರ್ಯ ನೀಡಬೇಕು. ವೈಭವ್ ತುಂಬಾ ವಿಶೇಷ ವ್ಯಕ್ತಿ. ನೀವು ಯಾವುದೇ ಮಗುವನ್ನು ತೆಗೆದುಕೊಂಡು ಅವನಿಗೆ ಎಲ್ಲಾ ರೀತಿಯ ತರಬೇತಿಯನ್ನು ನೀಡಿದರು ಅವನು ಇಷ್ಟು ಒಳ್ಳೆಯ ಆಟಗಾರನಾಗುತ್ತಾನೆ ಎಂದು ಹೇಳಲು ಸಾಧ್ಯವಿಲ್ಲ. ವೈಭವ್‌ನನ್ನು ನಾವು ಕಾಪಾಡಿಕೊಳ್ಳಬೇಕು ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಟೀಮ್ ಇಂಡಿಯಾ ಪರ ಚೊಚ್ಚಲ ಪಂದ್ಯ, ಟೀಮ್ ಇಂಡಿಯಾ ಜೆರ್ಸಿ ಹಾಕಿಕೊಂಡು ಕಣಕ್ಕಿಳಿಯಲು ಪ್ಲೈಯಿಂಗ್ ಲೆವೆನ್‌ಲ್ಲಿ ಸೂರ್ಯವಂಶಿಗೆ ಚಾನ್ಸ್ ಸಿಕ್ಕಿರಲಿಲ್ಲ. ಆದರೂ ಕೂಡಾ ಬೇಜಾರು ಮಾಡಿಕೊಳ್ಳದೇ ಮೈದಾನದಲ್ಲಿ, ಯಾವುದೇ ಅಹಂ ಇಲ್ಲದೆ ವೈಭವ್ ವಾಟರ್ ಬಾಯ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ತಂಡದ ಸಹ ಆಟಗಾರರಿಗೆ ನೀರು ಮತ್ತು ಜ್ಯೂಸ್ ಸರಬರಾಜು ಮಾಡುತ್ತಾ ವಾಟರ್ ಬಾಯ್ ಕೆಲಸ ಮಾಡಿದ ವೈಭವ್‌ ಸೂರ್ಯವಂಶಿ ಮುಖದಲ್ಲಿ ಶಿಸ್ತು ಎದ್ದುಕಾಣುತ್ತಿತ್ತು.

ಭಾರತ & ಐರ್ಲೆಂಡ್ ನಡುವಿನ 2 ಪಂದ್ಯಗಳ T20 ಸರಣಿಯ ಮೊದಲ ಪಂದ್ಯದಲ್ಲಿ ಸೋಲುವ ಮೂಲಕ ಭಾರತ ಐರ್ಲೆಂಡ್ ಪ್ರವಾಸವನ್ನು ಆರಂಭಿಸಿತು.  ಈ ಸೋಲಿನೊಂದಿಗೆ ಶ್ರೇಯಸ್ ಅಯ್ಯರ್ ಟಿ20 ಮಾದರಿಯಲ್ಲಿ ನಾಯಕರಾಗಿ ತಮ್ಮ ಮೊದಲ ಪಂದ್ಯದಲ್ಲೇ ಸೋಲು ಕಂಡ ದುರದೃಷ್ಟಕರ ಭಾರತೀಯ ನಾಯಕರ ಪಟ್ಟಿಗೆ ಸೇರಿದ್ದಾರೆ. ಈ ಹಿಂದೆ ವಿರಾಟ್ ಕೊಹ್ಲಿ, ರಿಷಭ್ ಪಂತ್ ಮತ್ತು ಶುಭಮನ್ ಗಿಲ್ ಕೂಡ ನಾಯಕರಾಗಿ ತಮ್ಮ ಚೊಚ್ಚಲ ಟಿ20 ಪಂದ್ಯದಲ್ಲೇ ಸೋಲನ್ನು ಅನುಭವಿಸಿದ್ದರು.

ಭಾರತದ ಬೇಬಿಬಾಸ್ ವೈಭವ್ ಸೂರ್ಯವಂಶಿ ಹೇಳಿದ್ದನ್ನೇ ಆಡಿ ತೋರಿಸುವ ಆಟಗಾರ ಎಂದು ಆರ್‌ಆರ್ ಕೋಚ್ ಕುಮಾರ ಸಂಗಾಕ್ಕಾರ ಹೇಳಿದ್ದಾರೆ. ಲಕ್ನೋ ಆರ್‌ಆರ್ ವಿರುದ್ಧು 220 ರನ್‌ಗಳ ಟಾರ್ಗೆಟ್ ನೀಡಿದಾಗ, ಸೂರ್ಯವಂಶಿ ಕೋಚ್ ಬಳಿ ಬಂದು ಕೋಚ್ ಚಿಂತಿಸಬೇಡಿ, ನಾವು ಗೆದ್ದಾಯ್ತು. ನಾನು 13 ಸಿಕ್ಸರ್ ಹೊಡಿತೀನಿ ಎಂದು ಹೇಳಿದ್ದರಂತೆ. ಬ್ಯಾಟ್ ಹಿಡಿದುಹೊರಟ ವೈಭವ್, ಅಂದು 10 ಸಿಕ್ಸರ್ ಸಮೇತ 93 ರನ್ ಗಳಿಸುತ್ತಾರೆ. ಈ ಹುಡುಗ ಏನು ಮಾತನಾಡಿದ್ದಾನೆ, ಅದನ್ನೇ ಮಾಡ್ತಿದ್ದಾನೆ. ಈತ ಕ್ರಿಕೆಟ್ ಜಗತ್ತನ್ನು ಆಳಲು ಬಂದಿರುವ ಭವಿಷ್ಯದ ಸೂಪರ್‌ಸ್ಟಾರ್ ಎಂದು ಸಂಗಾಕ್ಕರ ಭವಿಷ್ಯ ನುಡಿದಿದ್ದಾರೆ.

ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಗುಟ್ಟಾಗಿ ಎರಡನೇ ಮದುವೆ ಮಾಡಿಕೊಂಡ್ರಾ?, ಯಾಕೆಂದ್ರೆ, ಪಾಂಡ್ಯ ಹೊಸ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಹೊಸ ಫೋಟೋದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಮಹಿಕಾ ಶರ್ಮಾ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಮಹಿಕಾ ಶರ್ಮಾ ತಮ್ಮ ಬೈತಲೆ ಮತ್ತು ಹಣೆಯ ಮೇಲೆ ಕುಂಕುಮ ಧರಿಸಿ ಕಾಣಿಸಿಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯ ಕೂಡ ಹಣೆಯ ಮೇಲೆ ತಿಲಕ ಇಟ್ಟಿದ್ದಾರೆ. ಫೋಟೋದಲ್ಲಿ, ಹಾರ್ದಿಕ್ ತನ್ನ ಗೆಳತಿ ಮಹಿಕಾಳ ತಾಯಿಯೊಂದಿಗೆ ಪೋಸ್ ನೀಡಿದ್ದಾರೆ.

ಕ್ರಿಕೆಟ್ ಮೈದಾನದಲ್ಲಿ ನಡೆದ ವಿಚಿತ್ರ ಔಟ್ ಪ್ರಸಂಗ ಈಗ ಕ್ರಿಯೇಟಿವ್ ಜಾಹೀರಾತು ಮತ್ತು ಬ್ರ್ಯಾಂಡ್ ಸಹಭಾಗಿತ್ವಕ್ಕೆ ಕಾರಣವಾಗಿದೆ. IPL ಪಂದ್ಯದ ವೇಳೆ ಗುಜರಾತ್ ಟೈಟನ್ಸ್ ತಂಡದ ಸ್ಟಾರ್ ಬ್ಯಾಟರ್ ಸಾಯಿ ಸುದರ್ಶನ್ ಅವರ ಬ್ಯಾಟ್ ಆಡುವಾಗ ಸತತ ಎರಡು ಬಾರಿ ಕೈಯಿಂದ ಜಾರಿತ್ತು. ದುರದೃಷ್ಟವಶಾತ್ ಆ ಬ್ಯಾಟ್ ಹೋಗಿ ಸ್ಟಂಪ್ಸ್‌ಗೆ ತಗುಲಿ ಅವರು ಎರಡು ಬಾರಿ ‘ಹಿಟ್ ವಿಕೆಟ್’ ಆಗಿ ಪೆವಿಲಿಯನ್ ಸೇರಿದ್ದರು. ಆಗ  ಕ್ರಿಕೆಟ್ ಪ್ರೇಮಿಗಳು, “ಇವರ ಗ್ಲೌಸ್‌ಗೆ ಫೆವಿಕಾಲ್ ಹಚ್ಚಬೇಕು” ಎಂದು ಭಾರಿ ಮೀಮ್ಸ್ ಮತ್ತು ಜೋಕ್‌ಗಳನ್ನು ಮಾಡಿದ್ದರು. ಈಗ ಅದೇ ಜೋಕ್ ಅನ್ನು ನಿಜವಾಗಿಸಿರುವ ಫೆವಿಕಾಲ್ (Fevicol) ಸಂಸ್ಥೆಯು, ಸಾಯಿ ಸುದರ್ಶನ್ ಅವರನ್ನೇ ತನ್ನ ಹೊಸ ಪ್ರಚಾರಕ್ಕೆ ಬಳಸಿಕೊಳ್ಳುವ ಮೂಲಕ ಭರ್ಜರಿ ಮಾರ್ಕೆಟಿಂಗ್ ಗಿಮಿಕ್ ಮಾಡಿದೆ.

ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯ ಮೊದಲ ಸುತ್ತಿನ ಪಂದ್ಯಗಳು ಇದೀಗ ರೋಚಕ ಘಟ್ಟಕ್ಕೆ ತಲುಪಿದೆ. ಇಂದು ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಗ್ರೂಪ್ ‘ಎ’ ಅಂತಿಮ ಲೀಗ್ ಪಂದ್ಯ ಟೀಂ  ಇಂಡಿಯಾದ ಭವಿಷ್ಯ ನಿರ್ಧರಿಸಲಿದೆ. ಈ ಪಂದ್ಯದಲ್ಲಿ ಭಾರತ ಗೆದ್ರೆ ಸೆಮಿಗೆ ಎಂಟ್ರಿಕೊಡಲಿದೆ. ಒಂದು ವೇಳೆ ಸೋತ್ರೆ ಸೌತ್ ಆಫ್ರಿಕಾ ತಂಡದ ಸೋಲು ಗೆಲುವಿನ ಮೇಲೆ ಭಾರತ ಭವಿಷ್ಯ ನಿರ್ಧಾರ ಆಗಲಿದೆ. ಹೀಗಾಗಿ ಭಾರತ ತಂಡಕ್ಕೆ ಇಂದಿನ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.

ಇಂಗ್ಲೆಂಡ್‌ನ ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೂಲಕ ನ್ಯೂಝಿಲೆಂಡ್​ನ ಟಾಮ್ ಲ್ಯಾಥಮ್ ಮತ್ತು ಡೆವೊನ್ ಕಾನ್ವೆ ಹೊಸ ಇತಿಹಾಸ ನಿರ್ಮಿಸಿದ್ದಾರೆ. 214 ಎಸೆತಗಳನ್ನು ಎದುರಿಸಿದ ಟಾಮ್ ಲ್ಯಾಥಮ್ 15 ಬೌಂಡರಿಗಳೊಂದಿಗೆ 151 ರನ್ ಗಳಿಸಿದರೆ, ಡೆವೊನ್ ಕಾನ್ವೆ 224 ಎಸೆತಗಳಲ್ಲಿ 22 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 157 ರನ್ ಚಚ್ಚಿದರು. ಈ ಮೂಲಕ ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲಿ ನ್ಯೂಝಿಲೆಂಡ್ ಪರ ಮೊದಲ ವಿಕೆಟ್​ಗೆ ಗರಿಷ್ಠ ರನ್​ಗಳ ಜೊತೆಯಾಟವಾಡಿದ ಜೋಡಿ ಎನಿಸಿಕೊಂಡರು

Kishor KV

Leave a Reply

Your email address will not be published. Required fields are marked *